ಆಹಾರ ಪದಾರ್ಥಗಳಲ್ಲಿ ಖಾರ ಜಾಸ್ತಿಯಾದರೆ ಹೀಗೆ ಮಾಡಿ

Quick Ways to Tone Down a Dish Thats Too Spicy: ಹೀಗೆ ನಿಮ್ಮ ಆಹಾರದಲ್ಲಿ ಮೆಣಸು ಹೆಚ್ಚಾದರೆ ಎಸೆಯುವುದಕ್ಕಿಂತ ಕೆಲವು ಸರಳ ಉಪಾಯಗಳಿಂದ ಇವುಗಳನ್ನು ಮತ್ತೆ ಸರಿ ಮಾಡಲು ಸಾಧ್ಯವಿದೆ. ಅಂತಹ ಕೆಲವೊಂದು ವಿಧಾನಗಳು ಈ ರೀತಿಯಿವೆ.

zahir | news18-kannada
Updated:August 7, 2019, 3:21 PM IST
ಆಹಾರ ಪದಾರ್ಥಗಳಲ್ಲಿ ಖಾರ ಜಾಸ್ತಿಯಾದರೆ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
zahir | news18-kannada
Updated: August 7, 2019, 3:21 PM IST
ಅಡುಗೆ ಎಂಬುದು ಒಂದು ಕಲೆ. ಆ ಕಲೆ ಗೊತ್ತಿದ್ದರೆ ಮಾತ್ರ ಸ್ವಾದಿಷ್ಟ ಹಾಗೂ ರುಚಿಕರವಾದ ಆಹಾರಗಳನ್ನು ತಯಾರಿಸಲು ಸಾಧ್ಯ. ಆದರೆ ಕೆಲವೊಂದು ಬಾರಿ ನಾವು ಎಷ್ಟೇ ಎಚ್ಚರವಹಿಸಿದರು ಸಣ್ಣ ತಪ್ಪಿನಿಂದ ಅಡುಗೆ ರುಚಿ ಕೆಡುತ್ತದೆ. ಸಾಮಾನ್ಯವಾಗಿ ಆಹಾರ ಸುಟ್ಟು ಹೋಗುವುದು, ಖಾರ ಜಾಸ್ತಿಯಾಗುವುದು, ಎಣ್ಣೆ ಹೆಚ್ಚಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇನ್ನು ಕೆಲವರು ಆಹಾರದಲ್ಲಿ ಖಾರ ತುಸು ಹೆಚ್ಚಾದರೂ ಇಷ್ಟಪಡುವುದಿಲ್ಲ. ಆಹಾರದಲ್ಲಿ ಖಾರದ ಮಸಾಲೆ ಜಾಸ್ತಿ ಆದರೆ ತಿನ್ನಲು ಬಯಸುವುದಿಲ್ಲ. ಹೀಗೆ ನಿಮ್ಮ ಆಹಾರದಲ್ಲಿ ಮೆಣಸು ಹೆಚ್ಚಾದರೆ ಎಸೆಯುವುದಕ್ಕಿಂತ ಕೆಲವು ಸರಳ ಉಪಾಯಗಳಿಂದ ಇವುಗಳನ್ನು ಮತ್ತೆ ಸರಿ ಮಾಡಲು ಸಾಧ್ಯವಿದೆ. ಅಂತಹ ಕೆಲವೊಂದು ವಿಧಾನಗಳು ಈ ರೀತಿಯಿವೆ.

- ನೀವು ತರಕಾರಿ ಸಾರು ತಯಾರಿಸಿ ಖಾರ ಜಾಸ್ತಿಯಾಗಿದ್ದರೆ, ಅದಕ್ಕೆ ನೀವು ದೇಸಿ ತುಪ್ಪವನ್ನು ಸೇರಿಸಬಹುದು. ಇದರಿಂದ ಖಾರ ಕಡಿಮೆಯಾಗುವುದಲ್ಲದೆ ರುಚಿ ಹೆಚ್ಚುತ್ತದೆ.

- ಪದಾರ್ಥಗಳಲ್ಲಿನ ಖಾರ ಕಡಿಮೆ ಮಾಡಲು ಟೊಮ್ಯಾಟೊಗಳನ್ನು ಮಿಶ್ರಣ ಮಾಡಬಹುದು. ಹೀಗೆ ಬೆರಸುವ ಮುನ್ನ ಟೊಮ್ಯಾಟೊಗಳನ್ನು ಸಣ್ಣ ತುಂಡುಗಳನ್ನಾಗಿಸಿ ಬಾಣಲೆಯಲ್ಲಿ ಎಣ್ಣೆ ಸೇರಿಸಿ ಲಘುವಾಗಿ ಹುರಿಯಿರಿ. ಬಳಿಕ ಅದನ್ನು ಖಾರವಾಗಿರುವ ಪದಾರ್ಥಕ್ಕೆ ಸೇರಿಸಿ.

- ಇನ್ನು ಪದಾರ್ಥಗಳಲ್ಲಿನ ಮೆಣಸಿನ ತೀವ್ರತೆಯನ್ನು ಕಡಿಮೆ ಮಾಡಲು, ತಾಜಾ ಕೆನೆ, ಮೊಸರು ಕೂಡ ಮಿಶ್ರಣ ಮಾಡಬಹುದು.

- ಕಡಲೆ ಹಿಟ್ಟನ್ನು ಬಳಸಿ ಸಹ ಖಾರವನ್ನು ಕಡಿಮೆ ಮಾಡಬಹುದು. ಕಡಲೆ ಹಿಟ್ಟನ್ನು ಸ್ವಲ್ಪತ್ತು ಹುರಿದು, ಬಳಿಕವಷ್ಟೇ ಅದನ್ನು ನಿಮ್ಮ ಖಾರದ ಪದಾರ್ಥಕ್ಕೆ ಮಿಶ್ರಣ ಮಾಡಿಕೊಳ್ಳಿ.

- ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ. ಇದನ್ನೇ ಬಳಸಿ ಸಹ ಖಾರವನ್ನು ಕಡಿಮೆ ಮಾಡಿಕೊಳ್ಳಬಹುದು. ಆಲೂಗಡ್ಡೆಯನ್ನು ಸಾಮಾನ್ಯ ತುಂಡುಗಳನ್ನಾಗಿಸಿ ಸಾರು ಪದಾರ್ಥದೊಂದಿಗೆ ಮಿಶ್ರಣ ಮಾಡಿ. ಹೀಗೆ ಕೆಲವೊತ್ತು ಬಿಟ್ಟರೆ ಆಲೂಗಡ್ಡೆ ಖಾರವನ್ನು ಹೀರಿಕೊಳ್ಳುತ್ತವೆ.

ಇದನ್ನೂ ಓದಿ: ಕೆ.ಜಿ.ಎಫ್​  ತಂಡದ ಹೊಸ ಚಿತ್ರಕ್ಕೆ ವಿನಯ್ ರಾಜ್​ಕುಮಾರ್ ನಾಯಕ


First published:August 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...