Rashmika Mandanna: ಪುಷ್ಪ ಸಿನಿಮಾದ ರಶ್ಮಿಕಾ ಸೀರೆಗೆ ಭಾರಿ ಡಿಮ್ಯಾಂಡ್​, ಶ್ರೀವಲ್ಲಿ ಫ್ಯಾಷನ್​ ಫುಲ್ ಟ್ರೆಂಡ್​

Pushpa Saree Trending in Market: ಸಿನಿಮಾಗಳಲ್ಲಿ ಹೀರೋ ಅಥವಾ ಹೀರೋಯಿನ್ ಯಾವ ಡ್ರೆಸ್​, ಆಕ್ಸಸೆರೀಸ್ ಗಳನ್ನು ಹಾಕ್ತಾರೋ ಅದನ್ನೇ ಅಭಿಮಾನಿಗಳು ಟ್ರೆಂಡ್ ಬಳಸಲು ಇಚ್ಛಿಸುತ್ತಾರೆ. ಮಾರುಕಟ್ಟೆ ಕೂಡ ಇದನ್ನೇ ಕಾಯ್ತಾ ಇರುತ್ತೆ. ಈ ಹಿಂದೆ ಮುಂಗಾರು ಮಳೆ ಸರ, ನಾಗವಲ್ಲಿ ಸೀರೆ ಹೀಗೆ ಇನ್ನಿತರ ಟ್ರೆಂಡ್​ಗಳು ಹುಟ್ಟಿಕೊಂಡಿದ್ದವು. ಮತ್ತು ಇದನ್ನು ಕೊಂಡುಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದರು. ಇದೀಗ ಮಾರುಕಟ್ಟೆಗೆ ಪುಷ್ಪ ಸಿನಿಮಾದ ಸೀರೆ ಬಂದಿದೆ. ಅರೆ! ಏನಿದು ಟ್ರೆಂಡ್ ?

ಪುಷ್ಪ ಸಿನಿಮಾದ ಒಂದು ಚಿತ್ರ

ಪುಷ್ಪ ಸಿನಿಮಾದ ಒಂದು ಚಿತ್ರ

  • Share this:
ಯಾವುದೇ ಚಲನಚಿತ್ರ ಹಿಟ್‌ ಆದಾಗಲೂ ಆ ಚಿತ್ರದ ನಟ ನಟಿಯರ ಕಾಸ್ಟ್ಯೂಮ್‌  (Costume) ಗಳು ಬಹಳಷ್ಟು ಫೇಮಸ್‌ ಆಗುತ್ತವೆ. ಅಭಿಮಾನಿಗಳು ಅವರ ಡ್ರೆಸ್‌, ಆಕ್ಸಸರೀಸ್‌, ಹೇರ್‌ ಸ್ಟೈಲ್‌ ಇಂಥವುಗಳನ್ನು ಕಾಪಿ ಮಾಡೋಕೆ ಶುರು ಮಾಡ್ತಾರೆ. ಇತ್ತೀಚಿಗಷ್ಟೇ ಅಲ್ಲು ಅರ್ಜುನ್‌ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna)  ಅಭಿನಯದ ಗ್ರ್ಯಾಂಡ್‌ ಸಕ್ಸಸ್‌ ಕಂಡ ಪುಷ್ಪ (Pushpa Film) ಚಿತ್ರ ಟ್ರೆಂಡ್‌ ಹುಟ್ಟಿಸಿತ್ತು. ಇದೀಗ ಪುಷ್ಪದಲ್ಲಿ ರಶ್ಮಿಕಾ ಉಟ್ಟಿದ್ದ ಸೀರೆಯ ಡಿಸೈನ್‌ ಶ್ರೀವಲ್ಲಿ ಸೀರೆ ಅನ್ನೋ ಹೆಸರಿನಲ್ಲಿ ಮಾರ್ಕೆಟ್‌ ಗೆ ಲಗ್ಗೆ ಇಟ್ಟಿದೆ.ಇನ್ನೇನು ನವರಾತ್ರಿ ಹಬ್ಬಕ್ಕೆ ಕೆಲವೇ ದಿನ ಬಾಕಿ ಇದೆ. ಹೆಂಗಳೆಯೆರೆಲ್ಲ ಹಬ್ಬಕ್ಕೆ ಸೀರೆ ಕೊಳ್ಳುವುದರಲ್ಲಿ ಬ್ಯುಸಿ ಇರ್ತಾರೆ. ಸದಾ ಹೊಸತನ ಬಯಸುವ ಅದರಲ್ಲೂ ಬಟ್ಟೆಗಳಲ್ಲಿ ಹೊಸ ಡಿಸೈನ್ಸ್‌ ಬಯಸುವ ಮಹಿಳೆಯರಿಗಾಗಿಯೇ ಹೊಸದೊಂದು ವೆರೈಟಿ ಸೀರೆ ಮಾರ್ಕೆಟ್‌ ನಲ್ಲಿ ಜೋರು ಸದ್ದು ಮಾಡ್ತಿದೆ. ಅದೇ ಶ್ರೀವಲ್ಲಿ ಸೀರೆ.

ಗೋಲ್ಡನ್‌ ಗರ್ಲ್‌ ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ನಟಿಸಿರೋ ಪುಷ್ಪ ಚಿತ್ರದ ಸಾಮಿ ಸಾಮಿ ಹಾಡು ತುಂಬಾನೇ ಫೇಮಸ್‌ ಆಗಿತ್ತು. ಅದರಲ್ಲಿ ರಶ್ಮಿಕಾ ಉಟ್ಟಂತಹ ಕೆಂಪು ಬಣ್ಣದ ಗೋಲ್ಡನ್‌ ಜರಿಯ ಸೀರೆ ಈಗ ಮಾರ್ಕೆಟ್‌ ಗೆ ಬಂದಿದೆ. ಇಡೀ ದೇಶದಲ್ಲಿಯೇ ಬಟ್ಟೆಗಳ ಬಹುದೊಡ್ಡ ಮಾರ್ಕೆಟ್‌ ಹೊಂದಿರುವುದು ರಾಜಸ್ಥಾನ.

ಜೈಪುರದ ಬಟ್ಟೆಯ ಮಾರ್ಕೆಟ್‌ ನಲ್ಲಿ ಈ ಸೀರೆ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗೋಲ್ಸನ್‌ ಕಲರ್‌ ವರ್ಕ್‌ ಕೂಡಾ ಹೊಂದಿರುವ ಈ ಸೀರೆ ಹಬ್ಬಕ್ಕೆ ಪರ್ಫೆಕ್ಟ್‌ ಅನ್ನೋ ಕಾರಣಕ್ಕೆ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ. ಸಾಕಷ್ಟು ಜನ ಇದನ್ನು ಟ್ವಿಟ್ಟರ್‌ ನಲ್ಲಿ ಹಂಚಿಕೊಂಡಿದ್ದು, ಈ ನವರಾತ್ರಿ ಶ್ರೀವಲ್ಲಿ ಸೀರೆ ನೆಕ್ಟ್‌ ಲೆವೆಲ್‌ ನದ್ದು ಅಂತ ಬರೆದುಕೊಂಡಿದ್ದಾರೆ.

Pushpa Saree Trending, Pushpa Song, Pushpa Dress, Saree is best for Women, ರಶ್ಮಿಕಾ ಮಂದಣ್ಣರನ್ನು ಕಾಪಿ ಮಾಡಿದ್ರಾ ಜನ್ರು, ಪುಶ್ಪ ಸಿನಿಮಾದ ಟ್ರೆಂಡ್ ಸೀರೆ, ನೀವು ಇದೀಗ ಶ್ರೀವಲ್ಲಿ ಆಗ್ಬೋದು, Kannada News, Karnataka News
ಮಾರುಕಟ್ಟಗೆ ಬಂದಿರುವ ಸೀರೆ


ಪುಷ್ಪ ಚಿತ್ರ ಬರೀ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸ ಅಲೆ ಎಬ್ಬಿಸಿತ್ತು. ಅಲ್ಲು ಅರ್ಜುನ್‌ ಹಾಗೂ ರಶ್ಮಿಕಾ ಮಂದಣ್ಣ ಅಭಿನಯಕ್ಕೆ ಹಾಗೂ ಕಥೆ, ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.

ಇದನ್ನೂ ಓದಿ: ಚಿತ್ರದುರ್ಗದ ಕಲ್ಲಿನಕೋಟೆಯ ಓಬವ್ವನ ಕಥೆ ಹೇಳ್ತಿದ್ದಾನೆ ರಾಮಾಚಾರಿ, ನೀವೂ ಕೇಳಿ!

ಇದೇ ಚಿತ್ರದ ಸಾಮಿ ಸಾಮಿ ಹಾಡು ಇನ್‌ ಸ್ಟಾ ಗ್ರಾಂ ನಲ್ಲಿ ಹವಾ ಎಬ್ಬಿಸಿತ್ತು. ಈ ಹಾಡಿನ ರೀಲ್‌ ತುಂಬಾ ಫೇಮಸ್‌ ಕೂಡ ಆಗಿತ್ತು. ಅಲ್ಲದೇ ಶ್ರೀವಲ್ಲಿ ಹಾಡಿನ ಅಲ್ಲು ಅರ್ಜುನ್‌ ಸಿಗ್ನೇಚರ್‌ ಸ್ಟೆಪ್ಸ್‌ ಕೂಡಾ ತುಂಬಾ ಜನಪ್ರಿಯವಾಗಿತ್ತು. ಹೀಗಾಗಿ ಜನರು ಕೂಡ ತಾವು ಇಷ್ಟ ಪಡುವ ನಟ ನಟಿಯರನ್ನು ಫಾಲೋ ಮಾಡ್ತಾರೆ. ಅವರು ಹಾಕುವಂಥ ಬಟ್ಟೆ, ಆಕ್ಸಸರೀಸ್‌ ತಂದು ಹಾಕಿಕೊಂಡು ಖುಷಿ ಪಡ್ತಾರೆ.

Pushpa Saree Trending, Pushpa Song, Pushpa Dress, Saree is best for Women, ರಶ್ಮಿಕಾ ಮಂದಣ್ಣರನ್ನು ಕಾಪಿ ಮಾಡಿದ್ರಾ ಜನ್ರು, ಪುಶ್ಪ ಸಿನಿಮಾದ ಟ್ರೆಂಡ್ ಸೀರೆ, ನೀವು ಇದೀಗ ಶ್ರೀವಲ್ಲಿ ಆಗ್ಬೋದು, Kannada News, Karnataka News
ಪುಷ್ಪ ಸಿನಿಮಾದ ದೃಶ್ಯ


ಹೀಗೆ ಹಿಟ್‌ ಚಿತ್ರದ ಟ್ರೆಂಡಿಂಗ್‌ ಬಟ್ಟೆಗಳ ಡಿಸೈನ್‌ ಮಾರುಕಟ್ಟೆಗೆ ಬರೋದು ಇದೇ ಮೊದಲೇನಲ್ಲ. ಕುಚ್‌ ಕುಚ್‌ ಹೋತಾ ಹೈ ಚಿತ್ರದಿಂದ ಹಿಡಿದು ಮೊನ್ನೆ ಮೊನ್ನೆಯ ಕೆಜಿಫ್‌ ನಲ್ಲಿ ರಾಕಿಭಾಯ್‌ ಯಶ್‌ ಗಡ್ಡದ ವರೆಗೂ ಜನರು ಫ್ಯಾಷನ್‌ ಟ್ರೆಂಡ್‌ ಫಾಲೋ ಮಾಡ್ತಾರೆ. ಆದ್ರೆ ಇದೀಗ ಹಬ್ಬದ ಸೀಸನ್‌ ನಲ್ಲಿ ಹೀಗೆ ಬಟ್ಟೆಯ ಅದರಲ್ಲೂ ಸೀರೆಯ ಹೊಸ ಡಿಸೈನ್‌ ಬಂದಿರೋದು ಮಹಿಳೆಯರ ಪಾಲಿಗಂತೂ ಖುಷಿಯ ವಿಚಾರ. ಅದನ್ನುಟ್ಟು ತಾವೂ ಶ್ರೀವಲ್ಲಿ ರಶ್ಮಿಕಾ ಥರಾ ಕಾಣ್ತೀವೆಂದುಕೊಳ್ಳೋ ಹೆಣ್ಮಕ್ಕಳಿಗೇನೂ ಕಮ್ಮಿಯಿಲ್ಲ!

Pushpa Saree Trending, Pushpa Song, Pushpa Dress, Saree is best for Women, ರಶ್ಮಿಕಾ ಮಂದಣ್ಣರನ್ನು ಕಾಪಿ ಮಾಡಿದ್ರಾ ಜನ್ರು, ಪುಶ್ಪ ಸಿನಿಮಾದ ಟ್ರೆಂಡ್ ಸೀರೆ, ನೀವು ಇದೀಗ ಶ್ರೀವಲ್ಲಿ ಆಗ್ಬೋದು, Kannada News, Karnataka News
ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ


ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 9ಕ್ಕೆ ದಿನಗಣನೆ, ಹೊಸಬರ ಜೊತೆ ಬರ್ತಾರೆ ಹಳಬರು

ಇನ್ನು, ಕನ್ನಡದ ಕಿರಿಕ್‌ ಪಾರ್ಟಿಯಿಂದ ಆರಂಭಿಸಿ, ತೆಲುಗಿನ ಗೀತಾ ಗೋವಿಂದಂ, ಪುಷ್ಪ ಚಿತ್ರಗಳ ಮೂಲಕ ನ್ಯಾಷನಲ್‌ ಕ್ರಶ್‌ ಆಗಿರೋ ರಶ್ಮಿಕಾ ಮಂದಣ್ಣ ಶೂಟಿಂಗ್‌ ನಲ್ಲಿ ಸಖತ್‌ ಬ್ಯುಸಿ. ಸದ್ಯ ಗುಡ್‌ ಬೈ, ಅನಿಮಲ್​, ಪುಷ್ಪ2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.
First published: