RBI Recruitment: ರಿಸರ್ವ್​ ಬ್ಯಾಂಕ್​ ಬಿ ಗ್ರೇಡ್​ ಹುದ್ದೆಗಳ ನೇಮಕಾತಿ: ತಿಂಗಳ ವೇತನ 62 ಸಾವಿರ ರೂ.

ಶೇ.55 ರಷ್ಟು ಅಂಕಗಳೊಂದಿಗೆ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಇನ್ನು ಶೇ.50 ರಷ್ಟು ಅಂಕ ಪಡೆದಿರುವ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

zahir | news18-kannada
Updated:September 23, 2019, 11:21 AM IST
RBI Recruitment: ರಿಸರ್ವ್​ ಬ್ಯಾಂಕ್​ ಬಿ ಗ್ರೇಡ್​ ಹುದ್ದೆಗಳ ನೇಮಕಾತಿ: ತಿಂಗಳ ವೇತನ 62 ಸಾವಿರ ರೂ.
job
zahir | news18-kannada
Updated: September 23, 2019, 11:21 AM IST
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 199 ಗ್ರೇಡ್ -ಬಿ ಅಧಿಕಾರಿ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಬೇಕಾಗಿರುವ ಅರ್ಹತೆ ಮತ್ತು ನೀಡಲಾಗುವ ವೇತನ ಹಾಗೂ ಇನ್ನಷ್ಟು ಮಾಹಿತಿ ಈ ಕೆಳಗಿನಂತಿವೆ.

ವಿದ್ಯಾರ್ಹತೆ:
ಶೇ.55 ರಷ್ಟು ಅಂಕಗಳೊಂದಿಗೆ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಇನ್ನು ಶೇ.50 ರಷ್ಟು ಅಂಕ ಪಡೆದಿರುವ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ರಿಂದ ಗರಿಷ್ಠ 30 ವರ್ಷದೊಳಗಿರಬೇಕು.

ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 35,150 ರಿಂದ 62,400 ರೂ. ವೇತನ ನಿಗದಿ ಪಡಿಸಲಾಗುತ್ತದೆ.
Loading...

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಇದನ್ನೂ ಓದಿ: 1 ಲಕ್ಷದೊಳಗೆ ಖರೀದಿಸಬಹುದಾದ ಅತ್ಯಾಕರ್ಷಕ ಆರು ಬೈಕುಗಳ ಪಟ್ಟಿ ಇಲ್ಲಿದೆ

ಅರ್ಜಿ ಶುಲ್ಕ :
ಸಾಮಾನ್ಯ / ಓಬಿಸಿ ಅಭ್ಯರ್ಥಿಗಳಿಗೆ- 850 ರೂ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ / ಅಂಗವಿಕಲ / ಮಾಜಿ ಸೈನಿಕ ಅಭ್ಯರ್ಥಿಗಳು 100 ರೂ.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭ : 21.9.2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11.10.2019
ಆನ್‌ಲೈನ್ ಪರೀಕ್ಷೆ (ಪೇಪರ್ -1)ಯ ದಿನಾಂಕ : 9.11.2019
ಆನ್‌ಲೈನ್ ಪರೀಕ್ಷೆ (ಪೇಪರ್-11)ಯ ದಿನಾಂಕ : 1 ಮತ್ತು 2,ಡಿಸೆಂಬರ್ 2019.

ಅರ್ಜಿ ಸಲ್ಲಿಸುವುದು ಹೇಗೆ ? :
ಆಸಕ್ತ ಅಭ್ಯರ್ಥಿಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ www.rbi.org.in ಗೆ ಹೋಗಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಹಾಗೂ ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ:  ಮತ್ತೊಮ್ಮೆ ಮಾದಕ ಮೈಮಾಟದಿಂದ ಪಡ್ಡೆಗಳ ನಿದ್ದೆಗೆಡಿಸಿದ ಸನ್ನಿ ಲಿಯೋನ್


First published:September 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...