RRB Recruitment 2019: ಎಸ್​ಎಸ್​ಎಲ್​ಸಿ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗಾವಕಾಶ

RRB Recruitment 2019: ರೈಲ್ವೆ ಸಹಾಯಕ ಲೊಕೊ ಪೈಲಟ್ (ALP) ಮತ್ತು ತಂತ್ರಜ್ಞ 306 ಹುದ್ದೆಗಳು ಖಾಲಿಯಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಇದರಲ್ಲಿ ಎಎಲ್‌ಪಿಯ 85 ಹುದ್ದೆಗಳು ಮತ್ತು ತಂತ್ರಜ್ಞರ 221 ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 11.

zahir | news18-kannada
Updated:October 21, 2019, 11:01 AM IST
RRB Recruitment 2019: ಎಸ್​ಎಸ್​ಎಲ್​ಸಿ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗಾವಕಾಶ
Jobs
  • Share this:
RRB Recruitment 2019: ಸರ್ಕಾರಿ ನೌಕರಿ ಹುಡುಕಾಟದಲ್ಲಿರುವವರಿಗೆ ರೈಲ್ವೆ ಇಲಾಖೆ ಬಂಪರ್ ಅವಕಾಶ ಒದಗಿಸಿದೆ. ಸೌತ್ ವೆಸ್ಟರ್ನ್​ ರೈಲ್ವೆಯಲ್ಲಿ 386 ಹುದ್ದೆಗಳು ಖಾಲಿಯಿದೆ.  ಇನ್ನು ನಾರ್ತ್ ಈಸ್ಟ್ ಫ್ರಂಟಿಯರ್ ರೈಲ್ವೆಆಕ್ಟ್ ಅಪ್ರೆಂಟಿಸ್ ಅಡಿಯಲ್ಲಿ 2,590 ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ. ಅದೇ ಸಮಯದಲ್ಲಿ, ಸಹಾಯಕ ಲೊಕೊ ಪೈಲಟ್ (ಎಎಲ್ಪಿ) ಮತ್ತು ತಂತ್ರಜ್ಞರ 306 ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ಹೆಚ್ಚಿನ ಮಾಹಿತಿ ಈ ಕೆಳಗಿನಂತಿವೆ.

ಟಿಕೆಟ್​ ಕ್ಲರ್ಕ್​ ಉದ್ಯೋಗ:
ಸೌತ್ ವೆಸ್ಟರ್ನ್ ರೈಲ್ವೆಯ ರೈಲ್ವೆ ನೇಮಕಾತಿ ಸೆಲ್​ ಸೀನಿಯರ್ ಕರ್ಮರ್ಷಿಯಲ್/ ಟಿಕೆಟ್ ಕ್ಲರ್ಕ್ ಮತ್ತು ಕಮರ್ಷಿಯಲ್ ಕಮ್ ಟಿಕೆಟ್ ಗುಮಾಸ್ತರ 386 ಹುದ್ದೆಗಳನ್ನು ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತರು ನವೆಂಬರ್ 20 ರವರೆಗೆ ಅರ್ಜಿ ಸಲ್ಲಿಸಬಹುದು. ಪಿಯುಸಿ ಮತ್ತು ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಖಾಲಿ ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.

https://www.rrchubli.in/GDCE_Notification_No.02_2019.pdf

ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ:
ಈಶಾನ್ಯ ಗಡಿನಾಡು ರೈಲ್ವೆ (ನಾರ್ತ್ ಈಸ್ಟ್ ಫ್ರಂಟಿಯರ್ ರೈಲ್ವೆ) ಆಕ್ಟ್ ಅಪ್ರೆಂಟಿಸ್ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಲ್ಲಿ ಒಟ್ಟು 2,590 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, 10ನೇ ತರಗತಿ ಮತ್ತು ಐಟಿಐ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅಕ್ಟೋಬರ್ 31 2019 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.

https://nfr.indianrailways.gov.in/cris//uploads/files/1570603833511-Act%20Apprentice%20Notification.pdfಇದನ್ನೂ ಓದಿ: Bigg Boss Kannada 7: ಕೊನೆಗೂ ಬಹಿರಂಗವಾಯ್ತು ಬಿಗ್ ಬಾಸ್​ಗಾಗಿ ಕುರಿ ಪ್ರತಾಪ್ ಪಡೆಯುತ್ತಿರುವ ಸಂಭಾವನೆ..!

ರೈಲ್ವೆ ಸಹಾಯಕ ಲೊಕೊ ಪೈಲಟ್ (ALP) ಮತ್ತು ಟೆಕ್ನಿಷಿಯನ್:
ರೈಲ್ವೆ ಸಹಾಯಕ ಲೊಕೊ ಪೈಲಟ್ (ALP) ಮತ್ತು ತಂತ್ರಜ್ಞ 306 ಹುದ್ದೆಗಳು ಖಾಲಿಯಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಇದರಲ್ಲಿ ಎಎಲ್‌ಪಿಯ 85 ಹುದ್ದೆಗಳು ಮತ್ತು ತಂತ್ರಜ್ಞರ 221 ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 11. 10ನೇ ತರಗತಿ ಪಾಸ್​ ಆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ ಪ್ರಮಾಣ ಪತ್ರವನ್ನು ಸಹ ಹೊಂದಿರಬೇಕಾಗುತ್ತದೆ.  ಈ ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.

https://www.rrc-wr.com/rrwc/GDCE/07_2019_ASSISTANT_LOCO_PILOT_AND_TECHNICIAN.pdf

 
First published:October 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ