• Home
  • »
  • News
  • »
  • lifestyle
  • »
  • Quarrel: ಗಂಡ ಹೆಂಡತಿ ಜಗಳ ಉಂಡು ಮಲಗಿದ ಮೇಲೂ ಇದ್ದರೆ ಈ ರೀತಿಯಾಗುತ್ತಂತೆ ಹುಷಾರ್​!

Quarrel: ಗಂಡ ಹೆಂಡತಿ ಜಗಳ ಉಂಡು ಮಲಗಿದ ಮೇಲೂ ಇದ್ದರೆ ಈ ರೀತಿಯಾಗುತ್ತಂತೆ ಹುಷಾರ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಿನ ಜಗಳವಾಡುವುದು ಒಳ್ಳೆಯದಲ್ಲ ಬಿಡಿ, ವಾಸ್ತವವಾಗಿ ಜಗಳವಾಡುವುದು ದಂಪತಿಗಳ ನಡುವಿನ ಆರೋಗ್ಯಕರ ಅಭ್ಯಾಸವೆಂದು ಪರಿಗಣಿಸಲಾಗಿದೆ. ಆದರೆ ಜಗಳಗಳು ಇಡೀ ದಿನವನ್ನು ಮೀರಿದರೆ ಮತ್ತು ದಂಪತಿಗಳು ಕೋಪದಿಂದ ಮಲಗಲು ಹೋದರೆ ಅಲ್ಲಿಗೆ ಆ ಜಗಳ ಮುಂದಿನ ದಿನಗಳಿಗೂ ಸಹ ಮುಂದುವರೆಯುತ್ತದೆ ಅಂತ ಹೇಳಬಹುದು.

ಮುಂದೆ ಓದಿ ...
  • Share this:

ವೈವಾಹಿಕ ಜೀವನ ಎಂದರೆ ಅದರಲ್ಲಿ ಕಷ್ಟ-ಸುಖ, ಸರಸ-ವಿರಸ, ಒಬ್ಬರ ಮೇಲೆ ಇನ್ನೊಬ್ಬರು ಮುನಿಸಿಕೊಳ್ಳುವುದು, ಜಗಳವಾಡುವುದು, ರಾಜಿಯಾಗುವುದು ಎಲ್ಲವೂ ಇದ್ದಿದ್ದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದರೆ ‘ಗಂಡ ಹೆಂಡತಿ ಜಗಳ ಉಂಡು ಮಲಗೋ (Sleeping) ತನಕ’ಎಂಬಂತೆ ಇದ್ದರೆ ಸಂಸಾರ (Family) ಜೀವನಕ್ಕೆ ಒಳ್ಳೆಯದು ಅಂತ ಹೇಳಬಹುದು. ಬೆಳಿಗ್ಗೆ ಏನೇ ಮನಸ್ತಾಪಗಳು, ಜಗಳಗಳು ಆಗಿದ್ದರೂ ಸಹ ಗಂಡ-ಹೆಂಡತಿ (Wife) ಇಬ್ಬರು ಅದನ್ನು ಅಂದೇ ಬಗೆಹರಿಸಿಕೊಳ್ಳುವುದು ವೈವಾಹಿಕ ಜೀವನಕ್ಕೆ ಒಳ್ಳೆಯದು ಅಂತ ಅನೇಕ ಮಂದಿ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ.


ಹೀಗಂತಾ ದಿನ ಜಗಳವಾಡುವುದು ಒಳ್ಳೆಯದಲ್ಲ ಬಿಡಿ, ವಾಸ್ತವವಾಗಿ ಜಗಳವಾಡುವುದು ದಂಪತಿಗಳ ನಡುವಿನ ಆರೋಗ್ಯಕರ ಅಭ್ಯಾಸವೆಂದು ಪರಿಗಣಿಸಲಾಗಿದೆ. ಆದರೆ ಜಗಳಗಳು ಇಡೀ ದಿನವನ್ನು ಮೀರಿದರೆ ಮತ್ತು ದಂಪತಿಗಳು ಕೋಪದಿಂದ ಮಲಗಲು ಹೋದರೆ ಅಲ್ಲಿಗೆ ಆ ಜಗಳ ಮುಂದಿನ ದಿನಗಳಿಗೂ ಸಹ ಮುಂದುವರೆಯುತ್ತದೆ ಅಂತ ಹೇಳಬಹುದು.


ಮಲಗುವ ಮುಂಚೆ ಜಗಳ ಮತ್ತು ಮನಸ್ತಾಪವನ್ನು ಬಗೆಹರಿಸಿಕೊಂಡರೆ ರಾತ್ರಿ ಹೊತ್ತು ಆರಾಮಾಗಿ ನಿದ್ರೆ ಮಾಡಬಹುದು. ಹೀಗೆಯೇ ಗಂಡ-ಹೆಂಡತಿ ಇಬ್ಬರು ತಮ್ಮ ಮನಸ್ತಾಪವನ್ನು ಬಗೆಹರಿಸಿಕೊಳ್ಳದೆ ಕೋಪದಿಂದ ಮಲಗುವುದು ಆರೋಗ್ಯಕರ ವಿಷಯವಲ್ಲ ಎಂದು ಸಹ ಅನೇಕರು ಹೇಳುತ್ತಾರೆ. ಏಕೆಂದರೆ ಇದು ಅವರಿಬ್ಬರ ನಡುವಿನ ಸಂವಹನದ ಕೊರತೆಯನ್ನು ಸೂಚಿಸುತ್ತದೆ. ದಂಪತಿಗಳು ಕೋಪದಿಂದ ಮಲಗಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಇಲ್ಲಿ ಐದು ಜನರು ತಮ್ಮ ತಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ನಿಮ್ಮ ಈ ಪ್ರಶ್ನೆಗೆ ಉತ್ತರ ಸಿಗಬಹುದು ನೋಡಿ.


ಇದನ್ನೂ ಓದಿ: Lalbagh Flower Show 2023: ಬೆಂಗಳೂರಿನಲ್ಲಿ ಹೂಗಳ ಹಬ್ಬ! ಲಾಲ್​ಬಾಗ್​ ಪುಷ್ಪಲೋಕದ ವೈಭವ ನೋಡಿ


ಕೆಲವರು ಆ ಮನಸ್ತಾಪದಿಂದ ಹೊರ ಬರಲು ಸಮಯ ತೆಗೆದುಕೊಳ್ಳುತ್ತಾರಂತೆ


"ನನ್ನ ಸಂಗಾತಿ ಮತ್ತು ನಾನು ದೊಡ್ಡ ಜಗಳ ಮಾಡಿಕೊಂಡರೆ ನಾನು ಖಂಡಿತವಾಗಿಯೂ ಸ್ವಲ್ಪ ಸಮಯ ತೆಗೆದುಕೊಳ್ಳಲು ಬಯಸುತ್ತೇನೆ. ನಾನು ಏಕಾಂಗಿಯಾಗಿರಲು ಬಯಸುತ್ತೇನೆ, ಏಕೆಂದರೆ ನನಗೆ ಆ ಕೋಪದಿಂದ ತಣ್ಣಗಾಗಲು ಸ್ವಲ್ಪ ನನ್ನದೇ ಆದ ಸಮಯ ಬೇಕು. ಆದರೆ ಕೆಲವೊಮ್ಮೆ ನನ್ನ ಸಂಗಾತಿಗೆ ಅದು ಅರ್ಥವಾಗುವುದಿಲ್ಲ  ಅಂತಿಮವಾಗಿ ಆ ಜಗಳವು ಇನ್ನಷ್ಟು ಉಲ್ಬಣಗೊಳ್ಳುತ್ತದೆ" ಎಂದು 32 ವರ್ಷ ವಯಸ್ಸಿನ ನಂದಿನಿ ಅವರು ಹೇಳುತ್ತಾರೆ.


ಈ ರೀತಿಯ ಜಗಳಗಳು ದಂಪತಿಗಳನ್ನು ಇನ್ನೂ ಹತ್ತಿರಕ್ಕೆ ತರುತ್ತವೆ


"ಕೆಲವು ದಂಪತಿಗಳು ಕೋಪದಿಂದ ಹಾಗೆಯೇ ಮಲಗುತ್ತಾರೆ ಮತ್ತು ಕೆಲವೊಮ್ಮೆ ಇದು ಅಗತ್ಯ ಎಂದು ನಾನು ನಂಬುತ್ತೇನೆ. ನೀವು ಸ್ವಲ್ಪ ಸಮಯದವರೆಗೆ ಪ್ರತ್ಯೇಕವಾಗಿದ್ದರೆ, ಹೃದಯದಲ್ಲಿ ಪರಸ್ಪರರ  ಇನ್ನಷ್ಟು ಪ್ರೀತಿ ಜಾಸ್ತಿಯಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಹೆಚ್ಚು ಮಾತನಾಡದಿದ್ದರೆ, ಅವರು ಹೆಚ್ಚು ನಿಮ್ಮನ್ನು ಬಯಸುತ್ತಾರೆ. ಆದ್ದರಿಂದ  ಕೆಲವೊಮ್ಮೆ ಕೋಪದಿಂದ ಮಲಗುವುದು ಹೆಚ್ಚು ಜಗಳವಾಡುವವರಿಗೆ ಒಂದೊಳ್ಳೆಯ ಪಾಠವಾಗಿದೆ" ಅಂತ 29 ವರ್ಷ ವಯಸ್ಸಿನ ಪಿಯೂಷ್ ಹೇಳುತ್ತಾರೆ.ಹಾಗೆ ಮಲಗಿದರೆ ಸಂವಹನದ ಕೊರತೆ ಇನ್ನೂ ಹೆಚ್ಚಾಗುತ್ತದೆ


"ದಂಪತಿಗಳು ಕೋಪದಿಂದ ಮಲಗಲು ಹೋಗುವುದು ಸಂಬಂಧದಲ್ಲಿ ಸಂವಹನದ ಕೊರತೆಯನ್ನು ಸೂಚಿಸುತ್ತದೆ. ನೀವು ನಿಮ್ಮ ಸಂಗಾತಿಯೊಂದಿಗೆ ಮಾತನಾಡದಿದ್ದರೆ, ನಿಮ್ಮಿಬ್ಬರ ನಡುವೆ ಇರುವ ಆ ಚಿಕ್ಕ ಜಗಳ ಇನ್ನಷ್ಟು ದೊಡ್ಡದಾಗಿ ಬೆಳೆಯಬಹುದು. ಅನಗತ್ಯವಾಗಿ ಅದನ್ನು ಏಕೆ ಜಾಸ್ತಿ ಮಾಡಿಕೊಳ್ಳುತ್ತೀರಿ, ಅದನ್ನು ಬೇಗನೆ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು ಒಳ್ಳೆಯದು” ಅಂತ ಹೇಳ್ತಾರೆ 43 ವರ್ಷದ ಸಾರಿಕಾ.


ನೀವು ಸೂಕ್ಷ್ಮ ವ್ಯಕ್ತಿಯಾಗಿದ್ದರೆ, ಕೋಪ ಮರೆತು ಮಲಗಿ


"ನೀವು ಅತಿಯಾಗಿ ಭಾವಿಸುವ ಮತ್ತು ತುಂಬಾ ಸೂಕ್ಷ್ಮ ಮನಸ್ಸಿನ ವ್ಯಕ್ತಿಯಾಗಿದ್ದರೆ, ಪರಿಸ್ಥಿತಿಯನ್ನು ತೊರೆದು ಕೋಪ ಕಡಿಮೆ ಮಾಡಿಕೊಂಡು ಮಲಗುವುದು ಉತ್ತಮ. ಮರುದಿನ ಬೆಳಿಗ್ಗೆ ನೀವಿಬ್ಬರೂ ಆ ಜಗಳದ ಬಗ್ಗೆ ಮಾತನಾಡುವ ಬದಲಿಗೆ ಬೇರೆ ಏನಾದರೂ ಮಾತನಾಡಿ. ಅತಿಯಾದ ಭಾವನಾತ್ಮಕ ವ್ಯಕ್ತಿಯು ಅತಿಯಾದ ವಾಗ್ವಾದಕ್ಕೆ ಇಳಿದಾಗ ಹೆಚ್ಚಿನ ಸಮಯ ಅದನ್ನು ನೆನಪಿಸಿಕೊಂಡು ನೋವು ಪಡುವ ಅವಕಾಶಗಳು ಹೆಚ್ಚಿರುತ್ತವೆ" ಅಂತ ಹೇಳಿದರು 35 ವರ್ಷ ವಯಸ್ಸಿನ ಓಜಾಸ್.


ಜಗಳ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು


ನನ್ನೊಂದಿಗಿನ ಸಮಸ್ಯೆಯನ್ನು ಪರಿಹರಿಸದೆ ನನ್ನ ಸಂಗಾತಿ ಮಲಗಲು ಪ್ರಯತ್ನಿಸಿದರೆ, ನಾನು ನಿಜವಾಗಿಯೂ ಕೋಪಗೊಳ್ಳುತ್ತೇನೆ. ನಾವು ಎಷ್ಟೇ ಕೋಪಗೊಂಡರೂ ಅಥವಾ ನೋಯಿಸಿದರೂ, ಮಲಗುವ ಮೊದಲು ಆ ಸಮಸ್ಯೆಯನ್ನು ಪರಿಹರಿಸುವುದು ವ್ಯಕ್ತಿಯು ಇದನ್ನು ಬೇಗನೆ ಪರಿಹರಿಸಿಕೊಳ್ಳಲು ಸಿದ್ಧರಿದ್ದಾರೆ ಎಂದು ಸೂಚಿಸುತ್ತದೆ. ಮರುದಿನ ಬೆಳಿಗ್ಗೆಯವರೆಗೆ ಅದನ್ನು ಹಾಗೆ ಮುಂದುವರೆಸುವುದು ಎಂದರೆ ಅವರಿಗೆ ಆ ಸಂಬಂಧದಲ್ಲಿ ಅಷ್ಟೊಂದು ಆಸಕ್ತಿ ಇಲ್ಲ ಅಂತ ನಾನು ನಂಬುತ್ತೇನೆ ಎಂದು 38 ವರ್ಷ ವಯಸ್ಸಿನ ಆನಂದಿತಾ ಅಭಿಪ್ರಾಯ ಪಟ್ಟಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು