• Home
 • »
 • News
 • »
 • lifestyle
 • »
 • Weight Loss: ಅತ್ಯಂತ ಕಡಿಮೆ ಸಮಯದಲ್ಲಿ ತೂಕ ಇಳಿಸಿಕೊಂಡ ಶಹನಾಜ್ ಗುಟ್ಟು ರಟ್ಟು

Weight Loss: ಅತ್ಯಂತ ಕಡಿಮೆ ಸಮಯದಲ್ಲಿ ತೂಕ ಇಳಿಸಿಕೊಂಡ ಶಹನಾಜ್ ಗುಟ್ಟು ರಟ್ಟು

ಸೆಲೆಬ್ರಿಟಿ ಶಹನಾಜ್ ಕೌರ್ ಗಿಲ್

ಸೆಲೆಬ್ರಿಟಿ ಶಹನಾಜ್ ಕೌರ್ ಗಿಲ್

ಸೆಲೆಬ್ರಿಟಿ ಸಿಂಗರ್ ಶಹನಾಜ್ ಕೌರ್ ಗಿಲ್ ತನ್ನ ತೂಕ ಇಳಿಸುವ ಪ್ರಯಾಣದ ಬಗ್ಗೆ ಹಲವರಿಗೆ ಮಾದರಿ ಆಗಿದ್ದಾರೆ. ಅನೇಕ ಜನರಿಗೆ ಇದು ಚರ್ಚೆಯ ವಿಷಯವಾಗಿದೆ. ಬಿಗ್ ಬಾಸ್ ನಂತರ ಶಹನಾಜ್ ಅತ್ಯಂತ ವೇಗವಾಗಿ ತಮ್ಮ ತೂಕ ಕಳೆದುಕೊಂಡಿದ್ದಾರೆ.

 • Share this:

  ತೂಕ ಇಳಿಕೆ (Weight Loss) ಕಷ್ಟದ ಸಂಗತಿ. ಇದಕ್ಕಾಗಿ ತುಂಬಾ ತಾಳ್ಮೆ ಮತ್ತು ಕಠಿಣ ಪರಿಶ್ರಮ ಬೇಕಾಗುತ್ತದೆ. ಅದಕ್ಕೆ ಉತ್ತರವಾಗಿ ತೂಕ ಇಳಿಸಿ, ತೂಕ ಇಳಿಸುವವರಿಗೆ ಮಾದರಿಯಾಗಿ ನಿಂತಿದ್ದಾರೆ ಪ್ರಸಿದ್ಧ ಸೆಲೆಬ್ರಿಟಿ ಶಹನಾಜ್ ಕೌರ್ ಗಿಲ್ (Celebrity Shahnaz Kaur Gill). ಇಂದಿನ ಅತ್ಯಂತ ಪ್ರಸಿದ್ಧ ಸೆಲೆಬ್ರಿಟಿಗಳಲ್ಲಿ ಶಹನಾಜ್ ಕೌರ್ ಗಿಲ್ ಒಬ್ಬರಾಗಿದ್ದಾರೆ. ಹಿಂದಿ ಬಿಗ್ ಬಾಸ್ 13 ರ ಫೈನಲಿಸ್ಟ್ (Hindi Bigg Boss 13 Finalist) ಆಗಿದ್ದ ಶಹನಾಜ್, ತಮ್ಮ ವ್ಯಕ್ತಿತ್ವದಿಂದ ಭಾರತದ ಜನರ ಮನ ಗೆದ್ದಿದ್ದರು. ಈಗಲೂ ಶಹನಾಜ್ ತನ್ನ ಪಾಪ್ಯುಲಾರಿಟಿ ಕಡಿಮೆ ಆಗಿಲ್ಲ. ಹಿಂದಿ ಬಿಗ್ ಬಾಸ್ 13ರಲ್ಲಿ ಶಹನಾಜ್ ಹೆಚ್ಚು ತೂಕ ಹೊಂದಿದ್ದರು.


  ಅತ್ಯಂತ ವೇಗವಾಗಿ ತಮ್ಮ ತೂಕ ಕಳೆದುಕೊಂಡಿದ್ದಾರೆ ಶಹನಾಜ್


  ಆದರೆ ಈಗ ಅವರು ಜೀರೋ ಫಿಗರ್. ತೂಕ ಇಳಿಸಿ, ಹಲವರು ಆಶ್ಚರ್ಯ ಪಡುವಂತೆ ಮಾಡಿದ್ದಾರೆ. 28 ವರ್ಷದ ಶಹನಾಜ್ ತನ್ನ ತೂಕ ಇಳಿಸುವ ಪ್ರಯಾಣದ ಬಗ್ಗೆ ಹಲವರಿಗೆ ಮಾದರಿ ಆಗಿದ್ದಾರೆ. ಅನೇಕ ಜನರಿಗೆ ಇದು ಚರ್ಚೆಯ ವಿಷಯವಾಗಿದೆ. ಬಿಗ್ ಬಾಸ್ ನಂತರ ಶಹನಾಜ್ ಅತ್ಯಂತ ವೇಗವಾಗಿ ತಮ್ಮ ತೂಕ ಕಳೆದುಕೊಂಡಿದ್ದಾರೆ.


  ಹೀಗಾಗಿ ಹಲವು ಜನರು ಶಹನಾಜ್ ಇಷ್ಟು ವೇಗವಾಗಿ ತೂಕ ಇಳಿಸಿಕೊಂಡಿದ್ದು ಹೇಗೆ? ಅವರ ಫಿಟ್ನೆಸ್ ರಹಸ್ಯವೇನು ಎಂದು ಕೇಳುತ್ತಿದ್ದಾರೆ. ಈಗಾಗಲೇ ಅವರು ತಮ್ಮ ವೇಟ್ ಲಾಸ್ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದ್ರೆ ಇಲ್ಲಿ ಸೆಲೆಬ್ರಿಟಿ, ಸಿಂಗರ್ ಶಹನಾಜ್ ಕೌರ್ ಗಿಲ್ ವೇಟ್ ಲಾಸ್ ಹೇಗಿತ್ತು ನೋಡೋಣ.


  ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


  ಸೆಲೆಬ್ರಿಟಿ, ಸಿಂಗರ್ ಶಹನಾಜ್ ಕೌರ್ ಗಿಲ್ ತೂಕ ಇಳಿಕೆ ರಹಸ್ಯವೇನು?


  ಇತ್ತೀಚೆಗೆ ಶಹನಾಜ್ ಅವರು ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ತಮ್ಮ ತೂಕ ಇಳಿಕೆ ರಹಸ್ಯವನ್ನು ಶೇರ್ ಮಾಡಿದ್ದರು. ತೂಕ ಇಳಿಕೆಗೆ ಅವರು ಯಾವುದೇ ಒಲವಿನ ಆಹಾರ ಕ್ರಮ ಫಾಲೋ ಮಾಡಿಲ್ಲ. ಬದಲಾಗಿ ತನ್ನ ತೂಕ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡಿದ್ದರು.


  ಶಹನಾಜ್ ತನ್ನ ದಿನವನ್ನು ಚಹಾ ಮತ್ತು ಅರಿಶಿನ ನೀರಿನಿಂದ ಪ್ರಾರಂಭಿಸುತ್ತಾರೆ. ಜೊತೆಗೆ ಆಪಲ್ ಸೈಡರ್ ವಿನೆಗರ್ ಅನ್ನು ಸಹ ಕುಡಿಯುತ್ತಾರೆ. ಹಾಗಾದ್ರೆ ಅರಿಶಿನ ನೀರು ಅಥವಾ ಆಪಲ್ ಸೈಡರ್ ವಿನೆಗರ್ ನಿಜವಾಗಿಯೂ ತೂಕ ನಷ್ಟದಲ್ಲಿ ಪರಿಣಾಮಕಾರಿಯೇ?


  ತೂಕ ನಷ್ಟಕ್ಕೆ ಅರಿಶಿನ ನೀರು ಹೇಗೆ ಪ್ರಯೋಜನಕಾರಿ


  ದೆಹಲಿಯ ಪಟ್ಪರ್ಗಂಜ್ ಮತ್ತು ಉತ್ತರ ಪ್ರದೇಶದ ವೈಶಾಲಿಯ ಎಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಪ್ರಿಯಾಂಕಾ ಅಗರ್ವಾಲ್ ಪ್ರಕಾರ, ಆಹಾರದಲ್ಲಿ ಅರಿಶಿನವನ್ನು ಸೇರಿಸುವುದು ತೂಕ ನಷ್ಟಕ್ಕೆ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ. ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿದೆ. ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ ಆಗಿದೆ.


  ಮತ್ತು ಉರಿಯೂತದ ಗುಣಲಕ್ಷಣ ಹೊಂದಿದೆ. ಇದು ಜೀರ್ಣಕ್ರಿಯೆ ಸುಧಾರಿಸುವ ಮತ್ತು ಚಯಾಪಚಯ ಹೆಚ್ಚಿಸುವ ಔಷಧೀಯ ಗುಣ ಹೊಂದಿದೆ. ಇದು ನಿಮ್ಮ ತೂಕ ಇಳಿಕೆಗೆ ಸಹಕಾರಿ. ಅರಿಶಿನ ನೀರಿಗೆ ಒಂದು ಚಿಟಿಕೆ ಕರಿಮೆಣಸಿನಕಾಯಿ ಸೇರಿಸುವುದು ಮತ್ತಷ್ಟು ಪರಿಣಾಮಕಾರಿ ಆಗಿದೆ.


  ತಜ್ಞರ ಪ್ರಕಾರ, ಕರಿಮೆಣಸು ಪೈಪೆರಿನ್ ಎಂಬ ಅಂಶ ಹೊಂದಿದೆ. ಇದು ಕರ್ಕ್ಯುಮಿನ್ ಹೀರಿಕೊಳ್ಳುವಿಕೆ ಹೆಚ್ಚಿಸುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಗಂಭೀರ ಕಾಯಿಲೆ ತೆಗೆದು ಹಾಕುತ್ತದೆ.


  ನೀರಿನಲ್ಲಿ ಅರಿಶಿನ ಪ್ರಮಾಣ ಎಷ್ಟು ಇರಬೇಕು?


  ಡಾ.ಪ್ರಿಯಾಂಕಾ ಪ್ರಕಾರ, ದಿನಕ್ಕೆ 500 ರಿಂದ 2000 ಮಿ.ಗ್ರಾಂ ಅರಿಶಿನ ಸೇವಿಸುವುದು ದೇಹಕ್ಕೆ ಸಾಕಾಗುತ್ತದೆ.


  ತೂಕ ನಷ್ಟಕ್ಕೆ ಆಪಲ್ ಸೈಡರ್ ವಿನೆಗರ್


  ಡಾ. ಪ್ರಿಯಾಂಕಾ ಪ್ರಕಾರ, ವ್ಯಕ್ತಿಯು 15 ಮಿಲಿ ಆಪಲ್ ಸೈಡರ್ ವಿನೆಗರ್ ನ್ನು ಸೇವಿಸಿದರೆ, ಅವನು ಮೂರು ತಿಂಗಳಲ್ಲಿ ಸುಮಾರು 1.5 ಕೆಜಿ ಕಳೆದುಕೊಳ್ತಾನೆ. ಮೂರು ತಿಂಗಳ ಕಾಲ 30 ಮಿಲಿ ಎಸಿವಿ ಸೇವಿಸಿದವರ ತೂಕವು 1.7 ಕೆಜಿ ಕಡಿಮೆ ಮಾಡ್ತಾರೆ ಎಂದು ಅಧ್ಯಯನವೊಂದನ್ನು ಉಲ್ಲೇಖಿಸಿ ಹೇಳಿದ್ದಾರೆ.


  ಪೌಷ್ಟಿಕ ತಜ್ಞರ ಪ್ರಕಾರ, ಸಮತೋಲಿತ ಆಹಾರ ಸೇವನೆ ಮತ್ತು ವ್ಯಾಯಾಮ ಮಾಡಿದರೆ ಮಾತ್ರ ತೂಕ ನಷ್ಟಕ್ಕೆ ಆಪಲ್ ಸೈಡರ್ ವಿನೆಗರ್ ಕೆಲಸ ಮಾಡುತ್ತದೆ. ಸೇಬು ವಿನೆಗರ್ ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಗುಣ ಹೊಂದಿದೆ.


  ಇದು 5 ರಿಂದ 6 ಪ್ರತಿಶತ ಆಮ್ಲ ಹೊಂದಿರುದೆ. ಇನ್ಸುಲಿನ್ ಸಂವೇದನೆ ಕಡಿಮೆ ಮಾಡುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದರಲ್ಲಿ ಪ್ರೋಬಯಾಟಿಕ್ಸ್ ಕೂಡ ಸಮೃದ್ಧವಾಗಿದೆ.


  ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


  ಸಮತೋಲಿತ ಆಹಾರ ಸೇವಿಸಿ, ಕಡಿಮೆ ಕ್ಯಾಲೋರಿ ಆಹಾರ ಸೇವಿಸಿ


  ಸಮತೋಲಿತ ಆಹಾರ ಸೇವಿಸಿ, ಕಡಿಮೆ ಕ್ಯಾಲೋರಿ ಆಹಾರ ಸೇವಿಸಿ, ದೈಹಿಕ ಚಟುವಟಿಕೆಯತ್ತ ಗಮನಹರಿಸಿ. ನೀರಿಗೆ 2 ರಿಂದ 3 ಟೀ ಚಮಚ ಅಥವಾ 10 ರಿಂದ 15 ಮಿಲಿ ಸೇಬು ಸೈಡರ್ ವಿನೆಗರ್ ಸೇರಿಸಿ ಕುಡಿಯಬಹುದು.

  Published by:renukadariyannavar
  First published: