• Home
  • »
  • News
  • »
  • lifestyle
  • »
  • Gratitude: ಕೃತಜ್ಞತೆ ಹೇಳೋದೋ ಲೈಫ್​ನಲ್ಲಿ ಈ ಎಲ್ಲಾ ಬದಲಾವಣೆ ತರುತ್ತಂತೆ

Gratitude: ಕೃತಜ್ಞತೆ ಹೇಳೋದೋ ಲೈಫ್​ನಲ್ಲಿ ಈ ಎಲ್ಲಾ ಬದಲಾವಣೆ ತರುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Gratitude Importance: ಕೃತಜ್ಞತೆಯ ಭಾವನೆಯನ್ನು ಸರಳವಾಗಿ ಅನುಭವಿಸಿ ಕೃತಜ್ಞತೆಯ ಸಣ್ಣ ಕಾರ್ಯಗಳು ಸಹ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಉಂಟುಮಾಡಬಹುದು ಎಂದು ಡಾ ತುಗ್ನೈತ್ ಸಲಹೆ ನೀಡುತ್ತಾರೆ.

  • Trending Desk
  • 3-MIN READ
  • Last Updated :
  • Share this:

ನಾವು ಉಸಿರಾಡುವ ಗಾಳಿ (Air) , ತಿನ್ನುವ ಆಹಾರ (Food), ನೀರು (Water), ನೆಲ ಇವುಗಳನ್ನೆಲ್ಲ ನಿಸರ್ಗ ನಮಗೆ ನೀಡಿದೆ. ಇದಕ್ಕಾಗಿ ನಾವು ಪ್ರಕೃತಿಗೆ ಕೃತಜ್ಞರಾಗಿರಬೇಕು. ಆದ್ರೆ ಹಾಗೆ ಕೃತಜ್ಞ ಭಾವನೆ ವ್ಯಕ್ತಪಡಿಸಲು ನಾವು ಮರೆಯುತ್ತೇವೆ. ಹಾಗೆಯೇ ಜೀವನದಲ್ಲಿ (Life) ಎಲ್ಲರಿಗೂ ಕಹಿ ಘಟನೆಗಳಿರುತ್ತವೆ. ಅದಕ್ಕಾಗಿ ಕೊರಗುವ ಭರದಲ್ಲಿ ನಾವು ಒಳ್ಳೆಯ ಅನೇಕ ಅಂಶಗಳನ್ನು ಮರೆಯುತ್ತೇವೆ. ಆದರೆ ನಮ್ಮ ಜೀವನದಲ್ಲಿ ಆಗಿರುವ ಎಲ್ಲ ಒಳ್ಳೆಯದಕ್ಕೂ ನಾವು ಕೃತಜ್ಞರಾಗಿರುವುದು ಬಹಳ ಮುಖ್ಯ. ಇದು ನಮ್ಮ ಮನಸ್ಸನ್ನು ಮತ್ತು ಶರೀರವನ್ನು ಉಲ್ಲಾಸಮಯವಾಗಿಡಲು ಸಹಾಯ ಮಾಡುತ್ತದೆ.


ಲೈಫ್‌ ಆಂಡ್‌ ಬ್ಯುಸಿನೆಸ್‌ ಕೋಚ್‌ ಹಾಗೂ ಗೇಟ್‌ವೇ ಆಫ್ ಹೀಲಿಂಗ್‌ನ ಸಂಸ್ಥಾಪಕರಾದ ಡಾ ಚಾಂದಿನಿ ತುಗ್ನೈತ್ ಅವರ ಪ್ರಕಾರ, “ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.


ನಮ್ಮ ಜೀವನದಲ್ಲಿನ ಒಳ್ಳೆಯ ವಿಷಯಗಳಿಗಾಗಿ ನಾವು ನಮ್ಮ ಧನ್ಯವಾದಗಳನ್ನು ವ್ಯಕ್ತಪಡಿಸಿದಾಗ ಧನಾತ್ಮಕ ಶಕ್ತಿಯ ಪ್ರಜ್ಞೆಯನ್ನು ನಾವು ಸ್ಪರ್ಶಿಸಬಹುದು" ಎಂದು ಡಾ ತುಗ್ನೈತ್ ಹೇಳುತ್ತಾರೆ.


ಕೃತಜ್ಞತೆಯಿಂದ ಹೆಚ್ಚಿನ ಸಂತೋಷ, ಉತ್ತಮ ಆರೋಗ್ಯ ಮತ್ತು ಬಲವಾದ ಸಂಬಂಧಗಳಿಗೆ ಕಾರಣವಾಗುತ್ತವೆ ಎಂಬುದಾಗಿ ಅಧ್ಯಯಗಳು ಹೇಳುತ್ತವೆ.


"ಕೃತಜ್ಞತೆಯು ಧನಾತ್ಮಕ ಮನಸ್ಥಿತಿ ಹೊಂದಲು ಮತ್ತು ಅಡೆತಡೆಗಳ ಬದಲಿಗೆ ಅವಕಾಶಗಳನ್ನು ನೋಡಲು ನಮಗೆ ಸಹಾಯ ಮಾಡುತ್ತದೆ. ನಾವು ಒಳ್ಳೆಯದನ್ನು ಯೋಚಿಸಿದಾಗ ಸವಾಲುಗಳನ್ನು ಜಯಿಸಲು ಶಕ್ತಿ ಪಡೆಯುತ್ತೇವೆ" ಎಂಬುದಾಗಿ ಡಾ ತುಗ್ನೈತ್ ಹೇಳುತ್ತಾರೆ.


ಕೃತಜ್ಞತೆಯ ಪ್ರಮುಖ ಪ್ರಯೋಜನಗಳು


ಜೀವನದಲ್ಲಿನ ಹಲವಾರು ವಿಷಯಗಳಿಗೆ ಕೃತಜ್ಞರಾಗಿರುವುದು ನೀವು ಯೋಚಿಸುವ ಮತ್ತು ಅನುಭವಿಸುವ ವಿಧಾನವನ್ನು ಖಂಡಿತಾ ಬದಲಾಯಿಸಬಹುದು.


ಕೃತಜ್ಞತೆಯನ್ನು ಅಭ್ಯಾಸ ಮಾಡುವುದು ನಿಮ್ಮ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಏಕೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಡಾ.ಚಾಂದಿನಿ ತುಗ್ನೈತ್ ವಿವರಿಸುತ್ತಾರೆ.



1. ಕೃತಜ್ಞತೆಯು ನಿಮಗೆ ಹೆಚ್ಚು ತೃಪ್ತಿ ನೀಡುತ್ತದೆ: ಕೃತಜ್ಞತೆಯನ್ನು ಅಭ್ಯಾಸ ಮಾಡುವ ಜನರು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ಹೆಚ್ಚು ಸಂತೃಪ್ತರಾಗಿರುತ್ತಾರೆ. ಏಕೆಂದರೆ ಅವರು ತಮ್ಮಲ್ಲಿ ಇಲ್ಲದಿರುವುದಕ್ಕೆ ಕೊರಗುವ ಬದಲು ತಮ್ಮಲ್ಲಿರುವುದಕ್ಕೆ ಹೆಚ್ಚು ಸಂತೃಪ್ತಿ ಹೊಂದಲು ಆರಂಭಿಸುತ್ತಾರೆ.


ಇದನ್ನೂ ಓದಿ: ವಾಸ್ತು ಪ್ರಕಾರ ಮನೆಯಲ್ಲಿ ನೀರಿನ ಬಾಟಲಿ ಎಲ್ಲಿಡಬೇಕು? ಯಾವ ಬಣ್ಣದ್ದು ಖರೀದಿ ಮಾಡ್ಬೇಕು?


2. ನಿಮ್ಮ ದೈಹಿಕ ಆರೋಗ್ಯ ಸುಧಾರಿಸಬಹುದು: ತಮ್ಮ ದೈನಂದಿನ ಜೀವನದಲ್ಲಿ ಕೃತಜ್ಞತೆಯನ್ನು ಅಳವಡಿಸಿಕೊಳ್ಳುವುದರಿಂದ ಅನಾರೋಗ್ಯ ಕಡಿಮೆಯಾಗಿ ಆರೋಗ್ಯ ಸುಧಾರಿಸಬಹುದು ಎಂಬುದಾಗಿ ಅಧ್ಯಯನಗಳು ಹೇಳುತ್ತವೆ.


2013 ರಲ್ಲಿ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್‌ ಮಾಡಿದ ಅಧ್ಯಯನದ ಪ್ರಕಾರ ಕೃತಜ್ಞರಾಗಿರುವ ವ್ಯಕ್ತಿಗಳು ಉತ್ತಮ ದೈಹಿಕ ಆರೋಗ್ಯವನ್ನು ಹೊಂದಿರುತ್ತಾರೆ ಎನ್ನಲಾಗಿದೆ.


3. ಉತ್ತಮ ಮಾನಸಿಕ ಆರೋಗ್ಯ: ಕೃತಜ್ಞತೆಯು ನಮ್ಮ ಮಾನಸಿಕ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ. ಪ್ರತಿದಿನ ಕೃತಜ್ಞತೆಯನ್ನು ಅಭ್ಯಾಸ ಮಾಡುವವರು ತಮ್ಮ ಜೀವನದಲ್ಲಿ ಈ ಅಭ್ಯಾಸವಿಲ್ಲದವರಿಗಿಂತ ಹೆಚ್ಚಿನ ಮಟ್ಟದ ಸ್ವಾಭಿಮಾನ ಮತ್ತು ಆಶಾವಾದವನ್ನು ಅನುಭವಿಸುವ ಸಾಧ್ಯತೆಯಿದೆ.


4. ಸಹಾನುಭೂತಿ ಭಾವನೆ : ಕೃತಜ್ಞತೆಯ ಮತ್ತೊಂದು ಪ್ರಯೋಜನವೆಂದರೆ ನೀವು ಇತರರ ಬಗ್ಗೆ ಹೆಚ್ಚಿನ ಸಹಾನುಭೂತಿ ವ್ಯಕ್ತಪಡಿಸುವವರಾಗುತ್ತೀರಿ.


ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗಿನ ಸಂಬಂಧಗಳು ಸುಧಾರಿಸುವುದಲ್ಲದೇ ಉತ್ತಮ ಅಭಿವೃದ್ಧಿ ಕಾಣುತ್ತದೆ. ಅಲ್ಲದೇ ತಮ್ಮ ಮೆಚ್ಚುಗೆಯನ್ನು ಸಕ್ರಿಯವಾಗಿ ವ್ಯಕ್ತಪಡಿಸುವವರು ಕಷ್ಟಕರ ಸಂದರ್ಭಗಳನ್ನು ಎದುರಿಸಿದಾಗ ಬೇಗನೇ ಚೇತರಿಸಿಕೊಳ್ಳುತ್ತಾರೆ. ಇತರರೊಂದಿಗೆ ಬಲವಾದ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ.


5. ಒಟ್ಟಾರೆ ಸಂತೋಷ: ಕೃತಜ್ಞತೆಯನ್ನು ಅಭ್ಯಾಸ ಮಾಡುವ ಜನರು ಒಟ್ಟಾರೆ ಹೆಚ್ಚಿನ ಮಟ್ಟದ ಸಂತೋಷ, ಆಶಾವಾದ ಮತ್ತು ಉತ್ಸಾಹವನ್ನು ಅನುಭವಿಸುತ್ತಾರೆ. ಅವರು ಖಿನ್ನತೆ, ಆತಂಕ ಮತ್ತು ಒತ್ತಡ ಭಾವನೆಗಳನ್ನು ಆದಷ್ಟು ಕಡಿಮೆ ಅನುಭವಿಸುತ್ತಾರೆ.


ಕೃತಜ್ಞತೆಯನ್ನು ಅಭ್ಯಾಸ ಮಾಡುವುದು ಹೇಗೆ?


ಸಾರ್ವಕಾಲಿಕ "ಧನ್ಯವಾದಗಳು" ಅಂತ ಹೇಳುವುದು ಜೀವನದಲ್ಲಿ ಕೃತಜ್ಞತೆಯನ್ನು ಅಭ್ಯಾಸ ಮಾಡುವ ತಂತ್ರವಲ್ಲ. ಹಾಗಾದರೆ, ಇದನ್ನು ಹೇಗೆ ಸಾಧಿಸಬಹುದು?


ಡಾ.ತುಗ್ನೈತ್ ಅವರು ಅದನ್ನು ಸರಳವಾಗಿ ವಿವರಿಸುತ್ತಾರೆ. "ನೀವು ಮಾಡಬೇಕಾಗಿರುವುದು ನಿಮ್ಮ ಸುತ್ತಲಿನ ಜನರು, ಸ್ಥಳಗಳು, ವಸ್ತುಗಳು, ಸನ್ನಿವೇಶಗಳು ಅಥವಾ ನಿಮ್ಮ ಜೀವನದಲ್ಲಿ ನಡೆದ ಒಳ್ಳೆಯ ವಿಷಯಗಳಿಗೆ ಕೃತಜ್ಞತೆ ಸಲ್ಲಿಸಲು ಪ್ರಜ್ಞಾಪೂರ್ವಕ ಪ್ರಯತ್ನ ಮಾಡುವುದು" ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ: ಯಕೃತ್ತು ಮತ್ತು ಕರುಳಿನ ಆರೋಗ್ಯ ಕಾಪಾಡಲು ಈ ತರಕಾರಿ ಸೇವನೆ ಪರಿಣಾಮಕಾರಿ!


ಕೃತಜ್ಞತೆಯನ್ನು ವ್ಯಕ್ತಪಡಿಸಲು ಕೆಲವು ಸುಲಭ ಮಾರ್ಗಗಳು


1. ಪ್ರತಿ ದಿನ ನೀವು ಕೃತಜ್ಞರಾಗಿರುವ ಮೂರು ವಿಷಯಗಳನ್ನು ಬರೆಯಿರಿ.


2. ನಿಮಗೆ ಹತ್ತಿರವಿರುವ ಯಾರಿಗಾದರೂ ನಿಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಲು ದಿನದಲ್ಲಿ ಸಮಯ ತೆಗೆದುಕೊಳ್ಳಿ.


3. ಕೃತಜ್ಞತೆಯ ಭಾವನೆಯನ್ನು ಸರಳವಾಗಿ ಅನುಭವಿಸಿ ಕೃತಜ್ಞತೆಯ ಸಣ್ಣ ಕಾರ್ಯಗಳು ಸಹ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಉಂಟುಮಾಡಬಹುದು ಎಂದು ಡಾ ತುಗ್ನೈತ್ ಸಲಹೆ ನೀಡುತ್ತಾರೆ.

Published by:Sandhya M
First published: