Varicose Veins: ದೀರ್ಘಕಾಲ ಕುಳಿತುಕೊಳ್ಳುತ್ತೀರಾ? ಉಬ್ಬಿರುವ ರಕ್ತನಾಳ ಸಮಸ್ಯೆ ಬರದಂತೆ ಇರಲಿ ಎಚ್ಚರ

ಕಾಲುಗಳಲ್ಲಿ ಕಂಡು ಬರುವ ನೀಲಿ, ನೇರಳೆ ಅಥವಾ ಕೆಂಪು ರಕ್ತನಾಳಗಳನ್ನು ಉಬ್ಬಿರುವ ರಕ್ತನಾಳಗಳು ಎಂದು ಕರೆಯುತ್ತಾರೆ. ಎಲ್ಲಾ ವಯಸ್ಕರರಲ್ಲಿ ಸುಮಾರು 25 ಪ್ರತಿಶತ ಜನರು ಉಬ್ಬಿರುವ ರಕ್ತನಾಳ ಹೊಂದಿದ್ದಾರೆ. ಹೆಚ್ಚಿನ ವೇಳೆ ಕೆಳಗಿನ ಕಾಲುಗಳ ಮೇಲೆ ಉಬ್ಬಿರುವ ರಕ್ತನಾಳಗಳು ಕಾಣಿಸುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅನೇಕ ಜನರು (People) ತಮ್ಮ ಕೆಲಸ (Work), ವ್ಯಾಪಾರ (Business) ಅಥವಾ ಇತರೆ ಕಾರಣಗಳಿಂದ (Causes) ಹೆಚ್ಚು ಸಮಯ ಕುಳಿತುಕೊಳ್ಳುತ್ತಾರೆ. ಇದು ಸಾಕಷ್ಟು ದೈಹಿಕ ಸಮಸ್ಯೆ (Problem) ಹೊಂದಲು ಕಾರಣ ಆಗುತ್ತದೆ. ಮತ್ತು ಪಾದಗಳಲ್ಲಿ ನೋವು ಸಹ ಉಂಟಾಗುತ್ತದೆ. ಆದರೆ ಕೆಲವು ಜನರು ಈ ಕಾಲು ನೋವನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಈ ರೀತಿಯ ನಿರ್ಲಕ್ಷ್ಯ ವಹಿಸುವುದು ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ದಿ ಮಿರರ್ ಪ್ರಕಾರ, ತುಂಬಾ ಹೊತ್ತು ಕುಳಿತುಕೊಳ್ಳುವುದರಿಂದ ಕಾಲುಗಳಲ್ಲಿ ನೋವು ಅಥವಾ ಊತ ಕಂಡು ಬಂದರೆ, ಅದು ವೆರಿಕೋಸ್ ವೇನಸ್ ಸಂಕೇತ ಆಗಿರಬಹುದು. ಹಾಗಾಗಿ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.

    ಕಾಲುಗಳಲ್ಲಿ ಉಬ್ಬಿರುವ ರಕ್ತನಾಳಗಳು

    ಕಾಲುಗಳಲ್ಲಿ ಕಂಡು ಬರುವ ನೀಲಿ, ನೇರಳೆ ಅಥವಾ ಕೆಂಪು ರಕ್ತನಾಳಗಳನ್ನು ಉಬ್ಬಿರುವ ರಕ್ತನಾಳಗಳು ಎಂದು ಕರೆಯುತ್ತಾರೆ. ಎಲ್ಲಾ ವಯಸ್ಕರರಲ್ಲಿ ಸುಮಾರು 25 ಪ್ರತಿಶತ ಜನರು ಉಬ್ಬಿರುವ ರಕ್ತನಾಳ ಹೊಂದಿದ್ದಾರೆ. ಹೆಚ್ಚಿನ ವೇಳೆ ಕೆಳಗಿನ ಕಾಲುಗಳ ಮೇಲೆ ಉಬ್ಬಿರುವ ರಕ್ತನಾಳಗಳು ಕಾಣಿಸುತ್ತವೆ. ಹೆಚ್ಚು ಕುಳಿತುಕೊಳ್ಳುವುದು, ಉಬ್ಬಿರುವ ರಕ್ತನಾಳಗಳ ಬೆಳವಣಿಗೆಯ ಅಪಾಯ ಸೂಚಿಸುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

    ಪುರುಷರು ಮತ್ತು ಮಹಿಳೆಯರಲ್ಲಿ ಈ ರೀತಿಯ ಉಬ್ಬಿದ ರಕ್ತನಾಳಗಳ ಸ್ಥಿತಿಯು ಸಾಕಷ್ಟು ಸಾಮಾನ್ಯ ಆಗಿದೆ. ಯಾರು ಈ ಸಮಸ್ಯೆ ಹೊಂದಿದ್ದಾರೋ ಅವರು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಉಬ್ಬಿರುವ ರಕ್ತನಾಳಗಳ ಬಗ್ಗೆ ಮೊದಲು ತಿಳಿಯಿರಿ.

    ಇದನ್ನೂ ಓದಿ: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ

    ಉಬ್ಬಿರುವ ರಕ್ತನಾಳಗಳು ಎಂದರೇನು?

    ಉಬ್ಬಿರುವ ರಕ್ತನಾಳಗಳು ಮುಖ್ಯವಾಗಿ ಕೈಗಳು, ಪಾದಗಳು, ಹಿಮ್ಮಡಿ, ಕಣಕಾಲು ಮತ್ತು ಕಾಲ್ಬೆರಳುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇವುಗಳು ಊದಿಕೊಂಡ ಮತ್ತು ತಿರುಚಿದಂತಿರುತ್ತವೆ. ಇದು ನೀಲಿ ಅಥವಾ ಗಾಢ ನೇರಳೆ ಬಣ್ಣ ಹೊಂದಿದೆ. ಈ ನಾಳಗಳ ಸುತ್ತ ಸ್ಪೈಡರ್ ಸಿರೆಗಳಿವೆ. ಈ ರಕ್ತನಾಳಗಳು ಕೆಂಪು ಮತ್ತು ನೇರಳೆ ಬಣ್ಣ ಹೊಂದಿರುತ್ತವೆ.

    ಇದು ನೋಡಲು ತೆಳ್ಳಗಿರುತ್ತದೆ. ಆದರೆ ಸ್ಪೈಡರ್ ಸಿರೆಗಳು ಉಬ್ಬಿರುವ ರಕ್ತನಾಳಗಳನ್ನು ಸುತ್ತುವರೆದಾಗ ನೋವು ಮತ್ತು ತುರಿಕೆ ಉಂಟಾಗುತ್ತದೆ. ಉಬ್ಬಿರುವ ರಕ್ತನಾಳಗಳು ಹೆಚ್ಚಿನ ಜನರಿಗೆ ಅಪಾಯಕಾರಿಯಲ್ಲ. ಕೆಲವು ಸಮಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಉಂಟು ಮಾಡುತ್ತವೆ.

    ಉಬ್ಬಿರುವ ರಕ್ತನಾಳಗಳು ಉಂಟಾಗಲು ಕಾರಣಗಳೇನು?

    ದಿ ಮಿರರ್ ಪ್ರಕಾರ, ಒಬ್ಬ ವ್ಯಕ್ತಿಯು ದೀರ್ಘ ಕಾಲ ಕುಳಿತುಕೊಳ್ಳುವುದರಿಂದ ಅವನ ಕಾಲುಗಳಲ್ಲಿ ರಕ್ತವು ಶೇಖರಣೆಯಾಗುತ್ತದೆ. ಇದು ಉಬ್ಬಿರುವ ರಕ್ತನಾಳ ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಇದು ರಕ್ತನಾಳಗಳ ಮೇಲೆ ಹೆಚ್ಚು ಒತ್ತಡ ಉಂಟು ಮಾಡುತ್ತದೆ. ಊತ ಮತ್ತು ಉಬ್ಬುವಿಕೆ ಹೆಚ್ಚಿಸುತ್ತದೆ. ಹಾಗಾಗಿ ದೀರ್ಘಕಾಲ ಕುಳಿತುಕೊಳ್ಳುವುದನ್ನು ತಪ್ಪಿಸಿ.

    ಉಬ್ಬಿರುವ ರಕ್ತನಾಳಗಳ ಸುತ್ತ ಜೇಡ ರಕ್ತನಾಳ ಉಂಟಾಗುತ್ತವೆ. ಸಾಮಾನ್ಯವಾಗಿ ಗಂಭೀರವಲ್ಲ. ಆದರೆ ಬಹಳ ನೋವುಂಟು ಮಾಡುತ್ತವೆ. ಗುರುತ್ವಾಕರ್ಷಣೆಯ ಪರಿಣಾಮ ಪಾದಗಳ ಮೇಲೆ ಹೆಚ್ಚು. ಹಾಗಾಗಿ ಉಬ್ಬಿರುವ ರಕ್ತನಾಳಗಳು ಪಾದಗಳ ಮೇಲೆ ಹೆಚ್ಚು ಗೋಚರಿಸುತ್ತವೆ.

    ಉಬ್ಬಿರುವ ರಕ್ತನಾಳಗಳಿಗೆ ಇತರೆ ಕಾರಣಗಳು

    ವ್ಯಕ್ತಿಯ ರಕ್ತನಾಳಗಳ ಗೋಡೆ ದುರ್ಬಲಗೊಂಡಾಗ ಉಬ್ಬಿರುವ ರಕ್ತನಾಳಗಳು ಕಾಣಿಸಿಕೊಳ್ಳುತ್ತವೆ. ರಕ್ತದೊತ್ತಡ, ರಕ್ತನಾಳಗಳ ಮೇಲಿನ ಒತ್ತಡ, ಸಿರೆಗಳ ವಿಸ್ತರಣೆಯಿಂದ ರಕ್ತನಾಳಗಳಲ್ಲಿ ಒಂದು ದಿಕ್ಕಿನಲ್ಲಿ ರಕ್ತವನ್ನು ಸಾಗಿಸುವ ಕವಾಟಗಳು ಸರಿಯಾಗಿ ಕಾರ್ಯ ನಿರ್ವಹಿಸಲ್ಲ. ಹೀಗಾಗಿ ರಕ್ತವು ರಕ್ತನಾಳಗಳಲ್ಲಿ ಶೇಖರಣೆಯಾಗುತ್ತದೆ. ರಕ್ತನಾಳಗಳು ಊದಿಕೊಳ್ಳಲು, ತಿರುಚುತ್ತವೆ.

    ಎಚ್‌ಸಿಎ ಮಿಡ್‌ವೆಸ್ಟ್ ಹೆಲ್ತ್ ಪ್ರಕಾರ, ಉಬ್ಬಿರುವ ರಕ್ತನಾಳಗಳ ಲಕ್ಷಣಗಳು ಹೀಗಿವೆ.

    - ಕಾಲುಗಳಲ್ಲಿ ತೀಕ್ಷ್ಣವಾದ ನೋವು ಮತ್ತು ಊತ

    - ನಿರಂತರ ನೋವು ಮತ್ತು ಊತ

    - ಸಂಜೆ ಕಾಲುಗಳಲ್ಲಿ ಭಾರ ಮತ್ತು ನೋವು

    - ಉಬ್ಬಿರುವ ರಕ್ತನಾಳಗಳ ಕೆಂಪು ಬಣ್ಣ

    - ಉಬ್ಬಿರುವ ರಕ್ತನಾಳಗಳ ಸ್ಪರ್ಶಕ್ಕೆ ಬೆಚ್ಚಗಿನ ಮತ್ತು ಮೃದುವಾದ ಭಾವನೆ

    - ಉಬ್ಬಿರುವ ರಕ್ತನಾಳಗಳ ಗಾಯಗಳ ರಕ್ತಸ್ರಾವ

    - ಉಬ್ಬಿರುವ ರಕ್ತನಾಳಗಳ ಸುತ್ತ ಒಣ ಚರ್ಮ,

    -  ಉಬ್ಬಿರುವ ರಕ್ತನಾಳಗಳ ಸುತ್ತ ಚರ್ಮದ ಊತ

    ಇದನ್ನೂ ಓದಿ: ಥೈರಾಯ್ಡ್‌ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು

    ಉಬ್ಬಿರುವ ರಕ್ತನಾಳಗಳ ತೊಡಕುಗಳು

    ಕೆಲವರಲ್ಲಿ ಉಬ್ಬಿರುವ ರಕ್ತನಾಳಗಳು ರಕ್ತವನ್ನು ಪಂಪ್ ಮಾಡುವ ಹೃದಯದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಇರುವವರು ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಬೇಕು.
    Published by:renukadariyannavar
    First published: