ಚಹಾದಲ್ಲಿ ಈ ವಸ್ತುಗಳನ್ನು ಸೇರಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು..!

ಒಂದು ದಿನದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ನೀವು ಅಂದುಕೊಂಡಿದ್ರೆ, ಅದು ಕಲ್ಪನೆ ಮಾತ್ರ. ಏಕೆಂದರೆ ಅದಕ್ಕೆ ಸಾಕಷ್ಟು ನಿರಂತರತೆ ಮತ್ತು ಶ್ರಮ ಬೇಕಾಗುತ್ತದೆ.

news18-kannada
Updated:July 1, 2020, 10:22 PM IST
ಚಹಾದಲ್ಲಿ ಈ ವಸ್ತುಗಳನ್ನು ಸೇರಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು..!
Tea
  • Share this:
ಕೊರೋನಾ ವೈರಸ್​ನಂತಹ ಅಪಾಯಕಾರಿ ಸೋಂಕುಗಳನ್ನು ತಪ್ಪಿಸಲು, ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುವಂತೆ ವೈದ್ಯರು ಶಿಫಾರಸ್ಸು ಮಾಡುತ್ತಿದ್ದಾರೆ. ಅಂದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾದಂತೆ ಸೋಂಕಿನ ವಿರುದ್ಧ ಹೋರಾಡುವ ಕಾರ್ಯಕ್ಷಮತೆ ಹೆಚ್ಚುತ್ತದೆ. ಹೀಗಾಗಿಯೇ ಇಮ್ಯುನಿಟಿ ಪವರ್ ಹೆಚ್ಚಿಸುವ ಆಹಾರಗಳನ್ನು ನಿಮ್ಮ ದೈನಂದಿನ ಆಹಾರ ಕ್ರಮಗಳಲ್ಲಿ ಅಳವಡಿಸಿಕೊಳ್ಳುವಂತೆ ಕೋರಲಾಗಿದೆ.

ಹೀಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಾವು ಪ್ರತಿದಿನ ಕುಡಿಯುವ ಚಹಾದಲ್ಲಿ ಒಂದಷ್ಟು ಪದಾರ್ಥಗಳನ್ನು ಸೇರಿಸಿಕೊಳ್ಳಬಹುದು. ಇದರಿಂದ ಟೀ ರುಚಿ ಹೆಚ್ಚಾಗುವುದಲ್ಲದೆ, ಆರೋಗ್ಯ ಕೂಡ ವೃದ್ಧಿಸುತ್ತದೆ. ಅದಕ್ಕೆ ನಿವೇನು ಮಾಡಬೇಕು ಎಂಬುದಕ್ಕೆ ಕೆಲ ಸಲಹೆಗಳು ಇಲ್ಲಿವೆ.

ಒಂದು ದಿನದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ನೀವು ಅಂದುಕೊಂಡಿದ್ರೆ, ಅದು ಕಲ್ಪನೆ ಮಾತ್ರ. ಏಕೆಂದರೆ ಅದಕ್ಕೆ ಸಾಕಷ್ಟು ನಿರಂತರತೆ ಮತ್ತು ಶ್ರಮ ಬೇಕಾಗುತ್ತದೆ. ನಿಮ್ಮ ಜೀವನಶೈಲಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಚಹಾದಲ್ಲೇ ಕೆಲವು ಬದಲಾವಣೆಗಳನ್ನು ಮಾಡಬಹುದು. ನೀವು ಚಹಾಕ್ಕೆ ಶುಂಠಿ, ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಬಹುದು. ಹಾಗೆಯೇ ಇದರೊಂದಿಗೆ ಈ ಕೆಲ ವಸ್ತುಗಳನ್ನು ಸೇರಿಸುವುದು ಕೂಡ ಉತ್ತಮ.

ಮುಲೇತಿ:
ಮುಲೇತಿಯನ್ನು ಆಯುರ್ವೇದದಲ್ಲಿ ಅನೇಕ ರೋಗಗಳ ರಾಮಬಾಣ ಎನ್ನಲಾಗಿದೆ. ಹೀಗಾಗಿಯೇ ನಿಮ್ಮ ದೈನಂದಿನ ಚಹಾದಲ್ಲಿ ಇದರ ಪುಡಿಯನ್ನು ಬೆರೆಸಿದರೆ, ದೇಹ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮುಲೇತಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಲವು ಗುಣಲಕ್ಷಣಗಳಿವೆ. ಸಾಮಾನ್ಯವಾಗಿ ಇದನ್ನು ಆಯುರ್ವೇದದಲ್ಲಿ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು ಶೀತ ಮತ್ತು ಗಂಟಲು ಹಾಗೂ ಉಸಿರಾಟದ ಸಮಸ್ಯೆಗಳನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ. ಇನ್ನು ಮುಲೇತಿಯಲ್ಲಿ ಆ್ಯಂಟಿ-ವೈರಲ್ ಮತ್ತು ಆ್ಯಂಟಿ-ಆಕ್ಸಿಡೆಂಟ್‌ ಅಂಶಗಳಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಲವಂಗ:
ಎಲ್ಲಾ ಅಡುಗೆ ಮನೆಯಲ್ಲೂ ಲವಂಗ ಇರುತ್ತದೆ. ಇದನ್ನೇ ನೀವು ಚಹಾದಲ್ಲಿ ಮಿಶ್ರಣ ಮಾಡುವ ಮೂಲಕ ಆರೋಗ್ಯಕರ ಲಾಭ ಪಡೆಯಬಹುದು. ಇದನ್ನು ಪುಡಿ ಮಾಡಿ ಅಥವಾ ಹಾಗೆಯೇ ಚಹಾ ಕುದಿಯುವಾಗ ಹಾಕಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಇದರಲ್ಲಿರುವ ಆ್ಯಂಟಿ ವೈರಲ್ ಮತ್ತು ಆ್ಯಂಟಿ ಆಕ್ಸಿಡೆಂಟ್‌ ಅಂಶಗಳು ದೇಹದಲ್ಲಿ ಇಮ್ಯುನಿಟಿ ಪವರ್ ವರ್ಧಿಸುತ್ತದೆ. ಹಾಗೆಯೇ ಲವಂಗ ಮಿಶ್ರಣವು ಚಹಾ ರುಚಿಯನ್ನು ಕೂಡ ಹೆಚ್ಚಿಸುತ್ತದೆ.
First published: July 1, 2020, 10:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading