• Home
  • »
  • News
  • »
  • lifestyle
  • »
  • Protein Dosa: ಕೇವಲ 20 ನಿಮಿಷದಲ್ಲಿ ಮಾಡಿ ಈ ಪ್ರೊಟೀನ್​ ದೋಸೆ, ರುಚಿಕರ ಮಾತ್ರ ಅಲ್ಲ, ಆರೋಗ್ಯಕರ ಕೂಡ

Protein Dosa: ಕೇವಲ 20 ನಿಮಿಷದಲ್ಲಿ ಮಾಡಿ ಈ ಪ್ರೊಟೀನ್​ ದೋಸೆ, ರುಚಿಕರ ಮಾತ್ರ ಅಲ್ಲ, ಆರೋಗ್ಯಕರ ಕೂಡ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರೋಟೀನ್‌ ದೋಸೆಯು ಸಮೃದ್ಧ ಪ್ರೋಟೀನ್‌ ಅನ್ನು ಹೊಂದಿದೆ. ಇದು ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿಲ್ಲ. ಇದು ಮಧುಮೇಹಿಗಳಿಗೆ ಉತ್ತಮವಾಗಿದೆ. ಇದು ಮೂಲ ಪದಾರ್ಥಗಳ ಜೊತೆ ತರಕಾರಿಗಳೊಂದಿಗೆ ಬೆಸನ್ ಮತ್ತು ತೆಂಗಿನಕಾಯಿಯನ್ನು ಒಳಗೊಂಡಿರುತ್ತದೆ. ಇದು ಮುಂಜಾನೆಯ ಉಪಾಹಾರಕ್ಕಾಗಿ ಅತ್ಯುತ್ತಮ ರೆಸಿಪಿ ಎಂದು ಹೇಳಬಹುದು.

ಮುಂದೆ ಓದಿ ...
  • Share this:

ಇದು ಹೆಚ್ಚಿನ ಪ್ರೋಟೀನ್ ಅನ್ನು (Protein) ಹೊಂದಿದ್ದು ಮಾತ್ರವಲ್ಲದೇ, ಯಾವುದೇ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿಲ್ಲದ ಅತ್ಯಂತ ರುಚಿಕರ ರೆಸಿಪಿ ಇದಾಗಿದೆ. ಇದು ಸಕ್ಕರೆ ಕಾಯಿಲೆಯಿಂದ (Diabetes) ಬಳುತ್ತಿರುವ ಮಧುಮೇಹಿಗಳಿಗೆ ರುಚಿಯಷ್ಟೆ ಅಲ್ಲದೇ ಪೋಷಕಾಂಶಭರಿತ ಆಹಾರ (Nutritious food) ಎಂದು ಹೇಳಬಹುದು. ಈ ಖಾದ್ಯವು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ದೋಸೆಯ ಮತ್ತೊಂದು ರೂಪ ಎಂದು ಹೇಳಬಹುದು. ಆದರೆ ಇದು ಈಗ ಭಾರತ ಮತ್ತು ಜಗತ್ತಿನ ಎಲ್ಲೆಡೆ ತನ್ನ ರುಚಿಯನ್ನು ಹಬ್ಬಿಸುತ್ತಿದೆ. ಇದು ಎಲ್ಲರಿಗೂ ಹೆಚ್ಚು ಪ್ರಿಯವಾದ ಆಹಾರ ಆಗಿದೆ. ಈ ಪ್ರೋಟೀನ್ ದೋಸೆಯನ್ನು (Protein Dosa) ಉತ್ತರ ಮತ್ತು ಮಧ್ಯ ಭಾರತದಲ್ಲಿ ʼಬೆಸನ್ ಚಿಲ್ಲಾʼ ಮತ್ತು ಭಾರತ ದೇಶದ ದಕ್ಷಿಣ ಭಾಗದಲ್ಲಿ ʼತೆಂಗಿನಕಾಯಿ ಮಿಶ್ರಣ ದೋಸೆʼ ಎಂದು ಪರಿಗಣಿಸಬಹುದು.


ಆರೋಗ್ಯಕ್ಕೆ ಉತ್ತಮ ಈ ಪ್ರೊಟೀನ್ ದೋಸೆ
ಈ ದೋಸೆಯು ಸಮೃದ್ಧ ಪ್ರೋಟೀನ್‌ ಅನ್ನು ಹೊಂದಿದೆ. ಇದು ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿಲ್ಲ. ಇದು ಮಧುಮೇಹಿಗಳಿಗೆ ಉತ್ತಮವಾಗಿದೆ. ಇದು ಮೂಲ ಪದಾರ್ಥಗಳ ಜೊತೆ ತರಕಾರಿಗಳೊಂದಿಗೆ ಬೆಸನ್ ಮತ್ತು ತೆಂಗಿನಕಾಯಿಯನ್ನು ಒಳಗೊಂಡಿರುತ್ತದೆ. ಇದು ಮುಂಜಾನೆಯ ಉಪಾಹಾರಕ್ಕಾಗಿ ಅತ್ಯುತ್ತಮ ರೆಸಿಪಿ ಎಂದು ಹೇಳಬಹುದು.


ಇದನ್ನು ಕಡ್ಲೇ ಬೇಳೆ ಹಿಟ್ಟು ಅಥವಾ ಬೇಸನ್‌ ಹಿಟ್ಟು ಮತ್ತು ಬೆಂಗಾಲ್ ಗ್ರಾಂ ದಾಲ್ ಎಂದು ಕರೆಯಲಾಗುವ ಹಳದಿ ದಾಲ್‌ನಿಂದ ತಯಾರಿಸಲಾಗುತ್ತದೆ. ಇದು ಭಾರತ, ಬಾಂಗ್ಲಾದೇಶ, ನೇಪಾಳಿ, ಪಾಕಿಸ್ತಾನಿ ಮತ್ತು ಶ್ರೀಲಂಕಾದ ಪಾಕಪದ್ಧತಿಗಳಲ್ಲಿ ಪ್ರಮುಖ ರೆಸಿಪಿ ಆಗಿದೆ. ಆಂಗ್ಲ ಭಾಷೆಯಲ್ಲಿ ಇದನ್ನು ಬೆಸನ್ ಎನ್ನುತ್ತಾರೆ. ಕನ್ನಡದಲ್ಲಿ ಇದನ್ನು ಕಡಲೆ ಹಿಟ್ಟು ಎಂದು ಕರೆಯಲಾಗುತ್ತದೆ. ಈ ದೋಸೆಗೆ ತರಕಾರಿಗಳನ್ನು ಸೇರಿಸಲಾಗುತ್ತದೆ. ಇದರಲ್ಲಿ ಗಜ್ಜರಿ, ಬೀನ್ಸ್‌, ಆಲೂ ಮುಂತಾದ ತರಕಾರಿಗಳನ್ನು ಸಮೃದ್ಧವಾಗಿ ಬಳಸಲಾಗುತ್ತದೆ.


ಇದನ್ನೂ ಓದಿ:  Breakfast Recipe: ಕೇವಲ 15 ನಿಮಿಷದಲ್ಲಿ ಮಾಡಿ ಸ್ಪೆಷಲ್ ರವಾ ದೋಸೆ, ಇಲ್ಲಿದೆ ರೆಸಿಪಿ


ಹಾಗಿದ್ರೆ ಈಗ ಈ ದೋಸೆ ತಯಾರಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ:


  • ಈ ದೋಸೆಯ ತಯಾರಿ ಸಮಯ: 20-25 ನಿಮಿಷಗಳು

  • ಅಡುಗೆ ಮಾಡಲು : 15 ನಿಮಿಷಗಳು

  • ಒಟ್ಟು ದೋಸೆಗಳು :8-10 ದೋಸೆಗಳನ್ನು ತಯಾರಿಸಬಹುದು.


ಇದಕ್ಕೆ ಬೇಕಾಗುವ ಪದಾರ್ಥಗಳು:

  • 1 ಕಪ್ - ತೆಂಗಿನ ತುರಿ

  • 8-10 ಟೀಸ್ಪೂನ್ - ದೋಸೆಗಳ ಮೇಲೆ ಹರಡಲು ಎಣ್ಣೆ

  • ¼ ಕಪ್ - ಗ್ರಾಂ ಹಿಟ್ಟು / ಬೇಸನ್ •

  • ¼ ಕಪ್ - ಕತ್ತರಿಸಿದ ಈರುಳ್ಳಿ, ಮಧ್ಯಮ ಗಾತ್ರ •

  • 1 tbsp - ಕತ್ತರಿಸಿದ ಕೊತ್ತಂಬರಿ / ಕೊತ್ತಂಬರಿ ಸೊಪ್ಪು •

  • 2 - ಕತ್ತರಿಸಿದ ಹಸಿರು ಮೆಣಸಿನಕಾಯಿಗಳು •

  • 1 tbsp - ತುರಿದ ಕ್ಯಾರೆಟ್ •

  • ½ tbsp - ಕತ್ತರಿಸಿದ ಕರಿಬೇವಿನ ಎಲೆಗಳು

  • ½ ಟೀಸ್ಪೂನ್ - ಉಪ್ಪು

  • 2 tbsp - ಮೊಸರು

  • ½ ಕಪ್ - ನೀರು


ಇದನ್ನೂ ಓದಿ: Muharram Special Recipe: ಅತ್ಯಂತ ರುಚಿಕರವಾದ ಚೋಂಗೆ ಮಾಡುವ ವಿಧಾನ ಇಲ್ಲಿದೆ


ಮಾಡುವ ವಿಧಾನ:


  • ಒಂದು ಬಟ್ಟಲಿನಲ್ಲಿ ತೆಂಗಿನ ತುರಿ ತೆಗೆದುಕೊಳ್ಳಿ

  • ಇದಕ್ಕೆ ಬೇಳೆ ಹಿಟ್ಟು ಸೇರಿಸಿ

  • ಕತ್ತರಿಸಿದ ಈರುಳ್ಳಿ ಸೇರಿಸಿ

  • ಕೊತ್ತಂಬರಿ ಸೊಪ್ಪು ಸೇರಿಸಿ

  • ಹಸಿರು ಮೆಣಸಿನಕಾಯಿಯನ್ನು ಸೇರಿಸಿ

  • ತುರಿದ ಕ್ಯಾರೆಟ್ ಸೇರಿಸಿ

  • ಕರಿಬೇವಿನ ಸೊಪ್ಪು ಮತ್ತು ಉಪ್ಪು ಸೇರಿಸಿ

  • ಈ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.

  • ಮೊಸರು ಮತ್ತು ನೀರನ್ನು ಸ್ವಲ್ಪಮಟ್ಟಿಗೆ ಸೇರಿಸಿ

  • ದೋಸೆ ಹಿಟ್ಟು ಹದವಾಗಿರಬೇಕು.

  • ಗ್ರಿಡಲ್ ಅಥವಾ ತವಾವನ್ನು ಬಿಸಿ ಮಾಡಿ

  • ಗ್ರಿಡಲ್‌ನ ಮಧ್ಯದಲ್ಲಿ ಒಂದು ಲೋಟ ಹಿಟ್ಟನ್ನು ಸುರಿಯಿರಿ ಮತ್ತು ಅದನ್ನು ಲಘುವಾಗಿ ಅದರ ತುಂಬಾ ಹರಡಿ.

  • ಅದರ ಮೇಲೆ ಒಂದು ಚಮಚ ಎಣ್ಣೆಯನ್ನು ಹಾಕಿ, ಅದನ್ನು ಮುಚ್ಚಿ ಮತ್ತು 3-4 ನಿಮಿಷ ಬೇಯಿಸಿ

  • ದೋಸೆಯನ್ನು ತಿರುಗಿಸಿ ಹಾಕಿ ಮತ್ತು ಒಂದೆರಡು ನಿಮಿಷ ಬೇಯಿಸಿ

  • ತೆಂಗಿನಕಾಯಿ ಚಟ್ನಿಯೊಂದಿಗೆ ಬಿಸಿಯಾಗಿ ಬಡಿಸಿ


ಇದನ್ನೂ ಓದಿ: Momo ತಯಾರಿಸಲು ಬರೀ ಅರ್ಧ ಗಂಟೆ ಸಾಕು! ನೀವೂ ಟ್ರೈ ಮಾಡಿ ನೋಡಿ


ಅಂತಿಮವಾಗಿ ಬೆಸನ್‌ನಲ್ಲಿ ಬಹಳಷ್ಟು ಫೈಬರ್ ಅಂಶವಿರುತ್ತದೆ. ನಿಮ್ಮ ದೇಹದಲ್ಲಿನ ಚಯಾಪಚಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಪ್ರೋಟೀನ್ ಭರಿತ ಆಹಾರವಾಗಿದೆ ಆದ್ದರಿಂದಲೇ ಇದನ್ನು ಮಧುಮೇಹಿಗಳಿಗೆ ಶಿಫಾರಸು ಮಾಡಲಾಗುತ್ತದೆ.

Published by:Ashwini Prabhu
First published: