ಕೆಂಪು ಬಣ್ಣದ ಬಾಳೆಹಣ್ಣು ಸೇವಿಸಿದ್ರೆ ದೇಹತೂಕ ಬಹಳ ಬೇಗ ಕಡಿಮೆಯಾಗುತ್ತಂತೆ ನೋಡಿ

Red Banana: ಢಾಕಾ ಬನಾನ ಎಂದು ಕರೆಯಲ್ಪಡುವ ಕೆಂಪು ಬಾಳೆಹಣ್ಣು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.ಈ ಹಣ್ಣು ಹೊಟ್ಟೆಯನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬುವಂತೆ ಮಾಡುತ್ತದೆ. ಇದು ನಿಮಗೆ ಹಸಿವನ್ನು ನಿಯಂತ್ರಿಸುತ್ತದೆ. ಮತ್ತು ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಇರುವ ನಾರಿನಂಶ ಪದೇ ಪದೇ ಹಸಿವಾಗದಂತೆ ನೋಡಿಕೊಳ್ಳುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜಗತ್ತಿನಲ್ಲಿ(World) ಅತೀ ಹೆಚ್ಚಾಗಿ ಸೇವಿಸುವ ಹಣ್ಣು ಬಾಳೆಹಣ್ಣು(Banana). ಇದು ಅತೀ ಹೆಚ್ಚು ಪೋಷಕಾಂಶಗಳನ್ನು(Nutrients) ಹೊಂದಿರುವ ಆರೋಗ್ಯದ(Health) ಭಂಡಾರವನ್ನೇ ಒಳಗೊಂಡಿರುವ ಫಲ. ಅದ್ರಲ್ಲೂ ಊಟದ ಕೊನೆಯಲ್ಲಿಒಂದು ಬಾಳೆಹಣ್ಣು ತಿಂದರೆ ತೃಪ್ತಿಯಾಗುತ್ತೆ. ದೇಹ ಹಗರುವಾಗುವ ಜೊತೆಗೆ ಜೀರ್ಣ ಕ್ರಿಯೆ (Digestion)ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಇದೆ.ಅನೇಕ ವಿಟಮಿನ್ಸ್(Vitamins) ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ, ಇದನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ. ಇಂತಹ ಬಾಳೆಹಣ್ಣಿನ ಪ್ರಭೇದಗಳು ಪ್ರಪಂಚದಾದ್ಯಂತ ಸಾವಿರಕ್ಕೂ ಹೆಚ್ಚು ಕಂಡುಬರುತ್ತವೆ. ಅವುಗಳಲ್ಲಿ ಒಂದು ಕೆಂಪು ಬಾಳೆಹಣ್ಣು.

  ಹಳದಿ ಬಾಳೆಹಣ್ಣಿನಂತೆ ಈ ಕೆಂಪು ಬಾಳೆ ಹಣ್ಣು ಸಹ ಆದರೆ ಕೆಂಪು ಬಾಳೆಹಣ್ಣು ಸಹ ರುಚಿಯಾಗಿದ್ದು, ತನ್ನದೇ ಆದ ವಿಭಿನ್ನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕೆಂಪು ಬಾಳೆಹಣ್ಣುಗಳು ಹಳದಿ ಬಾಳೆಹಣ್ಣುಗಳಿಗಿಂತ ಚಿಕ್ಕದಾಗಿರುತ್ತವೆ.ಮತ್ತು
  ಇದರಲ್ಲಿ ಹಳದಿ ಬಾಳೆಹಣ್ಣಿನಲ್ಲಿ ಇರೋದಕ್ಕಿಂತ ಹೆಚ್ಚಿನ ಪೋಷಕಾಂಶಗಳಿವೆ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದ್ದರಿಂದ ಕೆಂಪು ಬಾಳೆಹಣ್ಣುಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನ ಏನು ಅನ್ನೋದರ ಮಾಹಿತಿ ಇಲ್ಲಿದೆ.

  1)ದೇಹದ ತೂಕ ಇಳಿಸಲು: ಢಾಕಾ ಬನಾನ ಎಂದು ಕರೆಯಲ್ಪಡುವ ಕೆಂಪು ಬಾಳೆಹಣ್ಣು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.ಈ ಹಣ್ಣು ಹೊಟ್ಟೆಯನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬುವಂತೆ ಮಾಡುತ್ತದೆ. ಇದು ನಿಮಗೆ ಹಸಿವನ್ನು ನಿಯಂತ್ರಿಸುತ್ತದೆ. ಮತ್ತು ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಇರುವ ನಾರಿನಂಶ ಪದೇ ಪದೇ ಹಸಿವಾಗದಂತೆ ನೋಡಿಕೊಳ್ಳುತ್ತದೆ. ತೂಕ ಇಳಿಸುವವರು ಅನ್ನದ ಬದಲು ಒಂದು ಕೆಂಪು ಬಾಳೆಹಣ್ಣನ್ನು ತಿನ್ನಬಹುದು.

  ಇದನ್ನೂ ಓದಿ: ಮಸಾಲ ದೋಸೆ, ಸೆಟ್​ ದೋಸೆ ರುಚಿ ಗೊತ್ತು,ಬಾಳೆಹಣ್ಣಿನ ದೋಸೆ ಟೇಸ್ಟ್​ ಮಾಡಿದ್ದೀರಾ? ಇಲ್ಲಿದೆ ರೆಸಿಪಿ

  2)ರೋಗ ನಿರೋಧಕ ಶಕ್ತಿ ಹೆಚ್ಚಳ: ಪೋಷಕಾಂಷಗಳ ಕಣಜವಾಗಿರುವ ಕೆಂಪು ಬಾಳೆ ಹಣ್ಣು, ಪ್ರಸ್ತುತ ನಮ್ಮನ್ನ ಕಾಡುತ್ತಿರುವ ಹಲವು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಕೆಂಪು ಬಾಳೆ ಹಣ್ಣು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

  3)ಕಿಡ್ನಿಯ ಆರೋಗ್ಯಕ್ಕೆ ಉತ್ತಮ: ಎಲ್ಲರಿಗೂ ಗೊತ್ತಿರುವಂತೆ ಪೊಟಾಶಿಯಂ ಕಿಡ್ನಿಯಲ್ಲಿ ಕಲ್ಲು ಆಗುವುದನ್ನು ತಡೆಯುತ್ತದೆ. ಕೆಂಪು ಬಾಳೆಹಣ್ಣಿನಲ್ಲಿ ಪೊಟಾಶಿಯಂ ಹೇರಳವಾಗಿದೆ. ನಿಮ್ಮ ದೇಹದಲ್ಲಿ ಕ್ಯಾಲ್ಶಿಯಂ ಸಮತೋಲನದಲ್ಲಿಡಲೂ ಇದು ಸಹಾಯಕಾರಿ. ಇದರಿಂದ ಶರೀರದಲ್ಲಿರುವ ಮೂಳೆಗಳು ಆರೋಗ್ಯಕರವಾಗಿದ್ದು, ಗಟ್ಟಿಯಾಗಿರುತ್ತದೆ.

  4)ರಕ್ತ ಶುದ್ಧೀಕರಿಸುತ್ತದೆ: ಈ ಹಣ್ಣಿನಲ್ಲಿರುವ ಆಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ರಕ್ತವನ್ನು ಶುದ್ಧೀಕರಿಸಿ, ಹಿಮೋಗ್ಲೋಬಿನ್ ಮಟ್ಟವನ್ನು ಉತ್ತಮಪಡಿಸುತ್ತದೆ.ಇದು ನಿಮ್ಮ ಇಮ್ಯುನಿಟಿಯನ್ನೂ ಹೆಚ್ಚಿಸುತ್ತದೆ. ಕೆಂಪು ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6 ದೇಹದಲ್ಲಿರುವ ಪ್ರೋಟೀನ್ ನ್ನು ಸಮತೋಲದಲ್ಲಿಟ್ಟು ಕೆಂಪು ರಕ್ತ ಕಣಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ.

  5)ಕೂದಲು ಉದುರುವುದು ತಡೆಯಲು: ಕೂದಲು ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಗೆ ಕಿವುಚಿದ ಕೆಂಪು ಬಾಳೆಹಣ್ಣು ಮಿಶ್ರಣ ಮಾಡಿ. ನಂತರ ತಲೆ ಬುಡಕ್ಕೆ ಹಚ್ಚಿ. ಹೀಗೆ ಮಾಡುವುದರಿಂದ ಕೂದಲು ಉದುರುವುದು ನಿವಾರಣೆಯಾಗುತ್ತದೆ

  ಇದನ್ನೂ ಓದಿ:ಕೂದಲು ಉದುರುತ್ತಿದೆ ಎನ್ನುವ ಚಿಂತೆ ಬೇಡ- ಈ ಹೇರ್​ ಮಾಸ್ಕ್​ಗಳನ್ನು ಟ್ರೈ ಮಾಡಿ ಮ್ಯಾಜಿಕ್ ನೋಡಿ

  6)ಧೂಮಪಾನದ ಚಟ ಬಿಡಲು ಸಹಾಯಕ: ಕೆಂಪು ಬಾಳೆಹಣ್ಣುಗಳಲ್ಲಿ ಮೆಗ್ನೀಷಿಯಮ್ ಮತ್ತು ಪೊಟ್ಯಾಷಿಯಮ್ ಇವೆ, ಇದು ಧೂಮಪಾನದ ಬಯಕೆಯನ್ನು ಕಡಿಮೆ ಮಾಡುತ್ತದೆ. ಇದು ನಿಮಗೆ ಶಕ್ತಿ ಮತ್ತು ಪೂರ್ಣ ಅನುಭವವನ್ನು ನೀಡುತ್ತದೆ, ಇದು ಮಾನಸಿಕ ಸಮಸ್ಯೆಗಳನ್ನು ಎದುರಿಸಲು  ಸಹಾಯ ಮಾಡುತ್ತದೆ. ಧೂಮಪಾನ ಸಮಸ್ಯೆ ನಿವಾರಿಸಲು ಇದು ಉತ್ತಮ ಮಾರ್ಗವಾಗಿದೆ
  Published by:ranjumbkgowda1 ranjumbkgowda1
  First published: