ಹಿಂಸಾತ್ಮಕ ಲೈಂಗಿಕ ಕ್ರಿಯೆ ನಡೆಸಿ ವಿಡಿಯೋ ಶೇರ್ ಮಾಡಿದ ವಿದ್ಯಾರ್ಥಿ ಜೈಲು ಪಾಲು

ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದ ಮಹಿಳೆಯು ಅಜೀಜ್ ಖಾನ್​ ಮತ್ತು ಫ್ರೆಂಡ್ಸ್​ರೊಂದಿಗೆ ಸಮಯ ಕಳೆದಿದ್ದರು. ಅಲ್ಲದೆ ತನ್ನ ಬ್ಯಾಗ್​ ಮತ್ತು ಫೋನ್​ಗಳನ್ನು ಸುರಕ್ಷಿತವಾಗಿಡುವಂತೆ ಅಜೀಜ್ ಬಳಿ ನೀಡಿದ್ದರು

news18
Updated:March 13, 2019, 7:14 PM IST
ಹಿಂಸಾತ್ಮಕ ಲೈಂಗಿಕ ಕ್ರಿಯೆ ನಡೆಸಿ ವಿಡಿಯೋ ಶೇರ್ ಮಾಡಿದ ವಿದ್ಯಾರ್ಥಿ ಜೈಲು ಪಾಲು
ಸಾಂದರ್ಭಿಕ ಚಿತ್ರ
  • News18
  • Last Updated: March 13, 2019, 7:14 PM IST
  • Share this:
ಮಹಿಳೆಯೊಂದಿಗೆ ಕ್ರೂರ ಲೈಂಗಿಕ ಕ್ರಿಯೆ ನಡೆಸಿದ ವಿದ್ಯಾರ್ಥಿಗೆ 11 ವರ್ಷ ಜೈಲು ಶಿಕ್ಷೆ ವಿಧಿಸಿದ ಘಟನೆ ಲಂಡನ್​ನಲ್ಲಿ ನಡೆದಿದೆ. ಕೋರ್ಟಿನ ಈ ತೀರ್ಪು ಹೊರ ಬರುತ್ತಿದ್ದಂತೆ ವಿದ್ಯಾರ್ಥಿ ಅಜೀಜ್ ಖಾನ್ ಅನ್ನು ಸ್ಟಫೋರ್ಡ್​ಶೈರ್ ಯುನಿರ್ವಸಿಟಿಯಿಂದ ಅಮಾನತು ಮಾಡಲಾಗಿದೆ.

22 ವರ್ಷದ ಅಜೀಜ್ ಖಾನ್ ಕೆಲ ದಿನಗಳ ಹಿಂದೆ ಮಹಿಳೆಯೊಂದಿಗೆ ಕ್ರೂರವಾಗಿ ಲೈಂಗಿಕ ಕ್ರಿಯೆ ನಡೆಸಿದ್ದನು. ಅಲ್ಲದೆ ಈ ವಿಡಿಯೋವನ್ನು ಸ್ನಾಪ್​ಚಾಟ್​ನಲ್ಲಿ ಶೇರ್ ಮಾಡಿದ್ದ. ಇತರೆ ವಿದ್ಯಾರ್ಥಿಗಳ ಮುಂದೆ ಏನೋ ಸಾಧಿಸಿದ್ದೇನೆ ಎಂದು ತೋರಿಸಲು ಅಪ್​ಲೋಡ್​ ಮಾಡಿದ ವಿಡಿಯೋ ಬಗ್ಗೆ ದೂರುಗಳು ದಾಖಲಾಗಿದ್ದವು. ಈ ಬಗ್ಗೆ ಪ್ರಕರಣ ದಾಖಲಿಸಿದ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. ಅದರಂತೆ ವಿದ್ಯಾರ್ಥಿಯ ದುರ್ನಡತೆ ಮತ್ತು ಅಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿ  11 ವರ್ಷಗಳ ಜೈಲು ಶಿಕ್ಷೆ ನೀಡಿದೆ.

ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದ ಮಹಿಳೆಯು ಅಜೀಜ್ ಖಾನ್​ ಮತ್ತು ಫ್ರೆಂಡ್ಸ್​ರೊಂದಿಗೆ ಸಮಯ ಕಳೆದಿದ್ದರು. ಅಲ್ಲದೆ ತನ್ನ ಬ್ಯಾಗ್​ ಮತ್ತು ಫೋನ್​ಗಳನ್ನು ಸುರಕ್ಷಿತವಾಗಿಡುವಂತೆ ಅಜೀಜ್ ಬಳಿ ನೀಡಿದ್ದರು. ನೈಟ್​ ಔಟ್  ಮುಗಿಸಿ ಮನೆಗೆ ತೆರಳಿದ ಆರೋಪಿ ಕೈಯಿಂದ ತನ್ನ ವಸ್ತುಗಳನ್ನು ಪಡೆಯಲು ಹೋದಾಗ ಮಹಿಳೆಯೊಂದಿಗೆ ಹಿಂಸಾತ್ಮಾಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಹಿಂದೆ ಕೂಡ ವಿದ್ಯಾಲಯದಿಂದ ಕೆಟ್ಟ ನಡವಳಿಕೆಯಿಂದ ಅಜೀಜ್ ಖಾನ್ ಅಮಾನತುಗೊಂಡಿದ್ದರು. ಅಲ್ಲದೆ ಮೊದಲ ವರ್ಷದ ವಿಷಯಗಳಲ್ಲಿ ಉತೀರ್ಣರಾಗಲು ವಿಫಲರಾಗಿದ್ದರು ಎಂದು ಆಡಳಿತ ಮಂಡಳಿ ತಿಳಿಸಿದೆ.

 

ಅಜೀಜ್ ಖಾನ್, ಲೈಂಗಿಕತೆಯಲ್ಲಿ ಕ್ರೂರತೆಯನ್ನು ಬಯಸುತ್ತಿದ್ದನು. ಇದು ಕೂಡ ಒಂದು ಅರ್ಥದಲ್ಲಿ ಅತ್ಯಾಚಾರವಾಗಿದ್ದು, ಅಲ್ಲದೆ ಅದನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಇದು ಆರೋಪಿಯಲ್ಲಿರುವ ಅನಾಗರೀಕತೆ ಮತ್ತು ಅಶ್ಲೀಲತೆಯನ್ನು ವ್ಯಕ್ತಪಡಿಸುತ್ತದೆ ನ್ಯಾಯಾಲಯದಲ್ಲಿ ವಕೀಲರು ವಾದಿಸಿದ್ದರು.

ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯನ್ನು ಯಾರೆಂದು ಗುರುತಿಸಲಾಗಲಿಲ್ಲ. ಬದಲಾಗಿ ಆಕೆಯು ಅಜೀಜ್ ಖಾನ್​ನ ಲೈಂಗಿಕ ಕ್ರೂರತೆಯಿಂದ ನಲುಗಿದ್ದಳು. ಹೀಗಾಗಿ ನೆರೆಹೊರೆಯವರು ಸಹಾಯಕ್ಕೆ ಧಾವಿಸಿದ್ದರು ಎಂದು ಹೇಳಲಾಗಿದೆ. ಹಿಂಸಾತ್ಮಕ ಪವೃತ್ತಿಯನ್ನು ಪರಿಗಣಿಸಿ ಮತ್ತು ಅತ್ಯಾಚಾರದ ಮಾದರಿಯಲ್ಲಿ ಲೈಂಗಿಕತೆಯಲ್ಲಿ ತೊಡಗಿಕೊಂಡಿದ್ದರಿಂದ ಅಜೀಜ್​ಗೆ 11 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
First published:March 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ