ಕೆಲವೊಮ್ಮೆ ಅದೆಷ್ಟೇ ಬೇಗ ಬೇಗ ಕೆಲಸ ಮುಗಿಸಬೇಕು ಅಂತ ಅಂದುಕೊಂಡರೂ ಆಗೋದೇ ಇಲ್ಲ. ಕೆಲಸಗಳು ಬಾಕಿ ಆಗುತ್ತವೆ. ಇದರಿಂದ ತಲೆನೋವು ಹೆಚ್ಚು. ಹೀಗಾಗಿ ಕಡಿಮೆ ಸಮಯದಲ್ಲಿ ಬೇಗ ಕೆಲಸ ಹೇಗೆ ಮಾಡೋದು ಅಂತ ಒಂದಷ್ಟು ಟಿಪ್ಸ್ ಇಲ್ಲಿದೆ ನೋಡಿ.
ಚೆನ್ನಾಗಿ ನಿದ್ರೆ ಮಾಡಬೇಕು: ನಾವು ಕೆಲಸವನ್ನು ಬೇಗ ಬೇಗ ಮತ್ತು ಚೆನ್ನಾಗಿ ಮಾಡಬೇಕು ಅಂದ್ರೆ ಚೆನ್ನಾಗಿ ನಿದ್ರೆ ಮಾಡಲೇಬೇಕು. ಸುಮಾರು 8 ರಿಂದ 9 ಗಂಟೆಗಳ ಕಾಲ ಆದ್ರೂ ನಿದ್ರೆ ಮಾಡ್ಲೇಬೇಕು. ಇಲ್ಲದಿದ್ದಲ್ಲಿ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರೋದಂತೂ ಪಕ್ಕಾ!
ನೋ / ಇಲ್ಲ ಅನ್ನೋದು ಕಲಿಯಿರಿ: ಅಗತ್ಯವಲ್ಲದ ಅಥವಾ ನಿಮ್ಮ ವೇಳಾಪಟ್ಟಿಯನ್ನು ಓವರ್‌ಲೋಡ್ ಮಾಡುವ ಕಾರ್ಯಗಳು ಅಥವಾ ಯೋಜನೆಗಳಿಗೆ ಇಲ್ಲ ಎಂದು ಹೇಳಲು ಕಲಿಯಿರಿ. ಇನ್ನೊಬ್ಬರು ನಿಮಗೆ ಜಾಸ್ತಿಯಾಗಿ ಕೆಲಸವನ್ನು ಹೇಳುತ್ತಾ ಇದ್ದಾರೆ ಮತ್ತು ಅದನ್ನು ನೀವು ಮಾಡ್ತಾ ಇದ್ದೀರ ಅಂದ್ರೆ ಅದು ದೊಡ್ಡ ತಪ್ಪು. ನಿಮ್ಮ ಕೆಲಸಗಳು ಬಾಕಿ ಆಗುತ್ತದೆ. ಹಾಗಾಗಿ ಆಗಲ್ಲ , ಕ್ಷಮಿಸಿ ಎಂಬ ಮಾತನ್ನು ಹೇಳಿಬಿಡಿ.
ನೀವು ಗುರಿಯನ್ನು ಇಟ್ಟುಕೊಳ್ಳಿ: ಇಂದು ನಾನು ಇಷ್ಟು ಸಮಯದಲ್ಲಿ, ಇಷ್ಟು ಕೆಲಸ ಮುಗಿಯಲೇ ಬೇಕು ಎಂದು ನಿಮಗೆ ನೀವೇ ರೂಲ್ಸ್ಗಳನ್ನು ಹಾಕಿಕೊಳ್ಳಿ. ಹಾಗೆಯೇ ಅಷ್ಟು ಕೆಲಸ ಆಗುವ ತನಕ ಯಾರೊಂದಿಗೂ ಮಾತನಾಡಬೇಡಿ. ಫೋಕಸ್ ಆನ್ ಯುವರ್ ವರ್ಕ್ (Focus on your Work ) ಅಷ್ಟೇ.
ಪ್ರೊಡಕ್ಟಿವಿಟಿ ಸಿಸ್ಟಮ್ ಅನ್ನು ಬಳಸಬೇಕು: ಪೊಮೊಡೊರೊ ಟೆಕ್ನಿಕ್ ಅಥವಾ ಗೆಟ್ಟಿಂಗ್ ಥಿಂಗ್ಸ್ ಡನ್ (ಜಿಟಿಡಿ) ನಂತಹ ಅನೇಕ ಪ್ರೊಡಕ್ಟಿವಿಟಿ ಸಿಸ್ಟಮ್ಗಳಿವೆ. ನಿಮಗಾಗಿ ಕೆಲಸ ಮಾಡುವ ಒಂದನ್ನು ಹುಡುಕಿಕೊಳ್ಳಿ ಮತ್ತು ಅದನ್ನು ಸ್ಥಿರವಾಗಿ ಬಳಸಿ.
ಒಂದು ಕೆಲಸವನ್ನು ಮಾಡುವಾಗ ಕೇವಲ ಅದರ ಬಗ್ಗೆ ಮಾತ್ರ ಕೇಂದ್ರೀಕರಿಸಿ. ಒಂದೇ ಸಮಯದಲ್ಲಿ ಎರೆಡೆರಡು ಕೆಲಸಗಳನ್ನು ಮಾಡಲು ಹೋಗಬೇಡಿ. ಅಕಡೆ ಆ ಕೆಲಸವೂ ಆಗೋದಿಲ್ಲ, ಈಕಡೆ ಈ ಕೆಲಸವೂ ಆಗೋದಿಲ್ಲ.
ಗೊಂದಲಗಳಿಂದ ಹೊರ ಬನ್ನಿ: 2 ನಿಮಿಷಗಳ ಕಾಲ ಧ್ಯಾನ ಮಾಡಿ ಮತ್ತೆ ನಿಮ್ಮ ಕೆಲಸವನ್ನು ಆರಂಭಿಸೋದು ಉತ್ತಮ. ನೀವು ಮೊಬೈಲ್ ಅಥವಾ ನಿಮ್ಮ ಹೆಡ್ ಫೋನ್ ನೋಟಿಫಿಕೇಶನ್ಸ್ಗಳನ್ನು ಆಫ್ ಮಾಡಿ. ಹಾಗೆಯೇ ನೀವು ನಿಮ್ಮ ಕೆಲಸದ ಮೇಲೆ ಫೋಕಸ್ ಮಾಡಿ. ಈ ರೀತಿಯ ಒಂದಷ್ಟು ಟಿಪ್ಸ್ಗಳನ್ನು ಫಾಲೋ ಮಾಡೋದ್ರಿಂದ. ಕೆಲವೇ ಸಮಯದಲ್ಲಿ ನಿಮ್ಮ ಕೆಲಸವು ಸಂಪೂರ್ಣವಾಗಿ ಮುಗಿಯುತ್ತದೆ.
ತಂತ್ರಜ್ಞಾನವನ್ನು ಬಳಸಿಕೊಳ್ಳಿ: ಪ್ರಸ್ತುತ ನಮಗೆ ತಂತ್ರಜ್ಞಾನವು ಎಲ್ಲಾ ರೀತಿಯಾಗಿ ಸಹಾಯವನ್ನು ಮಾಡುತ್ತದೆ. ಹೀಗಾಗಿ ಆದಷ್ಟು ಇದರ ಸಹಾಯವನ್ನು ತೆಗೆದುಕೊಳ್ಳಿ, ಹಾರ್ಡ್ ವರ್ಕ್ಕ್ಕಿಂತ ಸ್ಮಾರ್ಟ್ ವರ್ಕ್ ಬಹಳ ಮುಖ್ಯ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ