Upasana Konidela: ದುಬಾರಿ ಬೆಲೆಯ ವಸ್ತುಗಳೆಂದರೆ ರಾಮ್​ ಚರಣ್​ ಮಡದಿಗೆ ತುಂಬಾ ಇಷ್ಟವಂತೆ..!

ನಟ ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೇಲ ನಟನಾ ಪ್ರಪಂಚಕ್ಕೆ ಸೇರಿದವರಲ್ಲದಿದ್ದರೂ ಸಹ ತಮ್ಮ ಸ್ವಂತ ಉದ್ಯಮದಿಂದ ಅಷ್ಟೇ ಜನಪ್ರಿಯರಾಗಿದ್ದಾರೆ. ಇವರಿಗಿರುವ ದುಬಾರಿ ಬೆಲೆಯ ವಸ್ತುಗಳ ಖರೀದಿಯ ಅಭಿರುಚಿ ಕೆಲವು ಚಿತ್ರ ನಟಿಯರನ್ನು ಸಹ ಮೀರಿಸುವಂತದ್ದು ಎಂದರೆ ಅತಿಶಯೋಕ್ತಿಯಲ್ಲ.

ಮಾವ ಚಿರಂಜೀವಿ ಜೊತೆ ಉಪಾಸನಾ ಹಾಗೂ ರಾಮ್​ ಚರಣ್​

ಮಾವ ಚಿರಂಜೀವಿ ಜೊತೆ ಉಪಾಸನಾ ಹಾಗೂ ರಾಮ್​ ಚರಣ್​

  • Share this:
ಯಾವುದೇ ಚಿತ್ರರಂಗದ ನಟ ನಟಿಯರು ದುಬಾರಿ ವೆಚ್ಚದ ಬ್ರ್ಯಾಂಡ್ ಬಟ್ಟೆಯನ್ನು ಸ್ಟೈಲಿಶ್ ಆಗಿ ಕಾಣಲು ಧರಿಸಿರುವುದನ್ನು ಅಥವಾ ದುಬಾರಿ ವೆಚ್ಚದ ಕಾರಿನಲ್ಲಿ ಓಡಾಡುವುದನ್ನು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಟಾಲಿವುಡ್ ನಟನ ಮಡದಿ ದುಬಾರಿ ಬೆಲೆಯ ವಸ್ತುಗಳ ಮೇಲೆ ತುಂಬಾ ಪ್ರೀತಿ ಇದೆ ಅಂತೆ. ಆ ನಟ ಯಾರಿರಬಹುದು ಮತ್ತು ಅವರ ಅರ್ಧಾಂಗಿ ಯಾರು ಎಂಬ ಕುತೂಹಲ ನಿಮ್ಮಲ್ಲಿ ಈಗಾಗಲೇ ಮೂಡಿರಬೇಕಲ್ಲವೇ..? ಈ ನಟ ತೆಲುಗು ಚಿತ್ರೋದ್ಯಮದ ದಿಗ್ಗಜ ನಟ ಮತ್ತು ಮೆಗಾಸ್ಟಾರ್ ಎಂದು ಪ್ರಖ್ಯಾತಿಯಾದ ಚಿರಂಜೀವಿ  (Chiranjeevi) ಮಗ ನಟ ರಾಮ್ ಚರಣ್ (RAm Charan). ಹೌದು ರಾಮ್ ಚರಣ್ ಅರ್ಧಾಂಗಿ ಉಪಾಸನಾ ಕೋನಿಡೇಲ (Upasana Konidela) ಬಗ್ಗೆ ಇಲ್ಲಿ ನಾವು ಮಾತಾಡುತ್ತಿದ್ದೇವೆ.

ನಮಗೆಲ್ಲರಿಗೂ ತಿಳಿದಿರುವಂತೆ ಈ ಸ್ಟಾರ್ ನಟರು ಯಾವಾಗಲೂ ತಮ್ಮ ದುಬಾರಿ ವಸ್ತುಗಳ ಅಭಿರುಚಿಗಾಗಿ ಗಮನ ಸೆಳೆಯುತ್ತಾರೆ. ದುಬಾರಿ ಹೋಟೆಲ್‌ಗಳಿಗೆ ಭೇಟಿ ನೀಡಲು, ಐಷಾರಾಮಿ ಕಾರುಗಳನ್ನು ಖರೀದಿಸಲು ಹೀಗೆ ಎಲ್ಲವೂ ದುಬಾರಿ ಬೆಲೆಯುಳ್ಳ ಅಭಿರುಚಿಯನ್ನು ಮೈಗೂಡಿಸಿಕೊಂಡಿರುತ್ತಾರೆ ಎಂದರೆ ತಪ್ಪಾಗುವುದಿಲ್ಲ.
ಈ ದುಬಾರಿ ಬೆಲೆಯ ವಸ್ತುಗಳ ಅಭಿರುಚಿ ಈ ನಟರಂತೆ ಅವರ ಅರ್ಧಾಂಗಿಯರಿಗೂ ಕೆಲವೊಮ್ಮೆ ಇರುವುದುಂಟು. ನಟ ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೇಲ ನಟನಾ ಪ್ರಪಂಚಕ್ಕೆ ಸೇರಿದವರಲ್ಲದಿದ್ದರೂ ಸಹ ತಮ್ಮ ಸ್ವಂತ ಉದ್ಯಮದಿಂದ ಅಷ್ಟೇ ಜನಪ್ರಿಯರಾಗಿದ್ದಾರೆ. ಇವರಿಗಿರುವ ದುಬಾರಿ ಬೆಲೆಯ ವಸ್ತುಗಳ ಖರೀದಿಯ ಅಭಿರುಚಿ ಕೆಲವು ಚಿತ್ರ ನಟಿಯರನ್ನು ಸಹ ಮೀರಿಸುವಂತದ್ದು ಎಂದರೆ ಅತಿಶಯೋಕ್ತಿಯಲ್ಲ.

ಇದನ್ನೂ ಓದಿ: Upasana Konidela: ಟ್ರೆಂಡಿ​ ಲುಕ್​ನಲ್ಲಿ ಮೆಗಾಸ್ಟಾರ್​ ಸೊಸೆ ಉಪಾಸನಾ ಕೋಣಿದೇಲ..!

ಉಪಾಸನಾ ಕೋನಿಡೇಲ ಉದ್ಯಮಿಯಾಗಿದ್ದು ತಮ್ಮದೇ ಆದ ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಜತೆಗೆ ಕೆಲವು ದುಬಾರಿ ಬೆಲೆಯ ಹಾಗೂ  ವಿನ್ಯಾಸಿತ ವಸ್ತುಗಳನ್ನು ಹೊಂದಿದ್ದಾರೆ ಮತ್ತು ಇವು ಲಕ್ಷಾಂತರ ಮೌಲ್ಯದ್ದಾಗಿವೆ. ಇವರು ಯಾರ ಮೇಲೆಯೂ ಅವಲಂಬಿತವಲ್ಲದೆ ತಮ್ಮ ಉದ್ದಿಮೆಯಿಂದ ಹೆಚ್ಚಿನ ಆದಾಯ ಗಳಿಸುತ್ತಾರೆ ಮತ್ತು ತುಂಬಾ ದುಬಾರಿ ಬೆಲೆಯ ವಸ್ತುಗಳ ಅಭಿರುಚಿ ಹೊಂದಿದ್ದಾರೆ.

ಉಪಾಸನಾ ಇತ್ತೀಚೆಗೆ ಇಟಾಲಿಯನ್ ಫ್ಯಾಷನ್ ಬ್ರ್ಯಾಂಡ್‌ನಿಂದ ಸಿಲ್ಕ್ ಟ್ರೆಂಚ್ ಕೋಟ್ ಧರಿಸಿಕೊಂಡು ಆ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದರ ಬೆಲೆಯು ಸುಮಾರು 3 ಲಕ್ಷ ರೂ. ಅಂತೆ.
ಉಪಾಸನಾ ತನ್ನ ಸರಳ ಆದರೆ ಕ್ಲಾಸಿಕ್ ಶೈಲಿಯ ಬಟ್ಟೆಗಳಿಗೂ ಸಹ ಹೆಸರುವಾಸಿಯಾಗಿದ್ದಾರೆ. ಅವರು ಪ್ರಯಾಣಿಸುವಾಗ, ಅಲೆಕ್ಸಾಂಡರ್ ಮೆಕ್ಕ್ವೀನ್ ಸ್ಕಾರ್ಫ್ ಬಳಸುತ್ತಾರೆ, ಅದು ಸುಮಾರು 24,000 ರೂ. ಮೌಲ್ಯದ್ದಾಗಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ನಡೆದ ಕುಟುಂಬ ಕಾರ್ಯಕ್ರಮವೊಂದರಲ್ಲಿ ರಾಮ್ ಚರಣ್ ಪತ್ನಿ ಹೂವಿನ ಪ್ರಿಂಟ್ ಇರುವಂತಹ ಹೈ-ವೇಸ್ಟ್ ಪ್ಲೀಟೆಡ್ ಸ್ಕರ್ಟ್ ಆಯ್ಕೆ ಮಾಡಿಕೊಂಡಿದ್ದರು ಮತ್ತು ಅದರ ಬೆಲೆ ನೀವು ಕೇಳಿದರೆ ಬೆಚ್ಚಿ ಬೀಳುವುದು ಮಾತ್ರ ಖಚಿತ. ಏಕೆಂದರೆ ಅದು ಸುಮಾರು 1. 23 ಲಕ್ಷ ಮೌಲ್ಯದ್ದಾಗಿದೆ. ಅವರು ಧರಿಸುವಂತಹ ಸರಳವಾದ ಮತ್ತು ಕ್ಯಾಶುವಲ್ ಶರ್ಟ್ ಕೂಡ ತಮ್ಮ ನೆಚ್ಚಿನ ಬ್ರ್ಯಾಂಡ್ ಆಗಿದ್ದು ಅದು ಸುಮಾರು 65 ಸಾವಿರ ರೂಪಾಯಿ ಬೆಲೆಯದ್ದಾಗಿದೆ.

ಇದನ್ನೂ ಓದಿ: Upasana Konidela: ವಜ್ರದ ಆಭರಣ​ ತೊಟ್ಟು ಮಿಂಚಿದ ರಾಮ್​ಚರಣ್​ ಮಡದಿ ಉಪಾಸನಾ..!

ರಾಮ್​ ಚರಣ್​ ಪತ್ನಿ ಉಪಾಸನಾ ಕೋಣಿದೇಲ ಅವರು ನಾದಿನಿ ನಿಹಾರಿಕಾ ಕೋಣಿದೇಲ ಮದುವೆಗೆಂದು ಉದಯಪುರಕ್ಕೆ ಹೋಗಿದ್ದಾಗ, ನಿಹಾರಿಕಾರ ಮದುವೆ ಶಾಸ್ತ್ರಗಳಲ್ಲಿ ಉಪಾಸನಾ ಸಖತ್ ಟ್ರೆಂಡಿ ಲುಕ್​ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು.
Published by:Anitha E
First published: