ಕೆನಡಾದಲ್ಲಿ ಸಿದ್ಧವಾಗಿದೆ ವಿಶ್ವದ ಅತಿ ಉದ್ದದ ರೋಲರ್ ಕೋಸ್ಟರ್

news18
Updated:August 16, 2018, 5:10 PM IST
ಕೆನಡಾದಲ್ಲಿ ಸಿದ್ಧವಾಗಿದೆ ವಿಶ್ವದ ಅತಿ ಉದ್ದದ ರೋಲರ್ ಕೋಸ್ಟರ್
news18
Updated: August 16, 2018, 5:10 PM IST
-ನ್ಯೂಸ್ 18 ಕನ್ನಡ

ಅತಿ ಎತ್ತರ, ವಿಪರೀತ ವೇಗ, ಅನೇಕ ಏರಿಳಿತ...ಗಟ್ಟಿ ಮನಸ್ಸು ಮಾಡಿ ರೋಲರ್ ಕೋಸ್ಟರ್​ನಲ್ಲಿ ಕೂತರೆ ಹೊಸ ಅನುಭವ ಸಿಗುವುದರಲ್ಲಿ ಸಂಶಯವೇ ಇಲ್ಲ. ಇಂತಹ ಅನುಭವವನ್ನು ಮತ್ತಷ್ಟು ಮೈನವರೇಳಿಸುವಂತೆ ಮಾಡಲು ಕೆನೆಡಾದಲ್ಲಿ ವಿಶ್ವದ ಅತಿ ಉದ್ದದ ಡೈವ್ ಕೋಸ್ಟರ್ ಅಥವಾ ರೋಲರ್ ಕೋಸ್ಟರ್​ನ್ನು ಸ್ಥಾಪಿಸಲಾಗಿದೆ. ಈ ಥೀಮ್ ಪಾರ್ಕ್ ಮುಂದಿನ ವರ್ಷದಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ.

ಟೊರಾಂಟೊ ನಗರದ ವಂಡರ್​ಲ್ಯಾಂಡ್​​ನಲ್ಲಿ ಯುಕಾನ್ ಸ್ಟ್ರೈಕರ್ ಸಂಸ್ಥೆ ಈ ರೋಲರ್ ಕೋಸ್ಟರ್​ನ್ನು ನಿರ್ಮಿಸಿದೆ. ಸುಮಾರು 130 ಕಿ.ಮೀ ವೇಗದಲ್ಲಿ ಚಲಿಸುವ ಈ ರೋಲರ್ 3,625 (1 .1ಕಿ.ಮೀ) ಅಡಿ ಉದ್ದವನ್ನು ಹೊಂದಿದೆ.

ಈ ಸಾಹಸಮಯ ಪಯಣದ ನಡುವೆ ಮಧ್ಯ ಭಾಗದಲ್ಲಿ ಮೂರು ಸೆಕೆಂಡ್​ಗಳ ಕಾಲ ನಿಲ್ಲಿಸಲಾಗುತ್ತದೆ. 90 ಡಿಗ್ರಿ ಡ್ರಾಪ್​ನಿಂದ ಈ ಡೈವ್ ನೇರವಾಗಿ ಅಂಡರ್​​ವಾಟರ್ ಸುರಂಗದ ಮೂಲಕ ಚಲಿಸಲಿದೆ.​ ನಾಲ್ಕು ವಿವಿಧ ರೀತಿಯ ಏರಿಳಿತಗಳಲ್ಲಿ ಚಲಿಸಲಿರುವ ಡೈವ್ ಕೋಸ್ಟರ್​ನ್ನು 360 ಡಿಗ್ರಿಯಲ್ಲಿ ನಿರ್ಮಿಸಲಾಗಿದೆ.

ಗೋಲ್ಡ್ ರಶ್ ಥೀಮ್​ನ ಯುಕಾನ್ ಸ್ಟ್ರೈಕರ್ ಕೆನಡಾದ ವಂಡರ್​ಲ್ಯಾಂಡ್​ನಲ್ಲಿ 2019ರಲ್ಲಿ ತೆರೆದುಕೊಳ್ಳಲಿದೆ. ಸದ್ಯ ವಿಶ್ವದ ಅತಿ ಎತ್ತರದ ರೋಲರ್ ಕೋಸ್ಟರ್ ಅಮೆರಿಕದ ಒಹಿಯೊ ರಾಜ್ಯದಲ್ಲಿದಲ್ಲಿದೆ. 120 ಕಿ.ಮೀ ವೇಗದಲ್ಲಿ ಚಲಿಸುವ ಈ ಡೈವ್ ಕೋಸ್ಟರ್ 223 ಅಡಿ ಎತ್ತರದಲ್ಲಿದ್ದು, 3,415 ಉದ್ದವನ್ನು ಹೊಂದಿದೆ. ಆದರೆ ಮುಂದಿನ ವರ್ಷದಿಂದ ಕೆನಡಾದ ಯುಕಾನ್ ಸ್ಟ್ರೈಕರ್​ನ ಈ ಡೈವ್ ಅಥವಾ ರೋಲರ್ ಕೋಸ್ಟರ್ ವಿಶ್ವದ ಅತ್ಯಂತ ಉದ್ದದ ಡೈವ್ ಕೋಸ್ಟರ್​ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.
First published:August 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...