ಎಚ್ಚರ, ಹುಳಿ ಆಹಾರ ಸೇವನೆ ಮುನ್ನ ಇದು ತಿಳಿದಿರಲಿ..!

ಗ್ಯಾಸ್​ ಮತ್ತು ಅಜೀರ್ಣ ಸಮಸ್ಯೆಗಳನ್ನು ದೂರ ಮಾಡಲು ನಿಂಬೆ ರಸ ಅಥವಾ ಹುಳಿ ಪದಾರ್ಥಗಳ ಮೊರೆ ಹೋಗುತ್ತಾರೆ. ಆದರೆ ಇದೇ ಹುಳಿ ಪದಾರ್ಥಗಳಿಂದ ಸಹ ನಿಮಗೆ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು.

zahir | news18-kannada
Updated:October 22, 2019, 11:19 AM IST
ಎಚ್ಚರ, ಹುಳಿ ಆಹಾರ ಸೇವನೆ ಮುನ್ನ ಇದು ತಿಳಿದಿರಲಿ..!
ಸಾಂದರ್ಭಿಕ ಚಿತ್ರ
  • Share this:
ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯದ ಬಗ್ಗೆ ಸಾಕಷ್ಟು ಎಚ್ಚರಿಕೆವಹಿಸಬೇಕಾಗುತ್ತದೆ. ಹೀಗಾಗಿ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವ ವೇಳೆ ಕೆಲ ಪದಾರ್ಥಗಳ ಸೇವನೆಯಿಂದ ಸಂಪೂರ್ಣ ದೂರವಿರಬೇಕಾಗುತ್ತದೆ. ಸಾಮಾನ್ಯವಾಗಿ ನಿಂಬೆ ಹಣ್ಣನ್ನು ಹೆಚ್ಚಿನವರು ಹಲವು ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸುತ್ತಾರೆ. ಆದರೆ ಇದು ಕೂಡ ಕೆಲವೊಂದು ಬಾರಿ ನಿಮ್ಮಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ.

ಗ್ಯಾಸ್​ ಮತ್ತು ಅಜೀರ್ಣ ಸಮಸ್ಯೆಗಳನ್ನು ದೂರ ಮಾಡಲು ನಿಂಬೆ ರಸ ಅಥವಾ ಹುಳಿ ಪದಾರ್ಥಗಳ ಮೊರೆ ಹೋಗುತ್ತಾರೆ. ಆದರೆ ಇದೇ ಹುಳಿ ಪದಾರ್ಥಗಳಿಂದ ಸಹ ನಿಮಗೆ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ಹೆಚ್ಚು ಹುಳಿ ಆಹಾರವನ್ನು ಸೇವಿಸುವುದು ಮತ್ತು ಕುಡಿಯುವುದರ ಮೂಲಕ ನೀವು ಬೇರೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅವುಗಳಲ್ಲಿ ಮುಖ್ಯವಾದವು ಎಂದರೆ...

ಹೊಟ್ಟೆ ನೋವು:

ನಿಂಬೆ ಪಾನಕವನ್ನು ಕುಡಿಯುವುದು ಹೆಚ್ಚಿನವರು ಇಷ್ಟಪಡುತ್ತಾರೆ. ವಾಸ್ತವವಾಗಿ, ನಿಂಬೆ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರ್ಪಡೆಯಾಗಬಾರದು. ಸಿಟ್ರಿಕ್ ಪ್ರಮಾಣ ದೇಹದಲ್ಲಿ ಹೆಚ್ಚಾದರೆ ಹೊಟ್ಟೆ ನೋವು ಸೇರಿದಂತೆ, ಆ್ಯಸಿಡಿಟಿ ಸಮಸ್ಯೆಯನ್ನು ತಂದೊಡ್ಡಬಹುದು.

ಇದನ್ನೂ ಓದಿ: Bigg Boss Kannada 7: ಕೊನೆಗೂ ಬಹಿರಂಗವಾಯ್ತು ಬಿಗ್ ಬಾಸ್​ಗಾಗಿ ಕುರಿ ಪ್ರತಾಪ್ ಪಡೆಯುತ್ತಿರುವ ಸಂಭಾವನೆ..!

ಮಲಬದ್ಧತೆ:
ಹೆಚ್ಚು ಹುಳಿ ಇರುವ ಆಹಾರವನ್ನು ಸೇವಿಸುವುದರಿಂದ ಮಲಬದ್ಧತೆ ಉಂಟಾಗುವ ಸಾಧ್ಯತೆ ಹೆಚ್ಚು. ದೇಹದಲ್ಲಿ ಸಿಟ್ರಿಕ್ ಅಂಶ ಏರುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಮಲಬದ್ಧತೆಯಿಂದಾಗಿ, ಹೊಟ್ಟೆ ಭಾರ ಮತ್ತು ಗ್ಯಾಸ್ ಅಥವಾ ಹೊಟ್ಟೆ ಬಿಗಿತದ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರೊಂದಿಗೆ ಹೊಟ್ಟೆ ನೋವು ಕೂಡ ಪ್ರಾರಂಭವಾಗುತ್ತದೆ. ಉಪ್ಪಿನಕಾಯಿ, ಹುಳಿ, ಹುಣಸೆಹಣ್ಣು, ಕಿತ್ತಳೆ ಮತ್ತು ಆಮ್ಲಾ ಮುಂತಾದ ಹುಳಿ ವಸ್ತುಗಳನ್ನು ತಿನ್ನುವುದು ದೇಹಕ್ಕೆ ಒಳ್ಳೆಯದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಹೊಟ್ಟೆಯಲ್ಲಿ ಗ್ಯಾಸ್ ಉತ್ಪಾದನೆಯಾಗುತ್ತದೆ. ಹಾಗೆಯೇ ಖಾಲಿ ಹೊಟ್ಟೆಯಲ್ಲಿ ಹುಳಿ ಪದಾರ್ಥಗಳನ್ನು ತಿನ್ನಬಾರದು.ಮೂತ್ರದ ಸೋಂಕು:
ಸಾಮಾನ್ಯವಾಗಿ ಮೂತ್ರ ರೋಗದ ಸೋಂಕು ಹುಡುಗಿಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದಕ್ಕೆ ಒಂದು ಕಾರಣ ಹುಳಿ ಆಹಾರಗಳ ಹೆಚ್ಚಿನ ಸೇವನೆ. ಹುಳಿ ಹೆಚ್ಚಿರುವ ವಸ್ತುಗಳನ್ನು ತಿನ್ನುವುದರಿಂದ, ನಮ್ಮ ದೇಹದ ಪಿಹೆಚ್ ಮಟ್ಟವು ಹಾಳಾಗುತ್ತದೆ. ಹಾಗೆಯೇ ಹುಡುಗಿಯರು ಮತ್ತು ಮಹಿಳೆಯರಲ್ಲಿ ಇದು ಯೋನಿ ಸೋಂಕಿಗೆ ದೊಡ್ಡ ಕಾರಣವಾಗುತ್ತದೆ. ಮೂತ್ರ ಕ್ರಿಯೆಯು ಸರಾಗವಾಗಿ ನಡೆಯದಿದ್ದರೆ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಹೀಗಾಗಿ ಹುಳಿ ಆಹಾರಗಳ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಉತ್ತಮ.

ಇದನ್ನೂ ಓದಿ: ಸಾಧಕಿಯ ಸಿನಿಮಾ: ಸುಧಾಮೂರ್ತಿ ಅವರ ಪಾತ್ರದಲ್ಲಿ ಮುದ್ದು ಮುಖದ ಚೆಲುವೆ..!
First published:October 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading