Ladies Finger: ಹೃದಯದ ಆರೋಗ್ಯ ಕಾಪಾಡುತ್ತದೆ ಕೆಂಪು ಬೆಂಡೆಕಾಯಿ! ಇಲ್ಲಿದೆ ಇದರ ಆರೋಗ್ಯ ಗುಣಗಳು

ಕೆಂಪು ಬೆಂಡೆಕಾಯಿಯನ್ನು ಕುಂಕುಮ ಬೆಂಡೆಕಾಯಿ ಎಂದೂ ಕರೆಯುತ್ತಾರೆ. ಭಾರತೀಯ ವಿಜ್ಞಾನಿಗಳು 23 ವರ್ಷಗಳ ಕಠಿಣ ಪರಿಶ್ರಮದಿಂದ ಈ ರೀತಿಯ ಕೆಂಪು ಬೆಂಡೆಕಾಯಿ ತರಕಾರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಕೆಂಪು ಕೆಂಪು ಬೆಂಡೆಕಾಯಿ ತರಕಾರಿ ಪೋಷಕಾಂಶಗಳಲ್ಲಿ ಸಮೃದ್ಧಆಗಿದೆ. ರೆಡ್ ಕೆಂಪು ಬೆಂಡೆಕಾಯಿ ತರಕಾರಿ ಕ್ಯಾಲೋರಿ, ಕಾರ್ಬೋಹೈಡ್ರೇಟ್ , ಪ್ರೋಟೀನ್, ಕೊಬ್ಬು, ಫೈಬರ್, ಮೆಗ್ನೀಸಿಯಮ್ ಅನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಡೆಕಾಯಿ ತರಕಾರಿಯ (Bhindi Vegetable) ವಿವಿಧ ರೆಸಿಪಿಗಳನ್ನು (Different Recipe) ಪ್ರತಿಯೊಂದು ಮನೆಯಲ್ಲೂ (Home) ತಯಾರಿಸಿ ಸೇವಿಸುತ್ತಾರೆ. ಬೆಂಡೆಕಾಯಿ ತರಕಾರಿ ಸಾಕಷ್ಟು ಆರೋಗ್ಯ ಪ್ರಯೋಜನ (Health Benefits) ಹೊಂದಿದೆ. ಬೆಂಡೆಕಾಯಿ ತರಕಾರಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ಕೆಲವರಿಗೆ ಗೊತ್ತಿಲ್ಲದೇ ಹೋದರೂ ಅದರ ರುಚಿಯಿಂದಾಗಿ ಹೆಚ್ಚು ಸೇವನೆ ಮಾಡಲು ಇಷ್ಟ ಪಡುತ್ತಾರೆ. ಬೆಂಡೆಕಾಯಿ ತರಕಾರಿಯ ವಿವಿಧ ರೆಸಿಪಿ ಮಾಡಲು ಮತ್ತು ಪಲ್ಯ ಮಾಡಿ ಸೇವನೆ ಮಾಡುತ್ತಾರೆ. ಕೆಲವೊಮ್ಮೆ ಕರಿದು, ಹುರಿದು ಇಲ್ಲವೇ ಭಾಜಿ ಮಾಡಿ ಸೇವನೆ ಮಾಡುತ್ತಾರೆ. ಇಷ್ಟೆಲ್ಲಾ ಹೇಳಿರೋದು ನಾವು ಹಸಿರು ಬೆಂಡೆಕಾಯಿ ತರಕಾರಿ ಬಗ್ಗೆ. ಇದರ್ಥ ಿನ್ನೂ ಒಂದು ಬಣ್ಣದ ಬೆಂಡೆಕಾಯಿ ತರಕಾರಿ ಇದೆ.

  ಕೆಂಪು ಬೆಂಡೆಕಾಯಿ ತರಕಾರಿ

  ಹೌದು ಕೆಂಪು ಬೆಂಡೆಕಾಯಿ ತರಕಾರಿಯೂ ಇದೆ. ಇದನ್ನು ಕುಂಕುಮ ಬೆಂಡೆಕಾಯಿ ಎಂದೂ ಕರೆಯುತ್ತಾರೆ. ಭಾರತೀಯ ವಿಜ್ಞಾನಿಗಳು 23 ವರ್ಷಗಳ ಕಠಿಣ ಪರಿಶ್ರಮದಿಂದ ಈ ರೀತಿಯ ಕೆಂಪು ಬೆಂಡೆಕಾಯಿ ತರಕಾರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಕಾಶಿಯಲ್ಲಿ ಉತ್ಪಾದನೆಯಾಗುತ್ತದೆ. ಹಾಗಾಗಿ ಇದನ್ನು ಕಾಶಿ ಲಾಲಿಮಾ ಎಂದೂ ಸಹ ಕರೆಯುತ್ತಾರೆ.

  ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವೆಜಿಟೇಬಲ್ ರಿಸರ್ಚ್ ಅಭಿವೃದ್ಧಿಪಡಿಸಿದ ಈ ಕೆಂಪು ಬೆಂಡೆಕಾಯಿ ತರಕಾರಿ ತಳಿಯು ಬಣ್ಣದಲ್ಲಿ ಭಿನ್ನವಾಗಿದೆ. ಜೊತೆಗೆ ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಆಗಿದೆ.

  ಇದನ್ನೂ ಓದಿ: ಕೂದಲು, ನೆತ್ತಿಯ ಆರೋಗ್ಯ ಕಾಪಾಡಲು ನಟಿಯರು ಈರುಳ್ಳಿ ರಸ ಬಳಸುವ ಬಗ್ಗೆ ಹೀಗೆ ಹೇಳಿದ್ದಾರೆ!

  ಹಸಿರು ಬೆಂಡೆಕಾಯಿಯು ಪೌಷ್ಠಿಕಾಂಶದ ಶಕ್ತಿ ಕೇಂದ್ರವಾಗಿದೆ. ಕೆಂಪು ಬೆಂಡೆಕಾಯಿಯ ನಿಯಮಿತ ಸೇವನೆಯು ಹೃದಯದ ಆರೋಗ್ಯ ಸುಧಾರಿಸಲು ನಿಮಗೆ ಪ್ರಯೋಜನಕಾರಿ ಆಗಿದೆ ಎಂದು ತಜ್ಞರು ಸೂಚಿಸುತ್ತಾರೆ.

  ಕೆಂಪು ಬೆಂಡೆಕಾಯಿ ತರಕಾರಿ ವಿಶೇಷತೆ ಏನು?

  ಕೆಂಪು ಕೆಂಪು ಬೆಂಡೆಕಾಯಿ ತರಕಾರಿ ಪೋಷಕಾಂಶಗಳಲ್ಲಿ ಸಮೃದ್ಧಆಗಿದೆ. ರೆಡ್ ಕೆಂಪು ಬೆಂಡೆಕಾಯಿ ತರಕಾರಿ ಕ್ಯಾಲೋರಿ, ಕಾರ್ಬೋಹೈಡ್ರೇಟ್ , ಪ್ರೋಟೀನ್, ಕೊಬ್ಬು, ಫೈಬರ್, ಮೆಗ್ನೀಸಿಯಮ್ ಅನ್ನು ಹೊಂದಿದೆ. ಜೊತೆಗೆ ಇದು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ವಿಟಮಿನ್ ಬಿ6 ಇರುತ್ತದೆ. ಕೆಂಪು ಕೆಂಪು ಬೆಂಡೆಕಾಯಿ ತರಕಾರಿ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ತುಂಬಾ ಕಡಿಮೆಯಾಗಿದೆ.

  ಕುಂಕುಮ, ಕೆಂಪು ಬೆಂಡೆಕಾಯಿ ತರಕಾರಿ ಹೃದಯವನ್ನು ಆರೋಗ್ಯವಾಗಿರಿಸುತ್ತದೆ

  ಕರೋನಾ ಸಾಂಕ್ರಾಮಿಕವು ಹೃದ್ರೋಗದ ಅಪಾಯವನ್ನು ಗಣನೀಯ ಮಟ್ಟದಲ್ಲಿ ಹೆಚ್ಚಳ ಮಾಡಿದೆ. ಹೃದಯದ ಆರೋಗ್ಯ ಕಾಪಾಡುವ ಇಂತಹ ಆಹಾರಗಳನ್ನು ಡಯಟ್ ನಲ್ಲಿ ಸೇರಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ನೀವು ಕುಂಕುಮ ಕೆಂಪು ಬೆಂಡೆಕಾಯಿ ತರಕಾರಿ ಸೇವಿಸಿ.

  ಇದು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ ತರಕಾರಿ ಕಡಿಮೆ ಸೋಡಿಯಂ ಅಂಶ ಹೊಂದಿದೆ. ಇದು ಹೃದಯದ ಆರೋಗ್ಯ ಸುಧಾರಿಸಲು ಕೊಡುಗೆ ನೀಡುತ್ತದೆ.

  ಕೆಂಪು ಕೆಂಪು ಬೆಂಡೆಕಾಯಿ ತರಕಾರಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

  ಪ್ರತಿಷ್ಠಿತ ಮಾಧ್ಯಮ ವರದಿಯ ಪ್ರಕಾರ, ಕುಂಕುಮ ಕೆಂಪು ಬೆಂಡೆಕಾಯಿ ತರಕಾರಿ ಸುಮಾರು 94 ಪ್ರತಿಶತ ಬಹು ಅಪರ್ಯಾಪ್ತ ಕೊಬ್ಬನ್ನು ಹೊಂದಿದೆ. ಇದು ದೇಹದಲ್ಲಿ ನೈಸರ್ಗಿಕವಾಗಿ LDL ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  ಕೆಂಪು ಬೆಂಡೆಕಾಯಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

  ಕಾಶಿ ಲಾಲಿಮಾದಲ್ಲಿ 21 ಪ್ರತಿಶತ ಕಬ್ಬಿಣ ಮತ್ತು 5 ಪ್ರತಿಶತ ಪ್ರೋಟೀನ್ ಇರುತ್ತದೆ. ಒಟ್ಟಾರೆ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ಇದು ಕಾರ್ಯ ನಿರ್ವಹಿಸುತ್ತದೆ.

  ಇದನ್ನೂ ಓದಿ: ಅಡುಗೆ ಮನೆಯಲ್ಲಿರುವ ಈ ವಸ್ತುಗಳಿಂದ ಹೆಚ್ಚುತ್ತಿರುವ ತೂಕಕ್ಕೆ ಮದ್ದು ಅರೆಯಬಹುದು!

  ಕಾಶಿ ಲಾಲಿಮಾ ಚಯಾಪಚಯ ಹೆಚ್ಚಿಸುತ್ತದೆ

  ಉಸಿರಾಟ ಮತ್ತು ಜೀರ್ಣಕ್ರಿಯೆ ದೇಹದ ಅಗತ್ಯ ಕಾರ್ಯ. ನಿರಂತರವಾಗಿ ಶಕ್ತಿ ಒದಗಿಸಲು ನಿಮ್ಮ ಚಯಾಪಚಯ ಕ್ರಿಯೆಯ ಅಗತ್ಯವಿದೆ. ಚಯಾಪಚಯ ಕ್ರಿಯೆಯ ಪರಿಣಾಮಕಾರಿ ಕಾರ್ಯವು ನಿಮ್ಮ ಆರೋಗ್ಯಕ್ಕೆ ಅವಶ್ಯಕ ಆಗಿದೆ. ಕುಂಕುಮ ಕೆಂಪು ಬೆಂಡೆಕಾಯಿ ತರಕಾರಿ ಕಬ್ಬಿಣ ಮತ್ತು ಪ್ರೋಟೀನ್ ಚಯಾಪಚಯ ಸುಧಾರಿಸುತ್ತದೆ.
  Published by:renukadariyannavar
  First published: