Recruitment 2020: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ168 ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ168 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 4ನೇ ತರಗತಿ ಪಾಸ್ ಆಗಿರಬೇಕು. 9ನೇ ತರಗತಿಗಿಂತ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವವರನ್ನು ಈ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲ.

Jobs

Jobs

  • Share this:
    ಹಾವೇರಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಖಾಲಿ ಇರುವ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ವಿಭಾಗಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ ಮಹಿಳಾ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಉದ್ಯೋಗ ಇನ್ನಷ್ಟು ಮಾಹಿತಿ ಈ ಕೆಳಗಿನಂತಿವೆ.

    ಒಟ್ಟು ಹುದ್ದೆಗಳು: 168
    ಅಂಗನವಾಡಿ ಕಾರ್ಯಕರ್ತೆ- 36 ಹುದ್ದೆಗಳು
    ಅಂಗನವಾಡಿ ಸಹಾಯಕಿ- 132 ಹುದ್ದೆಗಳು

    ವಿದ್ಯಾರ್ಹತೆ:
    ಅಂಗನವಾಡಿ ಕಾರ್ಯಕರ್ತೆ- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಪಾಸಾಗಿರಬೇಕು.
    ಅಂಗನವಾಡಿ ಸಹಾಯಕಿ- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 4ನೇ ತರಗತಿ ಪಾಸ್ ಆಗಿರಬೇಕು. 9ನೇ ತರಗತಿಗಿಂತ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವವರನ್ನು ಈ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲ.

    ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 35 ವರ್ಷದೊಳಗಿನವರಾಗಿಬೇಕು.

    ಉದ್ಯೋಗದ ಸ್ಥಳ: ಹಾವೇರಿ

    ಪ್ರಮುಖ ದಿನಾಂಕ: ಈ ಹುದ್ದೆಗಳಿಗೆ 14-9-2020 ಕೊನೆಯ ದಿನಾಂಕವಾಗಿದ್ದು, ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

    ಈ ಹುದ್ದೆಗಳ ಮತ್ತಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ಈ ಹುದ್ದೆಗಳ ಕುರಿತಾದ ಮಾಹಿತಿ ಪಡೆಯಲು ವೆಬ್​ಸೈಟ್​ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
    Published by:zahir
    First published: