Ramanavamiಗೆ ಈ ಪಾನಕಗಳನ್ನು ಮಾಡಿ ಸವಿಯಿರಿ - ದೇಹಕ್ಕೂ ತಂಪು, ಆರೋಗ್ಯಕ್ಕೂ ಹಿತ

Panaka recipe: ಈ ದಿನ ಹಲವಾರು ರೀತಿಯ ಪಾನಕಗಳನ್ನು ಮಾಡಲಾಗುತ್ತದೆ. ಅದರಲ್ಲಿ ಕರಬೂಜ, ಬೇಲದ ಹಣ್ಣು, ನಿಂಬೆಹಣ್ಣು, ಕಲ್ಲಂಗಡಿ ಹಣ್ಣು ಹಾಕಿ ಪಾನಕ ಮಾಡುತ್ತಾರೆ. ಈ ವಿಶೇಷ ದಿನದಂದು ಈ ಹಣ್ಣುಗಳಿಂದ ಹೇಗೆ ಪಾನಕ ಮಾಡುವುದು ಎನ್ನುವುದು ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯುಗಾದಿ (Ugadi) ಸಂಭ್ರಮದ ನಂತರ ರಾಮನವಮಿ (Ramanavami) ಪಾನಕ ಮತ್ತು ಕೋಸಂಬರಿಯ ಸ್ವಾದ ಘಮ್ಮೆನ್ನುವುದಕ್ಕೆ ಸಿದ್ಧವಾಗಿದೆ. ಎಲ್ಲೆಡೆ ಈಗಾಗಲೇ ಬೇಲದ ಹಣ್ಣು, ಕರ್ಬೂಜದ ಹಣ್ಣಿನ ಪಾನಕಕ್ಕೆ ಬೇಕಾದ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಚೈತ್ರ ನವರಾತ್ರಿಯ ಒಂಬತ್ತನೇ ದಿನವೇ ರಾಮ ನವಮಿಈ ದಿನ ಪಾನಕ ಮತ್ತು ಕೋಸಂಬರಿಗೆ ಬೇಡಿಕೆ ಹೆಚ್ಚು. ಈ ದಿನ ಹಲವಾರು ರೀತಿಯ ಪಾನಕಗಳನ್ನು ಮಾಡಲಾಗುತ್ತದೆ. ಅದರಲ್ಲಿ ಕರಬೂಜ, ಬೇಲದ ಹಣ್ಣು, ನಿಂಬೆಹಣ್ಣು, ಕಲ್ಲಂಗಡಿ ಹಣ್ಣು ಹಾಕಿ ಪಾನಕ ಮಾಡುತ್ತಾರೆ. ಈ ವಿಶೇಷ ದಿನದಂದು ಈ ಹಣ್ಣುಗಳಿಂದ ಹೇಗೆ ಪಾನಕ ಮಾಡುವುದು ಎನ್ನುವುದು ಇಲ್ಲಿದೆ.  

ಬೇಲದ ಹಣ್ಣಿನ ಪಾನಕ

ಬೇಕಾಗುವ ಸಾಮಾಗ್ರಿಗಳು

4 ಕಪ್ ನೀರು

1 ಬೇಲದ ಹಣ್ಣು

4 ಟೀ ಚಮಚ ಪುಡಿ ಮಾಡಿದ ಬೆಲ್ಲ

1/4 ಟೀಸ್ಪೂನ್ ಮೆಣಸು ಪುಡಿ

1/4 ಟೀಸ್ಪೂನ್ ಏಲಕ್ಕಿ ಪುಡಿ

ಮಾಡುವ ವಿಧಾನ

ಮೊದಲು ಒಂದು ಬೇಲದ ಹಣ್ಣು ತೆಗೆದುಕೊಂಡು ಅದನ್ನು ತೆಂಗಿನಕಾಯಿ ಒಡೆಯುವ ರೀತಿ ಒಡೆದ, ಅದರ ಒಳಗಿನ ತಿರುಳನ್ನು ತೆಗೆದು ಇಟ್ಟುಕೊಳ್ಳಿ. ಈಗ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ಹಿಂಡಿ. ಅದನ್ನು ಸೋಸಿಕೊಳ್ಳಿ. ಈಗ ಅದಕ್ಕೆ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲವನ್ನು ಮಿಶ್ರಣ ಮಾಡಿದ ನಂತರ ಅದಕ್ಕೆ ಪುಡಿ ಮಾಡಿದ ಮೆಣಸು ಮತ್ತು ಏಲಕ್ಕಿಯನ್ನು ಸೇರಿಸಿದರೆ, ರುಚಿ ರುಚಿಯಾದ ಬೇಲದ ಪಾನಕ ರೆಡಿ.

ಬೆಲ್ಲದ ಪಾನಕ

ಬೇಕಾಗುವ ಸಾಮಾಗ್ರಿಗಳು

ಬೆಲ್ಲ- 2 ಬಟ್ಟಲು

ಏಲಕ್ಕಿ-3-4

ಕಾಳು ಮೆಣಸು-5-6

ಸಕ್ಕರೆ- ಒಂದು ಚಮಚ

ಉಪ್ಪು- ಚಿಟಿಕೆಯಷ್ಟು

ಜೀರಿಗೆ ಪುಡಿ- ಅರ್ಧ ಚಮಚ

ನಿಂಬೆಹಣ್ಣು- ಒಂದು

ಮಾಡುವ ವಿಧಾನ.
ನೀರಿನಲ್ಲಿ ಬೆಲ್ಲವನ್ನು ಹಾಕಿ ಕರಗಲು ಬಿಡಿ. ನಂತರ ಏಲಕ್ಕಿ, ಕಾಳು ಮೆಣಸು, ಸಕ್ಕರೆ ಹಾಕಿ ಚೆನ್ನಾಗಿ ಪುಡಿ ಮಾಡಿ, ಈ ಪುಡಿಯನ್ನು ಬೆಲ್ಲದ ನೀರಿಗೆ ಹಾಕಿ ಮಿಶ್ರಣ ಮಾಡಿ. ನಂತರ ಉಪ್ಪು, ಜೀರಿಗೆ ಪುಡಿ ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಿದರೆ ಬೆಲ್ಲದ ಪಾನಕ ಸವಿಯಲು ಸಿದ್ಧ.

ಕರ್ಬೂಜ ಪಾನಕ

ಬೇಕಾಗುವ ಸಾಮಾಗ್ರಿಗಳು

ಕರ್ಬೂಜ: ಅರ್ಧ

ಬೆಲ್ಲ- 2 ಬಟ್ಟಲು

ಏಲಕ್ಕಿ-3-4

ಕಾಳು ಮೆಣಸು-5-6

ಸಕ್ಕರೆ- ಒಂದು ಚಮಚ

ಉಪ್ಪು- ಚಿಟಿಕೆಯಷ್ಟು

ಜೀರಿಗೆ ಪುಡಿ- ಅರ್ಧ ಚಮಚ

ಇದನ್ನೂ ಓದಿ: ರಾಮನವಮಿಯಂದು ತಪ್ಪದೇ ಈ ಕಾರ್ಯ ಮಾಡಿ; ಯಶಸ್ಸು ನಿಮ್ಮದಾಗುತ್ತದೆ

ಮಾಡುವ ವಿಧಾನ

ಕರ್ಬೂಜ ಹಣ್ಣನ್ನು ತೆಗೆದುಕೊಡು ಸಿಪ್ಪೆ ತೆಗೆದು ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯನ್ನು ತೆಗೆದುಕೊಳ್ಳಿ, ಅದಕ್ಕೆ ನೀರು ಹಾಕಿ, ಬೆಲ್ಲವನ್ನು ಹಾಕಿ ಕರಗಿಸಿ. ಬೆಲ್ಲ ಕರಗಿದ ನಂತರ ಏಲಕ್ಕಿ, ಕಾಳು ಮೆಣಸು, ಸಕ್ಕರೆ ಹಾಕಿ ಚೆನ್ನಾಗಿ ಪುಡಿ ಮಾಡಿ, ಈ ಪುಡಿಯನ್ನು ನೀರಿಗೆ ಹಾಕಿ ಮಿಶ್ರಣ ಮಾಡಿ. ಈಗ ಅದಕ್ಕೆ ಕರ್ಬೂಜ ಹಣ್ಣಿನ ಪೇಸ್ಟ್​ ಹಾಕಿ ಮಿಶ್ರಣ ಮಾಡಿದರೆ, ರುಚಿಯಾದ ಕರ್ಬೂಜ ಪಾನಕ ರೆಡಿ.

ಮಜ್ಜಿಗೆ
ಬೇಕಾಗುವ ಪದಾರ್ಥಗಳು

ಮಜ್ಜಿಗೆ- ಕಾಲು ಲೀಟರ್

ಹಸಿಮೆಣಸಿನ ಕಾಯಿ- 2-3

ಶುಂಠಿ-ಸ್ವಲ್ಪ

ಕರಿಬೇವು-ಸ್ವಲ್ಪ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಇಂಗು- ಚಿಟಿಕೆಯಷ್ಟು

ಮಾಡುವ ವಿಧಾನ

ಮಜ್ಜಿಗೆಗೆ ಅಗತ್ಯವಿದ್ದಷ್ಟು ನೀರು ಹಾಕಿ ಮಿಶ್ರಣ ಮಾಡಿ. ನಂತರ ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು ಹಾಗೂ ಇಂಗು ಹಾಕಿ ನುಣ್ಣಗೆ ಮಾಡಿಕೊಳ್ಳಿ. ನಂತರ ಮಿಶ್ರಣವನ್ನು ಮಜ್ಜಿಗೆಗೆ ಹಾಕಿ ಮಿಶ್ರಣ ಮಾಡಿ, ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ನಂತರ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿದರೆ ನೀರು ಮಜ್ಜಿಗೆ ರೆಡಿ.

ನಿಂಬೆ ಪಾನಕ

ಬೇಕಾಗುವ ಸಾಮಾಗ್ರಿಗಳು

ಏಲಕ್ಕಿ-3-4

ಕಾಳು ಮೆಣಸು-5-6

ಸಕ್ಕರೆ- ಒಂದು ಚಮಚ

ಉಪ್ಪು- ಚಿಟಿಕೆಯಷ್ಟು

ನಿಂಬೆಹಣ್ಣು- ಒಂದು

ಇದನ್ನೂ ಓದಿ: ಹತ್ತು ವರ್ಷಗಳ ನಂತರ ರಾಮನವಮಿಯಂದು ಬಂದಿದೆ ರವಿ ಪುಷ್ಯ ಯೋಗ; ತರಲಿದೆ ಶುಭ-ಭಾಗ್ಯ

ಮಾಡುವ ವಿಧಾನ

ಒಂದು ಫಾತ್ರೆಗೆ ನೀರು ಹಾಕಿ, ಅದಕ್ಕೆ ಸಕ್ಕರೆ ಹಾಕಿ ಕರಗಿಸಿ. ನಂತರ ನಂತರ ಏಲಕ್ಕಿ, ಕಾಳು ಮೆಣಸು,ಪುಡಿ ಮಾಡಿ, ಈ ಪುಡಿಯನ್ನು ನೀರಿಗೆ ಹಾಕಿ ಮಿಶ್ರಣ ಮಾಡಿ. ನಂತರ ಉಪ್ಪು, ನಿಂಬೆಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಿದರೆ ನಿಂಬೆ ಪಾನಕ ರೆಡಿ.

ರಾಮನವಮಿಯಂದು ಪಾನಕ ಮಾಡುವುದೇಕೆ? 

ಶ್ರೀರಾಮನು ಜನಿಸಿದ ದಿನವೆಂದು ಆಚರಿಸಲಾಗುವ ಹಬ್ಬ ರಾಮನವಮಿ. ರಾಮನ್ನ ಮಹಾವಿಷ್ಣುವಿನ ಏಳನೇ ಅವತಾರ ಎನ್ನಲಾಗುತ್ತದೆ. ಅನೇಕ ಕಡೆಗಳಲ್ಲಿ ಚೈತ್ರ ಮಾಸದ ಪ್ರತಿಪಾದದಿಂದ ಒಂಭತ್ತು ದಿನಗಳವರೆಗೆ ರಾಮನವಮಿ ಉತ್ಸವವು ನಡೆಯುತ್ತದೆ. ಈ ದಿನ ರಾಮನನ್ನ ಪೂಜಿಸಿದರೆ ಕಷ್ಟ ಕಾರ್ಪಣ್ಯಗಳು ಮಾಯವಾಗುತ್ತದೆ. ಶ್ರೀರಾಮನವಮಿ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹಬ್ಬ.  ಪುರಾಣಗಳ ಪ್ರಕಾರ ಈ ದಿನದಂದು ರಾಮನಿಗೆ ಬೆಲ್ಲದ ಪಾನಕ ಹಾಗೂ ಹೆಸರು ಬೇಳೆ ನೈವೇದ್ಯ ನೀಡಿದರೆ ಆತ ಸಂತೃಪ್ತನಾಗುತ್ತಾನೆ. ಹಾಗಾಗಿ ಭಕ್ತಾದಿಗಳು ವಿಶೇಷವಾಗಿ ಪಾನಕ ಮತ್ತು ಕೋಸಂಬರಿ ನೈವೇದ್ಯ ಮಾಡಲಾಗುತ್ತದೆ.  ಇನ್ನು ಬೇಸಿಗೆಯ ಚೈತ್ರಮಾಸ ಅತ್ಯಂತ ಉಷ್ಣಾಂಶದಿಂದ ಕೂಡಿರುತ್ತದೆ. ಹಾಗಾಗಿ ಈ ವೇಳೆ ತಣ್ಣನೆಯ ಬೆಲ್ಲದ ಪಾನಕ ಸೇವನೆ ಮಾಡುವುದರಿಂದ ಆರೋಗ್ಯ ಹಾಗೂ ಆಯಸ್ಸ ಅಭಿವೃದ್ದಿ ಆಗುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
Published by:Sandhya M
First published: