ಉಬ್ಬಿದ ಕಣ್ಣುಗಳು (Puffy Eyes) ಮುಖದ ಅಂದವನ್ನು (Face Beauty) ಹಾಳು ಮಾಡುತ್ತದೆ. ಜೊತೆಗೆ ಕಣ್ಣಿನ ಸಮಸ್ಯೆಗೂ (Eyes Problem) ಕಾರಣ ಆಗಬಹುದು. ಉಬ್ಬಿದ ಕಣ್ಣುಗಳಿಂದ ನೀವು ತೊಂದರೆಗೆ ಒಳಗಾಗಿದ್ದರೆ, ಕೆಲವು ವಿಷಯಗಳ ಬಗ್ಗೆ ಸೂಕ್ತ ಕಾಳಜಿ ವಹಿಸಿ. ಈ ಮೂಲಕ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿವಾರಣೆ ಮಾಡಿಕೊಳ್ಳಬಹುದು. ಉಬ್ಬಿದ ಕಣ್ಣುಗಳು, ಕಣ್ಣುಗಳ ಕೆಳಗೆ ಊತ ಉಂಟಾಗಲು ಕಾರಣವಾಗಿವೆ. ಇದರಿಂದಾಗಿ ಮುಖ ಮತ್ತು ಚರ್ಮದ ಟೋನ್ ಚೆನ್ನಾಗಿ ಕಾಣಿಸುವುದಿಲ್ಲ. ಮುಖ ಅಸಮಂಜಸವಾಗಿ ಕಾಣುತ್ತದೆ. ಮೇಕ್ಅಪ್ ಮಾಡುವಾಗ ಸಹ ಉಬ್ಬಿದ ಕಣ್ಣುಗಳನ್ನು ಮರೆ ಮಾಡಲು ಹೆಚ್ಚುವರಿ ಪದರದ ಮೇಕಪ್ ಅನ್ವಯಿಸಬೇಕಾಗುತ್ತದೆ. ಈ ಉಬ್ಬಿದ ಕಣ್ಣುಗಳನ್ನು ಹೇಗೆ ಕಡಿಮೆ ಮಾಡುವುದು ಎಂದು ತಿಳಿಯೋಣ.
ಕಣ್ಣುಗಳ ಉಬ್ಬುವಿಕೆ ಸಮಸ್ಯೆ
ಅನೇಕ ಬಾರಿ ಕಣ್ಣುಗಳಲ್ಲಿ ಊತ ಉಂಟಾಗುತ್ತದೆ. ಇದು ಕಣ್ಣುಗಳ ಉಬ್ಬುವಿಕೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಆಯಾಸ ಅಥವಾ ನಿದ್ರೆಯ ಕೊರತೆಯಿಂದಲೂ ಸಹ ಅನೇಕ ಬಾರಿ ಕಣ್ಣುಗಳ ಉಬ್ಬುವಿಕೆ ಉಂಟಾಗುತ್ತದೆ. ಆದರೆ ನೀವು ಆಗಾಗ್ಗೆ ಈ ಸಮಸ್ಯೆ ಎದುರಿಸುತ್ತಿದ್ದರೆ ನಿಮ್ಮ ಮನೆಯಲ್ಲಿಯೇ ಇದಕ್ಕೆ ಸುಲಭವಾದ ಪರಿಹಾರ ಮಾಡಿ ನೋಡಿ.
ಕಣ್ಣುಗಳ ಊತ ಕಡಿಮೆ ಮಾಡಲು ಹಾಲನ್ನು ಹೇಗೆ ಬಳಸುವುದು?
ಕಣ್ಣುಗಳ ಊತ ಕಡಿಮೆ ಮಾಡಲು, ಹಾಲನ್ನು ಐಸ್-ಫ್ರೀಜಿಂಗ್ ಟ್ರೇನಲ್ಲಿ ಹಾಕಿ ಮತ್ತು ಅದನ್ನು ಸಣ್ಣ ತುಂಡುಗಳಲ್ಲಿ ಫ್ರೀಜ್ ಮಾಡಿ, ಮತ್ತು ಆ ಕ್ಯೂಬ್ ಅನ್ನು ಬಟ್ಟೆಯಲ್ಲಿ ತೆಗೆದುಕೊಂಡು ಅದನ್ನು ಕಣ್ಣುಗಳ ಸುತ್ತ ಅನ್ವಯಿಸಿ. ಇದು ಕಣ್ಣುಗಳ ಊತ ಕಡಿಮೆ ಮಾಡುತ್ತದೆ. ಜೊತೆಗೆ ಕಣ್ಣುಗಳ ಆಯಾಸ ಹೋಗುತ್ತದೆ.
ಇದನ್ನೂ ಓದಿ: ವರ್ಕೌಟ್ ಮಾಡುವ 40 ನಿಮಿಷಗಳ ಮೊದಲು ಈ ಪದಾರ್ಥಗಳನ್ನು ಸೇವಿಸಿ ಎನರ್ಜಿ ಪಡೆಯಿರಿ!
ಎರಡನೆಯ ವಿಧಾನವೆಂದರೆ ಒಂದು ಚಮಚ ಕಾಫಿ ಪುಡಿಯಲ್ಲಿ ಎರಡು ಚಮಚ ಹಸಿ ಹಾಲು ಬೆರೆಸಿ ಪೇಸ್ಟ್ ತಯಾರಿಸಿ ಮತ್ತು ಈ ಪೇಸ್ಟ್ ಅನ್ನು ಕಣ್ಣಿನ ಕೆಳಗೆ ಹಚ್ಚಿ 5 ರಿಂದ 10 ನಿಮಿಷ ಬಿಟ್ಟು ನಂತರ ತೊಳೆಯಬೇಕು. ಇದು ಕಣ್ಣುಗಳ ಊತವು ಕಡಿಮೆಯಾಗಲು ಸಹಕಾರಿ.
ಐಸ್ ವಾಟರ್ ಥೆರಪಿ
ಬೆಳಿಗ್ಗೆ ಮುಖದ ಮೇಲೆ ತಾಜಾತನ ಕಾಪಾಡಲು ಬಕೆಟ್ ಅಥವಾ ದೊಡ್ಡ ಬಟ್ಟಲಿನಲ್ಲಿ ಐಸ್ ನೀರನ್ನು ತುಂಬಿಸಿ. ನಿಮ್ಮ ಮುಖ, ಕಣ್ಣು ಮುಳುಗುವಂತೆ ಇರುವ ಪಾತ್ರೆಯಲ್ಲಿ ನಿಮ್ಮ ಬಾಯಿಯನ್ನು ಆ ಪಾತ್ರೆಯಲ್ಲಿ ಇರಿಸಿ ಮತ್ತು ತಣ್ಣೀರಿನೊಳಗೆ ನಿಮಗೆ ಸಾಧ್ಯವಾದಷ್ಟು ಕಾಲ ಇರಿಸಿ. ನಂತರ ಅದನ್ನು ಹೊರ ತೆಗೆಯಿರಿ. ಈ ವಿಧಾನವನ್ನು 5 ನಿಮಿಷ ಮಾಡಿ.
ಉಬ್ಬಿದ ಕಣ್ಣುಗಳು ಗುಣವಾಗುತ್ತವೆ. ಮತ್ತು ಮುಖವು ಸಂಪೂರ್ಣವಾಗಿ ಅರಳುತ್ತದೆ. ಸೆಲೆಬ್ರಿಟಿಗಳು ಕೂಡ ಐಸ್ ಬಕೆಟ್‌ನಲ್ಲಿ ಫೇಸ್ ಮಾಸ್ಕ್ ಮಾಡಿ ಉಬ್ಬಿದ ಕಣ್ಣುಗಳನ್ನು ಹೋಗಲಾಡಿಸುತ್ತಾರೆ.
ಐಸ್ ಪ್ಯಾಕ್ ಅನ್ನು ಹೇಗೆ ಬಳಸುವುದು
ಬೆಳಿಗ್ಗೆ ಎದ್ದಾಗ ಕಣ್ಣಿನ ಕೆಳಗೆ ಉಳಿದಿರುವ ಊತಕ್ಕೆ ಐಸ್ ಕ್ಯೂಬ್ ಅನ್ನು ಕಣ್ಣಿನ ಮೇಲೆ ಇರಿಸಿ. ಸ್ವಲ್ಪ ಸಮಯದ ನಂತರ. ಕಣ್ಣುಗಳ ಕೆಳಗಿನ ಊತವು ಕಡಿಮೆಯಾಗುತ್ತದೆ.
ನಿದ್ರೆ ಅತ್ಯಂತ ಮುಖ್ಯ
ಕಣ್ಣುಗಳ ಕೆಳಗಿನ ಕಪ್ಪು ವಲಯ ಕಡಿಮೆ ಮಾಡಲು ಬಯಸಿದರೆ ಉಬ್ಬಿದ ಕಣ್ಣುಗಳನ್ನು ಬಯಸದಿದ್ದರೆ, ಖಂಡಿತವಾಗಿಯೂ 6-7 ಗಂಟೆಗಳ ನಿದ್ದೆ ತೆಗೆದುಕೊಳ್ಳಿ. ನಿದ್ರೆಯ ದಿನಚರಿ ಸರಿಯಾಗಿ ಇರಿಸಿಕೊಳ್ಳಲು ಪ್ರಯತ್ನಿಸಿ. ಇದು ಮುಖದ ತಾಜಾತನಕ್ಕೆ ಸಹಕಾರಿ. ಮತ್ತು ಕಪ್ಪು ವಲಯಗಳು ಕಡಿಮೆಯಾಗುತ್ತವೆ.
ನೈಟ್ ಕ್ರೀಮ್ ಬಳಸಿ
ರಾತ್ರಿ ಮುಖದ ಪೋಷಣೆಗೆ ಗುಣಮಟ್ಟದ ನೈಟ್ ಕ್ರೀಮ್ ಅನ್ವಯಿಸಿ. ಬ್ರ್ಯಾಂಡ್ ನೈಟ್ ಕ್ರೀಮ್, ಸೀರಮ್ ಅಥವಾ ಅಂಡರ್ ಐ ಕ್ರೀಮ್ ಹಚ್ಚಿರಿ.
ಇದನ್ನೂ ಓದಿ: ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು? ಯಾವ ಪದಾರ್ಥ ಸೇವನೆ ಮಾಡಬೇಕು? ಇಲ್ಲಿದೆ ಮಾಹಿತಿ
ಟೀ ಬ್ಯಾಗ್ ಗಳನ್ನು ಹಚ್ಚಿಕೊಳ್ಳಿ
ಬೆಳಗ್ಗೆ ಎದ್ದ ತಕ್ಷಣ ಎರಡು ಟೀ ಬ್ಯಾಗ್ ಗಳನ್ನು ನೀರಿನಲ್ಲಿ ಅದ್ದಿ ಎರಡು ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಇದು ಕಣ್ಣುಗಳ ಕೆಳಗಿರುವ ಊತದಿಂದ ತ್ವರಿತ ಪರಿಹಾರ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ