• Home
  • »
  • News
  • »
  • lifestyle
  • »
  • Dog Adopting: ನಾಯಿಯನ್ನು ಹಣ ಕೊಟ್ಟು ಖರೀದಿ ಮಾಡುವುದು ಒಳ್ಳೆಯದೇ? ನಾಯಿಯನ್ನು ದತ್ತು ತೆಗೆದುಕೊಳ್ಳುವುದು ಹೇಗಿರುತ್ತೆ?

Dog Adopting: ನಾಯಿಯನ್ನು ಹಣ ಕೊಟ್ಟು ಖರೀದಿ ಮಾಡುವುದು ಒಳ್ಳೆಯದೇ? ನಾಯಿಯನ್ನು ದತ್ತು ತೆಗೆದುಕೊಳ್ಳುವುದು ಹೇಗಿರುತ್ತೆ?

ನಾಯಿಮರಿ

ನಾಯಿಮರಿ

ನಾಯಿ ಮರಿಯನ್ನು ಮನೆಯಲ್ಲಿ ತಂದು ಸಾಕಿಕೊಳ್ಳುವುದರಿಂದ ಆ ನಾಯಿಗೂ ಒಂದು ಮನೆ ಅಂತ ಸಿಕ್ಕಿದ ಹಾಗೆ ಆಗುತ್ತದೆ ಮತ್ತು ಮನೆಯವರಿಗೂ ಸಹ ಒಂದು ಮೂಕಾಪ್ರಾಣಿಯನ್ನು ಸಾಕಿಕೊಂಡ ಸಾರ್ಥಕತೆ ಸಿಗುತ್ತದೆ ಅಂತ ಹೇಳಬಹುದು.

  • Trending Desk
  • 4-MIN READ
  • Last Updated :
  • Share this:

ನಮ್ಮಲ್ಲಿ ಅನೇಕ ಜನರಿಗೆ ತಮ್ಮ ಮನೆಯಲ್ಲಿ (Home) ಒಂದು ಪುಟ್ಟ ನಾಯಿ ಇರಬೇಕು ಅಂತ ಆಸೆ ಇರುತ್ತದೆ, ಆದರೆ ಅದರಲ್ಲಿ ತುಂಬಾನೇ ಕಡಿಮೆ ಜನರು ನಾಯಿ ಮರಿಯೊಂದನ್ನು ಖರೀದಿ ಮಾಡಿಕೊಂಡು ಅಥವಾ ದತ್ತು ಪಡೆದುಕೊಂಡು ತಂದು ತಮ್ಮ ಮನೆಯಲ್ಲಿ ಸಾಕಿಕೊಳ್ಳುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಒಟ್ಟಿನಲ್ಲಿ ನಾಯಿ ಮರಿಯನ್ನು ಮನೆಯಲ್ಲಿ ತಂದು ಸಾಕಿಕೊಳ್ಳುವುದರಿಂದ ಆ ನಾಯಿಗೂ ಒಂದು ಮನೆ ಅಂತ ಸಿಕ್ಕಿದ ಹಾಗೆ ಆಗುತ್ತದೆ ಮತ್ತು ಮನೆಯವರಿಗೂ ಸಹ ಒಂದು ಮೂಕಾಪ್ರಾಣಿಯನ್ನು (Animal) ಸಾಕಿಕೊಂಡ ಸಾರ್ಥಕತೆ ಸಿಗುತ್ತದೆ ಅಂತ ಹೇಳಬಹುದು. ಆದರೆ ಅನೇಕ ಜನರಿಗೆ ತಾವು ಮನೆಗೆ ತಂದು ಸಾಕಿಕೊಳ್ಳಬೇಕು ಅಂತಿದ್ದ ನಾಯಿಯನ್ನು ಖರೀದಿಸಿ ತರುವುದು ಒಳ್ಳೆಯದೋ ಅಥವಾ ಯಾವುದಾದರೊಂದು ನಾಯಿ ಮರಿಯನ್ನು(Puppy) ದತ್ತು ಪಡೆದುಕೊಂಡು ಅದನ್ನು ಬೆಳೆಸುವುದು ಒಳ್ಳೆಯದೋ ಅನ್ನೋ ಗೊಂದಲ ತುಂಬಾನೇ ಇರುತ್ತದೆ.


ಕೆಲವೊಮ್ಮೆ ಈ ನಾಯಿ ಕಾರ್ಯಕರ್ತರು, ಆಶ್ರಯ ಮನೆಗಳು, ಸಾಕು ಪೋಷಕರು ಮತ್ತು ನಾಯಿ ತಳಿಗಾರರೊಂದಿಗೆ ಹೆಚ್ಚು ಇದರ ಬಗ್ಗೆ ಮಾತಾಡಿದಾಗ ತಳಿಗಾರರಿಂದ ನಾಯಿಯನ್ನು ಖರೀದಿಸಿ ಮನೆಗೆ ತರುವ ಬದಲಿಗೆ ಆ ನಾಯಿಯನ್ನು ದತ್ತು ತೆಗೆದುಕೊಳ್ಳಬೇಕಾಗಿತ್ತು ಅಂತ ಅನ್ನಿಸುವುದೇ ಹೆಚ್ಚಂತೆ ಅಂತ ಜನರು ಹೇಳುತ್ತಾರೆ.


ದೇಶದಲ್ಲಿ 35 ಮಿಲಿಯನ್ ಬೀದಿ ನಾಯಿಗಳಿವೆ ಎಂದು ವರದಿಯಾಗಿದೆ ಮತ್ತು ಅದರಲ್ಲೂ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಹೇರಲಾದ ಲಾಕ್ಡೌನ್ ನಂತರವಂತೂ ಅನೇಕ ವಂಶಾವಳಿ ನಾಯಿಗಳನ್ನು ಅವುಗಳ ಮಾಲೀಕರು ತ್ಯಜಿಸಿದ್ದಾರೆ.


ಶಾಶ್ವತ ಮನೆಯ ಹತಾಶ ಅಗತ್ಯದಲ್ಲಿ ಅನೇಕ ಮುದ್ದಾದ ಶಿಶು ನಾಯಿಗಳು ನಮಗೆ ರಸ್ತೆಯ ಮೇಲೆ ನೋಡಲು ಸಿಗುತ್ತಿವೆ. ಅವುಗಳನ್ನು ನೋಡಿದರೆ ನಾಯಿಗಳನ್ನು ಖರೀದಿಸುವುದು ತಪ್ಪು ಅಂತ ಯಾರಿಗಾದರೂ ಅನ್ನಿಸದೆ ಇರದು.


ನಾಯಿಯನ್ನು ಖರೀದಿಸುವ ಹಣದಲ್ಲಿ ದತ್ತು ಪಡೆದ ನಾಯಿಯನ್ನು ನೋಡಿಕೊಳ್ಳಬಹುದು..


ನೀವು ತಳಿಗಾರರ ಬಳಿಗೆ ಹೋದಾಗ, ನಾಯಿಯ ತಳಿ ಮತ್ತು ವಂಶಾವಳಿಯನ್ನು ಅವಲಂಬಿಸಿ ನೀವು ಅದಕ್ಕೆ 10,000 ರೂಪಾಯಿಯಿಂದ 3 ಲಕ್ಷ ರೂಪಾಯಿಯವರೆಗೂ ಪಾವತಿಸಬೇಕಾಗುತ್ತದೆ.


ನಾಯಿಮರಿಗಳು


ಅದೇ ನಾಯಿಗಳನ್ನು ದತ್ತು ತೆಗೆದುಕೊಂಡರೆ ಅವು ನಿಮ್ಮ ಮೇಲೆ ತುಂಬಾನೇ ಪ್ರೀತಿ ತೋರಿಸುತ್ತವೆ ಮತ್ತು ನಿಮಗೂ ಸಹ ಅಲ್ಲಿ ಹಣ ಖರ್ಚು ಮಾಡಬೇಕಿರುವುದಿಲ್ಲ.


ನಾಯಿಯನ್ನು ಖರೀದಿಸಲು ನೀವು ಖರ್ಚು ಮಾಡುವ ಹಣವನ್ನು ಆ ದತ್ತು ಪಡೆದ ನಾಯಿಯ ಬೆಳವಣಿಗೆಗೆ ಖರ್ಚು ಮಾಡಬಹುದು ಮತ್ತು ಅದಕ್ಕೆ ಒಂದು ಉತ್ತಮವಾದ ಜೀವನವನ್ನು ನೀಡಬಹುದು.


ನಾಯಿಯನ್ನು ಮಾರಾಟ ಮಾಡಿ ಅವುಗಳ ಮಕ್ಕಳಿಂದ ದೂರ ಮಾಡುತ್ತಾರೆ ತಳಿಗಾರರು


ಭಾರತದಲ್ಲಿ ನಾಯಿ ಸಂತಾನೋತ್ಪತ್ತಿ ಹೆಚ್ಚಾಗಿ ಅನಿಯಂತ್ರಿತ ವ್ಯವಹಾರವಾಗಿದೆ. ತಳಿಗಾರರು ಹೆಚ್ಚಾಗಿ ನಾಯಿಗಳು ಮತ್ತು ಮಾಲೀಕರನ್ನು ಶೋಷಿಸುತ್ತಾರೆ ಅಂತ ಹೇಳಬಹುದು.


ಏಕೆಂದರೆ ಹೆಣ್ಣು ನಾಯಿಯನ್ನು ವರ್ಷಕ್ಕೆ ಹಲವಾರು ಮರಿಗಳನ್ನು ನೀಡುವ ಹಾನಿಕಾರಕ ಅಭ್ಯಾಸಕ್ಕೆ ರೂಢಿ ಮಾಡಿಸಿರುತ್ತಾರೆ. ತಳಿಗಾರರು ಹೆಣ್ಣು ನಾಯಿಯನ್ನು ಮೂರು ತಿಂಗಳ ಮೊದಲೇ ಅದರ ಮರಿಗಳಿಂದ ದೂರ ಮಾಡುತ್ತಾರೆ.


ಒಂದು ಮರಿ ಆರೋಗ್ಯವಂತವಾಗಿ ಬೆಳೆಯಲು ನವಜಾತ ಶಿಶುವು ತನ್ನ ತಾಯಿಯೊಂದಿಗೆ ಕನಿಷ್ಠ 90 ದಿನಗಳನ್ನಾದರೂ ಜೊತೆಯಲ್ಲಿ ಕಳೆಯಬೇಕು.


ಆ ನಾಯಿ ಮರಿಗಳು ಜಗತ್ತನ್ನು ಎದುರಿಸುವ ಒಂದು ಸಮರ್ಥವಾದ ನಡವಳಿಕೆಯನ್ನು ಕಲಿಯಬೇಕು ಎಂದು ಅನೇಕ ತಜ್ಞರು ಹೇಳುತ್ತಾರೆ.


ಸಮಯಕ್ಕೆ ಮುಂಚಿತವಾಗಿ ತಮ್ಮ ತಾಯಂದಿರಿಂದ ಬೇರ್ಪಟ್ಟ ಮರಿಗಳು ಗಂಭೀರ ಆರೋಗ್ಯ ಮತ್ತು ನಡವಳಿಕೆಯ ಸಮಸ್ಯೆಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತವೆ.


ಅಲ್ಲದೆ, ನೆನಪಿಡಿ, ತಳಿಗಾರರು ಲಾಭಕ್ಕಾಗಿ ಇದನ್ನೆಲ್ಲಾ ಮಾಡುತ್ತಾರೆ. ತಳಿಗಾರರಿಂದ ಮೋಸ ಹೋದ ಅನೇಕ ಸಾಕು ಪೋಷಕರಿರುತ್ತಾರೆ. ಎಷ್ಟೋ ಬಾರಿ ಭಾರಿ ಮೊತ್ತವನ್ನು ಪಾವತಿಸಿದರೂ ಅವರು ಗಂಭೀರ ಆರೋಗ್ಯ ಸಮಸ್ಯೆಗಳು ಅಥವಾ ಸೋಂಕುಗಳಿಂದ ಬಳಲುತ್ತಿರುವ ಮರಿಗಳನ್ನು ಪಡೆಯುತ್ತಾರೆ.


ಇದನ್ನೂ ಓದಿ: ತೂಕ ನಷ್ಟಕ್ಕೆ ಮಧ್ಯಂತರ ಉಪವಾಸ ಹೇಗೆ ಸಹಕಾರಿ?


ಇದಲ್ಲದೆ, ನೀವು ಡೋಗೊ ಅರ್ಜೆಂಟೀನಾದಂತಹ ದೊಡ್ಡ, ಸಕ್ರಿಯ ತಳಿಯನ್ನು ಪಡೆಯಲು ಯೋಜಿಸುತ್ತಿದ್ದರೆ, ಮರಿಗಳ ತಾಯಿ ಮತ್ತು ತಂದೆ ಇಬ್ಬರೂ ಉತ್ತಮ ಮನೋಧರ್ಮವನ್ನು ಹೊಂದಿರುವುದು ಸಹ ಮುಖ್ಯವಾಗಿದೆ.


ಆದರೆ ಹೆಚ್ಚಿನ ತಳಿಗಾರರು ಈ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾಯಿಗಳನ್ನು ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಸಂತಾನೋತ್ಪತ್ತಿಗಾಗಿ ನಾಯಿಯ ಮನೋಧರ್ಮದ ಹಿನ್ನೆಲೆ ಪರಿಶೀಲನೆ, ಅದರ ವೈದ್ಯಕೀಯ ಇತಿಹಾಸವನ್ನು ಎಂದಿಗೂ ಸಂಪೂರ್ಣವಾಗಿ ಮಾಡಲಾಗುವುದಿಲ್ಲ.


ಇದು ಸಾಕು ಪೋಷಕರಿಗೆ ಆನಂತರ ಸಾಕಷ್ಟು ನೋವನ್ನು ಉಂಟು ಮಾಡುತ್ತದೆ. ಆಕ್ರಮಣಕಾರಿ ನಾಯಿಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ ಮತ್ತು ಅನೇಕ ಪೋಷಕರು ಒಲ್ಲದ ಮನಸ್ಸಿನಿಂದ ಅವುಗಳನ್ನು ಬೇರೆ ಎಲ್ಲೋ ಹೋಗಿ ಅವುಗಳನ್ನು ಬಿಟ್ಟು ಬರಬೇಕಾಗುತ್ತದೆ. ಇದು ಆ ನಾಯಿಗೂ ಅನ್ಯಾಯ ಮಾಡಿದಂತಾಗುತ್ತದೆ.


ದತ್ತು ಪಡೆದು ಸಾಕಿದ ನಾಯಿಗಳು ಬಲಶಾಲಿ ಮತ್ತು ಆರೋಗ್ಯಕರವಾಗಿರುತ್ತವೆ..


ಸಾಮಾನ್ಯವಾಗಿ ನಾವು ಖರೀದಿ ಮಾಡಿದ ನಾಯಿಗಳು ಹೇಗಿರುತ್ತವೆ ಅಂತ ನಮಗೆ ಅಷ್ಟಾಗಿ ತಿಳಿದಿರುವುದಿಲ್ಲ. ಏಕೆಂದರೆ ಅವುಗಳು ನಾವಿರುವಂತಹ ಹವಾಮಾನಕ್ಕೆ ಒಗ್ಗಿಕೊಳ್ಳುತ್ತದೆಯೋ, ಇಲ್ಲವೋ ಎಂಬ ವಿಚಾರ ನಮಗೆ ತುಂಬಾನೇ ಕಾಡುತ್ತಿರುತ್ತದೆ ಅಂತ ಹೇಳಬಹುದು.


ತಾಳಿಗಾರರ ಬಳಿ ಇದ್ದಾಗ ಆ ನಾಯಿ ಭಾರಿ ಮಳೆಗಾಲ, ಕಠಿಣ ಚಳಿಗಾಲ ಅಥವಾ ಬೇಸಿಗೆಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆಯೇ ಅಂತ ನಮಗೆ ಎಂದರೆ ಆ ನಾಯಿಯನ್ನು ಖರೀದಿ ಮಾಡಿದವರಿಗೆ ತಿಳಿದಿರುವುದಿಲ್ಲ.


ದತ್ತು ಪಡೆದ ನಾಯಿಗಳು ಈಗಾಗಲೇ ನಾವಿರುವ ಹವಾಮಾನಕ್ಕೆ ಹೊಂದಿಕೊಂಡಿರುತ್ತವೆ ಅಂತ ಹೇಳಬಹುದು. ಅನೇಕ ವಿಲಕ್ಷಣ ನಾಯಿಗಳು, ವಿಶೇಷವಾಗಿ ತುಂಬಾ ದಪ್ಪ ತುಪ್ಪಳದ ಹೊದಿಕೆಯನ್ನು ಹೊಂದಿರುವ ನಾಯಿಗಳು ಬೇಸಿಗೆಯಲ್ಲಿ ಶೋಚನೀಯವಾಗಿರುತ್ತವೆ.


ಏಕೆಂದರೆ ಅವುಗಳಿಗೆ ಶಾಖವು ಅಸಹನೀಯವಾಗಿರುತ್ತದೆ. ಕೆಲವು ನಾಯಿಗಳು ಶಾಖದ ಆಘಾತದಿಂದ ಸಾಯುತ್ತವೆ. ಅವುಗಳಿಗೆ ಆರಾಮದಾಯಕವಾದ ಭಾವನೆ ಮೂಡಿಸಲು, ಸಾಕುಪ್ರಾಣಿ ಪೋಷಕರು ವರ್ಷಪೂರ್ತಿ ಡಿ-ಹ್ಯೂಮಿಡಿಫೈಯರ್ ಅಥವಾ ಹವಾನಿಯಂತ್ರಿತವನ್ನು ಬಳಸಬೇಕಾಗುತ್ತದೆ. ಇದು ಭಾರಿ ವೆಚ್ಚ ಮತ್ತು ಸಾಕಷ್ಟು ಶಕ್ತಿಯನ್ನು ಬಳಸುತ್ತದೆ.


ಪೋಷಕರು ಈ ನಾಯಿಗಳನ್ನು ಧೂಳು, ಕಲುಷಿತ ನೆರೆಹೊರೆಗಳಲ್ಲಿ ನಿರ್ವಹಿಸಲು ಕಷ್ಟಪಡುತ್ತಾರೆ, ಅಲ್ಲಿ ನಾಯಿಗಳು ತುರಿಕೆಯಿಂದ ಬಳಲುತ್ತವೆ.


ಅಷ್ಟೇ ಅಲ್ಲದೆ ಅವು ಕೊಳಕಾಗುತ್ತವೆ ಕೂಡ. ಅಂತಹ ನಾಯಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಭಾರತೀಯ ಮಳೆಗಾಲದಲ್ಲಿ ಅವುಗಳನ್ನು ಒಣಗಿಸುವುದು ಸಹ ಒಂದು ದೊಡ್ಡ ಕಾರ್ಯವಾಗಿದೆ.


ಬೇಸಿಗೆಯಲ್ಲಿ ಶಾಖದ ಕುದಿಯುವಿಕೆ, ಮಳೆಗಾಲದಲ್ಲಿ ಶಿಲೀಂಧ್ರಗಳ ಸೋಂಕು ಮುಂತಾದ ಇತರ ಸಂಬಂಧಿತ ಚರ್ಮದ ಸಮಸ್ಯೆಗಳೂ ಇವೆ.


ತೊಂದರೆ ರಹಿತ ಆಹಾರ


ಹೆಚ್ಚಿನ ವಂಶಾವಳಿಯ ನಾಯಿಗಳಿಗೆ ನಿರ್ದಿಷ್ಟ ಆಹಾರದ ಅಗತ್ಯವಿರುತ್ತದೆ. ಎಂದರೆ ಅವುಗಳಿಗೆ ಆದ್ಯತೆಯಾಗಿ ಮಾಂಸಾಹಾರಿ ನೀಡಬೇಕಾಗುತ್ತದೆ.


ಇಂಡೀಸ್ ನಾಯಿಗಳು ಸಂಪೂರ್ಣ ಸಸ್ಯಾಹಾರಿ ಆಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ತುಂಬಾ ಹಣವನ್ನು ಸಹ ಉಳಿಸುತ್ತದೆ ಎಂದು ಹೇಳಬಹುದು.


ಸಾಕುನಾಯಿಗಳು ಜೀವನಕ್ಕೆ ಒಡನಾಡಿ


ಇಂಡೀಸ್ ತಳಿಯ ನಾಯಿಗಳು ತುಂಬಾನೇ ಗಟ್ಟಿಮುಟ್ಟಾದ ನಾಯಿಗಳಾಗಿರುವುದರಿಂದ, ಅವು ವಂಶಪಾರಂಪರ್ಯ ನಾಯಿಗಳಂತೆ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ, ಅವು ದೀರ್ಘ, ಆರೋಗ್ಯಕರ ಜೀವನವನ್ನು ನಡೆಸುತ್ತವೆ.


ಹೆಚ್ಚಿನ ವಂಶಾವಳಿಯ ನಾಯಿಗಳ ಸರಾಸರಿ ಜೀವಿತಾವಧಿ 10 ರಿಂದ 15 ವರ್ಷಗಳಾದರೆ, ವಿಶೇಷವಾಗಿ ದೊಡ್ಡ ತಳಿಗಳು, ಇಂಡೀಸ್ 20 ವರ್ಷಗಳಿಗಿಂತಲೂ ಹೆಚ್ಚು ಕಾಲ ಬದುಕುತ್ತವೆ ಎಂದು ಹೇಳಲಾಗಿದೆ.


ತಜ್ಞರ ಸಹಾಯ ತುಂಬಾ ಮುಖ್ಯವಾಗುತ್ತದೆ..


ನಾಯಿ ಕಾರ್ಯಕರ್ತರು ಮತ್ತು ಆಶ್ರಯ ಮನೆ ಸಿಬ್ಬಂದಿ ನಾಯಿ ಸರಿಯಾದ ಮನೆಗೆ ಸೇರಿದೆಯೇ ಅಂತ ಖಚಿತಪಡಿಸಿಕೊಳ್ಳುವಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ.


ಅವರು ನಿರೀಕ್ಷಿತ ದತ್ತು ಪೋಷಕರನ್ನು ಸಂದರ್ಶಿಸುತ್ತಾರೆ, ಅವರ ಜೀವನಶೈಲಿ, ಅವರ ಮನೆ ಮತ್ತು ನೆರೆಹೊರೆ, ಅವರ ಕುಟುಂಬದ ಬಗ್ಗೆ ಮಾಹಿತಿಯನ್ನು ಸಹ ಪಡೆಯುತ್ತಾರೆ ಮತ್ತು ಸರಿಯಾದ ಮನೋಧರ್ಮದೊಂದಿಗೆ ಸೂಕ್ತವಾದ ನಾಯಿಯನ್ನು ನೀಡುತ್ತಾರೆ.


ಇದೆಲ್ಲದರ ಜೊತೆಗೆ ನಾಯಿ ಮನೆಯಲ್ಲಿ ಸಂತೋಷವಾಗಿದೆಯೇ ಅಂತ ತಿಳಿದುಕೊಳ್ಳುತ್ತಾರೆ. ಉದಾಹರಣೆಗೆ, ಪೋಷಕರು ಈಗಾಗಲೇ ಮನೆಯಲ್ಲಿ ಮತ್ತೊಂದು ನಾಯಿಯನ್ನು ಹೊಂದಿದ್ದರೆ ಮತ್ತು ಅದು ಆಲ್ಫಾ ನಾಯಿಯಾಗಿದ್ದರೆ, ಅವರು ಹೆಚ್ಚು ಸೌಮ್ಯವಾದ ಎರಡನೇ ನಾಯಿಯನ್ನು ಶಿಫಾರಸು ಮಾಡುತ್ತಾರೆ.


ಇದರಿಂದ ನಾಯಿಗಳು ತಮ್ಮೊಳಗೆ ಜಗಳವಾಡುವುದಿಲ್ಲ. ಮನೆಯಲ್ಲಿ ಮಕ್ಕಳಿದ್ದರೆ, ಕಾರ್ಯಕರ್ತರು ಜನಸ್ನೇಹಿ ಮತ್ತು ಸಹಿಷ್ಣು ನಾಯಿಯನ್ನು ಸಾಕಿಕೊಳ್ಳಲು ಸೂಚಿಸುತ್ತಾರೆ.
ಈ ತಜ್ಞರು ನಾಯಿಯನ್ನು ಬೆಳೆಸಲು ನಿಮ್ಮನ್ನು ಸ್ವ-ಇಚ್ಛೆಯಿಂದ ಸಿದ್ಧಪಡಿಸುತ್ತಾರೆ, ಅವುಗಳಿಗೆ ಲಸಿಕೆ ಹಾಕಲು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡುವುದರ ಮೂಲಕ ನಿಮಗೆ ಸಹಾಯ ಮಾಡುತ್ತಾರೆ.


ಅವುಗಳಿಗೆ ಏನು ಆಹಾರವನ್ನು ನೀಡಬೇಕು, ಅವುಗಳಿಗೆ ಹೇಗೆ ಟಾಯ್ಲೆಟ್ ತರಬೇತಿ ನೀಡಬೇಕು. ದತ್ತು ಪಡೆದ ನಾಯಿಯೊಂದಿಗೆ ಬೆಂಬಲ ವ್ಯವಸ್ಥೆಯೂ ಬರುತ್ತದೆ ಎಂಬುದಂತೂ ನಿಜ.


ಇದೆಲ್ಲಾ ಅಂಶಗಳನ್ನು ತಿಳಿದುಕೊಂಡ ನಂತರ ನಾಯಿಯನ್ನು ಹಣ ಕೊಟ್ಟು ಖರೀದಿ ಮಾಡುವುದಕ್ಕಿಂತ ದತ್ತು ತೆಗೆದುಕೊಳ್ಳುವುದನ್ನು ಆಯ್ಕೆ ಮಾಡಿಕೊಳ್ಳಬಹುದು.

First published: