Weight Loss Diet: ರಾತ್ರಿ ವೇಳೆ ಲಘು ಆಹಾರ ಸೇವನೆ ನಿಮ್ಮ ಹೊಟ್ಟೆಯ ಕೊಬ್ಬನ್ನು ಇಳಿಸುತ್ತೆ..

ಟಿವಿ ಅಥವಾ ಮೊಬೈಲ್‌ನಲ್ಲಿ ಏನನ್ನಾದರೂ ನೋಡುತ್ತಾ ಆಹಾರವನ್ನು ಸೇವಿಸಬೇಡಿ. ಈ ರೀತಿ ತಿನ್ನುವ ಮೂಲಕ, ನೀವು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಪಡೆದು, ತೂಕ ಹೆಚ್ಚಾಗಲು ಕಾರಣವಾಗಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಾತ್ರಿ ವೇಳೆ ಲಘು ಉಪಹಾರ (snack at night) ಸೇವಿಸುವ ಅಭ್ಯಾಸ ರೂಢಿಸಿಕೊಳ್ಳುವುದು ನಿಜಕ್ಕೂ ಆರೋಗ್ಯದ (health)ದೃಷ್ಟಿಯಿಂದ ಒಳ್ಳೆಯದು. ಒಳ್ಳೆ ಪೌಷ್ಟಿಕವಾದ (nutritious breakfast) ಉಪಹಾರ ತೆಗೆದುಕೊಂಡರೆ ಅದರಿಂದಾಗುವ ಪ್ರಯೋಜನಗಳೇ ಹೆಚ್ಚು. ಇದು ತೂಕ ಇಳಿಸಲು (losing weight) ಸಹಾಯಕಾರಿಯಾಗಿರುತ್ತದೆ. ನೀವು ದಪ್ಪಾಗಿದ್ದರೇ, ತೂಕ ಇಳಿಸಿಕೊಳ್ಳಲು ಬಗ್ಗೆ ಯೋಚನೆ ಮಾಡುತ್ತಿದ್ದರೇ, ರಾತ್ರಿ ಹೊತ್ತು ಲಘು ಉಪಹಾರ ಸೇವಿಸಿ ನೋಡಿ, ನಮ್ಮ ದಿನ ನಿತ್ಯವೂ ಆಹಾರದಲ್ಲಿನ ವಿಟಮಿನ್ಸ್, ಪ್ರೊಟೀನ್ಸ್ ಮತ್ತು ಖನಿಜಾಂಶಗಳಿರುವ ಪೌಷ್ಟಿಕಾಂಶ ಸೇವನೆ ಹೆಚ್ಚಿಸುತ್ತದೆ. ರಾತ್ರಿ ಹೊತ್ತು ಖಾಲಿ ಹೊಟ್ಟೆಯಲ್ಲಿ (empty stomach) ಮಲಗಿ ನಿದ್ರೆ ಬಾರದೇ ವೇದನೆ ಪಡುವುದಕ್ಕಿಂತ, ಲಘುವಾದ ಉಪಹಾರ ಸೇವಿಸುವುದರಿಂದ ಹೊಟ್ಟೆಯೂ ತುಂಬಿ, ನಿದ್ರೆಯೂ ಚೆನ್ನಾಗಿ (sleep well)ಬರುತ್ತದೆ. ಅದರ ಜೊತೆಗೆ ದೇಹಕ್ಕೆ ಬೇಕಾದ ಪೌಷ್ಠಿಕಾಂಶವೂ ಲಭಿಸುತ್ತದೆ ಎನ್ನುತ್ತಾರೆ ತಜ್ಞರು.

  ಇದನ್ನು ಓದಿ:Weight Loss: ಏನು ಮಾಡದಿದ್ರೂ ಪರ್ವಾಗಿಲ್ಲ, ಈ 4 ಕೆಲ್ಸ ಮಾಡಿ.. ಎಷ್ಟು ಬೇಗ ಸಣ್ಣಗಾಗ್ತೀರಾ ನೋಡಿ!

  ಬೇಕಾಬಿಟ್ಟಿ ಆಹಾರ ಬೇಡ
  ಆದರೆ ರಾತ್ರಿ ಲಘು ಉಪಹಾರ ಎಂದು ಬೇಕಾಬಿಟ್ಟಿ ತಿಂದರೆ ಏನು ಪ್ರಯೋಜನವಿಲ್ಲ, ಅದರ ಬಗ್ಗೆ ತಿಳಿದುಕೊಂಡೇ ನೀವು ಆಹಾರ ಸೇವಿಸಬೇಕು, ಇಲ್ಲವಾದಲ್ಲಿ ಒಂದಲ್ಲ ಒಂದು ಸಮಸ್ಯೆ ನಿಮ್ಮನ್ನು ಕಾಡುವುದು ಸಹಜ. ಯಾವ ಆಹಾರ ಮತ್ತು ಪಾನೀಯ ಸೇವಿಸಬೇಕು ಎಂಬುದರ ಮೇಲೆ ನಿಮ್ಮ ತೂಕ ಇಳಿಕೆಗೆ ಸಹಕಾರಿಯಾಗಲಿದೆ.

  ರಾತ್ರಿಯ ಊಟದಲ್ಲಿ ನೀವು ಎಷ್ಟು ಕ್ಯಾಲೊರಿಗಳನ್ನು ಸೇವಿಸುತ್ತಿದ್ದೀರಿ, ಇದು ತೂಕ ನಷ್ಟದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ನಿಗದಿತ ಪ್ರಮಾಣದ ಕ್ಯಾಲೊರಿಗಳನ್ನು ಮಾತ್ರ ತೆಗೆದುಕೊಳ್ಳಿ ಮತ್ತು ಊಟದ ನಂತರ ಬೇರೆ ಪದಾರ್ಥಗಳನ್ನು ತಿನ್ನುವುದು ಬೇಡ.

  ದವಸ ದಾನ್ಯ ಇರಲಿ
  ಟಿವಿ ಅಥವಾ ಮೊಬೈಲ್‌ನಲ್ಲಿ ಏನನ್ನಾದರೂ ನೋಡುತ್ತಾ ಆಹಾರವನ್ನು ಸೇವಿಸಬೇಡಿ. ಈ ರೀತಿ ತಿನ್ನುವ ಮೂಲಕ, ನೀವು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಪಡೆದು, ತೂಕ ಹೆಚ್ಚಾಗಲು ಕಾರಣವಾಗಬಹುದು. ಒಂದು ಬೌಲ್ ತುಂಬ ಕಾಳುಗಳುಳ್ಳ ಆಹಾರಕ್ಕೆ, ಓಟ್ಸ್, ಅಥವಾ ಗೋಧಿ ಅಥವಾ ಹೊಟ್ಟು ಪದರಗಳುಳ್ಳ ದವಸ ದಾನ್ಯವನ್ನು ಮಿಶ್ರಣ ಮಾಡಿಕೊಳ್ಳಿ.

  ಇವುಗಳಲ್ಲಿ ಕಾರ್ಬೋಹೈಡ್ರೇಟ್‌ಗಳಿದ್ದು, ಇದಕ್ಕೆ ಹಾಲನ್ನು ಸೇರಿಸಿಕೊಂಡರೆ ಪ್ರೋಟೀನ್ ಅಂಶವೂ ಕೂಡ ದೇಹಕ್ಕೆ ಒದಗಿದಂತಾಗುತ್ತದೆ. ಆದರೆ ಸಕ್ಕರೆಯನ್ನು ಮಾತ್ರ ಸೇರಿಸಬಾರದು. ಇದರಿಂದ ನಿದ್ರೆಗೂ ಅಡಚಣೆಯಾಗಿ ತೂಕವನ್ನೂ ಕೂಡ ಹೆಚ್ಚಿಸುತ್ತದೆ.

  ಮೊಸರು ಕೂಡ ಒಳ್ಳೆಯದು
  ಒಂದು ಬಟ್ಟಲು ತಂಬಾ ಮೊಸರು ಸೇವಿಸಿದರೆ, ಟ್ರಿಪ್ಟೋಫಾನ್ ಇರುವುದರಿಂದ ನಿದ್ರೆಯೂ ಚೆನ್ನಾಗಿ ಬರುತ್ತದೆ ಪಚನಕ್ರಿಯೆಗೂ ಸಹಾಯ ಮಾಡುತ್ತದೆ. ಎದೆ ಉರಿತ, ಅಜೀರ್ಣವನ್ನು ನಿವಾರಿಸಿ ಒಳ್ಳೆಯ ನಿದ್ರೆ ಬರುತ್ತದೆ. ಬಾಳೆಹಣ್ಣು, ಸೇಬು ಮುಂತಾದ ಹಣ್ಣುಗಳನ್ನು ರಾತ್ರಿಯ ಲಘು ಉಪಹಾರವಾಗಿ ಸೇವಿಸಬೇಕು.

  ಇದರಿಂದ ಬಹಳ ಕಾಲದವರೆಗೆ ಹೊಟ್ಟೆಯು ತುಂಬಿರುತ್ತದೆ ಮತ್ತು ಒಳ್ಳೆ ನಿದ್ದೆಯೂ ಬರುವಂತೆ ಮಾಡುತ್ತದೆ. ಈ ಹಣ್ಣುಗಳಲ್ಲಿ ಜೀರ್ಣಕಾರಿ ಅಂಶವು ಹೆಚ್ಚಾಗಿ ಇರುವುದರಿಂದ ದೇಹದಲ್ಲಿನ ಟಾಕ್ಸಿನ್‌ಗಳನ್ನು ತೆಗೆದುಹಾಕಿ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ

  ರಾತ್ರಿ ಊಟ ತಪ್ಪಿಸಬೇಡಿ
  ರಾತ್ರಿಯಲ್ಲಿ ಲಘು ಆಹಾರವನ್ನು ಸೇವಿಸಿ. ನೀವು ಅತಿಯಾದ ಆಹಾರ ಸೇವಿಸಿದಾಗ, ಅದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಲಘು ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ಸರಿಯಾಗಿರುತ್ತದೆ ಮತ್ತು ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

  ತೂಕವನ್ನು ಕಳೆದುಕೊಳ್ಳಲು ನೀವು ಊಟವನ್ನು ಬಿಟ್ಟರೆ, ಅದು ಹಾನಿಯನ್ನುಂಟುಮಾಡುತ್ತದೆ. ಊಟವನ್ನು ಬಿಟ್ಟುಬಿಡುವುದರಿಂದ, ನೀವು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ತಿನ್ನುತ್ತೀರಿ, ಆದ್ದರಿಂದ ಹಗಲಿನಲ್ಲಿ ಊಟವನ್ನು ಅಥವಾ ರಾತ್ರಿಯಲ್ಲಿ ರಾತ್ರಿಯ ಊಟವನ್ನು ಬಿಟ್ಟುಬಿಡುವ ತಪ್ಪನ್ನು ಮಾಡಬೇಡಿ.

  ಇದನ್ನು ಓದಿ:Weight Loss: ದೇಹವನ್ನು ದಂಡಿಸದೇ ನೀವು ತೂಕ ಇಳಿಸಬೇಕೇ...? ಇಲ್ಲಿದೆ ನೋಡಿ ಟಿಪ್ಸ್

  ಕ್ಯಾರೆಟ್‌ ಬಳಸಿ
  ಒಂದು ಊಟ ಮಾಡಲು ಸಾಧ್ಯವಾಗದಿದ್ದರೇ, ಅಥವಾ ಏನು ಸೇರುತ್ತಿಲ್ಲ ಎಂದಾದರೇ ಕ್ಯಾರೆಟ್ ನ್ನು ಸೇವಿಸಬಹುದು. ಅದನ್ನೂ ಸಹ ರಾತ್ರಿಯ ಲಘು ಉಪಹಾರವಾಗಿ ತೆಗೆದುಕೊಳ್ಳಬಹುದು. ಇದು ದೇಹಕ್ಕೆ ಅಗತ್ಯವಿರುವ ವಿಟಮಿನ್ಸ್, ಖನಿಜಾಂಶ, ಜೀರ್ಣಕಾರಿ ಅಂಶಗಳನ್ನು ಒದಗಿಸುತ್ತದೆ.

  ಮೀನು ಮತ್ತು ಪ್ರೋಟೀನ್ ಇರುವ ಆಹಾರ ಪದಾರ್ಥಗಳನ್ನೂ ಸಹ ರಾತ್ರಿಯ ಲಘು ಉಪಹಾರವಾಗಿ ತೆಗೆದುಕೊಳ್ಳಬಹುದು. ಇದರಲ್ಲಿ ಟ್ರಿಪ್ಟೋಫಾನ್ ಮತ್ತು ಪ್ರೋಟೀನ್ ಹೇರಳವಾಗಿರುತ್ತದೆ ಮತ್ತು ಕೊಬ್ಬಿನಾಂಶ ಕಡಿಮೆ ಇರುತ್ತದೆ. ಇದರಿಂದ ತೂಕ ಇಳಿಯುವುದಷ್ಟೇ ಅಲ್ಲದೇ ನಿದ್ರೆಯೂ ಚೆನ್ನಾಗಿ ಮಾಡಬಹುದು. ತೂಕ ಇಳಿಕೆಗೆ ರಾತ್ರಿ ಈ ನಿಯಮಗಳನ್ನು ಪಾಲಿಸುವುದು ನಿಜಕ್ಕೂ ಸಹಕಾರಿಯಾಗಿವೆ.
  Published by:vanithasanjevani vanithasanjevani
  First published: