Raksha Bandhan 2021: 474 ವರ್ಷಗಳ ನಂತರ ಮರುಕಳಿಸಿದೆ ಈ ಅಪರೂಪದ ದಿನ ..! ಏನು ಗೊತ್ತಾ ವಿಶೇಷ?

Raksha Bandhan Celebration : ಪ್ರತಿ ವರ್ಷವೂ ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಪೂರ್ಣಿಮೆಯಂದು ಆಚರಣೆ ಮಾಡಲಾಗುತ್ತದೆ. ಸಹೋದರಿಯರು ಈ ದಿನ ತಮ್ಮ ಸಹೋದರನಿಗೆ ವಿವಿಧ ಬಗೆಯ ರಾಖಿಗಳನ್ನು ಕಟ್ಟಿ, ಅವರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಮಾಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶ್ರಾವಣ ಮಾಸ ಹಬ್ಬಗಳ ಮಾಸ, ಈ ಮಾಸದಲ್ಲಿ ಸಾಲು ಸಾಲು ಹಬ್ಬಗಳ ಆಚರಣೆ ಮಾಡಲಾಗುತ್ತದೆ. ಈಗಾಗಲೇ ನಾಗರ ಪಂಚಮಿ ಮತ್ತು ವರಮಹಾಲಕ್ಷ್ಮಿ ಹಬ್ಬದ ಆಚರಣೆಯಾಗಿದೆ, ಇದೀಗ ರಕ್ಷಾ ಬಂಧನದ ಸಂಭ್ರಮ ಹಿಂದೂ ಧರ್ಮದಲ್ಲಿ ರಕ್ಷಾ ಬಂಧನವನ್ನು ಸಹೋದರ ಮತ್ತು ಸಹೋದರಿಯರ ಪ್ರೀತಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ. ಈ ಹಬ್ಬವನ್ನು ಪ್ರತಿ ವರ್ಷವೂ ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಪೂರ್ಣಿಮೆಯಂದು ಆಚರಣೆ ಮಾಡಲಾಗುತ್ತದೆ. ಸಹೋದರಿಯರು ಈ ದಿನ ತಮ್ಮ ಸಹೋದರನಿಗೆ ವಿವಿಧ ಬಗೆಯ ರಾಖಿಗಳನ್ನು ಕಟ್ಟಿ, ಅವರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಮಾಡುತ್ತಾರೆ. ಹಾಗೆಯೇ ಸಹೋದರರು ಸಹ ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡಿ ಅವರನ್ನು ಯಾವಾಗಲೂ ರಕ್ಷಿಸುವ ಭರವಸೆ ನೀಡುತ್ತಾರೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಈ ಹಬ್ಬವು ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬರುತ್ತದೆ.

ಆದರೆ ಈ ವರ್ಷ ದಿನಾಂಕದ ವಿಚಾರದಲ್ಲಿ ಅಪರೂಪವೊಂದು ನಡೆದಿದೆ. ಈ ವರ್ಷ ಶ್ರಾವಣ ಮಾಸದ ಹುಣ್ಣಿಮೆಯು ಆಗಸ್ಟ್ 21 ರ ಶನಿವಾರದ ಸಂಜೆ 07:03 ಕ್ಕೆ ಆರಂಭವಾಗುತ್ತದೆ ಮತ್ತು ಮರುದಿನ ಅಂದರೆ ಭಾನುವಾರ ಆಗಸ್ಟ್ 22, 05: 33 ಕ್ಕೆ ಕೊನೆಗೊಳ್ಳುತ್ತದೆ.ಆದ್ದರಿಂದ, ಈ ವರ್ಷ ಹಬ್ಬವನ್ನು ಆಗಸ್ಟ್ 22 ರಂದು ಪೂರ್ಣ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ.

ಈ ವರ್ಷ ರಕ್ಷಾ ಬಂಧನದ ದಿನ ಸಹೋದರನಿಗೆ ರಾಖಿ ಕಟ್ಟಲು ಒಳ್ಳೆಯ ಸಮಯ ಬೆಳಿಗ್ಗೆ 6.14 ರಿಂದ ಆಗಸ್ಟ್ 22ರ 5. 33 ರವರೆಗೆ. ಒಟ್ಟು ಅವಧಿ 11 ಗಂಟೆ 18 ನಿಮಿಷಗಳು. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷವನ್ನು ಧನಿಷ್ಠಾ ನಕ್ಷತ್ರದಲ್ಲಿ ಶ್ರಾವಣ ಹುಣ್ಣಿಮೆಯ ದಿನ ಎಂದು ಆಚರಿಸಲಾಗುತ್ತದೆ. ಇದನ್ನು ಅಪರೂಪದ ಸಂದರ್ಭವೆಂದು ಪರಿಗಣಿಸಲಾಗಿದೆ. ಶುಭ ಅವಧಿಯು ಹೆಚ್ಚಿನ ಸಮಯ ಇರುವುದರಿಂದ ಸಹೋದರಿಯರು ದಿನವಿಡೀ ತಮ್ಮ ಸಹೋದರರ ಕೈಗೆ ರಾಖಿ ಕಟ್ಟಿ ಸಂಭ್ರಮಿಸಬಹುದು.

ಇದನ್ನೂ ಓದಿ: ಓಣಂ ಹಬ್ಬಕ್ಕೆ ಶಾಪಿಂಗ್: ಅಮೆಜಾನ್‍ನಲ್ಲಿ ಸಿಗಲಿವೆ ಈ 6 ಪ್ರಮುಖ ಉತ್ಪನ್ನಗಳು

ಈ ದಿನದ ಇನ್ನೊಂದು ವಿಶೇಷತೆ ಎಂದರೆ, ಹಿಂದೂ ಪಂಚಾಂಗದ ಪ್ರಕಾರ ಈ ಬಾರಿ ರಕ್ಷಾ ಬಂಧನದ ದಿನ ಸೂರ್ಯ, ಮಂಗಳ ಮತ್ತು ಬುಧ ಒಟ್ಟಿಗೆ ಸಿಂಹ ರಾಶಿಯಲ್ಲಿ ಇರಲಿದ್ದಾರೆ. ಸೂರ್ಯನು ಸ್ವಾಮಿ ಅಥವಾ ಸಿಂಹ ರಾಶಿಯ ಗುರು, ಇನ್ನು ಮಂಗಳ ಗ್ರಹ ಸಿಂಹ ರಾಶಿಯವರಿಗೆ ಸಹ ಸ್ನೇಹ ಪೂರ್ವಕ ಗ್ರಹವಾಗಿದೆ. ಈ ಗ್ರಹಗಳ ಬದಲಾವಣೆಯೊಂದಿಗೆ ಶುಕ್ರನು ಕನ್ಯಾರಾಶಿಯಲ್ಲಿ ಇರಲಿದ್ದಾನೆ. ಗ್ರಹಗಳು ಮತ್ತು ರಾಶಿಚಕ್ರ ಚಿಹ್ನೆಗಳ ಈ ರೀತಿಯ ಸಂಯೋಜನೆಯನ್ನು ಅತ್ಯಂತ ಒಳ್ಳೆಯ ದಿನವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, 474 ವರ್ಷಗಳ ನಂತರ ರಕ್ಷಾ ಬಂಧನದ ಮೇಲೆ ಈ ರೀತಿಯ ಸಂಯೋಜನೆ ನಡೆಯುತ್ತಿದೆ.

ಗುರು ಮತ್ತು ಚಂದ್ರನ ಭೇಟಿಯಿಂದಾಗಿ ಈ ಬಾರಿ ರಕ್ಷಾ ಬಂಧನದಂದು ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಈ ಯೋಗವು ಜನರ ಜೀವನದಲ್ಲಿ ಅದೃಷ್ಟವನ್ನು ತರುತ್ತದೆ. ಇದು ಹಣ, ಮನೆ ಮತ್ತು ವಾಹನದಂತಹ ಸಂಪತ್ತನ್ನು ಪಡೆಯಲು ಜನರಿಗೆ ಸಹಾಯ ಮಾಡುತ್ತದೆ. ಸಮಾಜದಲ್ಲಿ ಸಂತೋಷ ಮತ್ತು ಗೌರವವನ್ನು ಸಾಧಿಸಲು ಈ ಗಜಕೇಸರಿ ಯೋಗವು ಜನರಿಗೆ ಸಹಾಯ ಮಾಡುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: