Weight Loss Journey: ನನಗಿಂತ ನನ್ನ ದೇಹದ ತೂಕವೇ ಹೆಚ್ಚು ಫೇಮಸ್​ ಆಗಿದೆ ಎಂದಿದ್ದ Rani Mukerji

ಫ್ಯಾಷನ್ ವಿಷಯದಲ್ಲೂ ಅಷ್ಟಾಗಿ ಆಸಕ್ತಿ ತೋರದ ಈ ನಟಿ ದೇಹದ ತೂಕ ಇಳಿಸಿಕೊಳ್ಳುವ ಹಾಗೂ ಫಿಟ್ನೆಸ್​ ಕುರಿತಾಗಿ ಆಸಕ್ತಿಕರ ಹೇಳಿಕೆ ನೀಡಿದ್ದಾರೆ.

ಬಾಲಿವುಡ್​ ನಟಿ ರಾಣಿ ಮುಖರ್ಜಿ

ಬಾಲಿವುಡ್​ ನಟಿ ರಾಣಿ ಮುಖರ್ಜಿ

  • Share this:
ಬಾಲಿವುಡ್​ ನಟಿ ರಾಣಿ ಮುಖರ್ಜಿ (Rani mukerji ) ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಗ್ಲಾಮರಸ್​ ಪಾತ್ರಗಳ ಜತೆಗೆ ಅವರು ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲಿವುಡ್​ಗೆ ಕಾಲಿಟ್ಟ ಆರಂಭದ ದಿನಗಳು ರಾಣಿ ಅವರ ಕೈ ಹಿಡಿಯಲಿಲ್ಲವಾದರೂ ನಂತರದಲ್ಲಿ ರಾಣಿ ಅವರ ಅದೃಷ್ಟ ಖುಲಾಯಿಸಿತು. ಸಹಜವಾದ ನಟನೆ, ವಿಭಿನ್ನವಾದ ಧ್ವನಿ ಎಲ್ಲವೂ ರಾಣಿ ಮುಖರ್ಜಿಗೆ ಒಂದು ರೀತಿ ಪ್ಲಸ್​ ಪಾಯಿಂಟ್​ ಆಗಿತ್ತು. ಈ ನಟಿ 7 ಸಲ ಫಿಲ್ಮ್​ಫೇರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಅಮೀರ್​ ಖಾನ್​ ಜತೆ ಗುಲಾಮ್​ (Ghulam), ಶಾರುಖ್​ ಖಾನ್​ ಜತೆ ಕುಚ್ ಕುಚ್​ ಹೋತಾ ಹೈ (Kuch Kuch Hota Hai), ಕಭಿ ಕುಷಿ ಕಭಿ ಗಮ್​ ಸಿನಿಮಾಗಳ ಜೊತೆಗೆ ವಿಭಿನ್ನವಾದ ಜಾನರ್​ ಇರುವ ಚಿತ್ರಗಳಲ್ಲಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಿದ ದೂರ ಇರುವ ರಾಣಿ ಮುಖರ್ಜಿ ತಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾ ಸಿಂಪಲ್ಲಾಗಿರಲು ಬಯಸುತ್ತಾರಂತೆ.

ಮರ್ದಾನಿ ಸಿನಿಮಾ ಖ್ಯಾತಿಯ ನಟಿ ರಾಣಿ ಮುಖರ್ಜಿ ಹೆಚ್ಚಿರುವ ದೇಹದ ತೂಕದಿಂದಾಗಿ ಸಾಕಷ್ಟು ಸಲ ಟ್ರೋಲ್ ಆಗಿದ್ದಾರೆ. ಫ್ಯಾಷನ್ ವಿಷಯದಲ್ಲೂ ಅಷ್ಟಾಗಿ ಆಸಕ್ತಿ ತೋರದ ಈ ನಟಿ ದೇಹದ ತೂಕ ಇಳಿಸಿಕೊಳ್ಳುವ ಹಾಗೂ ಫಿಟ್ನೆಸ್​ ಕುರಿತಾಗಿ ಆಸಕ್ತಿಕರ ಹೇಳಿಕೆ ನೀಡಿದ್ದಾರೆ. ಹೌದು, ಕೆಲವೊಮ್ಮೆ ನನಗೆ ನನಗಿಂತ ನನ್ನ ದೇಹದ ತೂಕವೇ ಹೆಚ್ಚು ಫೇಮಸ್ ಆಗಿದೆ ಎಂದೆನಿಸುತ್ತದೆ ಎಂದಿದ್ದಾರೆ.

Rani Mukerji once shared about her Weight Loss Journey and said i feel my weight is more popular than my acting
ಬಾಲಿವುಡ್​ ನಟಿ ರಾಣಿ ಮುಖರ್ಜಿ


ರಾತ್ರಿ ವೇಳೆ ತುಂಬಾ ತಿನ್ನುತ್ತಿದ್ದರಂತೆ ರಾಣಿ ಮುಖರ್ಜಿ

ಸಿನಿಮಾಗೆ ಬರುವ ಮೊದಲು ರಾಣಿ ಮುಖರ್ಜಿ ರಾತ್ರಿವೇಳೆ ಸಿಕ್ಕಾಪಟ್ಟೆ ತಿನ್ನುತ್ತಿದ್ದರಂತೆ. 2003ರಲ್ಲಿ ರಾಣಿ ಮುಖರ್ಜಿ ನೀಡಿದ್ದ ಸಂದರ್ಶವೊಂದರಲ್ಲಿ ತಮ್ಮ ಆಹಾರ ಅಭ್ಯಾಸ ಹಾಗೂ ದೇಹದ ತೂಕದ ಬಗ್ಗೆ ಹೇಳಿಕೊಂಡಿದ್ದಾರೆ. ಫಿಟ್​ ಆಗಿರುವುದು ಪ್ರತಿಯೊಬ್ಬರಿಗೂ ಅತ್ಯಗತ್ಯ. 3-4 ವರ್ಷಗಳ ಹಿಂದೆ ನಾನು ದೇಹದ ತೂಕ ಇಳಿಸಿಕೊಂಡಿದ್ದೆ. ರಾತ್ರಿ ವೇಳೆ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಆಗಿನಿಂದ ದೇಹದ ತೂಕ ಕಡಿಮೆಯಾಯಿತು. ಆದರೂ ಕೆಲವೊಮ್ಮೆ ನನಗೆ ಅನಿಸುತ್ತದೆ, ನನ್ನ ನಟನೆಗಿಂತ ದೇಹದ ತೂಕವೇ ಹೆಚ್ಚು ಫೇಮಸ್ ಆಗಿದೆ ಅಂತ ತಮಾಷೆ ಮಾಡಿದ್ದರು.

ಇದನ್ನೂ ಓದಿ: ವಿಮರ್ಶೆ: 'ಹಿಚ್ಕಿ' ಸಿನಿಮಾ ಮೂಲಕ ಕಮ್​​ಬ್ಯಾಕ್ ಮಾಡಿದ ರಾಣಿ ಮುಖರ್ಜಿ

ಫ್ಯಾಷನ್​-ಮೇಕಪ್​ ಬಗ್ಗೆ ತಲೆ ಕಡೆಸಿಕೊಳ್ಳುವುದಿಲ್ಲವಂತೆ...

ನಾನು ತುಂಬಾ ಸೋಮಾರಿ. ಫ್ಯಾಷನ್​ ಹಾಗೂ ಮೇಕಪ್ ವಿಷಯಕ್ಕೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಏನು ತೊಡಬೇಕು, ಯಾವ ರೀತಿಯ ವಿನ್ಯಾಸಿತ ಬಟ್ಟೆಗಳ ಆಯ್ಕೆ ಮಾಡಿಕೊಳ್ಳಬೇಕೆಂದು ನನ್ನ ಮೇಕಪ್​ ಮ್ಯಾನ್​ ಹಾಗೂ ವಸ್ತ್ರ ವಿನ್ಯಾಸಕರು ನಿರ್ಧರಿಸುತ್ತಾರೆ. ನಾನು ಸೀರೆ, ಟಿ-ಶರ್ಟ್​ ಹಾಗೂ ಜೀನ್ಸ್​ನಲ್ಲಿ ಕೂಲ್​ ಆಗಿರುತ್ತೇನೆ. ನೀವು ತೆರೆ ಮೇಲೆ ಚೆನ್ನಾಗಿ ಕಾಣುತ್ತೀರಿ ಅಂತಾದರೆ, ನಿಮ್ಮ ಅರ್ಧ ಜೀವನ ಕಳೆದಂತೆ ನನಗೆ ಅನಿಸುತ್ತದೆ ಎನ್ನುತ್ತಾರೆ ರಾಣಿ.

ಮತ್ತೆ ಬೆಳ್ಳಿತೆರೆ ಮೇಲೆ ಮಿಂಚಲಿರು ರಾಣಿ

ರಾಣಿ ಮುಖರ್ಜಿ ಮಹಿಳಾ ಪ್ರಧಾನ ಹಾಗೂ ಸಮಾಜಿಕ ಕಳಕಳಿ ಜಾನರ್​ ಇರುವ ಸಿನಿಮಾ ಮರ್ದಾನಿ 2 ಹಾಗೂ ಹಿಚ್ಕಿ ಚಿತ್ರಗಳಲ್ಲಿ ತಮ್ಮ ಉತ್ತಮ ಅಭಿನಯದ ಮೂಲಕ ಸಿನಿಪ್ರಿಯರ ಮೆಚ್ಚುಗೆಗೆ  ಪಾತ್ರವಾಗಿದ್ದರು. 'ಮಿಸಸ್​​ ಚಾಟರ್ಜಿ ವರ್ಸಸ್​ ನಾರ್ವೆ' ಸಿನಿಮಾದಲ್ಲಿ ರಾಣಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾವನ್ನು ಅಶಿಮಾ ಛಿಬ್ಬರ್​ ನಿರ್ದೇಶನ ಮಾಡುತ್ತಿದ್ದಾರೆ. ಮಗುವಿನ ತಾಯಿಯಾಗಿ ಹೋರಾಟ ನಡೆಸುವ ಅಮ್ಮನ ಪಾತ್ರದಲ್ಲಿ ರಾಣಿ ನಟಿಸಲಿದ್ದಾರೆ.

ಇದನ್ನೂ ಓದಿ: Happy Birthday Rani Mukerji: 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್​ ರಾಣಿ..!

ಬಾಲಿವುಡ್​ನ ಏಕೈಕ ರಾಣಿಗೆ ಈಗ 43 ವರ್ಷ. ಗಡುಸು ದನಿಯ ನಟಿ ರಾಣಿ ಮದುವೆಯಾಗಿ ಒಂದು ಮಗುವಿನ ತಾಯಿಯಾದ ನಂತರವೂ ನಾಯಕಿಯಾಗಿ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಸಣ್ಣ-ಪುಟ್ಟ ಪಾತ್ರದ ಮೂಲಕವೇ ಬಾಲಿವುಡ್​ನಲ್ಲಿ ಗುರುತಿಸಿಕೊಂಡು ತಮ್ಮ ಅಭಿನಯದಿಂದಲೇ ಒಂದು ಸ್ಥಾನವನ್ನು ಗಳಿಸಿಕೊಂಡ ನಟಿ ರಾಣಿ ಇನ್ನೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದಾರೆ.
Published by:Anitha E
First published: