Healthy Tips: ಮಳೆಗಾಲದಲ್ಲಿ ಮಕ್ಕಳ ಆರೋಗ್ಯವನ್ನು ಈ ರೀತಿಯಾಗಿ ಕಾಪಾಡಿಕೊಳ್ಳಿ

ಮಳೆಗಾಲದಲ್ಲಿ ತಲೆದೋರುವ ಇತರ ಕಾಯಿಲೆಗಳ ಬಗ್ಗೆಯೂ ಚಿಂತಿಸುವುದು ಬಹಳ ಮುಖ್ಯವಾಗಿರುವುದರಿಂದ, ನಾವು ದುಪ್ಪಟ್ಟು ಎಚ್ಚರ ವಹಿಸುವುದು ಅತ್ಯಗತ್ಯ. ಹಿರಿಯರು ತಮ್ಮ ಬಗ್ಗೆ ಕಾಳಜಿ ವಹಿಸಿಕೊಳ್ಳಬಲ್ಲರು. ಆದರೆ ಮಕ್ಕಳನ್ನು ಮಳೆಗಾಲದಲ್ಲಿ ಆರೋಗ್ಯವಾಗಿಡುವುದು, ಮನೆಯಲ್ಲಿ ಮಕ್ಕಳನ್ನು ಹೊಂದಿರುವ ಪ್ರತಿಯೊಬ್ಬರೂ ಆದ್ಯತೆ ನೀಡಬೇಕಾದ ಸಂಗತಿ.

 ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ವಾತಾವರಣದಲ್ಲಿನ ಹಠಾತ್ ಬದಲಾವಣೆ ವಿವಿಧ ರೀತಿಯ ಕಾಯಿಲೆಗಳು (Disease) ಮತ್ತು ಅಲರ್ಜಿಗಳಿಗೆ (Allergic reactions) ಕಾರಣವಾಗುತ್ತದೆ. ಮಳೆಗಾಲದಲ್ಲಂತೂ ಇದು ಅತ್ಯಂತ ಸಾಮಾನ್ಯ. ಈಗಾಗಲೇ ಕೊರೋನಾ ವೈರಸ್ (Corona Virus) ಹಾವಳಿ ಇದ್ದೇ ಇದೆ, ಜೊತೆಗೆ ಮಳೆಗಾಲದಲ್ಲಿ (Rainy) ತಲೆದೋರುವ ಇತರ ಕಾಯಿಲೆಗಳ ಬಗ್ಗೆಯೂ ಚಿಂತಿಸುವುದು ಬಹಳ ಮುಖ್ಯವಾಗಿರುವುದರಿಂದ, ನಾವು ದುಪ್ಪಟ್ಟು ಎಚ್ಚರ ವಹಿಸುವುದು ಅತ್ಯಗತ್ಯ. ಹಿರಿಯರು ತಮ್ಮ ಬಗ್ಗೆ ಕಾಳಜಿ ವಹಿಸಿಕೊಳ್ಳಬಲ್ಲರು. ಆದರೆ ಮಕ್ಕಳನ್ನು (Children) ಮಳೆಗಾಲದಲ್ಲಿ ಆರೋಗ್ಯವಾಗಿಡುವುದು, ಮನೆಯಲ್ಲಿ (Home) ಮಕ್ಕಳನ್ನು ಹೊಂದಿರುವ ಪ್ರತಿಯೊಬ್ಬರೂ ಆದ್ಯತೆ ನೀಡಬೇಕಾದ ಸಂಗತಿ.

ಮಳೆಗಾಲದ ದಿನಗಳಲ್ಲಿ ಮಕ್ಕಳ ಆರೊಗ್ಯವನ್ನು ಕಾಪಾಡಲು ಈ ಕೆಳಗಿನ ನಿಯಮಗಳನ್ನು ಪಾಲಿಸಿ.

1. ಸಕ್ರೀಯ ಜೀವನ ಅಗತ್ಯ
ಮಕ್ಕಳನ್ನು ದಿನದ ವೇಳೆಯಲ್ಲಿ ಕೆಲವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಸಂಜೆ ವ್ಯಾಯಾಮ ಮತ್ತು ಬೆಳಗ್ಗೆ ಸರಳ ವ್ಯಾಯಾಮಗಳನ್ನು ಮಾಡುವುದು ಕೂಡ ಇದರಲ್ಲಿ ಸೇರಿದೆ. ಈ ದಿನಗಳಲ್ಲಿ ಜುಂಬಾ ಸೆಶನ್‍ಗಳು ಉಚಿತವಾಗಿ ಲಭ್ಯವಿದ್ದು, ನೀವು ಮತ್ತು ಮಕ್ಕಳು ಆ ಸೆಶೆನ್‍ಗಳಲ್ಲಿ ಜೊತೆಯಾಗಿ ಪಾಲ್ಗೊಳ್ಳಬಹುದು.

2. ಮಕ್ಕಳಿಗೆ ಆರೋಗ್ಯಕರ ಮತ್ತು ಸಮತೋಲಿತ ಆಹಾರ
ಮಳೆಗಾಲದಲ್ಲಿ ಮಕ್ಕಳ ಆಹಾರ ಕ್ರಮದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರಗಳನ್ನು ಸೇರಿಸುವುದು ಬಹಳ ಮುಖ್ಯ. ಅಂದರೆ, ತಾಜಾ ಸೊಪ್ಪು, ತರಕಾರಿಗಳು ಮತ್ತು ಋತುಕಾಲಿಕ ಹಣ್ಣುಗಳನ್ನು ಅವರಿಗೆ ಸೇವಿಸಲು ಕೊಡಿ. ಶುಂಠಿ, ಅರಶಿನ, ನಿಂಬೆ, ಸಿಹಿ ಗೆಣಸು ಮುಂತಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರದ ಮೂಲಗಳನ್ನು ಮಕ್ಕಳ ಊಟದಲ್ಲಿ ಸೇರಿಸಬೇಕು.

ಇದನ್ನೂ ಓದಿ: Mobile Addiction: ನಿಮ್ಮ ಮಗು ಮೊಬೈಲ್‌ಗೆ ಅಡಿಕ್ಟ್ ಆಗ್ತಿದ್ಯಾ? ಹಾಗಿದ್ರೆ ಈಗಲೇ ನೀವು ಎಚ್ಚೆತ್ತುಕೊಳ್ಳಿ

3. ವಿಟಮಿನ್ ಸಿ ಯನ್ನು ಸೇವಿಸಿ
ನಮ್ಮ ಆಹಾರ ಕ್ರಮದಲ್ಲಿ ವಿಟಮಿನ್ ಸಿ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಸಿಟ್ರಸ್ ಉಳ್ಳ ಹಣ್ಣು, ತರಕಾರಿಗಳಾದ ಕಿತ್ತಳೆ, ಮೋಸಂಬಿ, ನಿಂಬೆ, ಸೇಬು, ಬಾಳೆ ಹಣ್ಣು, ಬೀಟ್‍ರೂಟ್, ಟೊಮ್ಯಾಟೋ ಇತ್ಯಾದಿಗಳನ್ನು ಮಕ್ಕಳಿಗೆ ತಿನ್ನಲು ಕೊಡಿ. ಅವುಗಳನ್ನು ಹಾಗೆಯೇ ತಿನ್ನಲು ಕೊಡಬಹುದು ಅಥವಾ ಜ್ಯೂಸ್, ಸ್ಮೂಥಿ ಇತ್ಯಾದಿಗಳನ್ನು ಮಾಡಿ ಕೊಡಬಹುದು.

4. ತಣ್ಣಗಿನ ಮತ್ತು ಹಸಿ ಆಹಾರವನ್ನು ಕೊಡಲೇಬೇಡಿ
ಈ ಋತುವಿನಲ್ಲಿ ಹೆಚ್ಚಿನ ಕಾಯಿಲೆಗಳು ನೀರಿನಿಂದ ಹರಡುತ್ತವೆ. ಹಾಗಾಗಿ, ಹೊರಗಿನ ಅಥವಾ ಬೀದಿ ಬದಿಯ ತಿನಿಸುಗಳನ್ನು ಕೊಡಿಸಬೇಡಿ. ಮನೆಯಲ್ಲೇ ಮಾಡಿದ ತಾಜಾ ಆಹಾರಕ್ಕೆ ಆದ್ಯತೆ ಕೊಡಿ. ಆಹಾರವನ್ನು ಒಂದು ದಿನಕ್ಕಿಂತ ಹೆಚ್ಚು ಕಾಲ ಇಟ್ಟು, ಸೇವಿಸುವುದನ್ನು ತಪ್ಪಿಸಿ.

5. ವೈಯುಕ್ತಿಕ ಸ್ವಚ್ಚತೆ ಮತ್ತು ಶುಚಿತ್ವ
ನಮ್ಮ ದೇಹವನ್ನು ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಏಕೆ ಸ್ವಚ್ಚವಾಗಿಡಬೇಕು ಎಂಬುವುದನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕು. ಬಾಲ್ಯದಲ್ಲೇ ಅವರು ಇದನ್ನು ಅರ್ಥ ಮಾಡಿಕೊಂಡರೆ, ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಕಷ್ಟವೆನಿಸುವುದಿಲ್ಲ. ಅವರು ಅದನ್ನು ಮುಂದುವರೆಸಿಕೊಂಡು ಹೋಗುವುದು ಸುಲಭವಾಗುತ್ತದೆ. ನಿಂತ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇಡುತ್ತವೆ, ಅದನ್ನು ತೆಗೆಯಿರಿ. ಮಕ್ಕಳಿರುವ ಕಡೆ ಸೊಳ್ಳೆ ಪರದೆ ಬಳಸಿ ಅಥವಾ ಸೊಳ್ಳೆ ಓಡಿಸುವ ಲಿಕ್ವಿಡೇಟರ್‍ಗಳನ್ನು ಬಳಸಿ.

6. ಕೈಗಳನ್ನು ಸ್ವಚ್ಚವಾಗಿ ಇರಿಸಿಕೊಳ್ಳಿ ಮತ್ತು ಆರಾಮದಾಯಕ ಬಟ್ಟೆಗಳನ್ನು ಧರಿಸಿ
ಪ್ರತಿ ಒಂದು ಗಂಟೆಗೊಮ್ಮೆ ಕೈಗಳನ್ನು ತೊಳೆಯುವುದು ಉತ್ತಮ ಅಭ್ಯಾಸ. ಏಕೆಂದರೆ ನಮ್ಮ ಕೈಯಲ್ಲಿ ಇರುವ ಸೂಕ್ಷ ಜೀವಿಗಳು, ನಮಗೆ ಗೊತ್ತಿಲ್ಲದೆಯೇ ಅನೇಕ ರೋಗಗಳನ್ನು ತಂದೊಡ್ಡಬಹುದು. ಈ ಅಂಟು ವಾತಾವರಣದಲ್ಲಿ, ನಿಮ್ಮ ಮಕ್ಕಳಿಗೆ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ತೊಡಿಸಿ, ಅವು ಅವರ ದೇಹಕ್ಕೆ ಆರಾಮ ನೀಡುತ್ತದೆ ಮತ್ತು ತಂಪಾಗಿಸುತ್ತದೆ.

ಇದನ್ನೂ ಓದಿ: Baby Care: ಮಗು ಒಂದೇ ಸಮನೇ ಅಳುವುದು ಈ ಕಾರಣಕ್ಕಾಗಿ ಆಗಿರಬಹುದು, ಹೀಗೆ ಆರೈಕೆ ಮಾಡಿ

7. ಬಿಸಿ ನೀರು ಸೇವನೆ
ನೀರಿನಿಂದ ಬರುವ ರೋಗಗಳಿಂದ ಮತ್ತು ಕೊರೋನಾ ವೈರಸ್‍ನಿಂದ ದೂರ ಇರಲು, ನೀವು ಮತ್ತು ನಿಮ್ಮ ಮಕ್ಕಳು ಸಾಧ್ಯವಾದಷ್ಟು ಬಿಸಿ ನೀರನ್ನು ಕುಡಿಯುವುದು ಉತ್ತಮ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಪ್ರೊಟೀನ್‍ಯುಕ್ತ ಆಹಾರಗಳಾದ ತುಪ್ಪ, ಪಪ್ಪಾಯ, ಒಣ ಬೀಜಗಳು, ಮೊಟ್ಟೆ, ಬೆಳ್ಳುಳ್ಳಿ, ಕರಿ ಮೆಣಸು ಇತ್ಯಾದಿಗಳನ್ನು ನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.
Published by:Ashwini Prabhu
First published: