Breakfast: ಪ್ರೊಟೀನ್, ಫೈಬರ್ ಸಮೃದ್ಧ ನಿಂಬೆ ಕ್ವಿನೋವಾ ರೆಸಿಪಿ ಮಾಡಿ ಬ್ರೇಕ್​ಫಾಸ್ಟ್​ ಸವಿಯಿರಿ

ನಿಮ್ಮ ದೈನಂದಿನ ಆಹಾರದಲ್ಲಿ ಪೌಷ್ಟಿಕಾಂಶ ಭರಿತ ಕ್ವಿನೋವಾ ಸೇರಿಸುವುದು ಗಮನಾರ್ಹ ಧನಾತ್ಮಕ ಆರೋಗ್ಯ ಪರಿಣಾಮ ಉಂಟು ಮಾಡುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಳಗಿನ ತಿಂಡಿ (Morning Breakfast) ಸೇವನೆ ಒಂದು ದಿನದ ಪ್ರಮುಖ ಆಹಾರ (Food) ಪ್ರಮುಖವಾಗಿರುತ್ತದೆ. ಹಾಗಾಗಿ ಯಾವಾಗಲೂ ಉಪಾಹಾರ ದಿನವೂ ಒಂದೇ ರೀತಿ ಆಗಿರಬಾರದು. ಅಮರನಾಥ್ ಕುಟುಂಬಕ್ಕೆ (Family) ಸೇರಿದ ಕ್ವಿನೋವಾವನ್ನು (Quinoa) ವರ್ಷವಿಡೀ ಬೆಳೆಯಲಾಗುತ್ತದೆ. ಇದನ್ನು ಮುಖ್ಯವಾಗಿ ಬೀಜಗಳಿಗೆ ಬೆಳೆಯಾಗಿ ಬೆಳೆಯುತ್ತಾರೆ. ಈ ಬೀಜಗಳು ಪ್ರೋಟೀನ್, ಫೈಬರ್, ಬಿ ಜೀವಸತ್ವ ಮತ್ತು ಆಹಾರದ ಖನಿಜಗಳ ವಿಷಯದಲ್ಲಿ ಅನೇಕ ಧಾನ್ಯಗಳಿಗಿಂತ ಹೆಚ್ಚು ಪೌಷ್ಟಿಕವಾಗಿದೆ. ಆರೋಗ್ಯ ಪ್ರಯೋಜನಗಳ ಕಾರಣ ಕ್ವಿನೋವಾ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಹಾಗಾದರೆ ಕ್ವಿನೋವಾವನ್ನು ಉಪಾಹಾರದಲ್ಲಿ ಹೇಗೆ ಬಳಸಿದರೆ ಆರೋಗ್ಯ ಪ್ರಯೋಜನ ಪಡೆಯಬಹುದು. ಮತ್ತು ಕ್ವಿನೋವಾ ಪಾಕವಿಧಾನ ಹೇಗೆ ಮಾಡುವುದು ಇಲ್ಲಿ ನೋಡೋಣ.

    ಈ ದಿನಗಳಲ್ಲಿ ಪ್ರತಿಯೊಬ್ಬರೂ ಕೆಲವು ಆರೋಗ್ಯಕರ ಆಹಾರ ಆಯ್ಕೆ ಇರುತ್ತದೆ. ಕ್ವಿನೋವಾ ಒಂದು ಸೂಪರ್ ಫುಡ್ ಆಗಿದೆ. ಇದು ಓಟ್ಸ್ ಗಿಂತ ಹೆಚ್ಚು ಪ್ರೋಟೀನ್ ಮತ್ತು ಫೈಬರ್ ನ್ನು ಹೊಂದಿದೆ. ಓಟ್ಸ್ ಸಾರ್ವಕಾಲಿಕ ಅತ್ಯುತ್ತಮ ಮತ್ತು ಅತ್ಯಂತ ಜನಪ್ರಿಯ ಉಪಾಹಾರ ಪದಾರ್ಥ ಆಗಿದೆ.

    ನಿಂಬೆ ಕ್ವಿನೋವಾ ರೆಸಿಪಿ

    ನಿಂಬೆ ಕ್ವಿನೋವಾ ರೆಸಿಪಿ ತಯಾರಿಸಲು ಬೇಕಾಗುವ ಪದಾರ್ಥಗಳು

    ಎರಡರಿಂದ ಮೂರು ಚಮಚ ಅಡುಗೆ ಎಣ್ಣೆ

    ಒಂದು ಟೀ ಸ್ಪೂನ್ ಉದ್ದಿನ ಬೇಳೆ

    ಒಂದು ಟೀ ಸ್ಪೂನ್ ಕಡಲೆ ಬೇಳೆ

    ಅರ್ಧ ಟೀ ಸ್ಪೂನ್ ಸಾಸಿವೆ ಬೀಜಗಳು

    ಇದನ್ನೂ ಓದಿ: ನಿದ್ರೆಯ ಸಮಸ್ಯೆಗಳು ಯಾವುವು, ನಿದ್ರಾಹೀನತೆಗೆ ಕಾರಣವೇನು?

    ಏಳರಿಂದ ಎಂಟು ಕರಿಬೇವಿನ ಎಲೆಗಳು

    ಎರಡು ಹಸಿರು ಮೆಣಸಿನಕಾಯಿ ಸಣ್ಣಗೆ ಕತ್ತರಿಸಿ

    ಅರ್ಧ ಇಂಚು ಶುಂಠಿ

    1/4 ಟೀಸ್ಪೂನ್ ಅರಿಶಿನ ಪುಡಿ

    ರುಚಿಗೆ ತಕ್ಕಷ್ಟು ಉಪ್ಪು

    ಒಂದು ಚಿಟಿಕೆ ಹಿಂಗ್

    ಮೂರುವರೆ ಕಪ್ ಬೇಯಿಸಿದ ಕ್ವಿನೋವಾ

    ಒಂದು ಟೀಸ್ಪೂನ್ ನಿಂಬೆ ರಸ

    1/4 ಕಪ್ ಹುರಿದ ಕಡಲೆಕಾಯಿ

    ಕೊತ್ತಂಬರಿ ಸೊಪ್ಪು

    ನಿಂಬೆ ಕ್ವಿನೋವಾ ರೆಸಿಪಿ ಮಾಡುವ ವಿಧಾನ

    ಮೊದಲು ಬಾಣಲೆ ಬಿಸಿ ಮಾಡಿ. ಅಡುಗೆ ಎಣ್ಣೆ ಹಾಕಿ ಅದಕ್ಕೆ ಉದ್ದಿನ ಬೇಳೆ ಮತ್ತು ಕಡಲೆ ಬೇಳೆ ಹಾಕಿ ಮಧ್ಯಮ ಉರಿಯಲ್ಲಿ ತಿಳಿ ಗೋಲ್ಡನ್ ಆಗುವವರೆಗೆ ಹುರಿಯಿರಿ. ಸಾಸಿವೆ ಹಾಕಿ ಮತ್ತು ಸಿಡಿಯಲು ಬಿಡಿ. ಕರಿಬೇವಿನ ಸೊಪ್ಪು, ಶುಂಠಿ, ಮೆಣಸಿನಕಾಯಿ ಹಾಕಿ 30 ಸೆಕೆಂಡ್ ಬೇಯಿಸಿ.

    ಅರಿಶಿನ, ಉಪ್ಪು, ಇಂಗು ಮತ್ತು ನೀರು ಸೇರಿಸಿ ಮತ್ತು ಬೇಗನೆ ಬೆರೆಸಿ ಕ್ವಿನೋವಾ ಸೇರಿಸಿ. ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ. ಹುರಿದ ಕಡಲೆಕಾಯಿ ಸೇರಿಸಿ. ಬೇಕಾದರೆ, ನೀವು ಹುರಿದ ಗೋಡಂಬಿ ಸೇರಿಸಿ ಮತ್ತು ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ನಿಮ್ಮ ರುಚಿಕರವಾದ ಲೆಮನ್ ಕ್ವಿನೋವಾ ಸಿದ್ಧವಾಗಿದೆ.

    ಕ್ವಿನೋವಾ ಪ್ರಯೋಜನಗಳು ಯಾವವು?

    ನಿಮ್ಮ ದೈನಂದಿನ ಆಹಾರದಲ್ಲಿ ಪೌಷ್ಟಿಕಾಂಶ-ಭರಿತ ಕ್ವಿನೋವಾ ಸೇರಿಸುವುದು ಗಮನಾರ್ಹ ಧನಾತ್ಮಕ ಆರೋಗ್ಯ ಪರಿಣಾಮ ಉಂಟು ಮಾಡುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

    ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಕ್ವಿನೋವಾ ಸೇವನೆ ಹೃದಯಕ್ಕೆ ಉತ್ತಮ ಆಗಿದೆ. ಇದು ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಆಹಾರದ ಫೈಬರ್ನಲ್ಲಿ ಸಮೃದ್ಧ ಆಗಿದೆ. ಮಲಬದ್ಧತೆ ನಿವಾರಿಸಲು ಸಹಾಯ ಮಾಡುತ್ತದೆ. ಬಿ ಜೀವಸತ್ವಗಳ ಉಪಸ್ಥಿತಿ ಚರ್ಮದ ಕಾಂತಿ ಹೆಚ್ಚು ಮಾಡುತ್ತದೆ.
    Published by:renukadariyannavar
    First published: