Quarrel Problem: ಜಗಳ ಆಗಲು ಕಾರಣಗಳು ಏನೇ ಇದ್ದರೂ ಅದನ್ನು ಹೀಗೆ ನಿಭಾಯಿಸಿ!

ಕೆಲವೊಮ್ಮೆ ಚಿಕ್ಕ ಪುಟ್ಟ ವಿಷಯಗಳಲ್ಲಿ ಶುರುವಾದ ಜಗಳ ಸಂಬಂಧ ಮುರಿದು ಹಾಕುವ ಮಟ್ಟಕ್ಕೆ ಬರುವುದು ಇದೆ. ದಂಪತಿಗಳಲ್ಲಿ ಎಷ್ಟೇ ಪ್ರೀತಿ ಇದ್ದರೂ ಜಗಳ ನಡೆಯುತ್ತಲೇ ಇರುತ್ತದೆ. ಎರಡು ವಿಭಿನ್ನ ವ್ಯಕ್ತಿತ್ವಗಳ ಅಸ್ತಿತ್ವವೇ ಇದಕ್ಕೆ ಮುಖ್ಯ ಕಾರಣವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಯಾರೇ ಆಗಲಿ ಜೀವನದಲ್ಲಿ (Life) ಒಮ್ಮೆಯಾದರೂ ಜಗಳ (Quarrel) ಮಾಡಿಯೇ ಇರುತ್ತಾರೆ. ಜಗಳ ತುಂಬಾ ಕಾಮನ್ (Common). ಫ್ಯಾಮಿಲಿಯಲ್ಲಿ (Family) ಸಹೋದರ -ಸಹೋದರಿಯರ ನಡುವೆ, ಗಂಡ- ಹೆಂಡತಿ, ರಕ್ತ ಸಂಬಂಧಿಗಳು ಹಾಗೂ ಹೊರಗಿನ ಜನರ ಜೊತೆ ಹೀಗೆ ಜಗಳ ಯಾರ ಬೇಕಾದವರ ಜೊತೆ ಆಗಬಹುದು. ಆದರೆ ಜಗಳ ಅತಿರೇಕಕ್ಕೆ ಹೋದರೆ ವ್ಯಕ್ತಿಯ ಪ್ರಾಣ ಮತ್ತು ಸಂಬಂಧದಲ್ಲಿ ಬಿರುಕು ಉಂಟು ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ ಯಾವಾಗಲೂ ಸಿಟ್ಟನ್ನು ಮತ್ತು ಜಗಳವನ್ನು ನಿಯಂತ್ರಿಸಲು ಹೆಚ್ಚು ಪ್ರಯತ್ನಿಸಬೇಕು. ಜಗಳ ಹೆಚ್ಚಾಗಿ ಗಂಡ- ಹೆಂಡತಿ ಮಧ್ಯೆ ನಡೆಯುತ್ತಲೇ ಇರುತ್ತದೆ.

    ಜಗಳ ಆಗಲು ಕಾರಣಗಳು ಏನು?

    ಕೆಲವೊಮ್ಮೆ ಚಿಕ್ಕ ಪುಟ್ಟ ವಿಷಯಗಳಲ್ಲಿ ಶುರುವಾದ ಜಗಳ ಸಂಬಂಧ ಮುರಿದು ಹಾಕುವ ಮಟ್ಟಕ್ಕೆ ಬರುವುದು ಇದೆ. ದಂಪತಿಗಳಲ್ಲಿ ಎಷ್ಟೇ ಪ್ರೀತಿ ಇದ್ದರೂ ಜಗಳ ನಡೆಯುತ್ತಲೇ ಇರುತ್ತದೆ. ಎರಡು ವಿಭಿನ್ನ ವ್ಯಕ್ತಿತ್ವಗಳ ಅಸ್ತಿತ್ವವೇ ಇದಕ್ಕೆ ಮುಖ್ಯ ಕಾರಣವಾಗುತ್ತದೆ. ಕೆಲವೊಮ್ಮೆ ಒಂದು ವಿಷಯದಲ್ಲಿ ಒಮ್ಮತ ಹೊಂದಲು ಸಾಧ್ಯವಿಲ್ಲದೇ ಹೋದಾಗ ಜಗಳ ಆಗುತ್ತದೆ.

    ಆಲೋಚನೆಗಳಲ್ಲಿ ಹೊಂದಾಣಿಕೆ ಆಗದಿದ್ದಾಗ, ಹಾಗೂ ತಮ್ಮದೇ ಆದ ಪೂರ್ವಗ್ರಹಿಕೆಗಳಿಂದಾಗಿ ಜಗಳ ಆಗುತ್ತದೆ. ಜಗಳವಾಡುವುದು ದೊಡ್ಡ ವಿಷಯವಲ್ಲ. ಆದರೆ ಜಗಳ ತಮಾಷೆಯದ್ದಾ, ಪ್ರೀತಿಯಲ್ಲಿನ ಹಸಿ ಮುನಿಸಿನ ಜಗಳ ಅಥವಾ ಸಿಟ್ಟಿನ ಜಗಳ. ಕೆಲವರಲ್ಲಿ ಜಗಳ ನಡೆದರೂ ಹ್ಯಾಪಿ ಕಪಲ್ ಎಂದು ಕರೆಯುತ್ತಾರೆ.

    ಇದನ್ನೂ ಓದಿ: ಥೈರಾಯ್ಡ್‌ನಿಂದಾಗಿ ನಿಮ್ಮ ತೂಕ ಹೆಚ್ಚುತ್ತಿದೆಯೇ? ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ

    ಕೆಲವು ಜನರು ಜಗಳ ಮಾಡದಿದ್ದರೆ ಸಂಬಂಧದಲ್ಲಿ ಸಂತೋಷ ಪಡುವುದೇ ಇಲ್ಲ. ಇದಕ್ಕೆ ಕಾರಣ ಅವರು ವಿವಾದವನ್ನು ಪರಿಹರಿಸಲು ಸಾಧ್ಯವಾಗದೇ ಇರುವುದು ಅಥವಾ ಅವರು ಪರಿಹರಿಸುವ ವಿಧಾನ. ಹಾಗಾಗಿ ಇಂದು ನಾವು ಜಗಳ ಮಾಡುವಾಗ ಯಾವ ತಪ್ಪು ಮಾಡಬಾರದು ಎಂಬ ಬಗ್ಗೆ ಇಲ್ಲಿ ಹೇಳಲಾಗಿದೆ. ಅದು ವಿವಾದ ಪರಿಹರಿಸಲು ಸಹಾಯ ಮಾಡುತ್ತದೆ.

    ಜಗಳ ಮಾಡುವಾಗ ಪರಸ್ಪರ ಅವಮಾನಿಸಬೇಡಿ  

    ಜಗಳದಲ್ಲಿ ಕೋಪ ಬರುವುದು ಸಹಜ. ಆದರೆ ಜಗಳ ಮತ್ತು ಕೋಪ ನಿಮ್ಮ ಸಂಗಾತಿಯನ್ನು ಅವಮಾನ ಮಾಡದಂತಿರಲಿ. ನಿಮ್ಮ ಜಗಳದಿಂದ ಅವರ ಭಾವನೆಗಳನ್ನು ನೋಯಿಸಬೇಡಿ. ಯಾವ ದಂಪತಿ ತಾಳ್ಮೆ ಮತ್ತು ಸಂತೋಷದಿಂದ ಇರುತ್ತಾರೋ ಅವರು ಜಗಳ ಮಾಡುವಾಗ ಪರಸ್ಪರ ಕೂಗಾಡುವುದಿಲ್ಲ.

    ಅಥವಾ ಪರಸ್ಪರ ಅವಮಾನಿಸುವುದಿಲ್ಲ. ನೀವು ಕೋಣೆಯಲ್ಲಿ ಒಬ್ಬಂಟಿಯಾಗಿದ್ದರೂ ಸಹ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಬೇಡಿ.

    ಜಗಳದ ನಂತರ ಕ್ಷಮೆಯಾಚಿಸುವುದು

    ಜಗಳದಲ್ಲಿ ಏನೇ ಘಟನೆ ನಡೆದರೂ ಸಹ ನಿಮ್ಮ ಸಂಗಾತಿಯನ್ನು ತೀವ್ರ ನೋವುಂಟು ಮಾಡಬೇಡಿ. ಒಂದು ವೇಳೆ ಸಿಟ್ಟಿನ ಜಗಳದಲ್ಲಿ ನೋವುಂಟು ಮಾಡಿದರೂ ಸಹ ಸಂಗಾತಿಗೆ ಮರುಕ್ಷಣ ತಪ್ಪು ಒಪ್ಪಿಕೊಂಡು ಕ್ಷಮೆಯಾಚಿಸಿ ಬಿಡಿ. ಕೋಪ ಕಡಿಮೆಯಾದ ಮೇಲೆ ತಪ್ಪನ್ನು ಅರಿತು ಮುಂದೆ ಅದನ್ನು ರಿಪೀಟ್ ಮಾಡಬೇಡಿ. ಈ ಹೊಂದಾಣಿಕೆ ನಿಮ್ಮ ಪ್ರೀತಿಯನ್ನು ಬಲಪಡಿಸುತ್ತದೆ.

    ಜಗಳದಲ್ಲಿ ಹಳೆಯ ವಿಷಯವನ್ನು ರಿಪೀಟ್ ಮಾಡಬೇಡಿ

    ಆಗಾಗ್ಗೆ ಜನರು ಜಗಳದಲ್ಲಿ ಹಳೆಯ ವಿಷಯವನ್ನೇ ಮತ್ತೆ ಮತ್ತೆ ಕೆದಕಿ ಪರಸ್ಪರ ಹೊಡೆದಾಡುತ್ತಾರೆ. ಹಳೆಯ ವಿಷಯವನ್ನೇ ಮತ್ತೆ ಮತ್ತೆ ಕೆದಕುವುದು ನಿಮ್ಮನ್ನು ಮತ್ತಷ್ಟು ಘಾಸಿಗೊಳಿಸಿ, ಜಗಳವನ್ನು ಹೆಚ್ಚಿಸುತ್ತದೆ. ಹಾಗಾಗಿ ಹಳೆಯ ವಿಷಯದತ್ತ ಗಮನ ಹರಿಸಬೇಡಿ. ಶಾಂತವಾಗಿ ಯೋಚಿಸಿ, ಜಗಳದಲ್ಲಿ ನಿಮ್ಮ ಮಾತು, ಸಿಟ್ಟಿನ ಮೇಲೆ ನಿಯಂತ್ರಣ ಹೊಂದಿ. ತಾಳ್ಮೆಯಿಂದ ಯೋಚಿಸಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ.

    ಜಗಳಗಳ ನಡುವೆ ಪ್ರೀತಿ ಮರೆಯಬೇಡಿ

    ಜಗಳಗಳ ಮಧ್ಯೆ ನೀವು ಪರಸ್ಪರ ಪ್ರೀತಿಯನ್ನು ಕಳೆದುಕೊಳ್ಳಬೇಡಿ. ಸಂಬಂಧದಲ್ಲಿ ಪ್ರಾಮಾಣಿಕತೆ, ಹೊಂದಾಣಿಕತೆಯಿಂದ ಇರಿ. ಜಗಳ ಮುಗಿದ ನಂತರ ಪರಸ್ಪರ ಪ್ರೀತಿಸುವುದನ್ನು ಮರೆಯಬೇಡಿ.

    ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸಮಸ್ಯೆ ಕಡಿಮೆ ಮಾಡಲು ನೀರನ್ನು ಹೀಗೆ ಕುಡಿಯಬೇಕಂತೆ

    ಜಗಳ ಹೆಚ್ಚಾದಾಗ ನೀವೇ ಸೋತು ಬಿಡಿ

    ಸಂತೋಷವಾಗಿರುವ ಸಂಗಾತಿಗಳು ಜಗಳ ಹೆಚ್ಚಾದಾಗ ಇಬ್ಬರಲ್ಲಿ ಒಬ್ಬರು ಸೋಲನ್ನು ಒಪ್ಪಿಕೊಳ್ಳಿ. ನಿಮ್ಮ ಸಂಗಾತಿ ತನ್ನ ವಿಷಯದಲ್ಲಿ ಅಚಲವಾಗಿದ್ದರೆ ಆ ಸಮಯದಲ್ಲಿ ಆ ವಿಷಯವನ್ನು ಅಲ್ಲಿಗೆ ಬಿಟ್ಟು ಬಿಡಿ. ಮನಸ್ಸು ಶಾಂತವಾದಾಗ ತಾಳ್ಮೆಯಿಂದ ವಿವರಿಸಿ.
    Published by:renukadariyannavar
    First published: