Ramzan Recipe: ಇಫ್ತಾರ್​​ಗಾಗಿ ಮಾಡಿ ರುಚಿಯಾದ, ಆರೋಗ್ಯಕರ ಸೂಜಿ ಚಿಕನ್ ಸೂಪ್

ಸೂಜಿ ಚಿಕನ್ ಸೂಪ್

ಸೂಜಿ ಚಿಕನ್ ಸೂಪ್

Suji Chicken Soup: ಇಡೀ ದಿನ ಉಪವಾಸವಿದ್ದು, ಸಂಜೆ ಇಫ್ತಾರ್​ಗೆ (Iftar) ಒಳ್ಳೆಯ ಊಟ (Meal) ಇರಬೇಕು ಅನ್ನೋದು ಎಲ್ಲರ ಆಸೆ ಆಗಿರುತ್ತದೆ. ಹಾಗಾಗಿ  ಇಂದು ನಾವು ನಿಮಗೆ ಅತ್ಯಂತ ರುಚಿಯಾದ ಮತ್ತು ಆರೋಗ್ಯಕರ ಸೂಪ್ (Healthy Soup) ಮಾಡುವ ವಿಧಾನ ಹೇಳುತ್ತಿದ್ದೇವೆ. ಅದುವೇ ಸೂಜಿ ಚಿಕನ್ ಸೂಪ್.

ಮುಂದೆ ಓದಿ ...
  • Share this:

Suji Chicken Soup: ರಂಜಾನ್ ಮಾಸ (Ramzan Recipe) ಆರಂಭವಾಗಿದ್ದು, ಮುಸ್ಲಿಂ ಬಾಂಧವರು (Muslim) ಉಪವಾಸದಲ್ಲಿ (Fasting) ತೊಡಗಿಕೊಂಡಿದ್ದಾರೆ. ರಂಜಾನ್ ಎಂದ ಕೂಡಲೇ ಬಗೆ ಬಗೆಯ ತಿನಿಸುಗಳು ಕಣ್ಮುಂದೆ ಬರುತ್ತವೆ. ಸಂಜೆ ಆಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಮಾಂಸಖಾದ್ಯಗಳು (Food) ಆಹಾರ ಪ್ರಿಯರನ್ನು ಸೆಳೆಯುತ್ತವೆ. ಅದರಲ್ಲಿ ಉಪವಾಸ ವ್ರತ ಆಚರಣೆಯಲ್ಲಿ ಅತ್ಯಂತ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಅಗತ್ಯವಾಗಿದೆ. ಹಣ್ಣು (Fruits), ಜ್ಯೂಸ್ (Juice), ತರಕಾರಿ (Vegetables) ಸೇವನೆಯ ಜೊತೆಗೆ ಮಾಂಸಾಹಾರಕ್ಕೂ (Non-Veg) ಆದ್ಯತೆ ನೀಡಲಾಗುತ್ತದೆ. ಇಡೀ ದಿನ ಉಪವಾಸವಿದ್ದು, ಸಂಜೆ ಇಫ್ತಾರ್​ಗೆ (Iftar) ಒಳ್ಳೆಯ ಊಟ (Meal) ಇರಬೇಕು ಅನ್ನೋದು ಎಲ್ಲರ ಆಸೆ ಆಗಿರುತ್ತದೆ. ಹಾಗಾಗಿ  ಇಂದು ನಾವು ನಿಮಗೆ ಅತ್ಯಂತ ರುಚಿಯಾದ ಮತ್ತು ಆರೋಗ್ಯಕರ ಸೂಪ್ (Healthy Soup) ಮಾಡುವ ವಿಧಾನ ಹೇಳುತ್ತಿದ್ದೇವೆ. ಅದುವೇ ಸೂಜಿ ಚಿಕನ್ ಸೂಪ್.


ಸೂಜಿ ಚಿಕನ್ ಸೂಪ್ ಮಾಡಲು ಬೇಕಾಗುವ  ಸಾಮಾಗ್ರಿಗಳು


ದಪ್ಪ ರವೆ: ಮೂರು ಟೀ ಸ್ಪೂನ್


ಚಿಕನ್: 50 ಗ್ರಾಂ


ಬೆಳ್ಳುಳ್ಳಿ-ಶುಂಠಿ ಪೇಸ್ಟ್: ಅರ್ಧ ಟೀ ಸ್ಪೂನ್


ಟೊಮಾಟೋ: ಒಂದು (ಚಿಕ್ಕದು)


ಪೆಪ್ಪರ್ ಪೌಡರ್: ಅರ್ಧ ಟೀ ಸ್ಪೂನ್


ಜೀರಿಗೆ: ಅರ್ಧ ಟೀ ಸ್ಪೂನ್


ಅರಿಶಿನ: ಚಿಟಿಕೆ


ಕೋತಂಬರಿ ಸೊಪ್ಪು


ಉಪ್ಪು: ರುಚಿಗೆ ತಕ್ಕಷ್ಟು


ಎಣ್ಣೆ: ಎರಡು ಟೀ ಸ್ಪೂನ್


ಸೂಜಿ ಚಿಕನ್ ಸೂಪ್ ಮಾಡುವ ವಿಧಾನ


*ಮೊದಲಿಗೆ ಮಾರುಕಟ್ಟೆಯಿಂದ ತಂದಿರುವ ಚಿಕನ್​ನ್ನು ಸ್ವಚ್ಛವಾಗಿ ಬಿಸಿನೀರಿನಲ್ಲಿ ತೊಳೆದುಕೊಳ್ಳಿ. ನಂತರ ಕುಕ್ಕರ್​​ಗೆ ಹಾಕಿ ಸಮ ಪ್ರಮಾಣದಲ್ಲಿ ನೀರು ಸೇರಿಸಿ ಒಂದು ವಿಷಲ್ ಬರೋವರೆಗೂ ಬೇಯಿಸಿಕೊಳ್ಳಿ.


*ತದನಂತರ ಒಲೆ ಮೇಲೆ ಪಾತ್ರೆ ಇರಿಸಿ ಕಡಿಮೆ ಉರಿಯಲ್ಲಿ ರವೆಯನ್ನು ಹುರಿದುಕೊಳ್ಳಬೇಕು. ರವೆ ಪರಿಮಳ ಬರೋವರೆಗೂ ರವೆ ಫ್ರೈ ಮಾಡಿಕೊಳ್ಳಬೇಕು.


*ಈಗ ಟೊಮ್ಯಾಟೋ ಮತ್ತು ಕೋತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ.


ಇದನ್ನೂ ಓದಿ: Health Tips: ಹಸಿರು ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಇವೆರಡರಲ್ಲಿ ಆರೋಗ್ಯಕ್ಕೆ ಹಾನಿಕಾರಕ ಯಾವುದು?


*ತದನಂತರ ಕುಕ್ಕರ್​ನಿಂದ ಚಿಕನ್ ತೆಗೆದು ಒಂದು ಬೌಲ್​ಗೆ ಹಾಕಿಕೊಳ್ಳಿ. ನಂತರ ಚಿಕನ್ ತರಿತರಿಯಾಗಿ ಬಿಡಿಸಿಕೊಳ್ಳಿ.


*ಒಂದು ಅಗಲವಾದ ಪಾತ್ರೆಯಲ್ಲಿ ಸ್ಟೌವ್ ಮೇಲಿರಿಸಿಕೊಂಡು ಒಲೆ ಆನ್ ಮಾಡಿಕೊಳ್ಳಿ. ಪಾತ್ರೆ ಬಿಸಿಯಾಗ್ತಿದ್ದಂತೆ ಎಣ್ಣೆ ಹಾಕಿ. ಈಗ ಪಾತ್ರೆಗೆ ಜೀರಿಗೆ ಹಾಕಿ. ಜೀರಿಗೆ ಫ್ರೈ ಆಗ್ತಿದ್ದಂತೆ ಟೊಮ್ಯಾಟೋ ಸೇರಿಸಿ ಚೆನ್ನಾಗಿ ಬಾಡಿಸಿಕೊಳ್ಳಿ.


*ತದನಂತರ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್​ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೆ ಚಿಟಿಕೆ ಅರಿಶಿನ ಮತ್ತು ಪೆಪ್ಪರ್ ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.




*ಮಸಾಲೆ ಎಲ್ಲಾ ಬೇಯುತ್ತಿದ್ದಂತೆ ತರಿತರಿಯಾಗಿ ಬಿಡಿಸಿಕೊಂಡಿರುವ ಚಿಕನ್ ಮತ್ತು ಹುರಿದಿರುವ ರವೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ.


*ತದನಂತರ ಈಗ ಎರಡರಿಂದ ಮೂರು ಗ್ಲಾಸ್ ನೀರು ಹಾಕಿ ಮುಚ್ಚಳ ಮುಚ್ಚಿ 5 ರಿಂದ 7 ನಿಮಿಷ ಬೇಯಿಸಿಕೊಳ್ಳಿ. ನಂತರ ಮುಚ್ಚಳ ತೆಗೆದು ಸಣ್ಣದಾಗಿ ಕತ್ತರಿಸಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿದ್ರೆ ರುಚಿಕರ ಮತ್ತು ಆರೋಗ್ಯಕರ ಸೂಜಿ ಚಿಕನ್ ಸೂಪ್ ಸವಿಯಲು ಸಿದ್ಧ.


ಇದನ್ನೂ ಓದಿ: Cooked Chicken: ಬೇಯಿಸಿದ ಚಿಕನ್ ಫ್ರಿಜ್​ನಲ್ಲಿಟ್ಟು ಮಾರನೇ ದಿನ ತಿಂತೀರಾ? ಅಯ್ಯೋ, ಈ ವಿಚಾರ ಮೊದ್ಲು ತಿಳಿದುಕೊಳ್ಳಿ


(ನಿಮಗೆ ಸೂಪ್ ಗಾಢವಾಗಬೇಕಿದ್ರೆ ರವೆ ಅಥವಾ ಚಿಕನ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕಾರ್ನ್​ ಫ್ಲೋರ್ ಸೇರಿಸಿಕೊಳ್ಳಬಹುದು)

top videos


    ಇನ್ನು ಸೂಜಿ ಚಿಕನ್ ಸೂಪ್ ಸೇವಿಸುವಾಗ ನಿಂಬೆ ಹಣ್ಣಿನ ರಸ ಸೇರಿಸಿಕೊಳ್ಳುತ್ತಾರೆ. ನೀವು ಪೆಪ್ಪರ್ ಪೌಡರ್ ಬದಲಾಗಿ ಅಚ್ಚ ಖಾರದ ಪುಡಿ ಅಥವಾ ಹಸಿಮೆಣಸಿನಕಾಯಿ ಸಹ ಸೇರಿಸಿಕೊಳ್ಳಬಹುದು. ಸದ್ಯ ಬೇಸಿಗೆ ಆಗಿರೋದರಿಂದ ಪೆಪ್ಪರ್ ಪೌಡರ್ ಹಾಕೋದು ಆರೋಗ್ಯಕ್ಕೆ ಉತ್ತಮ.

    First published: