• Home
  • »
  • News
  • »
  • lifestyle
  • »
  • Prostate Cancer: ಕೆಟ್ಟ ಜೀವನಶೈಲಿಯಿಂದ ಸದ್ದಿಲ್ಲದೇ ಬರುವ ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು ಇವು!

Prostate Cancer: ಕೆಟ್ಟ ಜೀವನಶೈಲಿಯಿಂದ ಸದ್ದಿಲ್ಲದೇ ಬರುವ ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು ಇವು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರಾಸ್ಟೇಟ್ ಕ್ಯಾನ್ಸರ್ ಒಂದು ಗಂಭೀರ ಕಾಯಿಲೆ ಆಗಿದೆ. ಈ ಕಾಯಿಲೆಯಲ್ಲಿ ಪ್ರಾಸ್ಟೇಟ್ ಕೋಶಗಳು ವೇಗವಾಗಿ ಬೆಳೆಯುತ್ತಾ ಹೋಗುತ್ತವೆ. ಈ ಕ್ಯಾನ್ಸರ್ ರಕ್ತದಲ್ಲಿನ ಒಂದು ರೀತಿಯ ಪ್ರೋಟಿನ್​ ಮಟ್ಟದ ಹೆಚ್ಚಳದಿಂದ ಉಂಟಾಗುತ್ತದೆ.

  • Share this:

    ಕ್ಯಾನ್ಸರ್ ನಲ್ಲಿ (Cancer) ಹಲವು ವಿಧದ ಕ್ಯಾನ್ಸರ್ ಗಳಿವೆ. ಅವುಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ (Prostate Cancer) ಕೂಡ ಒಂದು. ಪ್ರಾಸ್ಟೇಟ್ ಎಂಬುದು ಪುರುಷ (Men) ಸಂತಾನೋತ್ಪತ್ತಿ ವ್ಯವಸ್ಥೆಯ ಒಂದು ಭಾಗ (Part) ಆಗಿದೆ. ಇದು ಶಿಶ್ನ, ಪ್ರಾಸ್ಟೇಟ್, ಸೆಮಿನಲ್ ವೆಸಿಕಲ್ಸ್ ಮತ್ತು ವೃಷಣ ಭಾಗಗಳನ್ನ ಒಳಗೊಂಡಿದೆ. ಪ್ರಾಸ್ಟೇಟ್ ಕ್ಯಾನ್ಸರ್ ಒಂದು ಗಂಭೀರ ಕಾಯಿಲೆ (Disease). ಇದರಲ್ಲಿ ಪ್ರಾಸ್ಟೇಟ್ ಕೋಶಗಳು ವೇಗವಾಗಿ ಬೆಳೆಯುತ್ತಾ ಹೋಗುತ್ತವೆ. ಈ ಕ್ಯಾನ್ಸರ್ ರಕ್ತದಲ್ಲಿನ ಒಂದು ರೀತಿಯ ಪ್ರೊಟೀನ್ ಮಟ್ಟದ ಹೆಚ್ಚಳದಿಂದ ಉಂಟಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, 2020 ರಲ್ಲಿ 10 ಮಿಲಿಯನ್ ಜನರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ.


    ಹಾಗೂ 2020ರ ಇದೇ ವರ್ಷದಲ್ಲಿ ವಿಶ್ವಾದ್ಯಂತ, ಅಂದಾಜು 1.41 ಮಿಲಿಯನ್ ಜನರು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಹಾಗೂ ಇದು ವಿಶ್ವದಲ್ಲಿ ನಾಲ್ಕನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ಮೊದಲ ಹಂತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವುದು ತುಂಬಾ ಮುಖ್ಯ.


    ಪ್ರಾಸ್ಟೇಟ್ ಕ್ಯಾನ್ಸರ್ ನ ಆರಂಭಿಕ ರೋಗ ಲಕ್ಷಣಗಳ ಬಗ್ಗೆ ಹಲವು ಆರೋಗ್ಯ ಪರೀಕ್ಷೆಗಳು ಮತ್ತು ಮಾಹಿತಿ ನಿಮಗೆ ತುಂಬಾ ಪ್ರಯೋಜನ ನೀಡುತ್ತದೆ.




    ಯಾರು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯದಲ್ಲಿದ್ದಾರೆ?


    ಪ್ರಾಸ್ಟೇಟ್ ಕ್ಯಾನ್ಸರ್ 65 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಹೆಚ್ಚು ಕಾಣಿಸಿಕೊ್ಳುವ ಕಾಯಿಲೆ ಆಗಿದೆ. 60 ಪ್ರತಿಶತ ಪ್ರಕರಣಗಳು ವಯಸ್ಸಾದವರಲ್ಲಿ ಕಂಡು ಬಂದಿದೆ. ಆದರೆ ಈ ಕ್ಯಾನ್ಸರ್ ಯಾರಿಗೆ ಬೇಕಾದರೂ ಬರಬಹುದು. ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚಿಸುವ ಅಂಶಗಳೆಂದರೆ ಮುಖ್ಯವಾಗಿ ಕುಟುಂಬದ ಇತಿಹಾಸ, ಬೊಜ್ಜು ಆಗಿದೆ.


    ಯಾವ ಪರೀಕ್ಷೆ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆ ಹಚ್ಚುತ್ತದೆ?


    ಸಿಡಿಸಿ ಪ್ರಕಾರ, ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಪ್ರೋಸ್ಟೇಟ್ ಸ್ಪೆಸಿಫಿಕ್ ಆಂಟಿಜೆನ್ (PSA) ಪರೀಕ್ಷೆ ಎಂಬ ರಕ್ತ ಪರೀಕ್ಷೆಯಿಂದ ಕಂಡು ಹಿಡಿಯುತ್ತಾರೆ. ಇದು ರಕ್ತದಲ್ಲಿನ ಪಿಎಸ್ಎ ಮಟ್ಟ ಅಳೆಯುತ್ತದೆ. 10 ಕ್ಕಿಂತ ಹೆಚ್ಚಿನ ಅಂಕಗಳು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ 50 ಪ್ರತಿಶತ ಹೆಚ್ಚಿಸುತ್ತದೆ.


    ಪಿಎಸ್ ಎ ಪ್ರಾಸ್ಟೇಟ್ ಗ್ರಂಥಿಯ ಸಾಮಾನ್ಯ ಮತ್ತು ಮಾರಣಾಂತಿಕ ಕೋಶಗಳಿಂದ ಉತ್ಪತ್ತಿ ಆಗುವ ಪ್ರೋಟೀನ್ ಆಗಿದೆ. ರಕ್ತದಲ್ಲಿ ಅದರ ಪ್ರಮಾಣ ಹೆಚ್ಚಿದರೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಉಂಟಾಗುತ್ತದೆ.


    ಯಾವುದೇ ನಿರ್ದಿಷ್ಟ ಸಾಮಾನ್ಯ ಮಟ್ಟದ ಪಿಎಸ್ ಎ ಇಲ್ಲದೇ ಹೋದರೂ 4.0 ng/ml ಮತ್ತು ಅದಕ್ಕಿಂತ ಕಡಿಮೆ ಮಟ್ಟ, ಹೆಚ್ಚಿನ ಪಿಎಸ್ಎ ಯಾವಾಗಲೂ ಪ್ರಾಸ್ಟೇಟ್ ಕ್ಯಾನ್ಸರ್ ಗೆ ಸಂಬಂಧ ಪಟ್ಟಿರುವುದಿಲ್ಲ. ಇದು ಪ್ರಾಸ್ಟೇಟ್ ನಲ್ಲಿ ಇತರ ಸಮಸ್ಯೆಯಿಂದಾಗಿ ಆಗಿರಬಹುದು ಎಂದು ಹೇಳಲಾಗುತ್ತದೆ.


    ಪ್ರಾಸ್ಟೇಟ್ ಕ್ಯಾನ್ಸರ್ ನ ಲಕ್ಷಣಗಳು


    ಮೂತ್ರ ವಿಸರ್ಜನೆ ವೇಳೆ ತೊಂದರೆ, ಕಡಿಮೆ ಮೂತ್ರದ ಹರಿವು, ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜನೆ, ಮೂತ್ರಕೋಶ ಸಂಪೂರ್ಣವಾಗಿ ಖಾಲಿ ಮಾಡುವಲ್ಲಿ ತೊಂದರೆ, ಮೂತ್ರ ವಿಸರ್ಜನೆ ವೇಳೆ ನೋವು ಅಥವಾ ಸುಡುವಿಕೆ ,


    ಮೂತ್ರ ಅಥವಾ ವೀರ್ಯದಲ್ಲಿ ರಕ್ತ ಹೋಗುವುದು, ಬೆನ್ನು, ಸೊಂಟದಲ್ಲಿ ನೋವು ಕಾಣಿಸುವುದು, ಸ್ಖಲನದ ಸಮಯದಲ್ಲಿ ನೋವು ಆಗುವುದು, ಊದಿಕೊಂಡ ಪಾದಗಳು ಇದರ ಲಕ್ಷಣಗಳು ಆಗಿವೆ.


    ಪ್ರಾಸ್ಟೇಟ್ ಕ್ಯಾನ್ಸರ್ ತಡೆಯುವುದು ಹೇಗೆ?


    ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು 50 ವರ್ಷ ವಯಸ್ಸಿನ ನಂತರ ಹೆಚ್ಚು. ನಿಮ್ಮ ಕೆಟ್ಟ ಜೀವನಶೈಲಿಯಿಂದಾಗಿ ಇದು ಅನೇಕ ವರ್ಷಗಳ ಹಿಂದೆ ಪ್ರಾರಂಭ ಆಗುತ್ತದೆ.


    ಇದನ್ನೂ ಓದಿ: ಯಾವ ಪದಾರ್ಥದ ಜೊತೆಗೆ ಜೇನುತುಪ್ಪ ತಿನ್ನಬಾರದು?


    ಪ್ರಾಸ್ಟೇಟ್ ಕ್ಯಾನ್ಸರ್ ದೂರವಿರಿಸಲು ಹಣ್ಣು, ಹಸಿರು ತರಕಾರಿ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ತೂಕ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ.

    Published by:renukadariyannavar
    First published: