Healthy Fruits: ಪ್ರತಿ ದಿನ ಹಣ್ಣುಗಳನ್ನು ಸೇವಿಸಿ, ಇದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಎಂದು ಆಮೇಲೆ ಗೊತ್ತಾಗುತ್ತೆ

ಆಯಾ ಋತುಗಳಲ್ಲಿ ಸಿಗುವ ಹಣ್ಣುಗಳನ್ನು (Fruits) ತಿನ್ನುವುದು ಆರೋಗ್ಯಕ್ಕೆ (Healthy) ಅತ್ಯಂತ ಪ್ರಯೋಜನಕಾರಿ. ನಮ್ಮ ಹಿರಿಯರುಗಳ ಆರೋಗ್ಯದ ಗುಟ್ಟುಗಳಲ್ಲಿ ಇದೂ ಕೂಡ ಒಂದಾಗಿತ್ತು ಎನ್ನಬಹುದು. ಹಣ್ಣುಗಳು ನಮ್ಮ ದೇಹದ ಪೋಷಣೆ, ಬೆಳವಣಿಗೆ, ಚರ್ಮ (Skin) ಮತ್ತು ಕೂದಲಿನ (Hair) ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಎಲ್ಲದಕ್ಕಿಂತ ಮುಖ್ಯವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆಯಾ ಋತುಗಳಲ್ಲಿ ಸಿಗುವ ಹಣ್ಣುಗಳನ್ನು (Fruits) ತಿನ್ನುವುದು ಆರೋಗ್ಯಕ್ಕೆ (Healthy) ಅತ್ಯಂತ ಪ್ರಯೋಜನಕಾರಿ. ನಮ್ಮ ಹಿರಿಯರುಗಳ ಆರೋಗ್ಯದ ಗುಟ್ಟುಗಳಲ್ಲಿ ಇದೂ ಕೂಡ ಒಂದಾಗಿತ್ತು ಎನ್ನಬಹುದು. ಹಣ್ಣುಗಳು ನಮ್ಮ ದೇಹದ ಪೋಷಣೆ, ಬೆಳವಣಿಗೆ, ಚರ್ಮ (Skin) ಮತ್ತು ಕೂದಲಿನ (Hair) ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಎಲ್ಲದಕ್ಕಿಂತ ಮುಖ್ಯವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹಣ್ಣುಗಳನ್ನು ಹಾಗೆಯೇ ತಿನ್ನಲು ಇಷ್ಟವಿಲ್ಲದವರು ಜ್ಯೂಸ್, ಸಲಾಡ್, ಸ್ಮೂದಿ ಇತ್ಯಾದಿಗಳ ರೂಪದಲ್ಲಿ ಅವುಗಳನ್ನು ಸೇವಿಸಬಹುದು. ಯಾವುದೇ ರೀತಿಯಲ್ಲಾದರೂ ಸೇವಿಸಿ, ಆದರೆ ಖಂಡಿತಾ ಸೇವಿಸಲೇಬೇಕು. ಏಕೆಂದರೆ, ಪ್ರತಿಯೊಂದು ಹಣ್ಣು ಕೂಡ ನಮ್ಮ ದೇಹಕ್ಕೆ (Body) ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಆ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ.

ಸೇಬು
ಅತ್ಯಂತ ಆರೋಗ್ಯಕರ ಎಂದು ಪರಿಗಣಿಸಲ್ಪಡುವ ಹಣ್ಣುಗಳ ಪೈಕಿ ಸೇಬು ಬಹಳ ಜನಪ್ರಿಯ. ಮತ್ತೆ, ದಿನಕ್ಕೊಂದು ಸೇಬು ತಿಂದರೆ, ವೈದ್ಯರಿಂದ ದೂರ ಇರಬಹುದು ಎಂದು ಸುಮ್ಮನೆ ಹೇಳುತ್ತಾರೆಯೇ? ಖಂಡಿತಾ ಇಲ್ಲ, ಸೇಬಿನಲ್ಲಿರುವ ಆರೋಗ್ಯಕರ ಅಂಶಗಳು ಒಂದಲ್ಲ ಎರಡಲ್ಲ, ಅನೇಕ. ಸೇಬು ಹಣ್ಣನ್ನು ಸೇವಿಸುವುದರಿಂದ ದೇಹವನ್ನು ಸೋಂಕಿನಿಂದ ದೂರ ಇಡಬಹುದು. ಅದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಅಲ್ಲದೇ ಸೇಬು ಅಸ್ತಮಾದ ವಿರುದ್ಧ ಕೂಡ ಹೋರಾಡುತ್ತದೆ ಎಂದು ಹೇಳಲಾಗುತ್ತದೆ.

ಕಲ್ಲಂಗಡಿ ಹಣ್ಣು
ಜ್ಯೂಸಿಯಾಗಿರುವ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಂತೂ ಎಲ್ಲರಿಗೂ ಪ್ರಿಯವಾಗುತ್ತದೆ. ಬೇರೆ ಋತುಗಳಲ್ಲಿ ಕೂಡ ಇದನ್ನು ನಿಶ್ಚಿಂತೆಯಾಗಿ ಸೇವಿಸಬಹುದು. ಅದರಲ್ಲೂ ತೂಕ ಇಳಿಸಲು ಬಯಸುವವರಿಗಂತೂ ಕಲ್ಲಂಗಡಿ ಹಣ್ಣು ಮೊದಲ ಆಯ್ಕೆಯಾಗಿರುತ್ತದೆ. ಈ ಹಣ್ಣು ಹಾರ್ಟ್ ರೇಟ್ ಅನ್ನು ಕೂಡ ನಿಯಂತ್ರಿಸುತ್ತದೆ ಎನ್ನಲಾಗುತ್ತದೆ.

ಇದನ್ನೂ ಓದಿ: Fruits Eating Benefits: ಮಧುಮೇಹ ಮತ್ತು ಸ್ಥೂಲಕಾಯ ತಡೆಗೆ ಯಾವ ರೀತಿಯ ಹಣ್ಣುಗಳ ಸೇವನೆ ಬೆಸ್ಟ್? ತಜ್ಞರ ಸಲಹೆ ಹೀಗಿದೆ

ಅನನಾಸು
ಸಿಹಿಯಾದ ಅನನಾಸು ಹಣ್ಣು ತಿನ್ನಲು ರುಚಿಕರ, ಆರೋಗ್ಯಕ್ಕೂ ಅಷ್ಟೇ ಹಿತಕರ. ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತದ ವಿರುದ್ಧ ಹೋರಾಡುತ್ತದೆ. ಅದು ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಅನನಾಸು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ.

ಮಾವಿನ ಹಣ್ಣು
ಹಣ್ಣುಗಳ ರಾಜ ಎಂದೇ ಪರಿಗಣಿಸಲ್ಪಡುವ ಮಾವಿನ ಹಣ್ಣು ಮಕ್ಕಳಿಂದ ಹಿಡಿದು ಮುದುಕರ ವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಮಾವಿನ ಹಣ್ಣು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಮಾವಿನ ಹಣ್ಣು ಹೃದಯದ ಆರೋಗ್ಯಕ್ಕೂ ಉತ್ತಮ ಎಂದು ನಂಬಲಾಗುತ್ತದೆ.

ದ್ರಾಕ್ಷಿ
ದ್ರಾಕ್ಷಿ ಹಣ್ಣನ್ನು ಹಾಗೆಯೇ ತಿಂದರೂ ಉತ್ತಮ, ಒಣ ಹಣ್ಣಿನ ರೂಪದಲ್ಲಿ ತಿಂದರೂ ಆರೋಗ್ಯಕರ. ದ್ರಾಕ್ಷಿ ಹಣ್ಣು ರಕ್ತದೊತ್ತಡವನ್ನು ಕಡಿಮೆ ಮಾಡುವುದಕ್ಕೆ ಹೆಸರುವಾಸಿ. ಅದು ಅಧಿಕ ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಿಸುತ್ತದೆ. ದ್ರಾಕ್ಷಿ ಹಣ್ಣು ಮೂಳೆಗಳನ್ನು ಕೂಡ ಸದೃಢಗೊಳಿಸುತ್ತದೆ.

ಬಾಳೆ ಹಣ್ಣು
ಈ ಹಣ್ಣನ್ನು ತಿಂದರೆ, ಒಂದು ದೀರ್ಘ ಕಾಲದ ವರೆಗೆ ಹಸಿವಾಗುವುದಿಲ್ಲ, ಹೊಟ್ಟೆ ತುಂಬಿದಂತಿರುತ್ತದೆ. ಬಾಳೆ ಹಣ್ಣಿನಲ್ಲಿ ಸಾಕಷ್ಟು ಆ್ಯಂಟಿ ಆಕ್ಸಿಡೆಂಟ್‍ಗಳು ಇವೆ. ಬಾಳೆ ಹಣ್ಣು ಹೃದಯ ಆರೋಗ್ಯಕ್ಕೂ ಪ್ರಯೋಜನಕಾರಿ. ಜೀರ್ಣ ಕ್ರಿಯೆಗೂ ಉತ್ತಮ.

ಸ್ಟ್ರಾಬೆರಿ
ಸ್ಟ್ರಾಬೆರಿ ಅತ್ಯಧಿಕ ಪಾಲಿಫೆನಾಲ್ಸ್‍ಗಳನ್ನು ಹೊಂದಿದೆ. ಅವು ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತವೆ ಎಂದು ಪರಿಗಣಿಸಲ್ಪಟ್ಟಿವೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ.

ಇದನ್ನೂ ಓದಿ:  Hemoglobin Problem: ರಕ್ತ ಹೀನತೆಯಿಂದ ಹಲವು ಸಮಸ್ಯೆ! ಹಿಮೋಗ್ಲೋಬಿನ್ ಕಡಿಮೆಯಾಗಲು ಕಾರಣಗಳೇನು? ಸರಿಪಡಿಸುವುದು ಹೇಗೆ?

ಕಿತ್ತಳೆ ಹಣ್ಣು
ಅತ್ಯುತ್ತಮ ಫ್ಲೇವರ್ ಹೊಂದಿರುವ ಸಿಹಿ ಮತ್ತು ಹುಳಿ ಸ್ವಾದದ ಈ ಹಣ್ಣು ವಿಟಮಿನ್ ಸಿಯ ಖಜಾನೆಯಾಗಿದೆ. ಅದು ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರಕ್ತ ಹೀನತೆ ಉಂಟಾಗದಂತೆ ತಡೆಯುತ್ತದೆ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಿತ್ತಳೆ ಹಣ್ಣು ಜೀವಕೋಶಗಳಿಗೆ ಹಾನಿ ಆಗದಂತೆ ರಕ್ಷಣೆ ಮಾಡುತ್ತದೆ.

ಬ್ಲೂ ಬೆರ್ರಿ ಹಣ್ಣು
ಬ್ಲೂಬೆರ್ರಿ ಹಣ್ಣುಗಳಲ್ಲಿ ಅತ್ಯಧಿಕ ವಿಟಮಿನ್ ಕೆ ಇರುತ್ತದೆ. ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಅದು ಹೃದಯದ ಆರೋಗ್ಯ ಮತ್ತು ಮೂಳೆಗಳ ಆರೋಗ್ಯಕ್ಕೂ ಕೂಡ ಬಹಳ ಮುಖ್ಯವಾಗಿದೆ.
Published by:Ashwini Prabhu
First published: