10ನೇ ತರಗತಿ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ

ಈ ವಿಭಾಗದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹತ್ತನೇ ತರಗತಿ ಪಾಸ್ ಜೊತೆಗೆ ಐಟಿಐ ಮಾಡಿರಬೇಕು. ಹಾಗೆಯೇ ಆಹಾರ ಉತ್ಪಾದನೆಯಲ್ಲಿ ತರಬೇತಿ ಪಡೆದಿರಬೇಕು.

zahir | news18-kannada
Updated:September 16, 2019, 8:03 AM IST
10ನೇ ತರಗತಿ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ
ಸಾಂದರ್ಭಿಕ ಚಿತ್ರ
zahir | news18-kannada
Updated: September 16, 2019, 8:03 AM IST
Railway RRC Recruitment 2019: ನಿಮ್ಮ ಶಿಕ್ಷಣಾರ್ಹತೆ ಕಡಿಮೆ ಇದ್ದು, ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿದ್ದರೆ ಇಲ್ಲಿದೆ ಸುವರ್ಣಾವಕಾಶ. ಉತ್ತರ ರೈಲ್ವೆ (ನಾರ್ಥನ್ ರೈಲ್ವೆ) ಇಲಾಖೆಯು ಹಲವು ವಿಭಾಗಗಳ ನೇಮಕಾತಿ ಆದೇಶ ಹೊರಡಿಸಿದೆ.

ಈ ನೇಮಕಾತಿ ಅಡಿಯಲ್ಲಿ ಕಮರ್ಷಿಯಲ್ ವಿಭಾಗದಲ್ಲಿ ಕೆಟರಿಂಗ್, ಯುನಿಟ್ ಮತ್ತು ಕೆಟರಿಂಗ್ ಯುನಿಟ್ ಭಾಗದಲ್ಲಿ ಭರ್ತಿ ನಡೆಯಲಿದೆ. ಈ ಹುದ್ದೆಗಳ ಅರ್ಜಿ ಪ್ರಕ್ರಿಯೆಯು ಇಂದಿನಿಂದ (ಸೆಪ್ಟೆಂಬರ್ 16) ಪ್ರಾರಂಭವಾಗಿದೆ. ಇಲ್ಲಿ ಒಟ್ಟು 118 ಹುದ್ದೆಗಳು ಖಾಲಿಯಿದ್ದು, ಆಸಕ್ತರು ಅಕ್ಟೋಬರ್ 15 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.



ಒಟ್ಟು ಹುದ್ದೆಗಳು:
ಅಡುಗೆ ಸಿಬ್ಬಂದಿ- 94 ಹುದ್ದೆಗಳು
ಸರ್ವೀಸ್ ಸೈಡ್- 24 ಹುದ್ದೆಗಳು

ಸರ್ವೀಸ್ ಸೈಟ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10ನೇ ತರಗತಿ ಪಾಸ್ ಆಗಿರಬೇಕು. ಅಲ್ಲದೆ ಐಟಿಐ ಡಿಪ್ಲೊಮಾ ಪದವಿ ಪಡೆದಿರಬೇಕು. ಇದರೊಂದಿಗೆ ಅತಿಥಿ ಸತ್ಕಾರದಲ್ಲಿ ಪರಿಣಿತಿಯನ್ನು ಹೊಂದಿರಬೇಕು.
Loading...

ಕುಕ್ಕಿಂಗ್ ಸೈಟ್: ಈ ವಿಭಾಗದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹತ್ತನೇ ತರಗತಿ ಪಾಸ್ ಜೊತೆಗೆ ಐಟಿಐ ಮಾಡಿರಬೇಕು. ಹಾಗೆಯೇ ಆಹಾರ ಉತ್ಪಾದನೆಯಲ್ಲಿ ತರಬೇತಿ ಪಡೆದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಉತ್ತರ ರೈಲ್ವೆ www.rrcnr.org ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ನೀಡಲಾಗಿರುವ ಮಾರ್ಗಸೂಚಿಗಳ ಪ್ರಕಾರ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ- ಸೆಪ್ಟೆಂಬರ್ 16, 2019
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- ಅಕ್ಟೋಬರ್ 15, 2019
ನೇಮಕಾತಿ ಲಿಖಿತ ಪರೀಕ್ಷೆ- ಅಕ್ಟೋಬರ್ 31 ರಂದು ನಡೆಸುವ ಸಾಧ್ಯತೆಯಿದೆ.
First published:September 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...