ರಣರಂಗದ ಮರುಸೃಷ್ಟಿ: ರಾಜಸ್ಥಾನ ಪ್ರವಾಸೋದ್ಯಮದ ಹೊಸ ಪ್ರಯತ್ನ

news18
Updated:September 11, 2018, 3:48 PM IST
ರಣರಂಗದ ಮರುಸೃಷ್ಟಿ: ರಾಜಸ್ಥಾನ ಪ್ರವಾಸೋದ್ಯಮದ ಹೊಸ ಪ್ರಯತ್ನ
news18
Updated: September 11, 2018, 3:48 PM IST
-ನ್ಯೂಸ್ 18 ಕನ್ನಡ

ಐತಿಹಾಸಿಕ ಕಥೆಯಾಧಾರಿತ ಸಿನಿಮಾಗಳನ್ನು ನೀವು ನೋಡಿರುತ್ತೀರಿ. ಇತಿಹಾಸ ಪುಟದಲ್ಲಿ ಸ್ಮರಿಸಲಾಗುವ ಯುದ್ಧ ಕಥೆಗಳಲ್ಲಿನ ರಣರಂಗವನ್ನು ಕಲ್ಪಿಸುವುದೇ ರೋಮಾಂಚನ. ಇಂತಹ ಯುದ್ಧಗಳ ಚಿತ್ರಣವೇ ನಿಮ್ಮ ಕಣ್ಮುಂದೆ ಮರು ಸೃಷ್ಟಿಸಿದರೆ ಹೇಗಿರಬಹುದು. ಈ ಕಲ್ಪನೆಯನ್ನು ಸಕಾರಗೊಳಿಸಲು ರಾಜಸ್ಥಾನ ಪ್ರವಾಸೋದ್ಯಮ ಮುಂದಾಗಿದೆ. ಇಂಡಿಯನ್ ಹೆರಿಟೇಜ್ ಹೊಟೇಲ್ ಅಸೋಸಿಯೇಷನ್ ​​(IHHA)ನ ಏಳನೇ ವಾರ್ಷಿಕೋತ್ಸವದ ಅಂಗವಾಗಿ ದೇಶದ ಐತಿಹಾಸಿಕ ಯುದ್ಧಗಳನ್ನು ಮರು ಸೃಷ್ಟಿಸಲಿದ್ದಾರೆ. ಯುದ್ಧಭೂಮಿಯ ಆಕರ್ಷಣೆಯೊಂದಿಗೆ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನಕ್ಕೆ ರಾಜಸ್ಥಾನದ ಪ್ರವಾಸೋದ್ಯಮ ಇಲಾಖೆ ಕೈ ಹಾಕಿದೆ.

ದಕ್ಷಿಣ-ಪೂರ್ವ ಸೇನಾ ಕಮಾಂಡರ್ ಜನರಲ್ ಆಫಿಸರ್ ಲೆಫ್ಟಿನೆಂಟ್ ಚೆರಿಶ್ ಮಾಥ್ಸನ್ ಈ ಹೊಸ ಕಾರ್ಯಕ್ರಮದ ಉಪನ್ಯಾಸ ನೀಡಲಿದ್ದು, ಅಮೆರಿಕ ಮತ್ತು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮದಲ್ಲಿ ಈ ರೀತಿಯ ಕಾರ್ಯಕ್ರಮ ಜನಪ್ರಿಯವಾಗಿದೆ ಎಂದು ಸಂಚಾಲಕ ರಾಜೇಂದ್ರ ಸಿಂಗ್ ಪಚಾರ್ ತಿಳಿಸಿದ್ದಾರೆ.

ಭಾರತದ ಇತಿಹಾಸವನ್ನು ಪುನರ್ ವಿಮರ್ಶಿಸಿದರೆ ಹಲವಾರು ಘನ ಘೋರ ಯುದ್ಧಗಳು ಕಾಣಿಸುತ್ತದೆ. ಅದರಲ್ಲಿ ಜಲಾರ್ ಯುದ್ದ(1310-11) ಮುಖ್ಯವಾದದ್ದು. ಅಲ್ಲಾವುದ್ದೀನ್ ಖಿಲ್ಜಿ ಮತ್ತು ಕಾನ್ಹಾಡ್ ದೇವ್ ನಡುವೆ ಈ ಯುದ್ದ ನಡೆದಿತ್ತು. ಅದೇ ರೀತಿ ಸಾಮ್ಮೆಲ್ ಯುದ್ಧ(1544)ದಲ್ಲಿ ಶೇರ್ ಶಾ ಸುರಿಯ ಸೇನೆಯು ಜೈತಾ ಮತ್ತು ಕುಂಪ ಸೈನ್ಯದ ವಿರುದ್ಧ ವಿಜಯವನ್ನು ಸಾಧಿಸಿತ್ತು. ಹಾಗೆಯೇ ಮಾರ್ವಾರ್ ಯುದ್ದದಲ್ಲಿ 1562-1583ರಲ್ಲಿ ಮೊಘಲ್ ದೊರೆ ಅಕ್ಬರ್ ಜಯಗಳಿಸಿದರೆ, 1679-1707ರಲ್ಲಿ ಔರಂಗಜೇಬ್ ವಿಜಯ ಸಾಧಿಸಿದ್ದರು. ಈ ಯುದ್ಧಕಥೆಯನ್ನು ಮತ್ತೊಮ್ಮೆ ಸೃಷ್ಟಿಸುವ ಸರ್ವ ಪ್ರಯತ್ನ ಮಾಡಲಿದೆ ಎಂದು ಪಚಾರ್ ಹೇಳಿದ್ದಾರೆ.

ಈ ಕಲ್ಪನೆಯನ್ನು ಮೊದಲ ಬಾರಿ ಲೆಫ್ಟಿನೆಂಟ್ ಜನರಲ್ ಮಾಥ್ಸನ್ ಪ್ರಸ್ತಾಪಿಸಿದ್ದರು. ಇಂಡಿಯನ್ ಹೆರಿಟೇಜ್ ಹೊಟೇಲ್ ಅಸೋಸಿಯೇಷನ್ ಸಮಾವೇಶದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಅದಕ್ಕೆ ಬೇಕಾದ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ದೇಶದ ಐತಿಹಾಸಿಕ ಕೋಟೆಗಳು, ಅರಮನೆ, ಕಟ್ಟಡಗಳನ್ನು ಈಗಾಗಲೇ ಹೋಟೆಲ್, ಲಾಡ್ಜ್​ಗಳನ್ನಾಗಿ ಪರಿವರ್ತಿಸಲಾಗಿದ್ದು, ಈ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುತ್ತಿದೆ ಎಂದು ಪಚಾರ್ ತಿಳಿಸಿದರು.

ಐತಿಹಾಸಿಕ ಘಟನೆಗಳನ್ನು ಮರು ಸೃಷ್ಟಿಸುವ ಬಗ್ಗೆ ಈಗಾಗಲೇ ಜೋಧಪುರದ ರಾಜ ಕುಟುಂಬದೊಂದಿಗೆ ಚರ್ಚಿಸಿದ್ದು, ಇದಕ್ಕಾಗಿ ಎಲ್ಲಾ ರೀತಿಯ ತಯಾರಿಗಳು ನಡೆಯುತ್ತಿದೆ ಎಂದು ಇಂಡಿಯನ್ ಹೆರಿಟೇಜ್ ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಗಜ್ ಸಿಂಗ್ ತಿಳಿಸಿದ್ದಾರೆ.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ