• Home
  • »
  • News
  • »
  • lifestyle
  • »
  • Coronary Artery Disease: ಪರಿಧಮನಿಯ ಕಾಯಿಲೆ ಉಂಟಾಗಲು ಕಾರಣಗಳು ಹಾಗೂ ಸಮಸ್ಯೆ ತಪ್ಪಿಸಲು ಸಲಹೆ ಹೀಗಿದೆ!

Coronary Artery Disease: ಪರಿಧಮನಿಯ ಕಾಯಿಲೆ ಉಂಟಾಗಲು ಕಾರಣಗಳು ಹಾಗೂ ಸಮಸ್ಯೆ ತಪ್ಪಿಸಲು ಸಲಹೆ ಹೀಗಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪರಿಧಮನಿ ಅಪಧಮನಿಗಳು ಹೃದಯ ಮತ್ತು ದೇಹದ ಇತರೆ ಪ್ರದೇಶಗಳಿಗೆ ರಕ್ತ ಪೂರೈಸುವ ಕೆಲಸ ಮಾಡುತ್ತವೆ. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಮತ್ತು ಕ್ಯಾಲ್ಸಿಯಂ ನಿಕ್ಷೇಪಗಳಿಂದ ಪ್ಲೇಕ್ ಸಂಗ್ರಹ ಆಗುತ್ತದೆ. ಈ ಕೊಳಕು ವಸ್ತುವು ಅಪಧಮನಿಗಳ ಕಾರ್ಯವನ್ನು ನಿರ್ಬಂಧಿಸುತ್ತದೆ.

  • Share this:

    ಇತ್ತೀಚಿನ ದಿನಗಳಲ್ಲಿ ಜನರು (People) ಹೆಚ್ಚು ಹೃದಯಾಘಾತ (Heart Attack) ಮತ್ತು ಹೃದಯ ಸಂಬಂಧಿ ಕಾಯಿಲೆಗೆ (Disease) ತುತ್ತಾಗುತ್ತಿದ್ದಾರೆ. ಅದರಲ್ಲಿ ಪರಿಧಮನಿ ಕಾಯಿಲೆ (Coronary Artery Disease) ರೋಗವು ವೇಗವಾಗಿ ಬೆಳೆಯುತ್ತಾ ಹೋಗುತ್ತಿದೆ. ಕೆಟ್ಟ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು. ಅಪಧಮನಿಗಳ ಈ ಕಾಯಿಲೆ ಉಂಟಾದಾಗ ದೇಹದ ರಕ್ತನಾಳ, ಸಿರೆಗಳು ಕುಗ್ಗುತ್ತವೆ ಅಥವಾ ಅವುಗಳ ನಡುವಿನ ಅಂತರವು ಕಡಿಮೆಯಾಗುತ್ತ ಹೋಗುತ್ತದೆ. ಇದು ದೀರ್ಘಕಾಲ ವ್ಯಕ್ತಿಯು ಅಪಧಮನಿ ಕಾಠಿಣ್ಯ ಸಮಸ್ಯೆ ಅನುಭವಿಸುವಂತೆ ಮಾಡುತ್ತದೆ. ಪರಿಧಮನಿ ಕಾಯಿಲೆಯ ಮುಖ್ಯ ಕಾರಣವೆಂದರೆ ಅಪಧಮನಿಗಳ ಗೋಡೆಗಳಲ್ಲಿ ಪ್ಲೇಕ್ ಸಂಗ್ರಹವಾಗುವುದು.


    ಪರಿಧಮನಿ ಅಪಧಮನಿಗಳು


    ಪರಿಧಮನಿ ಅಪಧಮನಿಗಳು ಹೃದಯ ಮತ್ತು ದೇಹದ ಇತರೆ ಪ್ರದೇಶಗಳಿಗೆ ರಕ್ತ ಪೂರೈಸುವ ಕೆಲಸ ಮಾಡುತ್ತವೆ. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಮತ್ತು ಕ್ಯಾಲ್ಸಿಯಂ ನಿಕ್ಷೇಪಗಳಿಂದ ಪ್ಲೇಕ್ ಸಂಗ್ರಹ ಆಗುತ್ತದೆ. ಈ ಕೊಳಕು ವಸ್ತುವು ಅಪಧಮನಿಗಳ ಕಾರ್ಯವನ್ನು ನಿರ್ಬಂಧಿಸುತ್ತದೆ.


    ಪ್ಲೇಕ್ ಶೇಖರಣೆ ಆದಾಗ ಸಿರೆಗಳು ಕುಗ್ಗಲು ಶುರು ಆಗುತ್ತದೆ. ಹಾಗೂ ಅದು ದೀರ್ಘಕಾಲದ ಸ್ಥಿತಿಯಲ್ಲಿ ಇದ್ದರೆ, ಅಪಧಮನಿಕಾಠಿಣ್ಯ ಸಮಸ್ಯೆ ಬಾಧಿಸುತ್ತದೆ.


    ಇದನ್ನೂ ಓದಿ: ನವರಾತ್ರಿಯ ಒಂಬತ್ತು ದಿನಗಳ ಉಪವಾಸದಲ್ಲಿ ಕೆಲವು ನೈಸರ್ಗಿಕ ಪಾನೀಯ ಸೇವನೆ ಆರೋಗ್ಯಕ್ಕೆ ಲಾಭಕಾರಿ!


    ಯಾರು ಅಪಧಮನಿಕಾಠಿಣ್ಯ ಸಮಸ್ಯೆ ಹೊಂದಿರುತ್ತಾರೆ?


    ರಕ್ತನಾಳಗಳು ಕಿರಿದಾಗುವ ಅಪಾಯ ಇರುವವರು, ಜಡ ಜೀವನಶೈಲಿ ನಡೆಸುತ್ತಿರುವ ಜನರು, ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿರುವವರು, ಕಳಪೆ ಆಹಾರ ಪದ್ಧತಿ ಹೊಂದಿರುವವರು, ಧೂಮಪಾನ ಮಾಡುವವರು, ಹೃದ್ರೋಗದ ಕುಟುಂಬದ ಇತಿಹಾಸ ಹೊಂದಿರುವ ಜನರು,


    ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಅನುಭವಿಸುತ್ತಿರುವ ಜನರು ಅಪಧಮನಿ ಕಾಠಿಣ್ಯ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಯ ಅಪಾಯ ಹೊಂದಿದ್ದಾರೆ.


    ಪರಿಧಮನಿಯ ಕಾಯಿಲೆಯ ಲಕ್ಷಣಗಳು ಯಾವವು?


    ಸಿಡಿಸಿ ಮಾಹಿತಿ ಪ್ರಕಾರ, ಆಂಜಿನಾ ಅಥವಾ ಎದೆ ನೋವು ಮತ್ತು ಅಸ್ವಸ್ಥತೆ ರೋಗ ಲಕ್ಷಣಗಳು ಪರಿಧಮನಿಯ ಕಾಯಿಲೆ ಇರುವ ಜನರಲ್ಲಿ ಕಂಡು ಬರುತ್ತವೆ. ಜೊತೆಗೆ ಎದೆಯ ಹಿಂಭಾಗದಲ್ಲಿ ಎದೆಯ ಮಧ್ಯದಲ್ಲಿರುವ ಎದೆಯಲ್ಲಿ ನೋವು ಇರುತ್ತದೆ. ಭುಜ ಅಥವಾ ದವಡೆಯಲ್ಲಿ ನೋವು ಇರುತ್ತದೆ. ಇತರ ರೋಗ ಲಕ್ಷಣಗಳಲ್ಲಿ ವಾಕರಿಕೆ, ಬೆವರುವಿಕೆ, ಉಸಿರಾಟದ ತೊಂದರೆ ಮತ್ತು ತಲೆನೋವು ಇರುತ್ತದೆ.


    ಪರಿಧಮನಿಯ ಕಾಯಿಲೆ ರೋಗ ನಿರ್ಣಯ ಮಾಡುವುದು ಹೇಗೆ?


    ಚಿಕಿತ್ಸೆ ನೀಡದಿದ್ದರೆ ಪರಿಧಮನಿ ಕಾಯಿಲೆ ಸಮಸ್ಯೆ ಹೊಂದಬಹುದು ಎಂದು ಹೇಳಲಾಗಿದೆ. ರೋಗ ಲಕ್ಷಣಗಳನ್ನು ಗುರುತಿಸುವುದು ಮತ್ತು ಸರಿಯಾದ ಸಮಯಕ್ಕೆ ವೈದ್ಯರ ಸಲಹೆ ಪಡೆಯುವುದು ಸಮಸ್ಯೆ ನಿಯಂತ್ರಿಸುತ್ತದೆ.


    ನೀವು ಪರಿಧಮನಿಯ ಕಾಯಿಲೆಯನ್ನು ಹೊಂದಿದ್ದೀರಾ ಎಂದು ನೋಡಲು ನಿಮ್ಮ ಚಿಕಿತ್ಸಕ ವೈದ್ಯರು ಇಸಿಜಿ, ಎಕೋ ಕಾರ್ಡಿಯೋಗ್ರಾಮ್ ಅಥವಾ ವ್ಯಾಯಾಮ ಒತ್ತಡ ಪರೀಕ್ಷೆ ಮಾಡಿಸಲು ಶಿಫಾರಸು ಮಾಡಬಹುದು.


    ಪರಿಧಮನಿ ಕಾಯಿಲೆಗೆ ಚಿಕಿತ್ಸೆ ಏನು?


    ರೋಗ ನಿರ್ಣಯ ದೃಢಪಡಿಸಿದ ನಂತರ ವೈದ್ಯರ ಸೂಚನೆ ಫಾಲೋ ಮಾಡುವುದು ಮುಂಜಾಗ್ರತಾ ಕ್ರಮಗಳಲ್ಲಿ ಒಂದಾಗಿದೆ. ಪರಿಧಮನಿ ಕಾಯಿಲೆಗೆ 3 ವಿಧದ ಚಿಕಿತ್ಸೆ ಲಭ್ಯ ಇದೆ. ವೈದ್ಯಕೀಯ ನಿರ್ವಹಣೆ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡುವುದು, ಆಂಜಿಯೋಪ್ಲ್ಯಾಸ್ಟಿ ಮತ್ತು ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಿಸುವುದು.


    ನಿಮ್ಮ ಆಂಜಿಯೋಗ್ರಫಿ ವರದಿಯಲ್ಲಿನ ತೀವ್ರತೆ ಮತ್ತು ಬ್ಲಾಕ್‌ಗಳ ಸಂಖ್ಯೆ ಅನುಗುಣವಾಗಿ ಹೆಚ್ಚು ಸೂಕ್ತವಾದ ಚಿಕಿತ್ಸಾ ಆಯ್ಕೆ ಮಾಡಲಾಗುತ್ತದೆ. ಪರಿಧಮನಿಯ ಕಾಯಿಲೆ ಜೊತೆ ಆರೋಗ್ಯವಾಗಿರಲು ಕೆಲವು ಸಲಹೆ ಫಾಲೋ ಮಾಡುವುದು ಉತ್ತಮ.


    ಆರೋಗ್ಯವಾಗಿರಲು ಕೆಲವು ಸಲಹೆ


    ಕಾಯಿಲೆ ಮತ್ತು ಚಿಕಿತ್ಸೆ ತಪ್ಪಿಸಲು ಬಯಸಿದರೆ ನಿಯಮಿತ ಔಷಧ ಮತ್ತು ತಪಾಸಣೆ ಜೊತೆ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಿ. ಬೈಪಾಸ್ ಶಸ್ತ್ರಚಿಕಿತ್ಸೆಯ ನಂತರ ರಕ್ತದೊತ್ತಡ, ರಕ್ತದ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸಿ. ಆರೋಗ್ಯಕರ ಆಹಾರ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಸೇರಿಸಿ.


    ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಇದ್ರೆ; ಈ ಪರಿಹಾರ ಬಳಸಿ


    ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಾಳುಗಳು ಮತ್ತು ದ್ವಿದಳ ಧಾನ್ಯಗಳನ್ನು ತಿನ್ನಲು ಪ್ರಯತ್ನಿಸಿ. ಜಂಕ್, ಮಸಾಲೆಯುಕ್ತ, ಎಣ್ಣೆಯುಕ್ತ ಮತ್ತು ಪ್ಯಾಕೇಜ್ ಮಾಡಿದ ಆಹಾರ ಸೇವನೆ ತಪ್ಪಿಸಿ. ಧೂಮಪಾನ, ಒತ್ತಡದಿಂದ ದೂರವಿರಿ. ಪ್ರತಿನಿತ್ಯ ವ್ಯಾಯಾಮ ಮಾಡಿ. ತೂಕ ನಿಯಂತ್ರಿಸಿ.

    Published by:renukadariyannavar
    First published: