• Home
  • »
  • News
  • »
  • lifestyle
  • »
  • Recipe: ವರಮಹಾಲಕ್ಷ್ಮೀ ಹಬ್ಬಕ್ಕೆ ರುಚಿಕರ ಪುಳಿಯೊಗರೆಯನ್ನು ಹೀಗೆ ಮಾಡಿ

Recipe: ವರಮಹಾಲಕ್ಷ್ಮೀ ಹಬ್ಬಕ್ಕೆ ರುಚಿಕರ ಪುಳಿಯೊಗರೆಯನ್ನು ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ದೇವರಿಗೆ ಪ್ರಸಾದ ರೂಪದಲ್ಲಿ ಖಾದ್ಯಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬಕ್ಕೆ ಪುಳಿಯೋಗರೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ರುಚಿಕರವಾಗಿ ಪೊಳಿಯೋಗರೆ ಮಾಡೋದು ಹೇಗೆ ಎಂದು ತಿಳಿದುಕೊಳ್ಳಿ.

  • Share this:

ವರಮಹಾಲಕ್ಷ್ಮಿ ಹಬ್ಬ (Varamahalakshmi Festival) ಹೆಸರೇ ಹೇಳುವಂತೆ ವರದಾತೆಯಾದ ಲಕ್ಷ್ಮಿ ದೇವರನ್ನು (God Lakshmi) ಪೂಜಿಸುವ ಹಬ್ಬವಾಗಿದೆ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ದೇವರಿಗೆ ಪ್ರಸಾದ ರೂಪದಲ್ಲಿ ಖಾದ್ಯಗಳನ್ನು (Dishes) ಅರ್ಪಿಸುವುದು ಸಾಮಾನ್ಯವಾಗಿದೆ. ಅದರಲ್ಲಿ ಪುಳಿಯೋಗರೆ (Pulyogare) ಕೂಡ ಒಂದು.  ಹಬ್ಬಕ್ಕೆ ಮನೆಯಲ್ಲೇ ಸುಲಭವಾಗಿ ರುಚಿಕರ ಪುಳಿಯೋಗರೆ ತಿನ್ನಿಅತಿಸರಳವಾಗಿ (Easy) ಮಾಡಬಹುದಾದ ಪುಳಿಯೋಗರೆ ದೂರದ ಅಮೇರಿಕಾದಲ್ಲೂ ಹೆಸರುವಾಸಿಯಾಗಿದೆ (Famous) ಎಂದರೆ ಅದರ ರುಚಿಗೆ ನೀವು ಮಾರು ಹೋಗಲೇಬೇಕು.


ಮನೆಯಲ್ಲೇ ತಯಾರಿಸಿ ಮಾಡಬಹುದಾದ ಪುಳಿಯೋಗರೆ ಗೊಜ್ಜಂತೂ ತಿಂದಷ್ಟು ಇನ್ನೂ ತಿನ್ನಬೇಕೆಂಬ ಬಯಕೆಯನ್ನು ಮನದಲ್ಲಿ ಮೂಡಿಸುತ್ತದೆ. ಇದನ್ನು ತಯಾರಿಸಲು ಬಹಳ ಸಮಯ ಬೇಕಾಗಿಲ್ಲ. ಸುಲಭವಾಗಿ ಮನೆಯಲ್ಲೇ ಮಾಡಬಹುದು. ಇನ್ನು ಆಧುನಿಕ ಗೃಹಿಣಿಯರಿಗಾಗಿಯೇ ಇನ್‌ಸ್ಟಂಟ್ ಪುಳಿಯೋಗರೆ ಪುಡಿಗಳು ಲಭ್ಯವಿದ್ದು ಇದರಿಂದ ಕೆಲವೇ ನಿಮಿಷಗಳಲ್ಲಿ ಪುಳಿಯೋಗರೆ ಖಾದ್ಯವನ್ನು ತಯಾರಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ತಡಮಾಡದೇ ಕೆಳಗೆ ನೀಡಿರುವ ರುಚಿಯಾಗಿರುವ ಪುಳಿಯೋಗರೆ ಖಾದ್ಯ ತಯಾರಿ ಕುರಿತ ಮಾಹಿತಿಯನ್ನು ಅರಿತುಕೊಳ್ಳಿ.

 ಬೇಕಾಗುವ ಸಾಮಾಗ್ರಿಗಳು




ಅಕ್ಕಿ - 2 ಕಪ್‌ಗಳು


ನೆನೆಸಿದ ಹುಳಿ - 1 ಕಪ್


ಉದ್ದಿನ ಬೇಳೆ - 1 ಚಮಚ


ಬೆಲ್ಲ - 1 ಚಮಚ


ಕಡಲೆ - ಮುಷ್ಟಿಯಷ್ಟು


ಅರಶಿನ ಪುಡಿ - 1 ಚಮಚ


ಸಾಸಿವೆ - 1 ಚಮಚ


ಇಂಗು - ಸಣ್ಣ ತುಂಡು


ಜೀರಿಗೆ - 1 ಚಮಚ


ಎಳ್ಳಿನ ಪುಡಿ- 1 ಚಮಚ


ಕರಿಬೇವಿನೆಲೆ - 6-7


ಒಣ ಕೆಂಪು ಮೆಣಸು - 3-4


ಹಸಿಮೆಣಸು - 3-4 ಉದ್ದಕ್ಕೆ ಸೀಳಿದ್ದು


ಉಪ್ಪು - ರುಚಿಗೆ ತಕ್ಕಷ್ಟು


ತುಪ್ಪ ಅಥವಾ ಬೆಣ್ಣೆ - 1 ಚಮಚ


ಇದನ್ನೂ ಓದಿ: BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ


ಮಾಡುವ ವಿಧಾನ:


*ಅನ್ನವನ್ನು ಎಂದಿನಂತೆ ಉದುರುದುರಾಗಿ ಬೇಯಿಸಿಕೊಳ್ಳಿ. ಬೇಕಾದಷ್ಟು ಮಾತ್ರ ನೀರು ಹಾಕಿ. ಅನ್ನ ಅಂಟದಂತೆ ಜಾಗರೂಕತೆ ವಹಿಸಿ.


*ಬೇಯಿಸಿದ ಅನ್ನವನ್ನು ಸ್ವಲ್ಪ ಹೊತ್ತು ತಣಿಯಲು ಬಿಡಿ. ಇದಕ್ಕೆ ಅರಶಿನ ಪುಡಿ ಮತ್ತು ಕರಿಬೇವಿನೆಲೆಯನ್ನು ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ.


*ಇನ್ನು ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಳ್ಳಿ ಮತ್ತು ಎಲ್ಲಾ ಸಾಂಬಾರು ಪದಾರ್ಥಗಳನ್ನು ಹಾಕಿ ಒಗ್ಗರಣೆ ನೀಡಿ. ಇದನ್ನು ಸ್ವಲ್ಪ ಹೊತ್ತು ತುಪ್ಪದಲ್ಲಿ ಹುರಿಯಿರಿ. ಕೊನೆಗೆ ಹಸಿಮೆಣಸನ್ನು ಹಾಕಿ.


*ನಂತರ ಬೆಲ್ಲ ಮತ್ತು ಹುಳಿಯನ್ನು ಪಾತ್ರೆಗೆ ಹಾಕಿ. ಹುಳಿಯು ಚೆನ್ನಾಗಿ ಬೇಯುವವರೆಗೆ ಮಂದ ಉರಿಯಲ್ಲಿ 5-6 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.


*ತದನಂತರ ಈ ಮಸಾಲೆ ಮಿಶ್ರಣಕ್ಕೆ ಅನ್ನವನ್ನು ಬೆರೆಸಿ ಹಾಗೂ ಹುರಿದ ಕಡಲೆಕಾಳಿನೊಂದಿಗೆ ಇದನ್ನು ಅಲಂಕರಿಸಿ. ನಿಮ್ಮ ವರಮಹಾಲಕ್ಷ್ಮೀ ಪೂಜೆಯ ವಿಶೇಷ ಪ್ರಸಾದ ತಿನಿಸು ಸಿದ್ಧವಾಗಿದೆ.


ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ



ಭಾರತೀಯ ತಿಂಡಿ-ತಿನಿಸುಗಳು (Indian Dish) ನಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ನಮ್ಮ ನೆಲದಲ್ಲಿ ಮಾಡುವ ತಿಂಡಿಗಳು ದೇಶೀಯ ಸೊಗಡನ್ನು ಪಡೆದುಕೊಳ್ಳುವುದರ ಜೊತೆಗೆ ಉತ್ತಮ ರುಚಿಯನ್ನು (Tasty) ಹೊಂದುವುದರ ಜೊತೆಗೆ ಆ ಸ್ವಾದ ನಮ್ಮ ನಾಲಗೆಯಲ್ಲಿ ಉಳಿಯುವಂತೆ ಮಾಡುತ್ತದೆ. ಅಕ್ಕಿ ರೊಟ್ಟಿ (Akki Rotti), ಜೋಳದ ರೊಟ್ಟಿ, ರಾಗಿ ಮುದ್ದೆ, ಚಿತ್ರಾನ್ನ, ಹೀಗೆ ಈ ತಿಂಡಿಗಳನ್ನು ಹೆಸರಿಸುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲದಂತಾಗುತ್ತದೆ. ಅಷ್ಟೊಂದು ವೈವಿಧ್ಯಮಯ ಸ್ವಾದಭರಿತ ತಿಂಡಿಗಳ ಪಟ್ಟಿಯೇ ನಮ್ಮ ಮುಂದಿದೆ. ಇನ್ನು ಈ ಪಟ್ಟಿಯಲ್ಲಿ ಅಗ್ರ ಗಣ್ಯ ಸ್ಥಾನ ಪಡೆದುಕೊಂಡಿರುವುದು ಪುಳಿಯೋಗರೆಯಾಗಿದೆ.

Published by:Pavana HS
First published: