PCOS Awareness: ಸ್ತ್ರೀ ಆರೋಗ್ಯ ಸಮಸ್ಯೆ ಮತ್ತು ಪಿಸಿಓಎಸ್​ ತಿಂಗಳ ಆಚರಣೆ ಹಿಂದಿರುವ ಉದ್ದೇಶ ಇದು

ಮಹಿಳೆಯರು ಲೈಂಗಿಕ ಆರೋಗ್ಯದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಸೆಪ್ಟೆಂಬರ್ ಅನ್ನು ಪಿಸಿಓಎಸ್ ಜಾಗೃತಿ ತಿಂಗಳಾಗಿ ಆಚರಣೆ ಮಾಡಲಾಗುತ್ತದೆ. ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಾಕ್ಷರತೆ ಸಂಖ್ಯೆ ಎಷ್ಟೇ ಹೆಚ್ಚಿದ್ದರೂ ಸಹ ಕೆಲವು ಆರೋಗ್ಯ ತೊಂದರೆಗಳ (Health Disease) ಬಗ್ಗೆ ಇನ್ನೂ ಜನರಲ್ಲಿ (People) ಅರಿವು (Awareness) ಮತ್ತು ಜಾಗೃತಿ ಇಲ್ಲ. ಅದರಲ್ಲಿ ಸ್ತ್ರೀ ಆರೋಗ್ಯ (Women’s Health) ಅಥವಾ ಸ್ತ್ರೀ ಲೈಂಗಿಕ ಆರೋಗ್ಯ ಸಹ ಒಂದು. ಸ್ತ್ರೀ ಲೈಂಗಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಚರ್ಚಿಸಲು ಮುಜುಗರ ಪಡುವ ಸ್ಥಿತಿ ಇದೆ. ಜೊತೆಗೆ ಸ್ತ್ರೀ ಲೈಂಗಿಕ ಆರೋಗ್ಯ ಬಗ್ಗೆ ಇನ್ನೂ ಅರಿವಿನ ಕೊರತೆ ಇದೆ. ಹೆಚ್ಚಿನ ಮಹಿಳೆಯರು ತಮ್ಮ ಸಂಗಾತಿ ಅಥವಾ ವೈದ್ಯರ ಬಳಿ ತಮ್ಮ ಆರೋಗ್ಯದ ಬಗ್ಗೆ ಬಹಿರಂಗವಾಗಿ ಮಾತನಾಡಲ್ಲ. ಲೈಂಗಿಕ ಆರೋಗ್ಯದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ.

    ಸ್ತ್ರೀ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ

    ಸಮಸ್ಯೆ ಮತ್ತು ತೊಂದರೆಗಳಿಂದ ನೋವು ಅನುಭವಿಸುತ್ತಾರೆಯೇ ಹೊರತು ಮುಕ್ತವಾಗಿ ಸಮಸ್ಯೆ ಬಗ್ಗೆ ಹೇಳಿಕೊಳ್ಳುವುದಿಲ್ಲ. ಇದರಲ್ಲಿ ಮಾಹಿತಿ ಸಹ ತುಂಬಾ ಕಡಿಮೆ ಮತ್ತು ಸಮಸ್ಯೆಗಳು ತುಂಬಾ ಹೆಚ್ಚು ಕಾಡುತ್ತವೆ. ಹಾಗಾಗಿ ನಿಮ್ಮ ಆರೋಗ್ಯಕ್ಕಾಗಿ ತೊಂದರೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ಮುಖ್ಯ.

    ಈ ಉದ್ದೇಶಕ್ಕಾಗಿ ಸೆಪ್ಟೆಂಬರ್ ಅನ್ನು ಪಿಸಿಓಎಸ್ ಜಾಗೃತಿ ತಿಂಗಳಾಗಿ ಆಚರಣೆ ಮಾಡಲಾಗುತ್ತದೆ. ಮಹಿಳೆಯರಲ್ಲಿ ಪಿಸಿಓಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಲು ಈ ತಿಂಗಳನ್ನು ಪ್ರಾರಂಭ ಮಾಡಲಾಗಿದೆ.

    ಇದನ್ನೂ ಓದಿ: ಹಿಮಾಲಯ ಅಂಜೂರದಲ್ಲಿದೆ ಹಲವು ಪೋಷಕಾಂಶ! ಆರೋಗ್ಯಕ್ಕೆ ಬೆಸ್ಟ್

    ಪಿಸಿಓಎಸ್ ಜಾಗೃತಿ ಆಚರಣೆ ಹಿಂದಿರುವ ಉದ್ದೇಶವೇನು?

    ಪಿಸಿಓಎಸ್ ಜಾಗೃತಿ ತಿಂಗಳ ಆಚರಣೆಯನ್ನು ಸ್ತ್ರೀ ಆರೋಗ್ಯ ರೋಗ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಪಿಸಿಓಎಸ್ ಜಾಗೃತಿ ತಿಂಗಳಲ್ಲಿ ಪಿಸಿಓಎಸ್‌ ಪೀಡಿತ ಜನರ ಜೀವನ ಸುಧಾರಿಸಲು ಬಳಕೆ ಮಾಡಲಾಗುತ್ತದೆ. ಇದು ಸ್ತ್ರೀ ಆರೋಗ್ಯ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ.

    ಜೊತೆಗೆ ಮಧುಮೇಹ, ಹೃದ್ರೋಗ, ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ಮತ್ತು ಕ್ಯಾನ್ಸರ್‌ ರೋಗಗಳ ಅಪಾಯ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸಾರಾ ಅಲಿ ಖಾನ್ ಸೇರಿದಂತೆ ಅನೇಕ ಮಹಿಳಾ ಸೆಲೆಬ್ರಿಟಿಗಳು ತಮ್ಮ PCOS ಸಂಬಂಧಿತ ಸಮಸ್ಯೆಗಳನ್ನು ಪ್ರಪಂಚದ ಮುಂದೆ ಇಟ್ಟಿದ್ದಾರೆ. ಹಾಗಾದರೆ ಈ ಸಿಂಡ್ರೋಮ್ ಬಗ್ಗೆ ವಿವರವಾಗಿ ತಿಳಿಯೋಣ.

    ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎಂದರೇನು?

    ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಗಂಭೀರ ಆನುವಂಶಿಕ, ಹಾರ್ಮೋನ್, ಚಯಾಪಚಯ ಮತ್ತು ಸಂತಾನೋತ್ಪತ್ತಿ ಅಸ್ವಸ್ಥತೆ ಆಗಿದೆ. ಅದು ಮಹಿಳೆಯರು ಮತ್ತು ಹುಡುಗಿಯರ ಮೇಲೆ ಪರಿಣಾಮ ಬೀರುತ್ತದೆ. ಇದು ಸ್ತ್ರೀ ಬಂಜೆತನಕ್ಕೆ ಮುಖ್ಯ ಕಾರಣ ಆಗಿದೆ.

    ಜೊತೆಗೆ ಇದು ಬೊಜ್ಜು, ಟೈಪ್ 2 ಡಯಾಬಿಟಿಸ್, ಹೃದ್ರೋಗ ಮತ್ತು ಎಂಡೊಮೆಟ್ರಿಯಲ್ ಕ್ಯಾನ್ಸರ್ ಸೇರಿದಂತೆ ಇತರ ಗಂಭೀರ ಪರಿಸ್ಥಿತಿ ಉಂಟು ಮಾಡುತ್ತದೆ. ಇದು ಜೀವನಶೈಲಿಯ ಅಸ್ವಸ್ಥತೆ, ರೋಗವಲ್ಲ. ಆರೋಗ್ಯಕರ ಮತ್ತು ಸಮತೋಲಿತ ಆಹಾರದಿಂದ ಇದನ್ನು ನಿರ್ವಹಣೆ ಮಾಡಬಹುದು. ಮೂಲದಿಂದ ನಿರ್ಮೂಲನೆ ಮಾಡಲು ಸಾಧ್ಯ ಇಲ್ಲ.

    ಪಿಸಿಓಎಸ್ ಜಾಗೃತಿ ತಿಂಗಳ ಗುರಿ ಮತ್ತು ಆದರ್ಶಗಳು ಹೀಗಿವೆ

    ಸಾರ್ವಜನಿಕರು, ಮಹಿಳೆಯರು, ಹುಡುಗಿಯರು ಮತ್ತು ಆರೋಗ್ಯ ವೃತ್ತಿಪರರಲ್ಲಿ ಪಿಸಿಓಎಸ್ ಬಗ್ಗೆ ಅರಿವು ಮತ್ತು ಜಾಗೃತಿ ಮತ್ತು ಶಿಕ್ಷಣ ನೀಡುವುದು.

    ಅಸ್ವಸ್ಥತೆಯ ರೋಗ ನಿರ್ಣಯ ಮತ್ತು ಚಿಕಿತ್ಸೆ ನೀಡುವುದು ಮತ್ತು ಸುಧಾರಿಸುವುದು.

    ರೋಗ ನಿರ್ಣಯ ಮತ್ತು ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಮಾಹಿತಿ ನೀಡುವುದು.

    ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆಯಿರುವ ಮಹಿಳೆಯರು ಮತ್ತು ಹುಡುಗಿಯರ ಜೀವನದ ಗುಣಮಟ್ಟ ಮತ್ತು ಫಲಿತಾಂಶ ಸುಧಾರಿಸಲು ಪ್ರಯತ್ನಿಸುವುದು.

    PCOS ನೊಂದಿಗೆ ಎಲ್ಲಾ ಮಹಿಳೆಯರು ಮತ್ತು ಹುಡುಗಿಯರ ಮೇಲೆ ಪರಿಣಾಮ ಬೀರುವ ಹೋರಾಟ ಗುರುತಿಸುವುದು.

    ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆ ಏಕೆ ಉಂಟಾಗುತ್ತದೆ? ಪರಿಹಾರವೇನು?

    PCOS ಬಗ್ಗೆ ಆರೋಗ್ಯ ಮೂಲ ಆದ್ಯತೆ ಮಾಡಲು ದೇಶ, ರಾಜ್ಯ, ಪ್ರಾಂತ್ಯಗಳಲ್ಲಿ ಜಾಗೃತಿ ಮೂಡಿಸುವುದು.
    Published by:renukadariyannavar
    First published: