• Home
  • »
  • News
  • »
  • lifestyle
  • »
  • Kidneys Health: ಕಿಡ್ನಿ ವೈಫಲ್ಯ ಸಮಸ್ಯೆ ಕಡಿಮೆ ಮಾಡಲು ಈ ಪದಾರ್ಥಗಳ ಸೇವನೆ ಪ್ರಯೋಜನಕಾರಿ!

Kidneys Health: ಕಿಡ್ನಿ ವೈಫಲ್ಯ ಸಮಸ್ಯೆ ಕಡಿಮೆ ಮಾಡಲು ಈ ಪದಾರ್ಥಗಳ ಸೇವನೆ ಪ್ರಯೋಜನಕಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಆರೋಗ್ಯಕರ ಆಹಾರಗಳು ಕಿಡ್ನಿ ವೈಫಲ್ಯದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮೂತ್ರಪಿಂಡದ ಸೋಂಕು ಮತ್ತು ರೋಗದ ಬಗ್ಗೆ ಎಚ್ಚರಿಕೆ ನೀಡುತ್ತದೆ. ಕಿಡ್ನಿ ಸೋಂಕು ಅಥವಾ ಕಿಡ್ನಿ ಕಾಯಿಲೆಯ ಆರಂಭಿಕ ಹಂತಗಳಲ್ಲಿ ಮುಖ್ಯ ಲಕ್ಷಣಗಳು ಕಂಡು ಬಾರದೇ ಇರಬಹುದು. ಅಥವಾ ಕೆಲವು ಲಕ್ಷಣಗಳು ಕಾಣಿಸಬಹುದು.

ಮುಂದೆ ಓದಿ ...
  • Share this:

    ಮೂತ್ರಪಿಂಡವು (Kidneys) ದೇಹದ (Body) ಅತ್ಯಗತ್ಯ ಅಂಗ (Part) ಆಗಿದೆ. ಮೂತ್ರಪಿಂಡವು ಅಸಮರ್ಪಕವಾಗಿ ಕೆಲಸ ಮಾಡಿದರೆ ದೇಹದ ಬೇರೆ ಬೇರೆ ಅಂಗಗಳಲ್ಲಿಯೂ ಸಮಸ್ಯೆ (Problems) ಕಾಣಿಸಿಕೊಳ್ಳಲು ಶುರು ಆಗುತ್ತವೆ. ಹಾಗಾಗಿ ಮೂತ್ರಪಿಂಡವನ್ನು ಆರೋಗ್ಯವಾಗಿಡುವುದು (Health) ಬಹಳ ಮುಖ್ಯ. ಹಾಗಾದರೆ ಮೂತ್ರಪಿಂಡಗಳ ಆರೋಗ್ಯ ಕಾಪಾಡಲು ಹಾಗೂ ಆರೋಗ್ಯ ಚೆನ್ನಾಗಿಡಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಒಂದು ವೇಳೆ ನೀವು ಕಿಡ್ನಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮೂತ್ರಪಿಂಡ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾದ್ರೆ ಕಿಡ್ನಿಗೆ ಆರೋಗ್ಯಕರ ಆಹಾರಗಳು ಯಾವವು ಎಂಬುದನ್ನು ನಾವು ಇಲ್ಲಿ ತಿಳಿಯೋಣ.


    ಈ ಆರೋಗ್ಯಕರ ಆಹಾರಗಳು ಕಿಡ್ನಿ ವೈಫಲ್ಯದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮೂತ್ರಪಿಂಡದ ಸೋಂಕು ಮತ್ತು ರೋಗದ ಬಗ್ಗೆ ಎಚ್ಚರಿಕೆ ನೀಡುತ್ತದೆ.


    ಕಿಡ್ನಿ ವೈಫಲ್ಯದ ಲಕ್ಷಣಗಳು ಯಾವವು?


    ಕಿಡ್ನಿ ಸೋಂಕು ಅಥವಾ ಕಿಡ್ನಿ ಕಾಯಿಲೆಯ ಆರಂಭಿಕ ಹಂತಗಳಲ್ಲಿ ಮುಖ್ಯ ಲಕ್ಷಣಗಳು ಕಂಡು ಬಾರದೇ ಇರಬಹುದು. ಅಥವಾ ಕೆಲವು ಲಕ್ಷಣಗಳು ಕಾಣಿಸಬಹುದು. ಆದರೆ ಒಟ್ಟಿಗೆ ಸಂಭವಿಸುವ ಕೆಲವು ಸಾಮಾನ್ಯ ಸಮಸ್ಯೆಗಳು ಕೆಟ್ಟ ಮೂತ್ರಪಿಂಡದ ಸಂಕೇತವೂ ಆಗಿರಬಹುದು.


    ಇದನ್ನೂ ಓದಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


    ನೀವು ದಿನವಿಡೀ ದಣಿದಿದ್ದರೆ, ನಿದ್ರಿಸಲು ಸಾಧ್ಯವಾಗದೇ ಹೋದರೆ ಶುಷ್ಕ ಚರ್ಮ, ಆಗಾಗ್ಗೆ ಮೂತ್ರ ವಿಸರ್ಜನೆ, ರಕ್ತಸಿಕ್ತ ಅಥವಾ ಬಣ್ಣಬಣ್ಣದ ಮೂತ್ರ, ಪಾದಗಳು, ಕಣಕಾಲುಗಳು ಮತ್ತು ಕಣ್ಣುಗಳ ಸುತ್ತ ಊತ, ಹಾಗಾದರೆ ನಿಮ್ಮ ಮೂತ್ರಪಿಂಡಗಳು ಹಾನಿಗೆ ತುತ್ತಾಗಬಹುದು. ಈ ಎಲ್ಲಾ ಸಮಸ್ಯೆಗಳು ಕೆಟ್ಟ ಮೂತ್ರಪಿಂಡದ ಲಕ್ಷಣಗಳು ಆಗಿವೆ.


    ಎಲೆಕೋಸು ಮೂತ್ರಪಿಂಡದ ಸೋಂಕು ತಡೆಯುತ್ತದೆ


    ನೀವು ಮೂತ್ರಪಿಂಡದ ಸೋಂಕು ತಪ್ಪಿಸಬೇಕೆಂದರೆ ಖಂಡಿತವಾಗಿಯೂ ನಿಮ್ಮ ತಟ್ಟೆಯಲ್ಲಿ ಎಲೆಕೋಸು ಸೇರಿಸಿ. ಎಲೆಕೋಸು ವಿಟಮಿನ್ ಸಿ, ವಿಟಮಿನ್ ಕೆ, ಫೋಲೇಟ್ ಇತ್ಯಾದಿ ಹೊಂದಿದೆ. ಮೂತ್ರಪಿಂಡದ ಸೋಂಕಿನಿಂದ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವ ಮೂಲಕ ರಕ್ಷಿಸುತ್ತದೆ. ಅದೇ ವೇಳೆ ಎಲೆಕೋಸಿನ ಉರಿಯೂತ ಗುಣಲಕ್ಷಣಗಳು ಮೂತ್ರಪಿಂಡದ ಹಾನಿ ತಡೆಯುತ್ತದೆ.


    ಮೊಟ್ಟೆ ಬಿಳಿ ಭಾಗ ತಿನ್ನಿರಿ


    ಮೊಟ್ಟೆ ಪ್ರತಿಯೊಂದು ಭಾಗವೂ ಆರೋಗ್ಯಕರ. ಆದರೆ ಇದರ ಬಿಳಿ ಭಾಗ ಮೂತ್ರಪಿಂಡಕ್ಕೆ ಹೆಚ್ಚು ಪ್ರಯೋಜನಕಾರಿ. ಮೊಟ್ಟೆ ಬಿಳಿ ಭಾಗವು ಮೂತ್ರಪಿಂಡದ ಆರೋಗ್ಯಕರ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಹಾಗಾಗಿ ಮೂತ್ರಪಿಂಡದ ಕಾಯಿಲೆ ತಪ್ಪಿಸಲು ಅಥವಾ ಬಳಲುತ್ತಿರುವಂತೆ ಮೊಟ್ಟೆ ಬಿಳಿ ಭಾಗ ತಿನ್ನುವುದು ಉತ್ತಮ.


    ಈರುಳ್ಳಿ ಸೇವನೆ


    ಆರೋಗ್ಯಕರ ಮೂತ್ರಪಿಂಡದ ಆಹಾರದಲ್ಲಿ ಈರುಳ್ಳಿ ಖಂಡಿತವಾಗಿ ಸೇರಿದೆ. ಮೂತ್ರಪಿಂಡದ ಕಾಯಿಲೆ ಉಪ್ಪಿನ ಸೇವನೆ ಹಾನಿಕರ ಆಗಿದೆ. ಹಾಗಾಗಿ ಈರುಳ್ಳಿ ಉಪ್ಪಿನ ಬದಲಿಯಾಗಿ ಬಳಸಬಹುದು. ಇದರ ಜೊತೆಗೆ ಈರುಳ್ಳಿ ವಿಟಮಿನ್ ಸಿ, ಮ್ಯಾಂಗನೀಸ್, ಬಿ ಜೀವಸತ್ವಗಳು ಮತ್ತು ಪ್ರಿಬಯಾಟಿಕ್ ಫೈಬರ್ ನ್ನು ಹೊಂದಿದೆ. ಇದು ನಿಮ್ಮ ಕರುಳಿನ ಆರೋಗ್ಯ ಸಹ ಸುಧಾರಿಸುತ್ತದೆ.


    ಮೂಲಂಗಿ ಸೇವನೆ


    ಚಳಿಗಾಲದಲ್ಲಿ ಮೂಲಂಗಿ ಸೇವನೆ ಸಾಕಷ್ಟು ಪ್ರಯೋಜನಕಾರಿ. ಮೂತ್ರಪಿಂಡದ ಆರೋಗ್ಯ ಸರಿಯಾಗಿಡುವಲ್ಲಿ ಮೂಲಂಗಿ ಸೇವನೆ ಮಾಡುವುದು ಪರಿಣಾಮಕಾರಿ ಆಗಿದೆ. ಮೂಲಂಗಿಯಲ್ಲಿ ಪೊಟ್ಯಾಸಿಯಮ್ ಮತ್ತು ರಂಜಕ ಕಡಿಮೆಯಿದ್ದರೆ, ವಿಟಮಿನ್-ಸಿ ಸಮೃದ್ಧ ಆಗಿದೆ. ಇದು ಮೂತ್ರಪಿಂಡದ ಕಾಯಿಲೆ ಹಾಗೂ ಹೃದ್ರೋಗ ಮತ್ತು ಕಣ್ಣಿನ ಪೊರೆ ತಡೆಯುತ್ತದೆ.


    ಅನಾನಸ್ ಸೇವನೆ


    ಮೂತ್ರಪಿಂಡದ ಆರೋಗ್ಯಕರ ಹಣ್ಣನ್ನು ಹುಡುಕುತ್ತಿದ್ದರೆ ಖಂಡಿತವಾಗಿ ಅನಾನಸ್ ಸೇವಿಸಿ. ಅನಾನಸ್ ಕಡಿಮೆ ಪೊಟ್ಯಾಸಿಯಮ್ ಆಹಾರ ಆಗಿದೆ. ಇದು ಮೂತ್ರಪಿಂಡದ ರೋಗಿಗಳಿಗೆ ಪ್ರಯೋಜನಕಾರಿ ಆಗಿದೆ. ಅದೇ ವೇಳೆ ಇದರಲ್ಲಿರುವ ಫೈಬರ್, ವಿಟಮಿನ್ ಸಿ, ಬ್ರೋಮೆಲಿನ್, ಮ್ಯಾಂಗನೀಸ್ ಇತ್ಯಾದಿ ಮೂತ್ರಪಿಂಡದ ಉರಿಯೂತ ಕಡಿಮೆ ಮಾಡುತ್ತದೆ. ಮೂತ್ರಪಿಂಡದ ಸೋಂಕು ಮತ್ತು ಮೂತ್ರಪಿಂಡದ ಕಾಯಿಲೆಯಿಂದ ರಕ್ಷಿಸುತ್ತದೆ.


    ಇದನ್ನೂ ಓದಿ: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!


    ಬೆಳ್ಳುಳ್ಳಿ


    ಮೂತ್ರಪಿಂಡದ ಕಾಯಿಲೆ ತಪ್ಪಿಸಲು ಬೆಳ್ಳುಳ್ಳಿ ಸೇವಿಸಿ. ಈರುಳ್ಳಿಯಂತೆ ಇದು ಕೂಡ ಉಪ್ಪಿಗೆ ಉತ್ತಮ ಪರ್ಯಾಯ. ವಿಟಮಿನ್ ಸಿ, ವಿಟಮಿನ್ ಬಿ 6, ಸಲ್ಫರ್ ಸಂಯುಕ್ತಗಳು ಉರಿಯೂತ ಗುಣಲಕ್ಷಣ ಹೊಂದಿವೆ. ಇದು ಮೂತ್ರಪಿಂಡ ಆರೋಗ್ಯವಾಗಿಡುತ್ತದೆ.

    Published by:renukadariyannavar
    First published: