Rectal Cancer Medicine: ಗುದನಾಳ ಕ್ಯಾನ್ಸರ್‌ ರೋಗಿಗಳ ಮೇಲೆ ನಡೆದ ಪ್ರಯೋಗ ಯಶಸ್ವಿ, ಯಾವ ಔಷಧ ಪರಿಣಾಮಕಾರಿ?

ಗುದನಾಳದ ಕ್ಯಾನ್ಸರ್‌ನ ಕೆಲವು ರೋಗಿಗಳ ಮೇಲೆ ನಿರ್ದಿಷ್ಟ ಔಷಧದ ಕ್ಲಿನಿಕಲ್ ಪ್ರಯೋಗ ನಡೆಸಲಾಗಿತ್ತು. ಇದರ ಫಲಿತಾಂಶ ಈಗ ಕ್ಯಾನ್ಸರ್ ರೋಗಿಗಳಿಗೆ ಸಂತಸದ ಸುದ್ದಿ ತಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕ್ಯಾನ್ಸರ್ (Cancer) ಅಂದ್ರೆ ಸಾಕು ಸಾವು (Death) ಕಣ್ಮುಂದೆ (Eyes) ಬರುತ್ತದೆ. ಇನ್ನು ಎಷ್ಟು ದಿನ ಬದುಕುತ್ತೇವೋ (Life) ಎಂದು ದಿನಗಳನ್ನ (Days) ಎಣಿಕೆ ಮಾಡುತ್ತಾ, ಯಾವಾಗ ಉಸಿರು ನಿಲ್ಲುತ್ತೋ ಎಂದು ಆಲೋಚನೆಯಲ್ಲಿ ಕೊರಗುವವರು ಹೆಚ್ಚಿನ ಜನರಿದ್ದಾರೆ. ಅದಾಗ್ಯೂ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಆದರೆ ಈಗ ಕ್ಯಾನ್ಸರ್ ರೋಗಿಗಳು ಚಿಂತೆ ಮಾಡುವುದು ಬೇಡ. ಯಾಕೆಂದರೆ ವೈದ್ಯಕೀಯ ಲೋಕದಲ್ಲಿ ಹೊಸ ಪವಾಡವೊಂದು ನಡೆದಿದ್ದು ಅದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಗುದನಾಳದ ಕ್ಯಾನ್ಸರ್‌ನ ಕೆಲವು ರೋಗಿಗಳ ಮೇಲೆ ನಿರ್ದಿಷ್ಟ ಔಷಧದ ಕ್ಲಿನಿಕಲ್ ಪ್ರಯೋಗ ನಡೆಸಲಾಗಿತ್ತು.

  ಗುದನಾಳದ ಕ್ಯಾನ್ಸರ್‌ನ ಇರುವ 18 ರೋಗಿಗಳ ಮೇಲೆ ನಡೆಸಲಾದ ಪ್ರಯೋಗ ಯಶಸ್ವಿ

  ಇದರ ಫಲಿತಾಂಶ ಈಗ ಕ್ಯಾನ್ಸರ್ ರೋಗಿಗಳಿಗೆ ಸಂತಸದ ಸುದ್ದಿ ತಂದಿದೆ. ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿರುವ ಅಧ್ಯಯನದಲ್ಲಿ, ಗುದನಾಳದ ಕ್ಯಾನ್ಸರ್‌ನ ಪ್ರಯೋಗದಲ್ಲಿ ಒಳಗೊಂಡಿರುವ ಎಲ್ಲಾ 18 ರೋಗಿಗಳಲ್ಲಿ ಕ್ಯಾನ್ಸರ್ ಗೆಡ್ಡೆಗಳು ಸಂಪೂರ್ಣವಾಗಿ ನಿರ್ಮೂಲನೆಯಾಗಿರುವುದು ಕಂಡು ಬಂದಿದೆ.

  ಅಧ್ಯಯನದ ಲೇಖಕ ಮತ್ತು ನ್ಯೂಯಾರ್ಕ್‌ನ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಡಾ. ಲೂಯಿಸ್ ಎ. ಡಯಾಜ್ ಅವರು ಮಾತನಾಡಿ, ಇಲ್ಲಿಯವರೆಗೆ ಕ್ಯಾನ್ಸರ್ ನ್ನು ಸಂಪೂರ್ಣವಾಗಿ ನಾಶ ಮಾಡಿದ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ. ಆದರೆ ಈಗ ನಡೆಸಿದ ಪ್ರಯೋಗಗಳಲ್ಲಿ ರೋಗಿಯ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಹೇಳಿದರು.

  ಇದನ್ನೂ ಓದಿ: ದಿನವನ್ನು ತಾಜಾ ಆಗಿರಿಸಲು ಮತ್ತು ಒತ್ತಡ ಮುಕ್ತವಾಗಿರಿಸಲು ಈ ಚಹಾ ಸೇವನೆ ಪ್ರಯೋಜನಕಾರಿ

  ಅಧ್ಯಯನವು ಏನು ಹೇಳುತ್ತದೆ?

  18 ಕ್ಯಾನ್ಸರ್ ರೋಗಿಗಳ ಮೇಲೆ ನಡೆಸಿದ ಈ ಅಧ್ಯಯನವು ತುಂಬಾ ಚಿಕ್ಕದು. ಅಧ್ಯಯನದಲ್ಲಿ ಎಲ್ಲಾ ರೋಗಿಗಳು ಒಂದೇ ರೀತಿಯ ಔಷಧ ತೆಗೆದುಕೊಂಡಿದ್ದಾರೆ. ಅಧ್ಯಯನದ ಫಲಿತಾಂಶಗಳು ಆಘಾತಕಾರಿಯಾಗಿವೆ. ಪ್ರಯೋಗದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ರೋಗಿಯ ದೇಹದಿಂದ ಕ್ಯಾನ್ಸರ್ ಗಡ್ಡೆಗಳು ಸಂಪೂರ್ಣವಾಗಿ ಕಣ್ಮರೆಯಾಗಿವೆ.

  ಪ್ರತಿಯೊಬ್ಬ ರೋಗಿಯ ದೈಹಿಕ ಪರೀಕ್ಷೆ, ಎಂಡೋಸ್ಕೋಪಿ, PET ಸ್ಕ್ಯಾನ್ ಅಥವಾ MRI. ಸ್ಕ್ಯಾನ್‌ ಮಾಡಿದಾಗ, ಪ್ರಯೋಗದ ನಂತರ ಗಡ್ಡೆಗಳು ಕಾಣಿಸಿಕೊಂಡಿಲ್ಲ. "ಕ್ಯಾನ್ಸರ್ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಪವಾಡ ನಡೆದಿದೆ ಎಂದು ಭಾವಿಸುತ್ತೇನೆ" ಎಂದು ಡಾ ಡಯಾಜ್ ಹೇಳಿದ್ದಾರೆ.

  ಕ್ಯಾನ್ಸರ್ ರೋಗಿಗಳ ಆನಂದ ಬಾಷ್ಪ

  ಗುದನಾಳದ ಕ್ಯಾನ್ಸರ್ ರೋಗಿಗಳು ಕೀಮೋಥೆರಪಿ, ವಿಕಿರಣ ಮತ್ತು ಅನೇಕ ರೀತಿಯ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕು. ಹೀಗಾಗಿ ಅವರು ಕರುಳು, ಮೂತ್ರ ಮತ್ತು ಲೈಂಗಿಕ ರೋಗಕ್ಕೆ ತುತ್ತಾಗುತ್ತಾರೆ. ಕೆಲವರು ಕೊಲೊಸ್ಟೊಮಿ ಬ್ಯಾಗ್ ಅನ್ನು ಸ್ಥಾಪಿಸಬೇಕು.

  ಒಮ್ಮೆ ಈ ಪ್ರಯೋಗ ನಡೆದರೆ ಮತ್ತೊಮ್ಮೆ ಈ ಎಲ್ಲಾ ಕಾರ್ಯ ವಿಧಾನಗಳನ್ನು ಮಾಡಬೇಕು ಎಂಬ ಪ್ರಶ್ನೆ ಅಧ್ಯಯನದಲ್ಲಿ ಭಾಗಿಯಾಗಿದ್ದ ಎಲ್ಲಾ ರೋಗಿಗಳ ಮನಸ್ಸಿನಲ್ಲಿತ್ತು. ತಮ್ಮ ದೇಹದಲ್ಲಿ ಮನೆ ಮಾಡಿರುವ ಹಾಗೂ ಸಾವಿನಂಚಿಗೆ ತಮ್ಮನ್ನು ಕೊಂಡೊಯ್ಯುತ್ತಿರುವ ಕ್ಯಾನ್ಸರ್ ಗಡ್ಡೆ ಸಂಪೂರ್ಣವಾಗಿ ನಾಶವಾಗುತ್ತದೆ ಎಂಬ ಚಿಕ್ಕ ನಿರೀಕ್ಷೆ ಸಹ ಯಾರಲ್ಲಿಯೋ ಇರಲಿಲ್ಲ. ಈಗ ಈ 18 ರೋಗಿಗಳು ಕ್ಯಾನ್ಸರ್ ಅಪಾಯದಿಂದ ಪಾರಾಗಿದ್ದು, ಬೇರೆ ಚಿಕಿತ್ಸೆ ಅಗತ್ಯವಿಲ್ಲ ಎಂಬ ಸಂಗತಿ ಆಶ್ಚರ್ಯ ಮೂಡಿಸಿದೆ.

  ಹೀಗೆ ಸಾವಿನ ಬಲೆಯಿಂದ ಪಾರಾಗಿರುವ 18 ರೋಗಿಗಳು, ಕ್ಯಾನ್ಸರ್ ನಿಂದ ಸಂಪೂರ್ಣ ಗುಣಮುಖರಾಗಿದ್ದು, ಆನಂದಬಾಷ್ಪ ಸುರಿಸಿದ್ದಾರೆ. ಒಬ್ಬ ರೋಗಿಯಾದ ಸಶಾ ರಾತ್ ಸಂತಸದಿಂದ ಕುಣಿದು ಕುಪ್ಪಳಿಸಿದ್ದು, ಅವರು ಮಾತನಾಡಿ, 'ನನಗೆ ನಂಬಲಾಗುತ್ತಿಲ್ಲ. ಈ ರೀತಿಯ ಪವಾಡ ನಡೆದು ಹೋಗುತ್ತದೆಂದು ನಾನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

  ಪ್ರಯೋಗದಲ್ಲಿ ಯಾವ ಔಷಧ ಬಳಸಲಾಗಿತ್ತು?

  ಪ್ರಯೋಗದಲ್ಲಿ ಭಾಗಿಯಾಗಿದ್ದ ಎಲ್ಲಾ ರೋಗಿಗಳಿಗೆ “ದೋಸ್ಟಾರ್ಲಿಮಾಬ್” (Dostarlimab) ಎಂಬ ಔಷಧ ನೀಡಲಾಗಿತ್ತು.  ಈ ಔಷಧವನ್ನು ಪ್ರತಿ ಮೂರು ವಾರಗಳಿಗೊಮ್ಮೆ ಆರು ತಿಂಗಳವರೆಗೆ ರೋಗಿಗಳಿಗೆ ನೀಡಲಾಗುತ್ತಿತ್ತು. ಈ ಔಷಧವು ಕ್ಯಾನ್ಸರ್ ಕೋಶಗಳನ್ನು ಬಹಿರಂಗಪಡಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ಅವುಗಳನ್ನು ಗುರುತಿಸಲು ಮತ್ತು ನಾಶಮಾಡಲು ಸಹಾಯ ಮಾಡುತ್ತದೆ. ರೋಗಿಗಳಲ್ಲಿ ಈ ಔಷಧಿಯ ಯಾವುದೇ ನಿರ್ದಿಷ್ಟ ಅಡ್ಡಪರಿಣಾಮ ನೀಡದಿರುವುದು ಮತ್ತೊಂದು ಸಂತಸದ ಸುದ್ದಿಯಾಗಿದೆ.

  ಇದನ್ನೂ ಓದಿ: ರಕ್ತದಲ್ಲಿ ಹೆಚ್ಚಳವಾಗುವ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಇಲ್ಲಿದೆ ಆಯುರ್ವೇದಿಕ್ ಪರಿಹಾರ

  ಉತ್ತರ ಕೆರೊಲಿನಾದ ಲೈನ್‌ಬರ್ಗರ್ ಸಮಗ್ರ ಕ್ಯಾನ್ಸರ್ ಕೇಂದ್ರದ ಡಾ. ಹನ್ನಾ ಸನೋಫ್ ಮಾತನಾಡಿ,"ಈ ಅಧ್ಯಯನವು ಚಿಕ್ಕದಾಗಿದ್ದು, ಹೆಚ್ಚು ಪರಿಣಾಮಕಾರಿಯಾಗಿದೆ" ಎಂದು ಹೇಳಿದರು. ಆದರೆ, ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ಮತ್ತೊಮ್ಮೆ ಅಧ್ಯಯನ ನಡೆಯಬೇಕಿದೆ ಎನ್ನುತ್ತಾರೆ ತಜ್ಞರು.
  Published by:renukadariyannavar
  First published: