ರಾಖಿ ಹಬ್ಬ ಒಂದೇ ದಿನ ಆದರೆ, ನಿಮ್ಮ ಕಾಳಜಿ ನಿರಂತರವಾಗಿರಲು ಹೀಗೆ ಮಾಡಿ...

Seema.R | news18
Updated:August 26, 2018, 10:03 AM IST
ರಾಖಿ ಹಬ್ಬ ಒಂದೇ ದಿನ ಆದರೆ, ನಿಮ್ಮ ಕಾಳಜಿ ನಿರಂತರವಾಗಿರಲು ಹೀಗೆ ಮಾಡಿ...
Seema.R | news18
Updated: August 26, 2018, 10:03 AM IST
ರಾಖಿ ಹಬ್ಬ ಬಂತೆಂದರೆ ಸಾಕು ಅಕ್ಕ,ತಂಗಿಯರಿಗೆ ಎಲ್ಲಿಲ್ಲದ ಸಂಭ್ರಮ. ತಮ್ಮ ನಲ್ಮೆಯ ಅಣ್ಣನಿಗೆ ರಾಖಿ ಕಟ್ಟಿ ಅವರಿಂದ ಉಡುಗೊರೆ ಪಡೆಯಲು ಹದಿನೈದು ದಿನದ ಮುಂಚಿತವಾಗಿಯೇ ಪ್ಲಾನ್​ ಮಾಡುವವರು ಇದ್ದಾರೆ. ಅಣ್ಣ-ತಮ್ಮ ಕೂಡ ತಮ್ಮ ಮುದ್ದಿನ ತಂಗಿಯ ಆಸೆಯಂತೆ ಅವರಿಗೆ ಯಾವ ರೀತಿ ಉಡುಗೊರೆ ಕೊಟ್ಟರೆ ಒಳಿತು ಎಂದು ಯೋಚಿಸುತ್ತಲೆ ಇರುತ್ತಾರೆ.

ಇನ್ನು ಈ ಉಡುಗೊರೆ ವಿಷಯಕ್ಕೆ ಬಂದರೆ ಕೇವಲ ತಂಗಿಯರನ್ನು ಕ್ಷಣ ಮಾತ್ರಕ್ಕೆ ಖುಷಿ ಪಡಿಸಲು ಟ್ರೀಟ್​, ವಾಚ್​, ಬಟ್ಟೆ, ಸಿಹಿ ಹೊರತು ಪಡಿಸಿ ಅವರ ಜೀವನದ ಸುರಕ್ಷತೆಗೆ ದೃಷಿಯ ಬಗ್ಗೆಯೂ ಅಣ್ಣಂದಿರು ಕಾಳಜಿ ಮಾಡಬೇಕಾಗುತ್ತದೆ. ಸದಾ ಅಕ್ಕ ತಂಗಿಯರು ಸಂತಸವಾಗಿರ ಬೇಕು ಎಂದು ಬಯಸುವ ಅಣ್ಣಂದಿರು ಕೂಡ ಅವರ ಭವಿಷ್ಯದ ದೃಷಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಆರ್ಥಿಕವಾಗಿ ಸದೃಡರನ್ನಾಗಿಸುವುದು ಅವರ ಕರ್ತವ್ಯವಾಗಿದೆ. ಇದಕ್ಕೆಂದೆ ಅನೇಕ ಮಾರ್ಗಗಳು ಕೂಡ ಇದೆ.

ನಿಗದಿತ ಠೇವಣಿ: ಭವಿಷ್ಯದಲ್ಲಿ ಯಾವಾಗ ಯಾವ ಸಮಯದಲ್ಲಿ ಹಣದ ಅವಶ್ಯಕತೆ ಬಂದು ಒದಗುತ್ತದೆ ಎಂದು ಹೇಳಲು ಅಸಾಧ್ಯ. ಈ ಹಿನ್ನಲೆ ಅವರ ವಿದ್ಯಾಭ್ಯಾಸ ಅಥವಾ ಮದುವೆ, ಸ್ವ ಉದ್ಯೋಗ ನಡೆಸಲು ಕೈಗೊಳ್ಳಲು ಈ ಹಣ ಸಹಾಯವಾಗಲಿದೆ.

ಮ್ಯೂಚುವಲ್​ ಫಂಡ್​ : ಮಹಿಳೆಯರಿಗಾಗಿ ಬ್ಯಾಂಕ್​ ಖಾತೆ ತೆರೆದು ಅವರ ಹೆಸರಿನಲ್ಲಿ ಒಂದಿಷ್ಟು ಹಣ ಇಡಿ. ಜೊತೆಯಲ್ಲಿ ಷೇರುಗಳನ್ನು ಅವರ ಹೆಸರಿನಲ್ಲಿ ಕೊಳ್ಳಿ ಇದರಿಂದ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬಹುದು.

ಆರೋಗ್ಯ ವಿಮೆ: ಈಗಂತರೂ ಅನೇಕ ಖಾಸಗಿ ಆರೋಗ್ಯ ವಿಮೆ ಕಂಪನಿಗಳು ಇದೆ. ಈ ವಿಮಾ ಕಂಪನಿಗಳಲ್ಲಿ ನಿಮ್ಮ ಸಹೋದರಿ ಹೆಸರಲ್ಲಿ ಒಂದು ಪಾಲಿಸಿ ಮಾಡಿಸಿದರೆ ಒಳ್ಳೆಯದು.

ಸ್ವಾವಲಂಬಿ ಉದ್ಯೋಗಕ್ಕೆ ಆಸರೆ  ನೀಡಿ: ಈಗಿನ ಮಹಿಳೆಯರು ಸ್ವಾವಲಂಬಿಯಾಗಿರಬೇಕೆಂದು ಬಯಸುತ್ತಾರೆ. ಆ ರೀತಿಯ ಕನಸು ನಿಮ್ಮ ಅಕ್ಕ-ತಂಗಿಗೆ ಇದ್ದಾರೆ ಈ ಆಸೆಗೆ ನೀರೆರಿಯರಿ. ಅಥವಾ ಆಕೆ ಏನು ಮಾಡದೇ ಸುಮ್ಮನೆ ಇದ್ದರೂ ಆಕೆಯನ್ನು ಒಂದು ಉದ್ಯೋಗದಲ್ಲಿ ತೊಡಗಿಸಿಕೊಳ್ಳದಿದ್ದರೆ ಆಕೆಗೆ ಯಾವುದಾದರೂ ಸಣ್ಣ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗುವಂತೆ ಅವರನ್ನು ಪ್ರೇರೆಪಿಸಿ.

ಉನ್ನತ ಶಿಕ್ಷಣಕ್ಕೆ ನೆರವು ಆಗಿ: ಈಗಿನ ಕಾಲದಲ್ಲಿ ಓದು ಹೆಚ್ಚು ಅಮೂಲ್ಯವಾಗಿದ್ದು, ಕೇವಲ ಪದವಿ ಶಿಕ್ಷಣಗೆ ಹೆಚ್ಚಿನ ಮಾನ್ಯತೆ ಇಲ್ಲ. ಈ ಹಿನ್ನಲೆಯಲ್ಲಿ ಅವರಿಗೆ ಉನ್ನತ ಶಿಕ್ಷಣ ಕೈಗೊಳ್ಳಲು ನೆರವಾಗಲು ಬ್ಯಾಂಕ್ ನಲ್ಲಿ ಶಿಕ್ಷಣ​ ಸಾಲ ಕೊಡಿಸಲು ಸಹಾಯ ಮಾಡಿ.
Loading...

 

 
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ