Egg Curry: 5 ನಿಮಿಷದಲ್ಲಿ ಮೊಟ್ಟೆ ಕರಿ ಮಾಡಿ! ಇಲ್ಲಿದೆ ಸುಲಭ ವಿಧಾನ

ಪರೋಟಾದ ಜೊತೆಗೆ ಮೊಟ್ಟೆ ಕರಿ ಸವಿಯಲು ಚೆನ್ನಾಗಿರುತ್ತದೆ. ಅಥವಾ ಚಪಾತಿಯೊಂದಿಗೂ ಮೊಟ್ಟೆ ಕರಿ ಸೇರಿಸುತ್ತಾರೆ. ಅಷ್ಟೇ ಏಕೆ ಕುಚ್ಚಲು ಅನ್ನದ ಅಕ್ಕಿ ಮತ್ತು ಮೊಟ್ಟೆ ಕರಿ ಇದ್ದರೆ ಹೊಟ್ಟೆ ತುಂಬಾ ಊಟ ಮಾಡಬಹುದಾಗಿದೆ. ರೋಟಿ ಜೊತೆಗೂ ಮೊಟ್ಟೆ ಕರಿ ಸವಿಯಬಹುದಾಗಿದೆ. ಹಾಗಾಗಿ ಸುಲಭವಾಗಿ ಮೊಟ್ಟೆ ಕರಿ ಮಾಡುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ

ಮೊಟ್ಟೆ ಕರಿ

ಮೊಟ್ಟೆ ಕರಿ

  • Share this:
    ಮೊಟ್ಟೆ ಕರಿ (Egg Curry) ಸವಿದಿದ್ದೀರಾ? ಕೋಳಿ ಮೊಟ್ಟೆ (Chicken egg) ಬಳಸಿ ನಾನಾ ರೆಸಿಪಿ ತಯಾರಿಸಬಹುದು. ಅದರಲ್ಲೂ ಮೊಟ್ಟೆ ಕರಿ ಟೇಸ್ಟ್ (Taste)​ ಮಾಡಿದವರಿಗೆ ಅದರ ಟೇಸ್ಟ್​ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಅದರಂತೆ ಕೋಳಿ ಮೊಟ್ಟೆಯನ್ನು ಬಳಸಿ ಮೊಟ್ಟೆ ಕರಿ ಮಾಡುವ ಸರಳ ವಿಧಾನದ ಬಗ್ಗೆ ಮಾಹಿತಿಯನ್ನು ಇಲ್ಲಿ ಹಂಚಲಾಗಿದೆ.

    ಪರೋಟಾದ ಜೊತೆಗೆ ಮೊಟ್ಟೆ ಕರಿ ಸವಿಯಲು ಚೆನ್ನಾಗಿರುತ್ತದೆ. ಅಥವಾ ಚಪಾತಿಯೊಂದಿಗೂ ಮೊಟ್ಟೆ ಕರಿ ಸೇರಿಸುತ್ತಾರೆ. ಅಷ್ಟೇ ಏಕೆ ಕುಚ್ಚಲು ಅನ್ನದ ಅಕ್ಕಿ ಮತ್ತು ಮೊಟ್ಟೆ ಕರಿ ಇದ್ದರೆ ಹೊಟ್ಟೆ ತುಂಬಾ ಊಟ ಮಾಡಬಹುದಾಗಿದೆ. ರೋಟಿ ಜೊತೆಗೂ ಮೊಟ್ಟೆ ಕರಿ ಸವಿಯಬಹುದಾಗಿದೆ. ಹಾಗಾಗಿ ಸುಲಭವಾಗಿ ಮೊಟ್ಟೆ ಕರಿ ಮಾಡುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ

    ಬೇಕಾಗುವ ಸಾಮಗ್ರಿಗಳು

    6 ಬೇಯಿಸಿದ ಮೊಟ್ಟೆ, ಎಣ್ಣೆ, ಅರಶಿನ ಪುಡಿ, ಮೆಣಸಿನ ಪುಡಿ, 5 ಈರುಳ್ಳಿ, 3 ಟೊಮೆಟೊ, ಅರಶಿನ ಪುಡಿ, ಜೀರಿಗೆ, ಗರಂ ಮಸಾಲ, ಚಿಕನ್ ಮಸಾಲ, ಕಸೂರಿ ಮೆತಿ, ಕೊತ್ತಂಬರಿ ಸೊಪ್ಪು, ದನಿಯ ಪುಡಿ.

    ಮಾಡುವ ವಿಧಾನ:

    ಬೇಯಿಸಿದ ಮೊಟ್ಟೆ ಯನ್ನ ಚಾಕುವಿನಿಂದ ಉದ್ದಕ್ಕೆ ಗೆರೆ ಹಾಕಿ ( ಮಸಾಲೆ ಚೆನ್ನಾಗಿ ಎಳೆದುಕೊಳ್ಳಲು). ನಂತರ ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಮೊಟ್ಟೆಯನ್ನು ಫ್ರೈ ಮಾಡಿ, 1/4 ಚಮಚ ಅರಶಿಣ ಪುಡಿ , 1/2 ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ,ಸ್ವಲ್ಪ ನೀರು ಸೇರಿಸಿ ಫ್ರೈ ಮಾಡಿ.

    ನಂತರ ಈರುಳ್ಳಿ ಮತ್ತು ಟೊಮೋಟೊ ವನ್ನು ಚೆನ್ನಾಗಿ ತೊಳೆದು, ತುಂಡರಿಸಿಟ್ಟುಕೊಳ್ಳಿ.

    ಒಂದು ಪಾತ್ರೆಗೆ ಎಣ್ಣೆ ಹಾಕಿ,ಎಣ್ಣೆ ಬಿಸಿ ಆದ ಮೇಲೆ 1 ಚಮಚ ಜೀರಿಗೆ,3 ಒಣ ಮೆಣಸು ಕೈ ಇಂದ ತುಂಡರಿಸಿ ಹಾಕಿ, 8 ಬೆಳ್ಳುಳ್ಳಿ ಎಸಳು,ತುಂಡರಿಸಿದ ಈರುಳ್ಳಿ, 1 ಚಮಚ ಶುಂಠಿ ಪೇಸ್ಟ್, 1/2 ಚಮಚ ಅರಶಿಣ ಪುಡಿ,1/2 ಚಮಚ ಮೆಣಸಿನ ಪುಡಿ, 1/2 ಚಮಚ ದನಿಯ ಪುಡಿ , ತುಂಡರಿಸಿದ ಟೊಮೋಟೊ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 2 ನಿಮಿಷ ಬೇಯಲು ಇಡಿ.

    ನಂತರ 1 ಚಮಚ ಚಿಕನ್ ಮಸಾಲ ಹಾಕಿ , ಸ್ವಲ್ಪ ಬಿಸಿ ನೀರು ಸೇರಿಸಿ,4-5 ನಿಮಿಷಗಳ ಕಾಲ ಬೇಯಲು ಇಡಿ.



    ನಂತರ 2 ಚಮಚ ಗರಂ ಮಸಾಲೆ ಹಾಕಿ,ಫ್ರೈ ಮಾಡಿದ ಮೊಟ್ಟೆ ಹಾಕಿ, ಚೆನ್ನಾಗಿ ಮಿಶ್ರ ಮಾಡಿ.
    ಕೊನೆಯಲ್ಲಿ ಕಸೂರಿ ಮೇತಿ, ಕೊತ್ತಂಬರಿ ಸೊಪ್ಪು ಸೇರಿಸಿ, 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿದರೆ ಮೊಟ್ಟೆ ಕರಿ ಸಿದ್ದ.

    ಇದನ್ನೂ ಓದಿ: Garlic Benefits: ಬಿಪಿ ಕಂಟ್ರೋಲ್ ಮಾಡುತ್ತೆ ಬೆಳ್ಳುಳ್ಳಿ! ವೇಯ್ಟ್ ಲಾಸ್​​ಗೂ ಬೆಸ್ಟ್ 

    ಲಹೋರಿ ಗ್ರೀನ್ ಚಿಕನ್​

    ಮಾಡುವ ವಿಧಾನ:

    1.6 ಕೆಜಿ ಚಿಕನ್, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಹಸಿ ಮೆಣಸು, ಎಣ್ಣೆ , ದನದ ತುಪ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಅರಶಿನ ಪುಡಿ, 1 ಕಪ್ ಮೊಸರು, ಕಾಳು ಮೆಣಸಿನಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಫ್ರೆಶ್ ಕ್ರೀಮ್.

    ಮಾಡುವ ವಿಧಾನ:

    1 ಕಪ್ ಪುದೀನ ಸೊಪ್ಪು, 1 ಕಪ್ ಕೊತ್ತಂಬರಿಸೊಪ್ಪು, 4 ಹಸಿ ಮೆಣಸನ್ನು ಒಂದು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.

    ಒಂದು ಪಾತ್ರೆಗೆ ಒಂದು ಕಪ್ ಎಣ್ಣೆ ಹಾಕಿ, 2-3 ಚಮಚ ತುಪ್ಪ ಹಾಕಿ,2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ,1/2 ಚಮಚ ಮೆಣಸಿನ ಪುಡಿ,1/2 ಚಮಚ ಅರಶಿಣ ಪುಡಿ ಹಾಕಿ ಚೆನ್ನಾಗಿ ಹುರಿಯಿರಿ.
    ನಂತರ ತೊಳೆದಿಟ್ಟು ಕೊಂಡ ಚಿಕನ್,4 ಹಸಿ ಮೆಣಸು ತುಂಡರಿಸಿ ಹಾಕಿ, 10 ನಿಮಿಷಗಳ ಕಾಲ ಫ್ರೈ ಮಾಡಿ.

    ನಂತರ ಮಿಕ್ಸಿ ಮಾಡಿಟ್ಟ ಮಿಶ್ರಣ ವನ್ನು ಸೇರಿಸಿ, 3 ನಿಮಿಷಗಳ ವರೆಗೆ ಬೇಯಲು ಇಡಿ.
    ನಂತರ ಮೊಸರು ಸೇರಿಸಿ 3 ನಿಮಿಷಗಳ ಕಾಲ ಬೇಯಲು ಇಡಿ.
    ನಂತರ 1 ಚಮಚ ಕಾಳುಮೆಣಸಿನ ಪುಡಿ,1 ಚಮಚ ಜೀರಿಗೆ ಪುಡಿ,ಕೊತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಬೇಯಲು ಬಿಡಿ.



    ನಂತರ ಫ್ರೆಶ್ ಕ್ರೀಮ್ ಹಾಕಿ ಚೆನ್ನಾಗಿ ಮಿಶ್ರ ಮಾಡಿ , ಸಣ್ಣ ಉರಿಯಲ್ಲಿ ಬೇಯಿಸಿ.
    ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಲಹೋರಿ ಗ್ರೀನ್ ಚಿಕನ್ ಸವಿಯಲು ಸಿದ್ದ.
    Published by:Harshith AS
    First published: