Quit Smoking: ಸಿಗರೇಟ್ ಬಿಡಬೇಕು ಅನ್ಕೊಂಡಿದಿರಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ, ಖಂಡಿತಾ ಸಕ್ಸಸ್ ಆಗ್ತೀರಾ..!

ಕೆಲ ವರ್ಷಗಳ ಕಾಲ ಧೂಮಪಾನ ಮಾಡಿ ಸಡನ್​ಆಗಿ ತೊರೆದಾಗ ನಿಮಗೆ ಏನಾಗುತ್ತೆ ಗೊತ್ತಾ? ಕಲಿತ ಚಟವನ್ನು ಬಿಡುವುದು ತುಂಬ ಕಷ್ಟಕರವಾದ ಕೆಲಸ. ಸಿಗರೇಟ್ ಸೇದುವುದನ್ನು ಬಿಟ್ಟ ತಕ್ಷಣ ನಿಮ್ಮ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಧೂಮಪಾನ ಆರೋಗ್ಯಕ್ಕೆ ಹಾನಿಕರ(Smoking is Injurious to Health) ಅಂತ ಸಿಗರೇಟ್​ ಬಾಕ್ಸ್ (Cigarette Box)​​ ಮೇಲೆ ಚಿತ್ರ ಸಮೇತ ಹಾಕಿದ್ದರು. ಜನ ಪ್ರಾಣ ಬೇಕಾದರೂ ಹೋಗಲಿ ಗುರು ಸಿಗರೇಟ್​ ಬಿಡುವ ಮಾತೇ ಇಲ್ಲ ಅಂತಾರೆ. ಬೆಳಗ್ಗೆ ಎದ್ದಾಗ ಒಂದು, ತಿಂಡಿ ಮಾಡಿದ ಮೇಲೆ ಒಂದು, ಊಟ ಮಾಡಿದ ಮೇಲೆ ಒಂದು , ಹೀಗೆ ಟೈಂ ಸಿಕ್ಕಗೆಲ್ಲಾ ಸಿಗರೇಟ್​ ಹಚ್ಚಿ ಸರ್​ರ್​ರ್......​ ಅಂತ ಹೊಗೆ ಎಳೆದು ಬಿಡುತ್ತಾರೆ. ಯಾರಾದರೂ ಯಾಕೆ ಇಷ್ಟೊಂದು ಸ್ಮೋಕ್(Smoke)​ ಮಾಡುತ್ತಿಯಾ ಅಂದರೆ, ಟೆನ್ಶನ್(Tension)​ ಎಂದು ಜವಾಬ್​ ಕೂಡ ಕೊಡುತ್ತಾರೆ. ಸಿಗರೇಟ್​ ಮೇಲೆ ಸಂಶೋಧನೆ ನಡೆಸಿರುವ ತಜ್ಞರೇ ಸಿಗರೇಟ್​ನಿಂದ ಯಾವುದೇ ಟೆನ್ಶನ್​ ಕಡಿಮೆಯಾಗಲ್ಲ. ಇದೆಲ್ಲಾ ಊಹಾಪೋಹ ಅಂದರೂ ಜನ ಕೇಳುವುದಿಲ್ಲ. ತಮ್ಮ ಕೈಯಾರೆ ತಮ್ಮ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಸಿಗರೇಟ್​ ಸೇದುವುದರಿಂದ ಹೃದ್ರೋಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರಕ್ತಕಣಗಳು ಗಟ್ಟಿಯಾಗಿ ಹೆಪ್ಪುಕಟ್ಟಿ ಹಾರ್ಟ್​ ಅಟ್ಯಾಕ್​(Heart Attack) ಕೂಡ ಸಂಭವಿಸಬಹುದು. ಕ್ಯಾನ್ಸರ್​ ಅಂತ ಮಾರಕ ರೋಗಗಳು ಬರಬಹುದು. ಇಷ್ಟೆಲ್ಲಾ ಗೊತ್ತಿದರು ಜನ ಸಿಗರೇಟ್​ ಸೇದುವುದನ್ನ ಬಿಡುವುದಿಲ್ಲ. ಅಂಥವರಿಗೆ ನಾವು ಕೂಡ ಏನು ಹೇಳುವುದಿಲ್ಲ. ನಿಜಕ್ಕೂ ಸಿಗರೇಟ್​ನಿಂದ ಬೇಸತ್ತು, ಬಿಡಬೇಕು ಅಂದುಕೊಂಡಿದ್ದವರಿಗೆ ಇಲ್ಲಿವೆ ಕೆಲ ಟಿಪ್ಸ್​.

    ಕೆಲ ವರ್ಷಗಳ ಕಾಲ ಧೂಮಪಾನ ಮಾಡಿ ಸಡನ್​ಆಗಿ ತೊರೆದಾಗ ನಿಮಗೆ ಏನಾಗುತ್ತೆ ಗೊತ್ತಾ? ಕಲಿತ ಚಟವನ್ನು ಬಿಡುವುದು ತುಂಬ ಕಷ್ಟಕರವಾದ ಕೆಲಸ. ಸಿಗರೇಟ್ ಸೇದುವುದನ್ನು ಬಿಟ್ಟ ತಕ್ಷಣ ನಿಮ್ಮ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಗೊಂದಲ, ಕಿರಿಕಿರಿ, ಆತಂಕ, ಅತಿಯಾದ ಕೋಪ ಹಾಗೂ ಕೆಲವೊಮ್ಮೆ ಮಲಬ್ಧತೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹೀಗೆ ಆದ ತಕ್ಷಣ ಮತ್ತೆ ಧೂಮಪಾನ ಮಾಡಿ ಇನ್ನಷ್ಟು ಆರೋಗ್ಯವನ್ನ ಹಾಳು ಮಾಡಿಕೊಳ್ಳಬೇಡಿ. ಇತಂಹ ಸಂದರ್ಭವನ್ನು ನೀವು ಹೇಗೆ ನಿಭಾಯಿಸಬೇಕು ಅಂತ ಟಿಪ್ಸ್​ ಇಲ್ಲಿದೆ..

    ಧೂಮಪಾನ ತ್ಯಜಿಸಿದ ನಂತರ ಮತ್ತೆ ನೆನಪಾದರೆ ಹೀಗೆ ಮಾಡಿ

    01. ನೀವು ಧೂಮಪಾನವನ್ನು ಬಿಡಲು ನಿರ್ಧರಿಸಿದ ಕಾರಣಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ.

    02. ನಿಮಗೆ ಮತ್ತೆ ಸಿಗರೇಟ್​ ಸೇದಬೇಕೆಂದು ಅನಿಸಿದರೆ, ನಿಮ್ಮನ್ನು ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಿ, ಸದಾ ಬ್ಯುಸಿಯಾಗಿರಲು ಪ್ರಯತ್ನಿಸಿ. ಆಗ ನಿಮಗೆ ಮತ್ತೆ ಧೂಮಪಾನ ಮಾಡಬೇಕೆಂದು ಅನಿಸುವುದಿಲ್ಲ.

    03. ಧೂಮಪಾನ ತ್ಯಜಿಸಿದ ನಂತರ ನಿಮ್ಮ ದೇಹದಲ್ಲಿ ಬದಲಾವಣೆಗಳಾದರೆ, ಕಿರಿ ಕಿರಿ ಉಂಟಾದರೆ, ಮೂರು 'D'ಗಳನ್ನ ನೆನಪು ಮಾಡಿಕೊಳ್ಳಿ

    - ಹೆಚ್ಚಾಗಿ ನೀರು ಕುಡಿಯಿರಿ (Drink Water)
    - ಆಳವಾದ ಉಸಿರಾಟ ( Deep Breathing)
    - ನಿಮ್ಮ ಕಡುಬಯಕೆಗಳನ್ನು ಒಪ್ಪಿಕೊಳ್ಳಬೇಡಿ ( Do not acknowledge your cravings)



    ಧೂಮಪಾನ ಮಾಡಬೇಕೆಂದಾಗ ಐದರಿಂದ - ಹತ್ತು ನಿಮಿಷದ ನಂತರ ಹೋಗೋಣ ಎಂದು ನಿಮಗೆ ನೀವೆ ಅಂದುಕೊಳ್ಳಿ. ಮತ್ತೆ ನೆನಪಾದಾಗ ಇದನ್ನ ಪದೇ ಪದೇ ಮಾಡಿ. ನಿಮ್ಮ ದಿನನಿತ್ಯ ಕೆಲಸಗಳಲ್ಲಿ ಬದಲಾವಣೆ ಮಾಡಿಕೊಳ್ಳಿ. ಹೀಗೆ ಮಾಡಿದರೆ ಖಂಡಿತ ನಿಮಗೆ ಧೂಮಪಾನ ತ್ಯಜಿಸಲು ಸಹಾಯ ಮಾಡುತ್ತದೆ. ಒಮ್ಮೆ ಧೂಮಪಾನ ಸಾಕು ಎಂದು ಬಿಟ್ಟು ಮತ್ತೆ ಹಳೆ ಚಟವನ್ನೇ ಮುಂದುವರಿಸಬೇಡಿ. ಇದರಿಂದ ಸಮ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಅದರಲ್ಲೂ ಈಗಿನ ಯುವ ಪೀಳಿಗೆ ಕೈಯಲ್ಲಿ ಸೈಲ್​ಗಾಗಿ ಸಿಗರೇಟ್​ ಹಿಡಿದು ತಮ್ಮ ಆರೋಗ್ಯವನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂತವರು ಮೊದಲು ಧೂಮಪಾನ ಬಿಟ್ಟು ಒಳ್ಳೆ ಭವಿಷ್ಯ ರೂಪಿಸಿಕೊಳ್ಳಲಿ.

    ವರದಿ: ವಾಸುದೇವ್. ಎಂ
    Published by:Latha CG
    First published: