Morning Breakfast: ಅದೇ ಖಾಲಿ ದೋಸೆ ತಿಂದು ಬೋರ್ ಆಗಿದ್ಯಾ? ಹಾಗಿದ್ರೆ ಇಂದು ಪುಡಿ ದೋಸೆಯನ್ನು ಒಮ್ಮೆ ಟ್ರೈ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೋಸೆ ಅಂದರೆ ಯಾರಿಗೆ ಇಷ್ಟವಾಗುವುದಿಲ್ಲ. ದೋಸೆಯನ್ನು ಹಲವು ಶೈಲಿಯಲ್ಲಿ ಮಾಡಬಹುದು. ಮಸಾಲಾ ದೋಸೆ, ಈರುಳ್ಳಿ ದೋಸೆ, ರೆವೆ ದೋಸೆ ಮತ್ತು ರಾಗಿ ದೋಸೆ ಇದೇ ರೀತಿ ಹಲವು ವಿಧಗಳಿವೆ. ಆದರೆ ಇತ್ತೀಚೆಗೆ ಹೆಚ್ಚು ಟ್ರೆಂಡ್ ಕ್ರಿಯೇಟ್ ಮಾಡಿರುವುದು ‘ಪುಡಿ ದೋಸೆ’. ಇಂದು ನಾವು ನಿಮಗೆ ಈ ಪುಡಿ ದೋಸೆ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಈ ದೋಸೆಯನ್ನು ನೀವು ಮನೆಯಲ್ಲೇ ಸುಲಭವಾಗಿ ಮಾಡಿ ಸವಿಯಬಹುದು.

ಮುಂದೆ ಓದಿ ...
  • Share this:

ಪ್ರತಿದಿನ ಬೆಳಗ್ಗೆ ಏನು ತಿಂಡಿ ಮಾಡುವುದು ಎಂಬುವುದೇ ಅದೆಷ್ಟೋ ಮಂದಿಗೆ ಯೋಚನೆ ಆಗಿರುತ್ತದೆ. ಇನ್ನೂ ಕೆಲಸ, ಕಚೇರಿಗಳಿಗೆ ಹೋಗುವ ಮಂದಿಗಂತೂ ಬೆಳಗಿನ ತಿಂಡಿ ಮಾಡುವುದೇ ದೊಡ್ಡ ತಲೆ ನೋವಾಗಿರುತ್ತದೆ. ಏಕೆಂದರೆ ಕೆಲಸಕ್ಕೆ ಹೋಗುವ ಆತುರದಲ್ಲಿ ಅದೆಷ್ಟೂ ಬಾರಿ ತಿಂಡಿ ಮಾಡದೇ, ಹೊರಗೆ ಟಿಫನ್​ ಸೇವಿಸುತ್ತಾರೆ. ಇದರಿಂದ ಆರೋಗ್ಯ ಹಾಳು ಮಾಡಿಕೊಂಡು ಕಷ್ಟಪಡುತ್ತಾರೆ. ಅಂತಹವರು ಬೆಳಗಿನ ತಿಂಡಿಗೆ ಫಟಾಫಟ್​ ಅಂತ ಮಾಡಿ ಈ ಪುಡಿ ದೋಸೆ.  ಹೌದು, ದೋಸೆ ಒಂದು ದಕ್ಷಿಣ ಭಾರತೀಯ ತಿನಿಸು ಆಗಿದೆ. ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್​​​ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ದೋಸೆಯನ್ನು ದಕ್ಷಿಣ ಭಾರತದಲ್ಲಿ ಬೆಳಗಿನ ತಿಂಡಿಯಾಗಿ ಸೇವಿಸುವುದು ಸರ್ವೇಸಾಮಾನ್ಯ.


ಸಾಂದರ್ಭಿಕ ಚಿತ್ರ


ಅಷ್ಟಕ್ಕೂ ದೋಸೆ ಅಂದರೆ ಯಾರಿಗೆ ಇಷ್ಟವಾಗುವುದಿಲ್ಲ. ದೋಸೆಯನ್ನು ಹಲವು ಶೈಲಿಯಲ್ಲಿ ಮಾಡಬಹುದು. ಮಸಾಲಾ ದೋಸೆ, ಈರುಳ್ಳಿ ದೋಸೆ, ರೆವೆ ದೋಸೆ ಮತ್ತು ರಾಗಿ ದೋಸೆ ಇದೇ ರೀತಿ ಹಲವು ವಿಧಗಳಿವೆ. ಆದರೆ ಇತ್ತೀಚೆಗೆ ಹೆಚ್ಚು ಟ್ರೆಂಡ್ ಕ್ರಿಯೇಟ್ ಮಾಡಿರುವುದು ‘ಪುಡಿ ದೋಸೆ’. ಇಂದು ನಾವು ನಿಮಗೆ ಈ ಪುಡಿ ದೋಸೆ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಈ ದೋಸೆಯನ್ನು ನೀವು ಮನೆಯಲ್ಲೇ ಸುಲಭವಾಗಿ ಮಾಡಿ ಸವಿಯಬಹುದು.


ಸಾಂದರ್ಭಿಕ ಚಿತ್ರ


ಪುಡಿ ದೋಸೆ ಮಾಡಲು ಬೇಕಾಗಿರುವ ಪದಾರ್ಥಗಳು


  • 2 ಟೇಬಲ್​ ಸ್ಪೂನ್​ ಎಳ್ಳು

  • 1 ಟೀಸ್ಪೂನ್ ಎಣ್ಣೆ

  • 1/2 ಉದ್ದಿನ ಬೇಳೆ

  • 1/2 ಕಡಳೆ ಬೇಳೆ

  • 6 ಒಣಗಿದ ಕೆಂಪು ಮೆಣಸಿನಕಾಯಿ

  • 6-10 ಕರಿ ಬೇವಿನ ಎಲೆಗಳು

  • 2 ಟೇಬಲ್​ ಸ್ಪೂನ್ ಕೊಬ್ಬರಿ ತುರಿ

  • 50 ಗ್ರಾಂ ಹುಣಿಸೇಹಣ್ಣು

  • ½ ಟೀಸ್ಪೂನ್ ಅರಿಶಿನ

  • 1 ಟೀ ಸ್ಪೂನ್ ಉಪ್ಪು


ಸಾಂದರ್ಭಿಕ ಚಿತ್ರ


ಪುಡಿ ದೋಸೆ ಮಾಡುವ ವಿಧಾನ


  • ಮೊದಲಿಗೆ, ದೊಡ್ಡ ತವಾ ಮೇಲೆ ಬಿಳಿ ಎಳ್ಳನ್ನು ಹಾಕಿ ಕಡಿಮೆ ಉರಿಯಲ್ಲಿ ಹುರಿದು ಪಕ್ಕಕ್ಕೆ ಇಟ್ಟುಕೊಳ್ಳಬೇಕು.

  • ಅದೇ ತವಾ ಮೇಲೆ ಎಣ್ಣೆಯನ್ನು ಬಿಸಿ ಮಾಡಿ, ಉದ್ದಿನ ಬೇಳೆ, ಕಡ್ಲೆ ಬೇಳೆಯನ್ನು ಹಾಕಿ ಫ್ರೈ ಮಾಡಬೇಕು. ಇದಲ್ಲದೆ, ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿ ಬೇವಿನ ಎಲೆಗಳನ್ನು ಕಡಿಮೆ ಉರಿಯಲ್ಲಿ ಹುರಿಯಬೇಕು.

  • ನಂತರ ಒಣ ತೆಂಗಿನಕಾಯಿ ಸೇರಿಸಿ ತೆಂಗಿನಕಾಯಿ ಗೋಲ್ಡನ್ ಬ್ರೌನ್ ಆಗುವ ತನಕ ಹುರಿಯಿರಿ. ಈ ಎಲ್ಲ ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗದ ಬಳಿಕ ಮಿಕ್ಸಿ ಜಾರ್​ಗೆ ಹಾಕಿ ರುಬ್ಬಿಕೊಳ್ಳಬೇಕು.




  • ಇದಕ್ಕೆ ಹುಣಿಸೇಹಣ್ಣು, ಅರಿಶಿನ ಮತ್ತು ಉಪ್ಪು ಸೇರಿಸಿ. ಯಾವುದೇ ನೀರನ್ನು ಸೇರಿಸದೇ ಒರಟಾದ ಪುಡಿ ರುಬ್ಬಿಕೊಳ್ಳಬೇಕು.

  • ಬಳಿಕ ಬಿಸಿಯಾದ ತವದ ಮೇಲೆ ದೋಸೆ ಹಿಟ್ಟನ್ನು ಹಾಕಿ. ಅದರ ಮೇಲೆ ತಯಾರಾದ ಪುಡಿಯನ್ನು ಹಾಕಿ 1-2 ಟೀಸ್ಪೂನ್ ತುಪ್ಪವನ್ನು ಹಾಕಿ ಬೇಯಿಸಬೇಕು.

  • 30 ಸೆಕೆಂಡುಗಳ ಕಾಲ ದೋಸೆಯು ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ, ಕೊನೆಗೆ ಚಟ್ನಿ ಮತ್ತು ಸಾಂಬಾರ್‍ನೊಂದಿಗೆ ‘ಪುಡಿ ದೋಸೆ’ಯನ್ನು ಸವಿದು ಆನಂದಿಸಿ.


ಸಾಂದರ್ಭಿಕ ಚಿತ್ರ


ಸಾಮಾನ್ಯವಾಗಿ ಬಿಪಿ, ಶುಗರ್​ ಹೊಂದಿರುವವರು ಬೆಳಗ್ಗೆ ಇಡ್ಲಿ, ದೋಸೆ, ರೊಟ್ಟಿ, ಚಪಾತಿ ಅಂತಹ ಪದಾರ್ಥಗಳನ್ನು ತಿನ್ನುವುದು ಉತ್ತಮ. ಅನೇಕ ಮಂದಿ ಜ್ವರ, ಅನಾರೋಗ್ಯದಿಂದ ಬಳಲುತ್ತಿದ್ದಾಗ ದೋಸೆಯನ್ನು ತಿನ್ನುತ್ತಾರೆ. ಇಂತಹ ದೋಸೆಯನ್ನು ನೀವು ಮನೆಯಲ್ಲಿಯೇ ಮಾಡಿ ಸವಿಯುವುದರಿಂದ ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಿ. ಇದರಿಂದ ನೀವು ಬೇರೆ ತಿಂಡಿಗಳಿಗೆ ಮಾಡಲು ಬೇಕಾಗುವ ಸಾಕಷ್ಟು ಸಮಯ ಕೂಡ ಉಳಿಯುತ್ತದೆ. ದೋಸೆಯನ್ನು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ತಿನ್ನಬಹುದಾಗಿದೆ.

Published by:Monika N
First published: