• Home
 • »
 • News
 • »
 • lifestyle
 • »
 • Eye Care: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!

Eye Care: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾನ್ಯವಾಗಿ ತಲೆನೋವು ಬಂದಾಗ ಹೀಗೆ ಕಣ್ಣುಗಳು ಊದಿಕೊಳ್ಳುತ್ತವೆ. ಇದನ್ನು ನೀವು ಅನುಭವಿಸಿರಬಹುದು. ಇದು ಒಂದು ದಿನ ಸಂಭವಿಸಿದರೆ ಸರಿ. ಆದರೆ ಹೀಗೆ ಕಣ್ಣುಗಳ ಕೆಳಗೆ ಊದಿಕೊಳ್ಳುವ ಸಮಸ್ಯೆಯ ಈ ಚಕ್ರವು ಕೆಲವು ದಿನಗಳವರೆಗೆ ನಿರಂತರವಾಗಿ ಮುಂದುವರಿರೆದರೆ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೀರಿ ಎಂದರ್ಥ.

ಮುಂದೆ ಓದಿ ...
 • Share this:

  ಬೆಳಗ್ಗೆ (Morning) ಎದ್ದಾಗ ಸಾಮಾನ್ಯವಾಗಿ ಮುಖ (Face) ಊದಿಕೊಂಡಿರುತ್ತದೆ. ಬೆಳಗ್ಗೆ ಎದ್ದಾಗ ಕನ್ನಡಿಯಲ್ಲಿ (Mirror) ಮುಖ ನೋಡಿಕೊಂಡು ಅದರ ಬಗ್ಗೆ ಚಿಂತೆ ಮಾಡುತ್ತೀರಾ? ಅಷ್ಟೇ ಅಲ್ಲ, ಮುಖದ ಜೊತೆಗೆ ನಿಮ್ಮ ಕಣ್ಣುಗಳ ಕೆಳಗೆ (Under Eyes) ಊತವೂ (Puffy) ಕಂಡು ಬರುತ್ತದೆ. ಕೆಲವೊಮ್ಮೆ ಹುಬ್ಬುಗಳು ಊದಿಕೊಂಡಿರುತ್ತವೆ. ಅದು ಸಾಮಾನ್ಯವಾಗಿ ತಲೆನೋವು ಬಂದಾಗ ಹೀಗೆ ಕಣ್ಣುಗಳು ಊದಿಕೊಳ್ಳುತ್ತವೆ. ಇದನ್ನು ನೀವು ಅನುಭವಿಸಿರಬಹುದು. ಇದು ಒಂದು ದಿನ ಸಂಭವಿಸಿದರೆ ಸರಿ. ಆದರೆ ಹೀಗೆ ಕಣ್ಣುಗಳ ಕೆಳಗೆ ಊದಿಕೊಳ್ಳುವ ಸಮಸ್ಯೆಯ ಈ ಚಕ್ರವು ಕೆಲವು ದಿನಗಳವರೆಗೆ ನಿರಂತರವಾಗಿ ಮುಂದುವರಿರೆದರೆ, ನೀವು ವಿಶೇಷ ರೀತಿಯ ಸಮಸ್ಯೆ ಎದುರಿಸುತ್ತಿದ್ದೀರಿ ಎಂದು ನೀವು ತಿಳಿಯಬಹುದು.


  ಕಣ್ಣುಗಳ ಕೆಳಗಿನ ಊತ ಸಮಸ್ಯೆ


  ಆದರೆ ಇದರ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಈ ಸಮಸ್ಯೆ ನಿಭಾಯಿಸಲು ದೀರ್ಘ ಚಿಕಿತ್ಸೆಯ ಅಗತ್ಯವೂ ಇಲ್ಲ. ಇದರ ಬಲು ನೀವು ಕೇವಲ ಒಂದು ಕಷಾಯ ಮಾಡಿ ಕುಡಿಯುವ ಮೂಲಕ, ನೀವು ಕೆಲವೇ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ ಉಂಟಾಗುವ ಕಣ್ಣುಗಳ ಕೆಳಗಿನ ಈ ಊತವನ್ನು ಹೋಗಲಾಡಿಸಬಹುದು.


  ಆಯುರ್ವೇದ ಆಚಾರ್ಯ ಅಲ್ಕಾ ವಿಜಯನ್ ಅವರು ಬೆಳಗ್ಗೆ ಮುಖದಲ್ಲಿ ಉಂಟಾಗುವ ಊತ ಮತ್ತು ಕಣ್ಣುಗಳ ಕೆಳಗೆ ಊತ ಸಂಬಂಧಿಸಿರುವ ಬಗ್ಗೆ ಮಾಹಿತಿ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡಿರುವ ಅವರು ಊತಕ್ಕೆ ಯಾವುದೆಲ್ಲಾ ಕಾರಣ ಆಗುತ್ತದೆ ಎಂದು ಹೇಳಿದ್ದಾರೆ.


  ಇದನ್ನೂ ಓದಿ:


  ಇದರ ಜೊತೆಗೆ ಈ ರೀತಿಯ ಊತ ಕಡಿಮೆ ಮಾಡಲು ಕಷಾಯ ಹೇಗೆ ತಯಾರಿಸಬೇಕು ಎಂಬ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಊತ ಏಕೆ ಉಂಟಾಗುತ್ತದೆ? ಮತ್ತು ಅದನ್ನು ತೊಡೆದು ಹಾಕುವ ಮಾರ್ಗ ಯಾವುದು ಎಂದು ನೋಡೋಣ.


  ಕಣ್ಣುಗಳ ಕೆಳಗೆ ಊತಕ್ಕೆ ಕಾರಣಗಳು ಯಾವವು?


  ಕಣ್ಣುಗಳ ಕೆಳಗೆ ಪಫಿನೆಸ್ ಅಥವಾ ಊತ ಕಾಣಿಸಿಕೊಳ್ಳುವ ಸ್ಥಿತಿಯನ್ನು ಮೈಕ್ಸೋಡೆಮಾ ಎಂದು ಕರೆಯುತ್ತಾರೆ. ಡಾ. ಅಲ್ಕಾ ವಿಜಯನ್ ಅವರು ಹೇಳುವ ಪ್ರಕಾರ, ಹೈಪೋಥೈರಾಯ್ಡಿಸಂಗೆ ಸರಿಯಾಗಿ ಚಿಕಿತ್ಸೆ ನೀಡದೇ ಹೋದರೆ ಕಣ್ಣುಗಳ ಕೆಳಗೆ ಊತದ ದೂರು ಹೆಚ್ಚುತ್ತಲೇ ಇರುತ್ತದೆ.


  ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದೇ ಹೋದರೆ ಅದು ಕಾರಣ ಅಥವಾ ಔಷಧದ ಡೋಸೇಜ್ ಅನ್ನು ಹೆಚ್ಚಿಸುವುದು, ಮತ್ತು ದೀರ್ಘ ಕಾಲದವರೆಗೆ ಔಷಧ ಸೇವನೆ ಪ್ರಕ್ರಿಯೆ ಹೆಚ್ಚಳವೂ ಇದಕ್ಕೆ ಕಾರಣ ಆಗುತ್ತದೆ.


  ಹೈಪೋಥೈರಾಯ್ಡಿಸಂ ಲಕ್ಷಣಗಳು ಯಾವವು?


  ಕಣ್ಣುಗಳ ಕೆಳಗೆ ಊತ ಹೊರತುಪಡಿಸಿ ಈ ಸಮಸ್ಯೆಗೆ ಹಲವು ಲಕ್ಷಣಗಳಿವೆ. ಇದ್ದಕ್ಕಿದ್ದಂತೆ ಹೆಚ್ಚು ಆಯಾಸ ಉಂಟಾಗ ಅನುಭವಿಸಲು ಪ್ರಾರಂಭಿಸಿದರೆ ಅಥವಾ ಹೆಚ್ಚು ಶೀತ ಉಂಟಾಗುತ್ತಿದ್ದರೆ ಅದು ಹೈಪೋಥೈರಾಯಿಸಂ ಲಕ್ಷಣ ಆಗಿರಬಹುದು.


  ಇದನ್ನೂ ಓದಿ: ನಿಮ್ಮ ಯೋಗ ಮ್ಯಾಟ್​ ಕ್ಲೀನ್ ಮಾಡೋಕೆ ಈ ಟ್ರಿಕ್​ ಯೂಸ್ ಮಾಡಿ


  ನಿಮ್ಮ ಚರ್ಮವು ಮೊದಲಿಗಿಂತ ಒಣಗಲು ಪ್ರಾರಂಭಿಸಿದರೆ, ಒರಟುತನ, ತೂಕ ಹೆಚ್ಚಾಗುವುದು, ಸ್ನಾಯು ನೋವು ಕೂಡ ಇದರ ಸಂಕೇತ ಆಗಿರಬಹುದು. ಮುಖದ ಹೊರತಾಗಿ ಕೀಲುಗಳಲ್ಲಿ ಬಿಗಿತ ಮತ್ತು ಊತ ಉಂಟಾಗುವ ಸಾಧ್ಯತೆ ಇದೆ.


  ಹೈಪೋಥೈರಾಯ್ಡಿಸಂ ಕಾರಣಗಳು


  ಹಾರ್ಮೋನುಗಳ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುವ ಯಾವುದೇ ಔಷಧಿಯ ಸೇವನೆ ಮಾಡುವುದು ಹೈಪೋಥೈರಾಯಿಸಂಗೆ ಕಾರಣ ಆಗುತ್ತದೆ. ಕ್ಯಾನ್ಸರ್ ಗೆ ವಿಕಿರಣ ಚಿಕಿತ್ಸೆ, ಅಯೋಡಿನ್ ಕೊರತೆ ಅಥವಾ ಅತಿಯಾದ ಅಯೋಡಿನ್ ಸೇವನೆ. ಯಾವುದೇ ಹಠಾತ್ ಗಂಭೀರ ಕಾಯಿಲೆಯು ಹೈಪೋಥೈರಾಯಿಸಂಗೆ ಕಾರಣವಾಗಿದೆ.


  ಯಾವ ಕಷಾಯವನ್ನು ಪ್ರತಿದಿನ ಸೇವಿಸಬೇಕು?


  ವಿಶೇಷ ಕಷಾಯ ಕುಡಿಯಲು ಡಾ.ಅಲ್ಕಾ ವಿಜಯನ್ ಸಲಹೆ ನೀಡಿದ್ದಾರೆ. ಈ ಕಷಾಯ ಮಾಡಲು ಬೇಕಾಗುವ ಸಾಮಗ್ರಿಗಳು, ಬನ್ ಪುಡಿಯ ನಾಲ್ಕನೇ ಒಂದು ಚಮಚ, ಮೂರು ಪಿಂಚ್ ಒಣ ಶುಂಠಿ ಮತ್ತು ಮೂರು ಕಪ್ ನೀರು.


  ಹೇಗೆ ತಯಾರಿಸುವುದು?


  ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಮತ್ತು ಮಡ್ಡಿ ಉರಿಯಲ್ಲಿ ಬೆಚ್ಚಗಾಗಿಸಿ. ನೀರು ಒಂದು ಕಪ್‌ ಗೆ ಬರುವವರೆಗೆ ಕುದಿಸಿ. ಮೂರು ವಾರಗಳ ಕಾಲ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಈ ಕಷಾಯ ಕುಡಿಯಿರಿ.


  ಇದನ್ನೂ ಓದಿ: ಸಿಗರೇಟ್​ ಸೇವನೆ ಬಿಡಬೇಕು ಅಂದ್ರೆ ಕಾಳು ಮೆಣಸಿನ ಎಣ್ಣೆ ಸಹಾಯ ಮಾಡುತ್ತಂತೆ


  ಬಕ್ವೀಟ್ ಪೌಡರ್


  ಗೋಖ್ರು ಅಥವಾ ಗೋಕ್ಷುರ್ ಒಂದು ವಿಶೇಷ ರೀತಿಯ ಔಷಧೀಯ ಸಸ್ಯ. ಇದು ಹಸಿರು ಮುಳ್ಳಿನ ಸುತ್ತಿನ ಹಣ್ಣುಗಳನ್ನು ಹೊಂದಿರುತ್ತದೆ. ಈ ಹಣ್ಣುಗಳ ಪುಡಿ ಮಾಡಿ ಕುಡಿಯುತ್ತಾರೆ.

  Published by:renukadariyannavar
  First published: