ದಿನನಿತ್ಯದ ಜೀವನದಲ್ಲಿ (Life) ಮನೆಯ (Home) ಒಳಗೆ ಮತ್ತು ಹೊರಗೆ ಹಲವು ಸಮಸ್ಯೆ (Problem) ಎದುರಾಗುತ್ತವೆ. ಇದು ಒತ್ತಡ ಮತ್ತು ಖಿನ್ನತೆ ಕಾರಣ ಆಗುತ್ತದೆ. ದೀರ್ಘಕಾಲ ಒತ್ತಡವಿದ್ದಾಗ ಮನಸ್ಥಿತಿ ಹಾಳಾಗುತ್ತದೆ. ಒತ್ತಡ (Stress) ಮತ್ತು ಆಯಾಸ ಆದಾಗ ಅನೇಕ ಗಂಭೀರ ಮಾನಸಿಕ ಆರೋಗ್ಯ (Mental Health) ಸಮಸ್ಯೆ ಹುಟ್ಟಿಕೊಳ್ಳುತ್ತವೆ. ಅನೇಕರು ಒತ್ತಡ ಸಮಸ್ಯೆ ನಿವಾರಿಸಲು ಔಷಧ ಸೇವನೆ ಮಾಡ್ತಾರೆ. ಆದರೆ ಔಷಧ ಸೇವನೆ ದೇಹದ (Body) ಮೇಲೆ ಅಡ್ಡ ಪರಿಣಾಮ (Side Effects) ಬೀರುತ್ತವೆ. ಕೆಲವು ನ್ಯಾಚುರಲ್ ಕೇರ್ ತೆಗೆದುಕೊಳ್ಳುವುದರಿಂದ ಒತ್ತಡ ಕಡಿಮೆ ಆಗಲು ಸಹಕಾರಿ ಆಗಿದೆ. ಅಲ್ಲದೇ ಯಾವುದೇ ಅಡ್ಡ ಪರಿಣಾಮ ಸಹ ಇರಲ್ಲ.
ರೆಡ್ ರಾಸ್ಪ್ಬೆರಿ ಟೀ ಹೇಗೆ ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ?
ಅಂತಹ ನ್ಯಾಚುರಲ್ ರೆಡ್ ರಾಸ್ಪ್ಬೆರಿ ಟೀ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳುತ್ತದೆ. ಕೆಂಪು ರಾಸ್ಪ್ಬೆರಿ ಎಂಬುದು ರುಬಸ್ ಐಡಿಯಸ್ ಫೋಲಿಯಮ್ ಒಂದು ರೀತಿಯ ಹಣ್ಣು ಆಗಿದೆ. ಅವುಗಳನ್ನು ಚಹಾದ ರೂಪದಲ್ಲಿ ಬಳಕ ಮಾಡಲಾಗುತ್ತದೆ.
ಸಂಶೋಧನೆಯ ಪ್ರಕಾರ, ಕೆಂಪು ರಾಸ್ಪ್ಬೆರಿ ಹಣ್ಣಿನಲ್ಲಿ ಜೈವಿಕ ಸಕ್ರಿಯ ಸಂಯುಕ್ತಗಳಿವೆ. ಇದು ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಬಯೋಮೆಡ್ ರಿಸರ್ಚ್ ಇಂಟರ್ನ್ಯಾಶನಲ್ ಜರ್ನಲ್ ನಲ್ಲಿ ಕೆಂಪು ರಾಸ್ಪ್ಬೆರಿ ಹಣ್ಣಿನ ಚಹಾದ ಬಗ್ಗೆ ಸಂಶೋಧನಾ ಲೇಖನ ಪ್ರಕಟವಾಗಿದೆ.
ಚೀನಾದ ಮಾನಸಿಕ ಆರೋಗ್ಯ ವಿಶ್ವವಿದ್ಯಾಲಯದ ಸಂಶೋಧಕ ಯಾನ್ಹುವಾ ಚೆನ್, ಕ್ಸಿಯಾ ಯಾಂಗ್, ಜಿಯಾನ್ಕುನ್ ಫೆಂಗ್ ರಾಸ್ಪ್ಬೆರಿ ಸಾರದ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಇದನ್ನು ಇಲಿಗಳ ಮೇಲೆ ಪ್ರಯೋಗ ಮಾಡಿದ್ದರು.
ಕೆಂಪು ರಾಸ್ಪ್ಬೆರಿ ಚಹಾ ತಯಾರಿಸುವುದು ಹೇಗೆ?
ಕಡಿಮೆ ಉರಿಯಲ್ಲಿ ಕೆಂಪು ರಾಸ್ಪ್ಬೆರಿ ಕುದಿಸಿ. ನಂತರ ಅದನ್ನು ಶೋಧಿಸಿ ಕುಡಿಯಿರಿ. ದಿನಕ್ಕೆ 2 ಬಾರಿ ಕೆಂಪು ರಾಸ್ಪ್ಬೆರಿ ಚಹಾ ಸೇವಿಸಬಹುದು. ಇದು ಒತ್ತಡ ನಿವಾರಕವಾಗಿದೆ.
ಕೆಂಪು ರಾಸ್ಪ್ಬೆರಿ ಹಣ್ಣಿನ ಗುಣ ಲಕ್ಷಣಗಳು ಯಾವವು?
ಕೆಂಪು ರಾಸ್ಪ್ಬೆರಿ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಇದು ಕ್ಯಾನ್ಸರ್ ತಡೆಗಟ್ಟಲು ನೈಸರ್ಗಿಕ ಉತ್ಪನ್ನವಾಗಿ ಕೆಲಸ ಮಾಡುತ್ತದೆ. ಇದು ವಿವಿಧ ಅಗತ್ಯ ಪೋಷಕಾಂಶಗಳು ಮತ್ತು ಸಕ್ರಿಯ ಸಂಯುಕ್ತ ಹೊಂದಿದೆ.
ಇದರಲ್ಲಿ ಪ್ರಮುಖ ಸಂಯುಕ್ತಗಳಾದ ಆಂಥೋಸಯಾನಿನ್, ಟ್ಯಾನಿನ್, ಹಿತ್ತಾಳೆ, ಸಾವಯವ ಆಮ್ಲ, ಕೊಬ್ಬಿನಾಮ್ಲ, ಕ್ಸೈಲಾನ್ ಇದೆ. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಸ್ವತಂತ್ರ ರಾಡಿಕಲ್ ಗಳಿಂದ ರಕ್ಷಣೆ ನೀಡುತ್ತದೆ.
ಹೃದಯದಲ್ಲಿ ಉರಿಯೂತ ಮತ್ತು ಇತರೆ ಔಷಧೀಯ ಪರಿಣಾಮ ಮತ್ತು ಕೆಂಪು ರಾಸ್ಪ್ಬೆರಿ ಹೃದಯದ ಮಹಾಪಧಮನಿಯಲ್ಲಿ ಸೂಪರ್ಆಕ್ಸೈಡ್ ಅಯಾನುಗಳ ಉತ್ಪಾದನೆ ತಡೆಯುತ್ತದೆ. ಇದು ಯಕೃತ್ತಿನ ಗ್ಲುಟಾಥಿಯೋನ್ ಪೆರಾಕ್ಸಿಡೇಸ್ ಮತ್ತು ಸೂಪರ್ಆಕ್ಸೈಡ್ ಡಿಸ್ಮುಟೇಸ್ ಚಟುವಟಿಕೆಗೆ ಉತ್ತೇಜಿಸುತ್ತದೆ.
ಒತ್ತಡ ಹೇಗೆ ಕಡಿಮೆ ಮಾಡುತ್ತದೆ?
ಹಿಪೊಕ್ಯಾಂಪಸ್ ಎಂಬದು ಮಾನವರು ಮತ್ತು ಇತರ ಸಸ್ತನಿಗಳ ಮೆದುಳಿನ ಪ್ರಮುಖ ಭಾಗ. ಇದು ದೀರ್ಘಾವಧಿಯ ಸ್ಮರಣೆ ಮತ್ತು ಒತ್ತಡ ನಿಭಾಯಿಸುತ್ತದೆ. ಹಿಪೊಕ್ಯಾಂಪಲ್ ಅಂಗಾಂಶದಲ್ಲಿ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದ ಗುಣಲಕ್ಷಣದಲ್ಲಿ ಇಳಿಕೆಯಾಗಿದೆ. ಒತ್ತಡ ಮತ್ತು ಖಿನ್ನತೆ ಸುಧಾರಿಸುತ್ತದೆ ಎಂದು ವರದಿ ಹೇಳಿದೆ.
ಕೆಂಪು ರಾಸ್ಪ್ಬೆರಿ ಹಣ್ಣಿನಲ್ಲಿರುವ ಪೋಷಕಾಂಶಗಳು ಯಾವವು?
ಕೆಂಪು ರಾಸ್ಪ್ಬೆರಿ ಸತು, ಮೆಗ್ನೀಸಿಯಮ್, ಕ್ಯಾಲ್ಸಿಯಂ,ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್ ಹೊಂದಿದೆ. ಒತ್ತಡ ಕಡಿಮೆ ಮಾಡುತ್ತದೆ. ಕೆಂಪು ರಾಸ್ಪ್ಬೆರಿ ಚಹಾ ಒತ್ತಡ ನಿವಾರಿಸುತ್ತದೆ. ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.
ಇದನ್ನೂ ಓದಿ: ದೇಹದಲ್ಲಿ ಕಾಣಿಸಿಕೊಳ್ಳುವ ಈ ನೋವನ್ನು ಲಘುವಾಗಿ ಪರಿಗಣಿಸಬೇಡಿ!
ಕೆಂಪು ರಾಸ್ಪ್ಬೆರಿ ಚಯಾಪಚಯ ಸಕ್ರಿಯಗೊಳಿಸುತ್ತದೆ. ಇದು ಡಿಟಾಕ್ಸಿಫೈಯರ್ ಆಗಿ ಕೆಲಸ ಮಾಡುತ್ತದೆ. ಹೆಚ್ಚಿದ ತೂಕ ಕಡಿಮೆ ಮಾಡುತ್ತದೆ. ತೂಕ ಹೆಚ್ಚಳ ಹಾಗೂ ಒತ್ತಡ ನಿವಾರಿಸಲು ಕೆಂಪು ರಾಸ್ಪ್ಬೆರಿ ಚಹಾ ಸೇವನೆ ಪ್ರಯೋಜನಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ