ಬಿಸಿ ಬಿಸಿಯಾದ ಮೃದುವಾದ ಇಡ್ಲಿ (Idli) ಬೆಳಿಗ್ಗೆ ಬೆಳಿಗ್ಗೆ (Morning) ತಟ್ಟೆಗೆ ಹಾಕಿಕೊಂಡು ಅದರ ಜೊತೆಗೆ ತೆಂಗಿನಕಾಯಿ ಚಟ್ನಿ (Coconut Chutney) ಮತ್ತು ಬಿಸಿ ಬಿಸಿ ಸಾಂಬಾರ್ನೊಂದಿಗೆ ತಿನ್ನುವುದು ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ಇಡ್ಲಿ ದಕ್ಷಿಣ ಭಾರತದ (South India) ಸಾರ್ವಕಾಲಿಕ ನೆಚ್ಚಿನ ಉಪಾಹಾರ ಆಯ್ಕೆಯಾಗಿದೆ ಅಂತ ಹೇಳಬಹುದು. ಈ ದಕ್ಷಿಣ ಭಾರತದ ಉಪಾಹಾರವನ್ನು ಜನರು ಬಿಸಿ ಸಾಂಬಾರ್ ಮತ್ತು ವಿಧ ವಿಧವಾದ ಚಟ್ನಿಯೊಂದಿಗೆ ಸೇವಿಸುತ್ತಾರೆ. ಹಾಗೆಯೇ ಈ ಇಡ್ಲಿಯನ್ನು ಸಹ ಅನೇಕ ರೀತಿಯಾಗಿ ಮಾಡುತ್ತಾರೆ ಅಂತ ಹೇಳಬಹುದು. ಹಬೆಯಲ್ಲಿ ಬೇಯಿಸಿದ, ಹಗುರವಾದ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾದ ಇಡ್ಲಿ ಫಿಟ್ನೆಸ್ ಮತ್ತು ಆರೋಗ್ಯ ಉತ್ಸಾಹಿಗಳಿಗೆ ಅಚ್ಚುಮೆಚ್ಚಿನದಾಗಿದೆ. ಅವುಗಳು ಕಡಿಮೆ ಕ್ಯಾಲೊರಿಗಳನ್ನು ಹೊಂದಿವೆ, ಫೈಬರ್ ನಿಂದ ಸಮೃದ್ಧವಾಗಿವೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ಇದು ಆರೋಗ್ಯಕರ ಭಾರತೀಯ ಭಕ್ಷ್ಯಗಳಲ್ಲಿ ಒಂದಾಗಿದೆ ಅಂತ ಹೇಳಬಹುದು. ಅಷ್ಟೇ ಅಲ್ಲ, ಇಡ್ಲಿಯನ್ನು ಸೇವಿಸುವುದು ನಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ, ಎಂದರೆ ನಿಮ್ಮ ಉಪಾಹಾರ ಮಾಡಿದ ನಂತರ ಯಾವುದೇ ರೀತಿಯ ಕಡುಬಯಕೆಗಳು ಸಹ ನಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ ಮತ್ತು ಯಾವುದೇ ರೀತಿಯ ಜಂಕ್ ಫುಡ್ ಗಳ ಕಡೆಗೆ ನಾವು ಆಕರ್ಷಿತರಾಗುವುದಿಲ್ಲ.
ಆದ್ದರಿಂದ, ನೀವು ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಇದ್ದರೆ, ನಿಮ್ಮ ತೂಕ ಇಳಿಸುವ ಆಹಾರದಲ್ಲಿ ಸೇರಿಸಿಕೊಳ್ಳಲು ಸೂಕ್ತವಾದ 5 ತ್ವರಿತ ಮತ್ತು ಸುಲಭವಾದ ಇಡ್ಲಿ ಪಾಕವಿಧಾನಗಳ ಪಟ್ಟಿಯನ್ನು ನಾವು ಇಲ್ಲಿ ಸಂಗ್ರಹಿಸಿದ್ದೇವೆ ನೋಡಿ.
ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದಾದ 5 ತ್ವರಿತ ಮತ್ತು ಸುಲಭವಾದ ಇಡ್ಲಿ ಪಾಕವಿಧಾನಗಳು:
1. ಓಟ್ಸ್ ಇಡ್ಲಿ: ಓಟ್ಸ್ ಪ್ರಮುಖ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ನ ಉತ್ತಮ ಮೂಲವಾಗಿದೆ. ಈ ಓಟ್ಸ್ ಇಡ್ಲಿಯಲ್ಲಿ ಕಡಿಮೆ ಕ್ಯಾಲೊರಿಗಳಿವೆ ಮತ್ತು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ. ಅಷ್ಟೇ ಅಲ್ಲದೆ ಇದು ಆರೋಗ್ಯಕರ ಮಾತ್ರವಲ್ಲದೇ, ಬಾಯಿಗೆ ರುಚಿಕರ ಸಹ ಆಗಿರುತ್ತದೆ.
ಇದನ್ನೂ ಓದಿ: ಗುಡ್ನ್ಯೂಸ್, 2023ರಲ್ಲಿ ವೀಸಾ ಇಲ್ಲದೇ ನೀವು ಈ 10 ದೇಶಗಳಿಗೆ ಪ್ರಯಾಣ ಮಾಡಬಹುದು!
2. ಬೀಟ್ರೂಟ್ ಇಡ್ಲಿ: ಬೀಟ್ರೂಟ್ ಅನೇಕ ರೀತಿಯ ಪೋಷಕಾಂಶಗಳನ್ನು ಹೊಂದಿರುವ ತರಕಾರಿಯಾಗಿದ್ದು, ಇದನ್ನು ಸಾಮಾನ್ಯವಾಗಿ ಸೂಪ್ ಗಳು ಮತ್ತು ಸಲಾಡ್ ಗಳಿಗೆ ಸೇರಿಸಲಾಗುತ್ತದೆ. ಈ ಪೌಷ್ಟಿಕ ತರಕಾರಿಯನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಲು ನಾವು ಹೆಚ್ಚು ರೋಮಾಂಚಕಾರಿ ಮಾರ್ಗವನ್ನು ಹೊಂದಿದ್ದೇವೆ. ಈ ಬೀಟ್ರೂಟ್ ಇಡ್ಲಿ ತೂಕ ಇಳಿಸಿಕೊಳ್ಳಲು ಸೂಕ್ತವಾಗಿದೆ.
3. ಸೋರೆಕಾಯಿ ಇಡ್ಲಿ: ಅನೇಕ ಜನರು ಲೌಕಿ (ಸೋರೆಕಾಯಿ) ತಿನ್ನುವುದಿಲ್ಲ, ಏಕೆಂದರೆ ಅದು ನೀರಸ ಮತ್ತು ರುಚಿಯಿಲ್ಲದ್ದು ಅಂತ ಅವರು ಭಾವಿಸುತ್ತಾರೆ. ಈ ಪೌಷ್ಟಿಕ ತರಕಾರಿಯನ್ನು ನೀವು ಆನಂದಿಸುವಂತೆ ಮಾಡಲು ಈ ಸೂಪರ್ ಸುಲಭ ಲೌಕಿ ಇಡ್ಲಿಗಳನ್ನು ತಯಾರಿಸಿ ಮತ್ತು ಅವುಗಳನ್ನು ನಿಮ್ಮ ತೂಕ ಇಳಿಸುವ ಆಹಾರದಲ್ಲಿ ಸೇರಿಸಿಕೊಳ್ಳಿ.
ಇದನ್ನೂ ಓದಿ: ತೂಕ ನಷ್ಟಕ್ಕೆ ಕ್ರಿಯೇಟಿವ್ ಆರ್ಟ್ ಥೆರಪಿ ಪ್ರಯೋಜನಕಾರಿ; ಬೊಜ್ಜು ಯಾವಾಗಪ್ಪಾ ಕರಗುತ್ತೆ ಅನ್ನೋರಿಗೆ ಇಲ್ಲಿಗೆ ಉತ್ತರ!
4. ಕ್ಯಾರೆಟ್ ಇಡ್ಲಿ: ಕ್ಯಾರೆಟ್ ಗಳು ಕರಗುವ ಮತ್ತು ಕರಗದ ನಾರುಗಳನ್ನು ಹೊಂದಿರುತ್ತವೆ, ಇದು ತೂಕ ನಷ್ಟಕ್ಕೆ ಸೂಕ್ತವಾಗಿದೆ. ಈ ಕಡಿಮೆ ಕ್ಯಾಲೊರಿ ಕ್ಯಾರೆಟ್ ಇಡ್ಲಿ ರುಚಿ ಮತ್ತು ಪೌಷ್ಠಿಕಾಂಶದ ಪರಿಪೂರ್ಣ ಸಮತೋಲನವನ್ನು ಹೊಂದಿದೆ ಮತ್ತು ಇತರ ಕೊಬ್ಬಿನ ಆಹಾರಗಳನ್ನು ಅತಿಯಾಗಿ ಸೇವಿಸುವುದನ್ನು ತಡೆಯುತ್ತದೆ.
5. ಮೊಳಕೆಕಾಳುಗಳ ಇಡ್ಲಿ: ಈ ಪಾಕವಿಧಾನದಲ್ಲಿ, ನಾವು ಕ್ಲಾಸಿಕ್ ಉದ್ದಿನ ಬೇಳೆ ಹಿಟ್ಟನ್ನು ಮೊಳಕೆಕಾಳುಗಳಿಂದ ತಯಾರಿಸುವ ಮೂಲಕ ತಿರುವನ್ನು ನೀಡಿದ್ದೇವೆ. ಈ ಇಡ್ಲಿಗಳನ್ನು ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಜೋಡಿಸಿಕೊಂಡು ತಿನ್ನಬಹುದು. ಇದನ್ನು ದಕ್ಷಿಣ ಭಾರತದ ಸ್ಪ್ರೆಡ್ ಆಗಿ ಸಹ ನೀವು ಪರಿವರ್ತಿಸಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ