Mango: ಸಕ್ಕರೆ ಕಾಯಿಲೆ ಇರುವವರು ಮಾವಿನಹಣ್ಣುಗಳನ್ನು ತಿನ್ನುವ ಮೊದಲು ಈ ಸ್ಟೋರಿ ಓದಿ

ಬೇಸಿಗೆ ಕಾಲ ಬಂತೆಂದರೆ ಸಾಕು ನಮಗೆ ನೆನಪಾಗುವುದು ನೆಚ್ಚಿನ ಹಣ್ಣು ಮಾವು ಎಂದು ಹೇಳಬಹುದು ಈ ಹಣ್ಣು ಸಿಹಿಯಾದದ್ದಕ್ಕಾಗಿ ಎಷ್ಟು ತಿಂದರೂ ಇನ್ನೂ ತಿನ್ನಬೇಕು ಎಂದು ನಮ್ಮ ಹಂಬಲವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ ಮತ್ತು ಬೇಸಿಗೆ ಋತುವು ಮುಂದುವರಿಯುವಾಗ ನಾವು ಮಾವಿನ ಹಣ್ಣುಗಳನ್ನು ಅತಿಯಾಗಿ ತಿನ್ನಲು ಬಯಸುತ್ತೇವೆ

ಮಾವಿನಹಣ್ಣು

ಮಾವಿನಹಣ್ಣು

  • Share this:
ಬೇಸಿಗೆ ಕಾಲ (Summer) ಬಂತೆಂದರೆ ಸಾಕು ನಮಗೆ ನೆನಪಾಗುವುದು ನೆಚ್ಚಿನ ಹಣ್ಣು (Fruit) 'ಮಾವು' (Mango) ಎಂದು ಹೇಳಬಹುದು. ಈ ಹಣ್ಣು ಸಿಹಿಯಾದದ್ದಕ್ಕಾಗಿ (Sweet) ಎಷ್ಟು ತಿಂದರೂ ಇನ್ನೂ ತಿನ್ನಬೇಕು ಎಂದು ನಮ್ಮ ಹಂಬಲವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ ಮತ್ತು ಬೇಸಿಗೆ ಋತುವು ಮುಂದುವರಿಯುವಾಗ ನಾವು ಮಾವಿನ ಹಣ್ಣುಗಳನ್ನು ಅತಿಯಾಗಿ ತಿನ್ನಲು ಬಯಸುತ್ತೇವೆ. ಅದರಲ್ಲೂ ಈ ಸಕ್ಕರೆ ಕಾಯಿಲೆ ಎಂದರೆ ಮಧುಮೇಹ (Diabetes) ಇರುವವರು ಈ ಮಾವಿನ ಹಣ್ಣನ್ನು ಬೇಸಿಗೆಯಲ್ಲಿ ತಿನ್ನಬಹುದೇ ಎಂಬ ಪ್ರಶ್ನೆ ತುಂಬಾ ಜನರಿಗೆ ಕಾಡುತ್ತಿರುತ್ತದೆ. ಮಾವಿನಹಣ್ಣುಗಳು ತುಂಬಾನೇ ರುಚಿಯಾಗಿರುತ್ತವೆ, ಆದರೆ ಜನರು ಇದರಲ್ಲಿರುವ ಸಮೃದ್ಧ ಪೌಷ್ಠಿಕಾಂಶದ (Nutrition) ಮೌಲ್ಯದ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ಅವುಗಳನ್ನು ನಿಮ್ಮ ಆಹಾರದಲ್ಲಿ ಬಹುಮುಖ ರೀತಿಯಲ್ಲಿ ಸೇರಿಸಿಕೊಳ್ಳಬಹುದು.

ಅವುಗಳನ್ನು ಸ್ಮೂಥಿಗಳು, ಸಲಾಡ್ ಗಳು, ಉಷ್ಣವಲಯದ ಹಣ್ಣುಗಳಾಗಿ ಬಡಿಸುವುದು, ಓಟ್ ಮೀಲ್ ಗೆ ಸೇರಿಸುವುದು ಇತ್ಯಾದಿಗಳಿಗೆ ಸೇರಿಸಿಕೊಳ್ಳಬಹುದು. ಇವೆಲ್ಲವೂ ಮಧುಮೇಹಿಗಳಿಗೆ ಎಷ್ಟೊಂದು ಸೂಕ್ತ ಎಂದು ತಿಳಿಯೋಣ ಬನ್ನಿ.

ಮಧುಮೇಹಿಗಳಿಗೆ ಮಾವು ಎಷ್ಟು ಸುರಕ್ಷಿತ?
ಮಾವಿನಲ್ಲಿ ಶೇಕಡಾ 90 ರಷ್ಟು ಕ್ಯಾಲೋರಿಗಳ ಮೂಲ ಸಕ್ಕರೆ ಮಾತ್ರ ಇರುತ್ತದೆ. ಇದು ನಿಮ್ಮ ಸಕ್ಕರೆ ಮಟ್ಟದ ಏರಿಕೆಗೆ ಕಾರಣವಾಗಬಹುದು. ಮತ್ತೊಂದೆಡೆ, ಮಾವು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಮಾವಿನ ಹಣ್ಣಿನ ಗ್ಲೈಸೆಮಿಕ್ ಸೂಚ್ಯಂಕವು 51 ಆಗಿದೆ, ಇದನ್ನು ಕಡಿಮೆ ಎಂದು ಪರಿಗಣಿಸಲಾಗುತ್ತದೆ.

ಮಾವಿನ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಒತ್ತಡದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳ ಏರಿಕೆಗೆ ಸಂಬಂಧಿಸಿದೆ. ನಾರಿನಂಶವು ಸಕ್ಕರೆಯು ರಕ್ತಪ್ರವಾಹಕ್ಕೆ ಹೀರಲ್ಪಡುವ ಪ್ರಮಾಣವನ್ನು ನಿಧಾನಗೊಳಿಸುತ್ತದೆ.

ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ ಸಖತ್ ಟೇಸ್ಟಿ ಬ್ರೆಡ್ ಟೋಸ್ಟ್

ಆದ್ದರಿಂದ, ಮಾವಿನ ಹಣ್ಣನ್ನು ಮಧುಮೇಹಿ ವ್ಯಕ್ತಿಯ ಆಹಾರದಲ್ಲಿ ಸೇರಿಸಿಕೊಳ್ಳಬಹುದು, ಆದರೆ ನಿಮ್ಮ ವೈದ್ಯರು ಅಥವಾ ಆರೋಗ್ಯ ತರಬೇತುದಾರರು ಶಿಫಾರಸು ಮಾಡಿದಾಗ ಮಾತ್ರ. ಮಾವಿನ ಎಲೆಗಳು ಇನ್ಸುಲಿನ್ ಉತ್ಪಾದನೆ ಮತ್ತು ನಿಮ್ಮ ದೇಹದಲ್ಲಿ ಗ್ಲುಕೋಸ್ ವಿತರಣೆಯನ್ನು ಸುಧಾರಿಸುತ್ತವೆ ಎಂದು ತಿಳಿದುಬಂದಿದೆ. ಅವು ಫೈಬರ್, ಪೆಕ್ಟಿನ್ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಇದು ಮಧುಮೇಹ ಹೊಂದಿರುವ ಜನರಿಗೆ ಮತ್ತು ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಹೊಂದಿರುವವರಿಗೆ ಪ್ರಯೋಜನಕಾರಿಯಾಗಿದೆ. ಮಾವಿನ ಎಲೆಗಳು ಕೋಮಲವಾಗಿರುತ್ತವೆ ಮತ್ತು ಅವುಗಳನ್ನು ಪ್ರಪಂಚದ ಅನೇಕ ಭಾಗಗಳಲ್ಲಿ ಜನರು ಅವುಗಳನ್ನು ಬೇಯಿಸಿ ತಿನ್ನುತ್ತಾರೆ.

ಮಧುಮೇಹಿಗಳ ಆಹಾರದಲ್ಲಿ ಮಾವಿನಹಣ್ಣನ್ನು ಹೇಗೆ ಸೇರಿಸಿಕೊಳ್ಳಬಹುದು?
ನೀವು ಮಾವಿನ ಹಣ್ಣನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ, ಅದು ಪ್ರಯೋಜನಕಾರಿಯಾಗಬಹುದು ಎಂದು ಸಾಬೀತಾಗಿದೆ. ಮಾವಿನ ಹಣ್ಣುಗಳು ನಿಮ್ಮ ದೇಹದ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತವೆ, ಇದು ಮಧುಮೇಹಿಗಳಿಗೆ ಒಳ್ಳೆಯದು. ಒಣಗಿದ ಮಾವಿನಹಣ್ಣಿಗಿಂತ ಕಡಿಮೆ ಪ್ರಮಾಣದ ಸಕ್ಕರೆಯನ್ನು ಹೊಂದಿರುವುದರಿಂದ ನೀವು ಯಾವಾಗಲೂ ತಾಜಾ ಮಾವಿನ ಹಣ್ಣುಗಳನ್ನು ಸೇವಿಸಬೇಕು. ಮಧುಮೇಹಿಯಾಗಿರುವುದರಿಂದ, ನೀವು ಒಂದು ದಿನದಲ್ಲಿ 1 ಅಥವಾ ಅಬ್ಬಬ್ಬಾ ಎಂದರೆ 2 ತುಂಡು ಮಾವಿನಹಣ್ಣನ್ನು ಮಾತ್ರ ತಿನ್ನಬೇಕು.

ಇದನ್ನೂ ಓದಿ:  Arthritis Fruits: ಕೀಲು ನೋವು ಸಮಸ್ಯೆಗೆ ಪರಿಹಾರ ನೀಡಲು ಯಾವ ಹಣ್ಣುಗಳ ಸೇವನೆ ಮಾಡುವುದು ಉತ್ತ,ಮ ಗೊತ್ತಾ?

ನೀವು ಅವುಗಳನ್ನು ನಿಮ್ಮ ಸಲಾಡ್ ನಲ್ಲಿ ಸಹ ಸೇರಿಸಬಹುದು. ನಿಮ್ಮ ಊಟದಲ್ಲಿ ಮಾವಿನ ಹಣ್ಣಿನ ಸಣ್ಣ ಭಾಗವನ್ನು ಸೇರಿಸುವುದು ಯಾವಾಗಲೂ ಒಳ್ಳೆಯದು. ಮಾವಿನಹಣ್ಣುಗಳು ನಿಮ್ಮ ಸಕ್ಕರೆ ಮಟ್ಟಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ನೋಡಲು ನಿಮ್ಮ ಊಟದ ನಂತರದ ಸಕ್ಕರೆ ಮಟ್ಟವನ್ನು ನೋಡಿಕೊಳ್ಳಲು ಶಿಫಾರಸು ಮಾಡುತ್ತಾರೆ.

ಮಾವಿನ ಹಣ್ಣಿನಲ್ಲಿರುವ ಆರೋಗ್ಯ ಪ್ರಯೋಜನಗಳು
ಮಾವಿನಹಣ್ಣುಗಳು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿವೆ. ನಿಮ್ಮ ಆಹಾರದಲ್ಲಿ ಸೇರಿಸಿದರೆ, ಅವು ಅನೇಕ ಪ್ರಯೋಜನಗಳನ್ನು ನೀಡಬಹುದು. ಅವುಗಳಲ್ಲಿ ಕೆಲವು ಈ ಕೆಳಗಿನವುಗಳನ್ನು ಒಳಗೊಂಡಿವೆ:

1. ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನ ಸಮೃದ್ಧ ಮೂಲವಾಗಿದೆ.

2. ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ನಿಯಮಿತ ನಾಡಿಮಿಡಿತವನ್ನು ಪಡೆಯಲು ಸಹಾಯ ಮಾಡುತ್ತದೆ.

3. ಹೃದಯದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.

5. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳನ್ನು ಒಳಗೊಂಡಿದೆ.

6. ನಿಮ್ಮ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

7. ಕ್ಯಾನ್ಸರ್-ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ.

ಪ್ರತಿ ಮನೆಯಲ್ಲೂ ಮಾವಿನ ಹಣ್ಣನ್ನು ಅನೇಕ ರೀತಿಯಲ್ಲಿ ಸೇವಿಸಲಾಗುತ್ತದೆ. ಅವುಗಳನ್ನು ಕೆಲವೊಮ್ಮೆ ಹಸಿಯಾಗಿ ತಿನ್ನಲಾಗುತ್ತದೆ, ಸಿಹಿ ತಿಂಡಿಗಳಿಗೆ ಸೇರಿಸಲಾಗುತ್ತದೆ, ಮಾವಿನ ಚಟ್ನಿ ಮಾಡಿಕೊಂಡು ತಿನ್ನುತ್ತಾರೆ ಅಥವಾ ರುಚಿಕರವಾದ ಮಾವಿನ ಹಣ್ಣಿನ ಶೇಕ್ ರೂಪದಲ್ಲಿ ಸಹ ಸವಿಯಲಾಗುತ್ತದೆ. ಇದನ್ನು ತಯಾರಿಸಲು ಇತರ ಮಾರ್ಗಗಳಿದ್ದರೂ, ನಿಮ್ಮ ಮಧುಮೇಹದ ಆಹಾರದ ಭಾಗವಾಗಿ ಯಾವ ವಿಧಾನ ಮತ್ತು ಭಾಗವನ್ನು ಸೇರಿಸಬಹುದು ಎಂದು ತಿಳಿಯಲು ನೀವು ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ:  Chest pain: ಎದೆನೋವು ಕೇವಲ ಹೃದಯಾಘಾತದ ಲಕ್ಷಣವಲ್ಲ, ಮಹಿಳೆಯರಲ್ಲಿ ಇದರ ಲಕ್ಷಣಗಳು ಭಿನ್ನವಾಗಿರುತ್ತಂತೆ

ನಿಮಗೆ ಮಧುಮೇಹವಿದ್ದರೂ ಸಹ ನೀವು ನಿಮ್ಮ ನೆಚ್ಚಿನ ಹಣ್ಣು ಅಥವಾ ಭಕ್ಷ್ಯಗಳು ಆನಂದಿಸಲು ಮತ್ತು ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನೀವು ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದು ನೀವು ಖಚಿತ ಪಡಿಸಿಕೊಳ್ಳಬೇಕು. ನೀವು ಆರೋಗ್ಯಕರ ಮತ್ತು ನಾರಿನಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು, ನಿಯಮಿತ ವ್ಯಾಯಾಮವನ್ನು ಮಾಡಬೇಕು ಮತ್ತು ನಿಮ್ಮ ಸಕ್ಕರೆ ಮಟ್ಟಗಳ ಮೇಲೆ ನಿಯಮಿತವಾಗಿ ನಿಗಾ ಇಡಬೇಕು. ನಿಮ್ಮ ಸಕ್ಕರೆ ಮಟ್ಟವನ್ನು ತಿಳಿದ ನಂತರ, ನಿಮ್ಮ ಮಧುಮೇಹ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ನಿಮಗೆ ಸಾಧ್ಯವಾಗುತ್ತದೆ ಮತ್ತು ನೀವು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
Published by:Ashwini Prabhu
First published: