• Home
  • »
  • News
  • »
  • lifestyle
  • »
  • Cough Remedy: ಬದಲಾಗುತ್ತಿರುವ ಋತುಮಾನದಲ್ಲಿ ಕಾಡುವ ಕೆಮ್ಮು ಸಮಸ್ಯೆಗೆ ಪರಿಹಾರ ಹೀಗಿದೆ!

Cough Remedy: ಬದಲಾಗುತ್ತಿರುವ ಋತುಮಾನದಲ್ಲಿ ಕಾಡುವ ಕೆಮ್ಮು ಸಮಸ್ಯೆಗೆ ಪರಿಹಾರ ಹೀಗಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬದಲಾಗುತ್ತಿರುವ ಚಳಿಗಾಲ ಋತುವಿನಲ್ಲಿ ರೋಗ ನಿರೋಧಕ ವ್ಯವಸ್ಥೆಯ ಮೇಲೆ ಇದು ಪರಿಣಾಮ ಬೀರುತ್ತದೆ ಎಂಬುದು ಇದಕ್ಕೆ ಮುಖ್ಯ ಕಾರಣವಾಗಿದೆ. ಪ್ರಸಕ್ತ ಋತುವಿನಲ್ಲಿ ಹೆಚ್ಚಿನ ಜನರು ಕೆಮ್ಮು ಶೀತ ಗಂಟಲು ನೋವು ಸೇರಿದಂತೆ ಕೆಲವು ಸಾಮಾನ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹವಾಮಾನದಲ್ಲಿ ಬದಲಾವಣೆಯಾದಾಗ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಸಾಮಾನ್ಯ.

ಮುಂದೆ ಓದಿ ...
  • Share this:

    ಕೆಮ್ಮು (Cough) ಸಾಮಾನ್ಯವಾಗಿ ಎಲ್ಲರನ್ನೂ ಒಮ್ಮೆಯಾದರೂ ಕಾಡಿರುತ್ತದೆ. ಕೆಮ್ಮು ಒಮ್ಮೆ ಶುರುವಾದರೆ ಬೇಗ ಕಡಿಮೆ ಆಗಲ್ಲ. ಕೆಮ್ಮಿನಲ್ಲಿ ವಿಧಗಳಿವೆ (Types). ಕೆಮ್ಮು ಸಾಮಾನ್ಯವಾಗಿ ನಾವು ತಿನ್ನುವ ಆಹಾರ (Eating Food) ಮತ್ತು ವಾತಾವರಣವನ್ನು (Weather) ಅವಲಂಬಿಸಿದೆ. ಇನ್ನೇನು ಚಳಿಗಾಲ (Winter) ನಿಧಾನವಾಗಿ ಆರಂಭ ಆಗುತ್ತಿದೆ. ಚಳಿಗಾಲ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ತಂಪು ಗಾಳಿ ಹಾಗೂ ಒಣಗಾಳಿ ಚರ್ಮ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಬೆಳಗ್ಗೆ ಮತ್ತು ಸಂಜೆ ವೇಳೆ ಚಳಿ ಆರಂಭವಾಗುತ್ತದೆ. ಹವಾಮಾನದಲ್ಲಿ ಬದಲಾವಣೆಯಾದಾಗ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಸಾಮಾನ್ಯ.


    ಕೆಮ್ಮು ಸಮಸ್ಯೆ


    ಬದಲಾಗುತ್ತಿರುವ ಚಳಿಗಾಲ ಋತುವಿನಲ್ಲಿ ರೋಗ ನಿರೋಧಕ ವ್ಯವಸ್ಥೆಯ ಮೇಲೆ ಇದು ಪರಿಣಾಮ ಬೀರುತ್ತದೆ ಎಂಬುದು ಇದಕ್ಕೆ ಮುಖ್ಯ ಕಾರಣವಾಗಿದೆ. ಪ್ರಸಕ್ತ ಋತುವಿನಲ್ಲಿ ಹೆಚ್ಚಿನ ಜನರು ಕೆಮ್ಮು, ಶೀತ, ಗಂಟಲು ನೋವು, ಮೂಗು ಕಟ್ಟುವಿಕೆ ಅಥವಾ ಮೂಗು ಸೋರುವಿಕೆ ಸೇರಿದಂತೆ ಕೆಲವು ಸಾಮಾನ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.


    ಕೆಮ್ಮು ಸಮಸ್ಯೆಗೆ ಚಿಕಿತ್ಸೆ ಯಾವುದು?  


    ಬದಲಾಗುತ್ತಿರುವ ಋತುಗಳಲ್ಲಿ ಕೆಮ್ಮು ಸಾಮಾನ್ಯ ಆಗಿದೆ. ಇದು ನಿಮ್ಮ ಸಾಮಾನ್ಯ ಕಾರ್ಯ ನಿರ್ವಹಣೆಯ ಮೇಲೆ ಇದು ಪರಿಣಾಮ ಬೀರಬಹುದು. ಕೆಲವೊಮ್ಮೆ ಕೆಮ್ಮು ಹೆಚ್ಚಾಗುವುದು ನಿಮ್ಮ ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ.


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಒಣ ಕೆಮ್ಮು, ಒದ್ದೆ ಕೆಮ್ಮು ಅಥವಾ ಕಫದ ಕೆಮ್ಮು ಮತ್ತು ನೋಯುತ್ತಿರುವ ಗಂಟಲು ಕೆಮ್ಮು ಸಹ ಈ ಋತುವಿನಲ್ಲಿ ತೊಂದರೆ ಉಂಟು ಮಾಡುತ್ತದೆ. ಕೆಮ್ಮಿನಿಂದ ನೀವು ಆಲಸ್ಯ, ತಲೆನೋವು, ಹಸಿವಿನ ನಷ್ಟ ಮತ್ತು ದೇಹದಲ್ಲಿ ಭಾರ ಅನುಭವಿಸುತ್ತೀರಿ.


    ಕೆಮ್ಮು ಸಮಸ್ಯೆಗೆ ಆಯುರ್ವೇದ ಚಿಕಿತ್ಸೆ ಯಾವುದು?


    ಕೆಮ್ಮು ಚಿಕಿತ್ಸೆಗೆ ಹಲವು ಮನೆಮದ್ದುಗಳು ಮತ್ತು ಔಷಧಿಗಳು ಲಭ್ಯ ಇವೆ. ನೀವು ಕೆಲವು ಆಯುರ್ವೇದ ವಿಧಾನಗಳನ್ನು ಸಹ ಪ್ರಯತ್ನಿಸಬಹುದು. ಕೆಮ್ಮಿಗೆ ಆಯುರ್ವೇದ ಚಿಕಿತ್ಸೆಯನ್ನು ಭಾರತ ಸರ್ಕಾರದ ವೆಬ್‌ಸೈಟ್ ರಾಷ್ಟ್ರೀಯ ಆರೋಗ್ಯ ಪೋರ್ಟಲ್‌ ನಲ್ಲಿ ವಿವರಿಸಲಾಗಿದೆ.


    ಶುಂಠಿ ರಸ


    ಕೆಮ್ಮಿನಿಂದ ತ್ವರಿತ ಪರಿಹಾರ ಪಡೆಯಲು ನೀವು ಶುಂಠಿ ರಸ ಸೇವನೆ ಮಾಡಬಹುದು. ನೀವು 14 ಮಿಲಿ ಶುಂಠಿ ರಸ ತೆಗೆದುಕೊಂಡು ಅದನ್ನು ಸಮಾನ ಪ್ರಮಾಣದಲ್ಲಿ ಜೇನುತುಪ್ಪದ ಜೊತೆ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.


    ವಾಸ ಎಲೆಯ ರಸ


    ವಾಸವನ್ನು ಅಡುಸಾ ಎಂದು ಕರೆಯುತ್ತಾರೆ. ನೀವು ಈ ಸಸ್ಯವನ್ನು ಎಲ್ಲಿ ಬೇಕಾದರೂ ಕಾಣಬಹುದು. ಅದರ ಎಲೆಗಳಿಂದ 7 ರಿಂದ 14 ಮಿಲಿ ರಸ ಹೊರ ತೆಗೆಯಿರಿ. ಮತ್ತು ದಿನಕ್ಕೆ ಎರಡು ಬಾರಿ ಜೇನುತುಪ್ಪದ ಜೊತೆ ಅದೇ ಪ್ರಮಾಣದಲ್ಲಿ ಸೇವನೆ ಮಾಡಿ.


    ಕಮಲದ ಬೀಜದ ಪುಡಿ


    ಕೆಮ್ಮಿನ ಸಮಸ್ಯೆ ತ್ವರಿತವಾಗಿ ಪರಿಹಾರ ನೀಡಲು ನೀವು ಕಮಲದ ಹೂವಿನ ಬೀಜಗಳನ್ನು ಬಳಸಬಹುದು. 1 ರಿಂದ 3 ಗ್ರಾಂ ಕಮಲ ಬೀಜಗಳನ್ನು ತೆಗೆದುಕೊಂಡು ಅವುಗಳನ್ನು ಜೇನುತುಪ್ಪದ ಜೊತೆ ಬೆರೆಸಿ ಪೇಸ್ಟ್ ಮಾಡಿ, ದಿನಕ್ಕೆ ಎರಡು ಬಾರಿ ಸೇವಿಸಿ.


    ಬಿಸಿನೀರು ಮತ್ತು ಜೇನುತುಪ್ಪ


    ಕೆಮ್ಮನ್ನು ಕಡಿಮೆ ಮಾಡಲು ಅಥವಾ ತೊಡೆದು ಹಾಕಲು ನೀವು ಬೆಚ್ಚಗಿನ ನೀರು ಮತ್ತು ಜೇನುತುಪ್ಪ ಬಳಸಬಹುದು. ಇದನ್ನು ಮಾಡಲು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿ.


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ಒಣದ್ರಾಕ್ಷಿ ಮತ್ತು ಲೈಕೋರೈಸ್ ಪುಡಿ


    ಒಣದ್ರಾಕ್ಷಿ, ಲೈಕೋರೈಸ್ ಬೇರು, ಖರ್ಜೂರ ಮತ್ತು ಕರಿಮೆಣಸನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇದರ ಪುಡಿಯನ್ನು ತಯಾರಿಸಬಹುದು. ಕೆಮ್ಮಿನಿಂದ ತ್ವರಿತ ಪರಿಹಾರಕ್ಕಾಗಿ ದಿನಕ್ಕೆ ಎರಡು ಬಾರಿ 1 ರಿಂದ 3 ಗ್ರಾಂ ಇಸಾಕಿ, 4 ರಿಂದ 6 ಗ್ರಾಂ ಜೇನುತುಪ್ಪದ ಜೊತೆ ಸೇವನೆ ಮಾಡಿ.

    Published by:renukadariyannavar
    First published: