ಡೆಂಘೀ ಮಹಾಮಾರಿಯಿಂದ ರಕ್ಷಿಸುವ ಕಿವಿ ಹಣ್ಣು ಸೇವಿಸಿ, ಆರೋಗ್ಯ ವೃದ್ಧಿಸಿ

ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್​ಗಳ ಮೂಲವೆಂದು ಪರಿಗಣಿಸಲಾಗುವ ಕಿವಿ ಹಣ್ಣಿನ ಸೇವನೆಯಿಂದ ಡಿಎನ್​ಎ ಅನ್ನು ಉತ್ತಮಗೊಳಿಸಬಹುದು. ಸೂಪರ್​ಫುಡ್​ಗಳಲ್ಲಿ ಸ್ಥಾನ ಪಡೆದಿರುವ ಕಿವಿ ಹಣ್ಣಿನಿಂದ ಸಿಗುವ ಇನ್ನಿತರ ಪ್ರಯೋಜನಗಳು ಇಲ್ಲಿವೆ.

news18-kannada
Updated:October 20, 2019, 5:50 PM IST
ಡೆಂಘೀ ಮಹಾಮಾರಿಯಿಂದ ರಕ್ಷಿಸುವ ಕಿವಿ ಹಣ್ಣು ಸೇವಿಸಿ, ಆರೋಗ್ಯ ವೃದ್ಧಿಸಿ
kiwi
news18-kannada
Updated: October 20, 2019, 5:50 PM IST
ಕಿವಿ ಹಣ್ಣು ಅನೇಕ ರೋಗಗಳಿಗೆ ರಾಮಬಾಣ ಎಂದರೆ ತಪ್ಪಾಗಲಾರದು. ಈ ಹಣ್ಣನ್ನು ತಿನ್ನುವುದರಿಂದ ರಕ್ತದಲ್ಲಿ ಪ್ಲೇಟ್ಲೆಟ್​ಗಳು ಹೆಚ್ಚುತ್ತದೆ. ಡೆಂಘೀ ಜ್ವರ ಮತ್ತು ಕಾಮಾಲೆ ಖಾಯಿಲೆ ಇದ್ದರೆ ಕಿವಿ ಹಣ್ಣನ್ನು ತಿನ್ನುವುದರಿಂದ ಪರಿಹಾರ ಕಾಣಬಹುದು.

ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್​ಗಳ ಮೂಲವೆಂದು ಪರಿಗಣಿಸಲಾಗುವ ಕಿವಿ ಹಣ್ಣಿನ ಸೇವನೆಯಿಂದ ಡಿಎನ್​ಎ ಅನ್ನು ಉತ್ತಮಗೊಳಿಸಬಹುದು. ಸೂಪರ್​ಫುಡ್​ಗಳಲ್ಲಿ ಸ್ಥಾನ ಪಡೆದಿರುವ ಕಿವಿ ಹಣ್ಣಿನಿಂದ ಸಿಗುವ ಇನ್ನಿತರ ಪ್ರಯೋಜನಗಳು ಇಲ್ಲಿವೆ.

- ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣವು ಹೇರಳವಾಗಿದ್ದು ಇದು ಜೀವಕೋಶಗಳು ನಿರ್ನಾಮವಾಗದಂತೆ ತಡೆಯುತ್ತದೆ.

- ದೇಹದ ಉರಿಯೂತವನ್ನು ತಡೆಗಟ್ಟಲು ಕಿವಿ ಹಣ್ಣು ಸಹಾಯ ಮಾಡುತ್ತದೆ.

- ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕಿವಿ ಹಣ್ಣು ತುಂಬಾ ಪ್ರಯೋಜನಕಾರಿ.

- ಈ ಹಣ್ಣನ್ನು ತಿನ್ನುವುದರಿಂದ ಮೈಕ್ಯುಲರ್ ಡಿಜೆನರೇಷನ್ ಸಮಸ್ಯೆಯನ್ನು ದೂರ ಮಾಡಬಹುದು. ಇದರಿಂದ ಭವಿಷ್ಯದಲ್ಲಿ ದೃಷ್ಟಿದೋಷದ ಸಮಸ್ಯೆಯಿಂದ ಪಾರಾಗಬಹುದು.

ಇದನ್ನೂ ಓದಿ: Bigg Boss Kannada 7: ಕೊನೆಗೂ ಬಹಿರಂಗವಾಯ್ತು ಬಿಗ್ ಬಾಸ್​ಗಾಗಿ ಕುರಿ ಪ್ರತಾಪ್ ಪಡೆಯುತ್ತಿರುವ ಸಂಭಾವನೆ..!
Loading...

- ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಮತ್ತು ಟ್ರೈಗಿಲ್​ಸ್ರೈಡಸ್​ಗಳನ್ನು ಕಡಿಮೆ ಮಾಡಲು ಕಿವಿ ಹಣ್ಣು ಪ್ರಯೋಜನಕಾರಿಯಾಗಿದೆ.

- ಪ್ರತಿನಿತ್ಯ ಕಿವಿ ಹಣ್ಣನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಹೆಚ್ಚಾಗುತ್ತದೆ.

- ಕಿವಿ ಹಣ್ಣಗಳಲ್ಲಿ 110 ಕ್ಯಾಲೊರಿಗಳಿದ್ದು, ಎರಡು ಗ್ರಾಂ ಪ್ರೋಟೀನ್ ಮತ್ತು ಒಂದು ಗ್ರಾಂನಷ್ಟು ಕೊಬ್ಬು ಒಳಗೊಂಡಿರುತ್ತದೆ. ಹಾಗಾಗಿ ಯಾವುದೇ ಸಂದರ್ಭದಲ್ಲೂ ಈ ಹಣ್ಣನ್ನು ತಿನ್ನಬಹುದು.











First published:October 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...