• Home
  • »
  • News
  • »
  • lifestyle
  • »
  • Raw Onion: ಈರುಳ್ಳಿಯನ್ನು ಹಸಿಯಾಗಿ ತಿನ್ನುತ್ತೀರಾ? ಈ ಅಭ್ಯಾಸ ಯಾವೆಲ್ಲಾ ಸಮಸ್ಯೆಗೆ ಕಾರಣ?

Raw Onion: ಈರುಳ್ಳಿಯನ್ನು ಹಸಿಯಾಗಿ ತಿನ್ನುತ್ತೀರಾ? ಈ ಅಭ್ಯಾಸ ಯಾವೆಲ್ಲಾ ಸಮಸ್ಯೆಗೆ ಕಾರಣ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚು ಈರುಳ್ಳಿ ಸೇವನೆ ನಿಮಗೆ ಹಲವು ಆರೋಗ್ಯ ಸಮಸ್ಯೆ ಉಂಟು ಮಾಡಬಹುದು. ನೀವು ತುಂಬಾ ಇಷ್ಟಪಡುವ ಹಸಿ ಈರುಳ್ಳಿ ಕೆಲವೊಮ್ಮೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾದ್ರೆ ಹಸಿ ಈರುಳ್ಳಿ ನಿಮ್ಮ ಆರೋಗ್ಯಕ್ಕೆ ಹೇಗೆ ಹಾನಿಕಾರಕ ಎಂಬ ಬಗ್ಗೆ ತಜ್ಞರು ಏನ್ ಹೇಳಿದ್ದಾರೆ ನೋಡಿ.

  • Share this:

    ಊಟದ ಮೇಜಿನ ಮೇಲೆ ಆಹಾರದ (Food) ಜೊತೆ ಲಿಂಬು, ಹಸಿ ಈರುಳ್ಳಿ (Raw Onion) ತುಂಡುಗಳು, ಸೌತೆಕಾಯಿ (Cucumber), ಕ್ಯಾರೆಟ್, ಮೂಲಂಗಿ ಹೀಗೆ ಇಡಲಾಗುತ್ತದೆ. ರೊಟ್ಟಿಯ ಜೊತೆಗೆ ಹಸಿ ಈರುಳ್ಳಿ ತಿನ್ನುವುದು ಹೆಚ್ಚು ರೂಢಿಯಲ್ಲಿದೆ. ಈರುಳ್ಳಿ ಪ್ರಿಯರು ಪ್ರತಿ ಋತುವಿನಲ್ಲಿ (Every Season) ಮತ್ತು ಪ್ರತಿ ಊಟದಲ್ಲಿ ಹಸಿ ಈರುಳ್ಳಿ ತಿನ್ನಲು ಇಷ್ಟ ಪಡುತ್ತಾರೆ. ಆಹಾರ ತಜ್ಞರು ಕೂಡ ಈರುಳ್ಳಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದೇ ಹೇಳ್ತಾರೆ. ಆದರೆ ಹಸಿ ಈರುಳ್ಳಿಯ ಅತಿಯಾದ ಸೇವನೆ ಮಾಡುವುದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತದೆ. ಈ ಬಗ್ಗೆ ನಿಮಗೆ ಗೊತ್ತೇ ಇರಬಹುದು. ಇದನ್ನ ಕೇಳಿ ನೀವು ಆಶ್ಚರ್ಯ ಪಡಬಹುದು.


    ಹಸಿ ಈರುಳ್ಳಿ ಸೇವನೆ ಎಷ್ಟು ಆರೋಗ್ಯಕರ?


    ಇದು ನಿಜ. ಹೆಚ್ಚು ಈರುಳ್ಳಿ ಸೇವನೆ ನಿಮಗೆ ಹಲವು ಆರೋಗ್ಯ ಸಮಸ್ಯೆ ಉಂಟು ಮಾಡಬಹುದು. ನೀವು ತುಂಬಾ ಇಷ್ಟಪಡುವ ಹಸಿ ಈರುಳ್ಳಿ ಕೆಲವೊಮ್ಮೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾದ್ರೆ ಹಸಿ ಈರುಳ್ಳಿ ನಿಮ್ಮ ಆರೋಗ್ಯಕ್ಕೆ ಹೇಗೆ ಹಾನಿಕಾರಕ ಎಂಬ ಬಗ್ಗೆ ತಜ್ಞರು ಏನ್ ಹೇಳಿದ್ದಾರೆ ನೋಡಿ.


    ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಲಿನ್ ಕ್ಯಾಂಡಿ ಅವರ ಪ್ರಕಾರ, ಈರುಳ್ಳಿ ಅಡುಗೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮತ್ತು ಇದು ಆರೋಗ್ಯಕರ ಪ್ರಯೋಜನ ನೀಡುತ್ತದೆ. ಆದರೆ ಹಸಿ ಈರುಳ್ಳಿ ತಿನ್ನುವುದರಿಂದ ಕೆಲವು ಅನಾನುಕೂಲತೆ ಇದೆ ಎಂದು ಅವರು ಹೇಳುತ್ತಾರೆ.


    ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


    ಹಸಿ ಈರುಳ್ಳಿ ತಿಂದರೆ ಬಾಯಿಯಿಂದ ದುರ್ವಾಸನೆ ಬರುತ್ತದೆ. ಅಲ್ಲದೆ ಉಬ್ಬುವುದು, ಹೊಟ್ಟೆಯ ಅಸ್ವಸ್ಥತೆ, ವಾಕರಿಕೆ ಮತ್ತು ವಾಂತಿ ಅಥವಾ ಕಿರಿಕಿರಿ ಸಮಸ್ಯೆ ಉಂಟಾಗುತ್ತವೆ.


    ಈರುಳ್ಳಿಯನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಬೇಕೆ?


    ಇದು ಸಂಪೂರ್ಣವಾಗಿ ನಿಮ್ಮ ಆಯ್ಕೆಯ ಮೇಲೆ ಅವಲಂಬಿತವಾಗಿದೆ. ನೀವು ಯಾವ ರೀತಿ ಈರುಳ್ಳಿ ತಿನ್ನಲು ಬಯಸುತ್ತೀರಿ ಎಂಬುದನ್ನ ನಿರ್ಧರಿಸಿದೆ. ಹಸಿ ಈರುಳ್ಳಿ ಬಗ್ಗೆ ಮಾತನಾಡಿದರೆ, ಇದು ಹೆಚ್ಚಿನ ಪ್ರಮಾಣದ ಸಾವಯವ ಗಂಧಕ ಹೊಂದಿದೆ. ಇದು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅನೇಕ ಪ್ರಯೋಜನ ನೀಡುತ್ತದೆ.


    ಎನ್‌ ಸಿಬಿಐ ಸೈಟ್‌ನಲ್ಲಿ ಪ್ರಕಟವಾದ ಪಬ್‌ ಮೆಡ್ ಸೆಂಟ್ರಲ್‌ ಸಂಶೋಧನೆ ಪ್ರಕಾರ, ಈರುಳ್ಳಿಯ ಹೊರ ಪದರವು ಹೆಚ್ಚು ಫ್ಲೇವನಾಯ್ಡ್‌ ಹೊಂದಿದೆ. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಹಾಗಾಗಿ ಈರುಳ್ಳಿ ಕತ್ತರಿಸುವಾಗ ನೀವು ಕನಿಷ್ಠ ಈ ಪದರ ತೆಗೆದು ಹಾಕಬೇಕು. ಮತ್ತೊಂದೆಡೆ, ಈರುಳ್ಳಿ ಬೇಯಿಸಿ ತಿಂದರೆ ಅದರಲ್ಲಿನ ಪೋಷಕಾಂಶಗಳು ಬಹಳ ಕಡಿಮೆ ಆಗುತ್ತವೆ ಇದು ಗ್ಯಾಸ್ ಸಮಸ್ಯೆ ಉಂಟು ಮಾಡಲ್ಲ.


    ಹಸಿ ಈರುಳ್ಳಿ ಸೇವನೆಯ ಅನಾನುಕೂಲಗಳು


    ಗ್ಯಾಸ್


    ಡಾಕ್ಟರ್ ಕ್ಯಾಂಡಿ ಅವರ ಪ್ರಕಾರ, ಹೆಚ್ಚು ಹಸಿ ಈರುಳ್ಳಿ ಸೇವನೆ ಮಾಡಿದರೆ ಗ್ಯಾಸ್, ಎದೆಯುರಿ, ವಾಂತಿ, ಹೊಟ್ಟೆಯಲ್ಲಿ ಉಬ್ಬುವುದು ಮುಂತಾದ ಸಮಸ್ಯೆ ಕಾಣಿಸುತ್ತವೆ. ಬೇಯಿಸಿದ ಈರುಳ್ಳಿ ತಿನ್ನಲು ಸಲಹೆ ನೀಡಲಾಗುತ್ತದೆ.


    ಬಾಯಿಯ ದುರ್ಗಂಧ


    ನೀವು ಸಲಾಡ್ ಅಥವಾ ಇತರ ಯಾವುದೇ ಆಹಾರ ಪದಾರ್ಥಗಳಲ್ಲಿ ಹಸಿ ಈರುಳ್ಳಿ ತಿಂದರೆ ನಿಮ್ಮ ಬಾಯಿಯಿಂದ ದುರ್ವಾಸನೆ ಬರುತ್ತದೆ.


    ರಕ್ತದ ಸಕ್ಕರೆ ಕಡಿಮೆ ಮಾಡುತ್ತದೆ


    ಹಸಿ ಈರುಳ್ಳಿ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ. ಹಾಗಾಗಿ ಸಕ್ಕರೆ ಸಮಸ್ಯೆ ಇರುವವರು ಹಸಿ ಈರುಳ್ಳಿ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.


     ಸ್ಕಿನ್ ರಾಶಸ್


    ಕೆಲವರಿಗೆ ಈರುಳ್ಳಿ ರಸ ಚರ್ಮದ ಮೇಲೆ ಹಚ್ಚಿದ ನಂತರ ತುರಿಕೆ, ಉರಿ ಮತ್ತು ದದ್ದು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈರುಳ್ಳಿ ರಸ ಬಳಸುವ ಮೊದಲು, ಪ್ಯಾಚ್ ಪರೀಕ್ಷೆ ಮಾಡಿಸಿ.


    ಗರ್ಭಾವಸ್ಥೆಯಲ್ಲಿ


    ಗರ್ಭಿಣಿಯರು ಸಾಮಾನ್ಯವಾಗಿ ಎದೆಯುರಿ, ವಾಂತಿ ಮತ್ತು ವಾಕರಿಕೆ ಅನುಭವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಹಸಿ ಈರುಳ್ಳಿ ಸೇವನೆ ಹಾನಿ ಉಂಟು ಮಾಡುತ್ತದೆ.


    ಲಿಥಿಯಂ


    ಹಸಿ ಈರುಳ್ಳಿ ಸೇವನೆಯಿಂದ ದೇಹದಲ್ಲಿ ಲಿಥಿಯಂ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ.


    ರಕ್ತದೊತ್ತಡ


    ಹಸಿ ಈರುಳ್ಳಿ ಸೇವನೆಯು ಸಂಕೋಚನ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡ ಮಟ್ಟ ಕಡಿಮೆ ಮಾಡುತ್ತದೆ. ಹಾಗಾಗಿ ರಕ್ತದೊತ್ತಡದ ಔಷಧಿ ತೆಗೆದುಕೊಳ್ಳುವ ರೋಗಿಗಳು ಈರುಳ್ಳಿ ಸೇವಿಸುವ ವಿಷಯದಲ್ಲಿ ವೈದ್ಯಕೀಯ ಸಲಹೆ ಪಡೆಯಬೇಕು.


    ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ವಿಶೇಷ ಹೇರ್ ಟಾನಿಕ್ ಮನೆಮದ್ದು!


    ವಾಯು ಮತ್ತು ಎದೆಯುರಿ


    ಹಸಿ ಈರುಳ್ಳಿಯಲ್ಲಿ ಕಂಡು ಬರುವ ಕರಗುವ ಫೈಬರ್ ಫ್ರಕ್ಟಾನ್‌ಗಳು ಸಹ ವಾಯು ಮತ್ತು ಎದೆಯುರಿ ಉಂಟು ಮಾಡುತ್ತವೆ.

    Published by:renukadariyannavar
    First published: