Air Purifier: ಈ ಗಿಡ ಮನೆಯಲ್ಲಿದ್ರೆ ಸಾಕು ಕೆಲವೇ ನಿಮಿಷದಲ್ಲಿ ಮನೆಯೊಳಗಿನ ಗಾಳಿಯೆಲ್ಲಾ ಕ್ಲೀನ್ ಆಗುತ್ತೆ!

ಐಐಟಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಜಯ್ ಮೌರ್ಯ ಅವರು ದೆಹಲಿ ಮೂಲದ ಸ್ಟಾರ್ಟ್‌ಅಪ್‌ UBreath ಎಂಬ ಕಂಪನಿಯನ್ನು ಸ್ಥಾಪಿಸಿದ್ದಾರೆ. ಈ ಸ್ಟಾರ್ಟ್‌ಅಪ್‌ ಕಂಪನಿಯು ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ದುಬಾರಿ ಮತ್ತು ಕೃತಕ ಏರ್ ಪ್ಯೂರಿಫೈಯರ್‌ಗಳಿಗೆ ಬದಲಾಗಿ ನೈಸರ್ಗಿಕ ಏರ್‌ಪ್ಯೂರಿಫೈಯರ್‌ಗಳನ್ನು ಜನತೆಗೆ ನೀಡುವ ಉದ್ದೇಶ ಹೊಂದಿದೆ.

ನೈಸರ್ಗಿಕ ಏರ್‌ಪ್ಯೂರಿಫೈಯರ್‌

ನೈಸರ್ಗಿಕ ಏರ್‌ಪ್ಯೂರಿಫೈಯರ್‌

  • Share this:
ಬೇಸಿಗೆ ಬಂತು ಎಂದರೆ ಸಾಕು, ಎಲ್ಲರ ಮನೆಯಲ್ಲು ಏರ್ಕೂಲರ್‌ (Air Cooler) ಬಳಕೆ ಹೆಚ್ಚೆಂದು ಹೇಳಬಹುದು. ಆದರೆ ಗಾಳಿಯು ಶುದ್ಧ ಗಾಳಿಯಂತೆ ಇರಲು ಸಾಧ್ಯವಿರುವುದಿಲ್ಲ.‌ ಇಲ್ಲೊಬ್ಬ ಐಐಟಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಜಯ್ ಮೌರ್ಯ ಅವರು ದೆಹಲಿ ಮೂಲದ ಸ್ಟಾರ್ಟ್ಅಪ್‌ UBreath ಎಂಬ ಕಂಪನಿಯನ್ನು (Startup) ಸ್ಥಾಪಿಸಿದ್ದಾರೆ. ಸ್ಟಾರ್ಟ್ಅಪ್ಕಂಪನಿಯು ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ದುಬಾರಿ ಮತ್ತು ಕೃತಕ ಏರ್ ಪ್ಯೂರಿಫೈಯರ್ಗಳಿಗೆ ಬದಲಾಗಿ ನೈಸರ್ಗಿಕ ಏರ್ಪ್ಯೂರಿಫೈಯರ್ಗಳನ್ನು (Natural Air Purifier) ಜನತೆಗೆ ನೀಡುವ ಉದ್ದೇಶ ಹೊಂದಿದೆ.

ʼಸ್ಮಾರ್ಟ್ ಪ್ಲಾಂಟ್‌ ಅಥವಾ ಸ್ಮಾರ್ಟ್‌ ಸಸ್ಯʼ ಗಳಿಂದ ನೈಸರ್ಗಿಕ ಏರ್‌ಪ್ಯೂರಿಫೈಯರ್
ಪ್ರತಿಯೊಬ್ಬರಿಗೂ ತಾಜಾ ಗಾಳಿಯು ಮೂಲಭೂತ ಅವಶ್ಯಕತೆಯಾಗಿದೆ. ಆದರೆ ಇಂದು ಹೆಚ್ಚುತ್ತಿರುವ ವಾಯುಮಾಲಿನ್ಯದ ಪ್ರಮಾಣ ಮತ್ತು ಕಡಿಮೆ ಗಾಳಿಯ ಗುಣಮಟ್ಟದಿಂದ, ಈ ಮೂಲಭೂತ ಅಗತ್ಯವನ್ನು ಪೂರೈಸುವುದು ಕಷ್ಟಕರವಾಗಿದೆ.

ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿಯು ಈ ಸಮಸ್ಯೆಯನ್ನು ಪರಿಹರಿಸಲು ನೈಸರ್ಗಿಕವಾಗಿರುವ ಮತ್ತು ತಂತ್ರಜ್ಞಾನ-ಪ್ರೇರಿತ ಮಾರ್ಗದೊಂದಿಗೆ ಈ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮವನ್ನು ಕಂಡುಹಿಡಿದ್ದಾರೆ. ಆ ಸೂಕ್ತ ಕ್ರಮ ಎಂದರೆ ʼಸ್ಮಾರ್ಟ್ ಪ್ಲಾಂಟ್‌ ಅಥವಾ ಸ್ಮಾರ್ಟ್‌ ಸಸ್ಯʼ ಗಳು ಅಶುದ್ಧ ಗಾಳಿಯನ್ನು ಶುದ್ದೀಕರಿಸಲು ತ್ವರಿತವಾಗಿ ಕಾರ್ಯ ನಿರ್ವಹಿಸುತ್ತವೆ.

ಅಶುದ್ಧ ಗಾಳಿ ಸಮಸ್ಯೆಯನ್ನು ಪರಿಹರಿಸಲು ಈ ನಿರ್ಧಾರ
ದೆಹಲಿಯು ನಾಲ್ಕು ವರ್ಷಗಳ ಹಿಂದೆ ಗಂಭೀರ ವಾಯು ಮಾಲಿನ್ಯದ ಅಪಾಯವನ್ನು ಎದುರಿಸುತ್ತಿರುವಾಗ, ಐಐಟಿ-ಕಾನ್ಪುರದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದ ಸಂಜಯ್ ಮೌರ್ಯ ಅವರು ನಗರದ ಮ್ಯಾನೇಜ್‌ಮೆಂಟ್ ಸ್ಟಡೀಸ್ ಫ್ಯಾಕಲ್ಟಿಯಲ್ಲಿ ಎಂಬಿಎ ಪದವಿ ಪಡೆಯುತ್ತಿದ್ದರು.

ಇದನ್ನೂ ಓದಿ: MS Dhoni: ಕಡಕ್‌ನಾತ್ ಕೋಳಿ ಮಾರಾಟಕ್ಕೆ ರೆಡಿಯಾದ ಧೋನಿ, ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

ಈ ಗಂಭೀರ ವಾಯುಮಾಲಿನ್ಯದ ಸಮಸ್ಯೆ ಅರಿತ ಇವರು ಮನೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿರುವ ಅಶುದ್ಧ ಗಾಳಿ ಸಮಸ್ಯೆಯನ್ನು ಪರಿಹರಿಸಬೇಕೆಂದು ನಿರ್ಧರಿಸಿದ್ದರು.

ಸ್ಟಾರ್ಟ್‌ಅಪ್‌ ಕಂಪನಿಯ ಕುರಿತು ಸಂಜಯ್ ಹೇಳಿದ್ದು ಹೀಗೆ 
“ನಾನು ಸ್ವಲ್ಪ ಕಾಲ ಕೆಲಸ ಮಾಡಿದ ಸ್ಟಾರ್ಟ್‌ಅಪ್‌ ಕಂಪನಿಯ ನನ್ನ ಕೆಲವು ಸಹೋದ್ಯೋಗಿಗಳೊಂದಿಗೆ ಇದರ ಕುರಿತು ಮಾಹಿತಿ ಪಡೆದೆ ಮತ್ತು ನಾನು ಐಐಟಿ ಕಾನ್ಪುರದ ಕೆಲವು ಹಿರಿಯ ವಿದ್ಯಾರ್ಥಿಗಳನ್ನು ಕೂಡ ಸಂಪರ್ಕಿಸಿದೆ. ನಾವೆಲ್ಲರೂ ಒಟ್ಟಾಗಿ, ಇದರ ಕುರಿತು ಸಂಶೋಧನೆ ನಡೆಸಿದಾಗ ನಮಗೆ ತಿಳಿದು ಬಂದ ವಿಚಾರ ಎಂದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಏಕೈಕ ಗಾಳಿ ಶುದ್ಧೀಕರಣವು ನೈಸರ್ಗಿಕ ಸಸ್ಯಗಳು ಅಥವಾ ಕೃತಕ ವ್ಯವಸ್ಥೆಗಳು ಆಗಿವೆ ಆದರೆ ಅವು ಕೂಡ ದುಬಾರಿಯಾಗಿವೆ ಎಂದು ಅರಿತುಕೊಂಡೆವು”ಎಂದು ಸಂಜಯ್ ಹೇಳುತ್ತಾರೆ.

ಈ ಏರ್‌ಪ್ಯೂರಿಫೈಯರ್ ಹೇಗೆ ಕಾರ್ಯನಿರ್ವಹಿಸುತ್ತದೆ
ಶುದ್ಧೀಕರಿಸಿದ ಗಾಳಿಯ ಉತ್ಪಾದನೆಯನ್ನು ಹೆಚ್ಚಿಸಲು ಸಸ್ಯಗಳ ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಸಂಯೋಜಿಸುವ ತಂತ್ರಜ್ಞಾನದ ಸಾಧನವನ್ನು ಆವಿಷ್ಕಾರ ಮಾಡಲಾಯಿತು. ಈ ಸಾಧನವು ಜೈವಿಕ-ಶೋಧನೆ ತಂತ್ರವನ್ನು ಬಳಸುತ್ತದೆ, ಇದರಲ್ಲಿ ಸಸ್ಯವು ಕಲುಷಿತ ಗಾಳಿಯನ್ನು ಹೀರಿಕೊಳ್ಳುತ್ತದೆ, ಅದನ್ನು ಮಣ್ಣಿಗೆ ಕಳಿಸುತ್ತದೆ, ಅಲ್ಲಿ ಮಣ್ಣು ಮಾಲಿನ್ಯಕಾರಕಗಳನ್ನು ನಿಯಂತ್ರಿಸಿ ನಮಗೆ ಶುದ್ಧ ಗಾಳಿಯನ್ನು ನೀಡುತ್ತದೆ. ಇದೆಲ್ಲವೂ ಕೇವಲ 20 ನಿಮಿಷಗಳಲ್ಲಿ ಆಗುವ ಸುಲಭ ಕೆಲಸ ಆಗಿದೆ.

ಇದನ್ನೂ ಓದಿ: Business Ideas: ಈ ಬ್ಯುಸಿನೆಸ್​ ಶುರು ಮಾಡೋದು ತುಂಬಾ ಸಿಂಪಲ್​, ಲಾಸ್​ ಮಾತೇ ಇಲ್ಲ! ತಿಂಗಳಿಗೆ 50 ಸಾವಿರ ಪ್ರಾಫಿಟ್​

ಐದು ವಿಭಿನ್ನ ಸಸ್ಯಗಳ ಮಾರಾಟ   
ಈಗ ಈ UBreath ಸ್ಟಾರ್ಟ್‌ ಅಪ್‌ ಕಂಪನಿಯು ಗಾಳಿಯನ್ನು ಶುದ್ಧೀಕರಿಸುವ ಐದು ವಿಭಿನ್ನ ಸಸ್ಯಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಈ ಸೂಪರ್‌ ಸಸ್ಯಗಳ ಬೆಲೆಯು ಕೂಡ ಮಾರುಕಟ್ಟೆಯಲ್ಲಿ ಈ ಮುಂಚೆ ಸಿಗುತ್ತಿದ್ದ ದುಬಾರಿ ಏರ್‌ ಪ್ಯೂರಿಪೈಯರ್‌ಗಳಿಗೆ ಹೋಲಿಕೆ ಮಾಡಿದರೆ ಬೆಲೆಯೂ ಸ್ವಲ್ಪ ಕಡಿಮೆ ಎಂದು ಹೇಳಬಹುದು. ಈ ಸ್ಮಾರ್ಟ್‌ ಪ್ಲಾಂಟ್‌ಗಳು ನಿಜಕ್ಕೂ ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ನೋಡಲು ಈ ವಿಡಿಯೋವನ್ನು ವಿಕ್ಷಿಸಿ:

https://www.youtube.com/watch?v=UBC7ojGD3Xk&t=15s

ಈ ಸ್ಮಾರ್ಟ್‌ ಸಸ್ಯಗಳು ನಿಜಕ್ಕೂ ವಾಯುಮಾಲಿನ್ಯವನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಿದರೆ ಅದು ನಿಜಕ್ಕೂ ಒಂದು ಒಳ್ಳೆಯ ಆವಿಷ್ಕಾರ ಎಂದೆ ಹೇಳಬಹುದು.
Published by:Ashwini Prabhu
First published: