ನೂಡಲ್ಸ್ (Noodles) ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅತ್ಯಂತ ಪ್ರಿಯವಾದ ಖಾದ್ಯ (food) ಎಂದೆನಿಸಿದೆ. ಜೋರಾಗಿ ಹೊಟ್ಟೆ ಹಸಿವಾದಾಗ ನಮಗೆಲ್ಲಾ ನೆನಪಾಗುವುದೇ 2 ನಿಮಿಷದಲ್ಲಿ ಸಿದ್ಧವಾಗುವ ಮ್ಯಾಗಿ ನೂಡಲ್ಸ್. ನೂಡಲ್ಸ್ನ ಸ್ವಾದ ಹಾಗೂ ಘಮವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದಾದಲ್ಲಿ ನೀವು ಅದಕ್ಕೆ ತರಕಾರಿ, ಪನೀರ್, ಚೀಸ್, ಗರಮ್ ಮಸಾಲೆಗಳನ್ನು ಸೇರಿಸಬೇಕಾಗುತ್ತದೆ. ಇದರಿಂದ ನೂಡಲ್ಸ್ ಅನ್ನು ಇನ್ನಷ್ಟು ಆರೋಗ್ಯಕರವಾಗಿ (Healthy) ತಯಾರಿಸಬಹುದು ಹಾಗೂ ಅದರ ರುಚಿಯೂ ಇಮ್ಮಡಿಗೊಳ್ಳುತ್ತದೆ.ನೂಡಲ್ಸ್ ಮಾಡುವುದು ಅಮ್ಮಂದಿರಿಗೆ (Mother) ಯಾವಾಗಲೂ ತಲೆನೋವಿನ ಕೆಲಸ. ಏಕೆಂದರೆ ಬೇರೆ ತಿಂಡಿಗಳನ್ನು ಮಾಡಿದಂತೆ ಇದನ್ನು ವೇಗವಾಗಿ ಮಾಡಲಾಗುವುದಿಲ್ಲ ಎಂಬುದು ಅವರುಗಳ ಅನಿಸಿಕೆಯಾಗಿದೆ.
ಹಾಗಾಗಿಯೇ ರಜಾದಿನಗಳಲ್ಲಿ ನೂಡಲ್ಸ್ಗಳನ್ನು ತಯಾರಿಸುವುದು ಎಂಬುದಾಗಿ ತಾಯಂದಿರು ನಿಶ್ಚಯಿಸಿರುತ್ತಾರೆ. ಆದರೆ ಇಂದಿನ ಲೇಖನದಲ್ಲಿ ತ್ವರಿತವಾಗಿ ಅದೂ ಕೂಡ ವಾರದ ಮಧ್ಯಭಾಗದಲ್ಲಿ ರುಚಿಕರ ನೂಡಲ್ಸ್ ಹೇಗೆ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.
ಚಿಲ್ಲಿ ಗಾರ್ಲಿಕ್ ವೆಜ್ ನೂಡಲ್ಸ್
ಖಾರ ಖಾರವಾಗಿ ಚಳಿಯಲ್ಲಿ ಬೆಚ್ಚನೆಯ ಅನುಭೂತಿಯನ್ನುಂಟು ಮಾಡುವ ಈ ನೂಡಲ್ಸ್ ಅನ್ನು ಸರಳವಾಗಿ, ಸುಲಭವಾಗಿ ತಯಾರಿಸಬಹುದು. ನೂಡಲ್ಸ್ಗೆ ನೀವು ಈರುಳ್ಳಿ, ಸ್ಪ್ರಿಂಗ್ ಆನಿಯನ್, ಬೆಳ್ಳುಳ್ಳಿ ಹಾಕಿ ಇನ್ನಷ್ಟು ಸ್ವಾದಮಯವಾಗಿ ತಯಾರಿಸಬಹುದು. ಚೈನೀಸ್ ರುಚಿಯನ್ನು ಸೇರಿಸಲು ಸೋಯಾ ಸಾಸ್, ಟೊಮ್ಯಾಟೊ ಕೆಚಪ್, ಚಿಲ್ಲಿ ಸಾಸ್, ವಿನೇಗರ್ ಅನ್ನು ಸೇರಿಸಿ.
ಶೆಜ್ವಾನ್ ನೂಡಲ್ಸ್
ಮೊದಲಿಗೆ ನೀವು ನೂಡಲ್ಸ್ ಬೇಯಿಸಬೇಕು ನಂತರ ಪ್ಯಾನ್ನಲ್ಲಿ ಎಣ್ಣೆ ಹಾಕಿ ನೀರುಳ್ಳಿಯನ್ನು ಹುರಿದುಕೊಳ್ಳಬೇಕು. ನೀರುಳ್ಳಿ ಚಿನ್ನದ ಬಣ್ಣಕ್ಕೆ ಬಂದಾಗ ಬೆಳ್ಳುಳ್ಳಿ ಹಾಕಿ ತಿರುಗಿಸಿ.
ಇದಕ್ಕೆ ನೀವು ಶೆಜ್ವಾನ್ ಸಾಸ್ ಸೇರಿಸಬೇಕು
ಕ್ಯಾಪ್ಸಿಕಮ್, ಕ್ಯಾಬೇಜ್, ಸ್ಪ್ರಿಂಗ್ ಆನಿಯನ್ ಸೇರಿಸಿ
ಉಪ್ಪು ಹಾಗೂ ಕರಿಮೆಣಸು ಸೇರಿಸಿ
ಬೇಯಿಸಿದ ನೂಡಲ್ಸ್ ಸೇರಿಸಿ ಒಮ್ಮೆ ಬೆರೆಸಿಕೊಳ್ಳಿ
ಸ್ವಲ್ಪ ಸಾಸ್, ವಿನೇಗರ್ ಅನ್ನು ಕೊನೆಯಲ್ಲಿ ಮಿಶ್ರ ಮಾಡಿ. 15 ನಿಮಿಷದಲ್ಲಿ ನಿಮ್ಮ ಶೆಜ್ವಾನ್ ನೂಡಲ್ಸ್ ಸಿದ್ಧ
ರೋಟಿ ನೂಡಲ್ಸ್
ರೋಟಿ ನೂಡಲ್ಸ್ ಅನ್ನು ಕ್ಷಣಾರ್ಧದಲ್ಲಿ ತಯಾರಿಸಬಹುದು. ಹಿಂದಿನ ದಿನದ ಚಪಾತಿ ಅಥವಾ ರೋಟಿಯನ್ನು ಈ ನೂಡಲ್ಸ್ಗೆ ಬಳಸಬಹುದು. ಪ್ಯಾನ್ನಲ್ಲಿ ಎಣ್ಣೆ ಹಾಕಿ ಅದು ಬಿಸಿಯಾಗುತ್ತಿದ್ದಂತೆಯೇ ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಪ್ಯಾನ್ಗೆ ಹಾಕಿ.
ಇದನ್ನೂ ಓದಿ: ಈ ಲಕ್ಷಣಗಳು ಹಾರ್ಟ್ ಅಟ್ಯಾಕ್ನ ಸೂಚನೆ ಇರಬಹುದು, ಎಚ್ಚರ!
ನಂತರ ನೀರುಳ್ಳಿ ಜೊತೆಗೆ ಇತರ ತರಕಾರಿಗಳನ್ನು ಪ್ಯಾನ್ಗೆ ಸೇರಿಸಿ. ಚೈನೀಸ್ ರುಚಿಗಾಗಿ ಸೋಯಾ ಸಾಸ್, ಕೆಚಪ್, ಚಿಲ್ಲಿ ಸಾಸ್, ವಿನೇಗರ್ ಅನ್ನು ಮಿಶ್ರ ಮಾಡಿ ಬೆರೆಸಿಕೊಳ್ಳಿ.
ಉಪ್ಪು ಹಾಗೂ ಕರಿಮೆಣಸಿನ ಹುಡಿ ಸೇರಿಸಿ. ಇದಕ್ಕೆ ರೋಟಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಬೆರೆಸಿಕೊಳ್ಳಿ. ಹೀಗೆ ಇಂಡಿಯನ್ ಚೈನೀಸ್ ನೂಡಲ್ಸ್ ನೀವು ಸಿದ್ಧಪಡಿಸಬಹುದು.
ಸ್ಪೈಸಿ ಚಿಲ್ಲಿ ಆಯಿಲ್ ರಾಮೆನ್
ಮನೆಯಲ್ಲೇ ಇರುವ ಸಾಮಾಗ್ರಿಗಳನ್ನು ಬಳಸಿಕೊಂಡು ಚಿಲ್ಲಿ ಆಯಿಲ್ ರಾಮೆನ್ ನೂಡಲ್ಸ್ ಅನ್ನು ಕ್ಷಣಾರ್ಧದಲ್ಲಿ ತಯಾರಿಸಬಹುದು.
ನೂಡಲ್ಸ್ ಅನ್ನು ಮೊದಲಿಗೆ ಬೇಯಿಸಿ. ನಂತರ ಸಣ್ಣ ಪಾತ್ರೆ ತೆಗೆದುಕೊಂಡು ಅದರಲ್ಲಿ ಕತ್ತರಿಸಿದ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಸ್ಪ್ರಿಂಗ್ ಆನಿಯನ್ಸ್, ಎಳ್ಳು, ನೂಡಲ್ಸ್ ಸ್ಪೈಸ್ ಮಿಕ್ಸಚರ್ ಹಾಗೂ ಮೆಣಸಿನ ಹುಡಿ ಸೇರಿಸಿ.
ಪ್ಯಾನ್ಗೆ ಎರಡು ಚಮಚ ಎಣ್ಣೆಹಾಕಿ ಬಿಸಿ ಮಾಡಿ
ಈ ಎಣ್ಣೆಯನ್ನು ಮಸಾಲೆ ಪಾತ್ರೆಗೆ ಹಾಕಿ
ನೂಡಲ್ಸ್ನಲ್ಲಿರುವ ನೀರು ಬಸಿಯಿರಿ ಹಾಗೂ ಮಸಾಲೆ ಮಿಶ್ರಿತ ಎಣ್ಣೆಯನ್ನು ನೂಡಲ್ಸ್ಗೆ ಬೆರೆಸಿ
ಚೆನ್ನಾಗಿ ಮಿಶ್ರ ಮಾಡಿ ಸವಿಯಿರಿ
ಸಾಸಿ ರಾಮೆನ್ ನೂಡಲ್ಸ್
ಮಸಾಲೆಯುಕ್ತ ಸಾಸ್ನಲ್ಲಿ ರಾಮೆನ್ ನೂಡಲ್ಸ್ಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ
ಮೊದಲಿಗೆ ಕಾರ್ನ್ ಹುಡಿಯನ್ನು ನೀರಿನಲ್ಲಿ ಮಿಶ್ರ ಮಾಡಿ. ಇನ್ನು ಪ್ರತ್ಯೇಕ ಪಾತ್ರೆ ತೆಗೆದುಕೊಂಡು ಎಲ್ಲಾ ಸಾಸ್ ಮಿಶ್ರಣಗಳನ್ನು ವಿಕ್ಸ್ ಮಾಡಿಕೊಳ್ಳಿ. 4-5 ನಿಮಿಷ ಮಿಶ್ರಣವನ್ನು ಕುದಿಸಿಕೊಳ್ಳಿ ಹಾಗೂ ಸಣ್ಣ ಉರಿಗೆ ಬದಲಾಯಿಸಿ. ಕಾರ್ನ್ ಸ್ಟಾರ್ಚ್ ಅನ್ನು ಈಗ ನೀರಿನೊಂದಿಗೆ ಮಿಶ್ರ ಮಾಡಿ.
ಇದನ್ನೂ ಓದಿ: ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ರಾಜನೊಬ್ಬ ಬುದ್ಧಿ ಕಲಿತ ಕಥೆ
ಇದೀಗ ನಾಲ್ಕು ಕಪ್ ನೀರನ್ನು ಹೆಚ್ಚಿನ ಉರಿಯಲ್ಲಿ ಕುದಿಸಿ. ರಾಮೆನ್ (ನೂಡಲ್ಸ್) ಅನ್ನು ನೀರಿಗೆ ಸೇರಿಸಿ ಹಾಗೂ ಚೆನ್ನಾಗಿ ಬೇಯಲು ಬಿಡಿ.
ತದನಂತರ ನೂಡಲ್ಸ್ನಲ್ಲಿರುವ ನೀರನ್ನು ಬಸಿಯಿರಿ ಹಾಗೂ ಸಾಸ್ ಅನ್ನು ಅದರ ಮೇಲೆ ಹಾಕಿ. ಉರಿಯನ್ನು ಮಧ್ಯಮದಲ್ಲಿಡಿ ನೂಡಲ್ಸ್ ಬೇಯಿಸಿಕೊಳ್ಳಿ. ನೂಡಲ್ಸ್ಗೆ ಎಳ್ಳಿನ ಬೀಜ ಹಾಗೂ ಸ್ಪ್ರಿಂಗ್ ಆನಿಯನ್ ಬೆರೆಸಿ ಸಿದ್ಧಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ